ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ನೀರು ನಮ್ಮ ತಿಳಿವಳಿಕೆಯಾಗಲಿ; ಕೊರಗಾಗದಿರಲಿ!

ಧಾರವಾಡ, ಜೂ.೧೫: ನೀರು ನಮ್ಮ ತಿಳಿವಳಿಕೆಯಾಗಬೇಕೆ ವಿನಃ ಕೊರಗಾಗಬಾರದು. ಜಲ ಸಾಕ್ಷರತೆಯ ಮೂಲಕ ಜಲ ಸಂರಕ್ಷಣೆಯತ್ತ ನಾವೆಲ್ಲರೂ ಚತ್ತೈಸುವಂತಾಗಬೇಕು ಎಂದು ‘ಸ್ಕೋಪ್’ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ನೆಲ-ಜಲ ನಿರ್ವಹಣೆಯ ತಜ್ಞ ಡಾ. ಪ್ರಕಾಶ ಭಟ್ ಹೇಳಿದರು. (more…)

ನಾಳಿನ ನೀರ ನೆಮ್ಮದಿಗಾಗಿ

ಕೋಲಾರ ಜಿಲ್ಲಾ ಪತ್ರಕರ್ತರ ಭವನದಲ್ಲಿ, ಸಿಡಿಎಲ್ ಸಂಸ್ಥೆ ಮತ್ತು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ “ನಾಳಿನ ನೀರ ನೆಮ್ಮದಿಗಾಗಿ” ಕಾರ್ಯಾಗಾರವನ್ನು ೨೫ ಮೇ, ೨೦೧೬ರಂದು ನಡೆಸಲಾಯಿತು.  ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಜಲ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ೫೦ ಹಿರಿಯ ಪತ್ರಕರ್ತರು, ಹವ್ಯಾಸಿ ಬರಹಗಾರರು, ರೈತ ಸಂಘದ ಸದಸ್ಯರು ಹಾಗೂ ಸಂಸ್ಥೆಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದರು.  (more…)

“ನಾಳಿನ ನೀರ ನೆಮ್ಮದಿಗಾಗಿ”

ಶ್ರೀ ಮುರುಘರಾಜೇಂದ್ರ ಬೃಹನ್ಮಠ, ಚಿತ್ರದುರ್ಗದ ಸಹಯೋಗದೊಂದಿಗೆ, ಮಠದ ಆವರಣದಲ್ಲಿರುವ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ, “ನಾಳಿನ ನೀರ ನೆಮ್ಮದಿಗಾಗಿ” ಎಂಬ ಕಾರ್ಯಾಗಾರವನ್ನು ಮೇ ೨೩, ೨೦೧೬ರಂದು ಸಿಡಿಎಲ್ ಸಂಸ್ಥೆಯು ಆಯೋಜಿಸಿತು.  ಚಿತ್ರದುರ್ಗ, ತುಮಕೂರು ಹಾಗೂ ದಾವಣಗೆರೆಯಲ್ಲಿ ಜಲ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ೩೩ ಪತ್ರಕರ್ತರು, ಹವ್ಯಾಸಿ ಬರಹಗಾರರು ಹಾಗೂ ಸಂಸ್ಥೆಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದರು.  (more…)

ಜಲಚಿಂತನೆಯ ಅರ್ಥಪೂರ್ಣ ಮಾತುಕತೆ !

ಹೊಲಕ್ಕೆ ಒಡ್ಡು ಕಟ್ಟದಿದ್ದರೆ ಜಮೀನು ಗೊಡ್ಡೆಮ್ಮೆ ಆದಂತೆ..ನೀರು ಎಲ್ಲದಕ್ಕೂ ಬೇಕ್ರಿ. ಅದ  ಮೂಲ. ಎಷ್ಟು ಮಳೆ ಬಿಳ್ತೈತೋ ಅಷ್ಟ ನೀರ ಹಿಡಿರಿ ಸರಿಯಾಗಿ ಬಳಸ್ರಿ…..ಹೀಗೆಂದು ತಮ್ಮ ಉತ್ತರ ಕರ್ನಾಟಕದ ಜವಾರಿ ಭಾಷೆ ಮೂಲಕ ಜಲಮಹತ್ವ ಸಾರಿದ್ದು ಬಾಗಲಕೋಟೆಯ ಹುನಗುಂದದ ಡಾ. ಮಲ್ಲಣ್ಣ ನಾಗರಾಳ ಎಂಬ ಪ್ರಗತಿಪರ ಕೃಷಿಕ. (more…)