ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ನಮ್ಮ ಬಗ್ಗೆ

ಅಂತರ್ಜಾಲ ಯುಗದಲ್ಲಿ ಮಾಹಿತಿಯ ವಿನಿಮಯಕ್ಕಾಗಿ ಜಾಲತಾಣಗಳು ಪ್ರಮುಖ ಪಾತ್ರ ವಹಿಸುತ್ತವೆ.  ಜನರು ಹಾಗೂ ಸಮುದಾಯಗಳು ಇದರಿಂದ ಮಾಹಿತಿ ಮತ್ತು ಸೌಲಭ್ಯಗಳನ್ನು ಪಡೆದುಕೊಳ್ಳಲು ಅನುಕೂಲವಾಗುತ್ತ್ತದೆ.

ಇದನ್ನು ಗಮನದಲ್ಲಿರಿಸಿಕೊಂಡು ಅರ್ಘ್ಯಂ ಸಂಸ್ಥೆ ೨೦೦೭ ರಲ್ಲಿ ನೀರು ಮತ್ತು ನೈರ್ಮಲ್ಯದ ಬಗೆಗಿನ ಆಗು ಹೋಗುಗಳ ಕುರಿತಾದ ವಿಚಾರಗಳು, ದೇಶೀಯ ಮತ್ತು ಅಂತರಾಷ್ಟೀಯ ಮಟ್ಟದ ಚರ್ಚೆಗಳು, ಜನಸಮುದಾಯದ ಸಮಸ್ಯೆ ಮತ್ತು ಯಶೋಗಾಥೆಗಳನ್ನು ಮುಖ್ಯವಾಹಿನಿಗೆ ತಂದು ಜನರ ಮುಂದಿಡಲು ಇಂಡಿಯಾ ವಾಟರ್ ಪೋರ್ಟಲ್ ಅನ್ನು ಸ್ಥಾಪಿಸಿತು. ಇದರದೇ ಕನ್ನಡ ಅವತರಣಿಕೆಯನ್ನು ೨೦೦೮ ರಲ್ಲಿ ಪ್ರಾರಂಭಿಸಿತು.

ಕನ್ನಡ ಇಂಡಿಯಾ ವಾಟರ್ ಪೋರ್ಟಲ್ ಅನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿಯನ್ನು ಅರ್ಘ್ಯಂ ಸಂಸ್ಥೆಯು ಬೆಂಗಳೂರು ಮೂಲದ ಕಮ್ಯುನಿಕೇಷನ್ ಫಾರ್ ಡೆವಲಪ್‌ಮೆಂಟ್ ಅಂಡ್ ಲರ್ನಿಂಗ್ (ಸಿಡಿಎಲ್) ಸಂಸ್ಥೆಗೆ ನವೆಂಬರ್ ೨೦೧೪ರಿಂದ ವಹಿಸಿದೆ.

ನೀರು ಎಲ್ಲರಿಗೂ ಸಂಬಂಧಿಸಿದ ವಿಷಯ. ಯಾವುದಾದರೂ ಒಂದು ಹಂತದಲ್ಲಿ ನೀರಿಗೆ ಸಂಬಂಧಿಸಿದಂತೆ ನಿಮಗೆ ಧನಾತ್ಮಕ ಅಥವಾ ಋಣಾತ್ಮಕ ಅನುಭವಗಳು ಆಗಿರಬಹುದು. ಈ ಎಲ್ಲಾ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಲು, ನೀರಿನ ಸಂರಕ್ಷಣೆಯ ಬಗ್ಗೆ ನಡೆಯುತ್ತಿರುವ ವಿವಿಧ ಪ್ರಯತ್ನಗಳ ಬಗ್ಗೆ ಮಾಹಿತಿಯ ಜೊತೆಗೆ ನೀರಿನ ಬಗೆಗಿನ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಕನ್ನಡ ವಾಟರ್ ಪೋರ್ಟಲ್ ವೇದಿಕೆಯಾಗಿದೆ.

Share on FacebookTweet about this on TwitterShare on LinkedIn