ನೀರಿನೊಂದಿಗೆ ಬೆಸೆದುಕೊಂಡಿರುವ ‘ಸಮಾಜಶಾಸ್ತ್ರ’ ಸಂಕೀರ್ಣವಾದದ್ದು! -ಡಾ. ಅರುಣ್ ಪಾಟೀಲ.

ಖ್ಯಾತ ಜಲ ತಜ್ಞ, ಹುಲಕೋಟಿಯ ಡಾ. ಅರುಣ್ ಪಾಟೀಲ SVYM ಹಾಗೂ FANSA ಸಂಯುಕ್ತವಾಗಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಸಂಭಾಷಣೆ ನಿರತರಾಗಿರುವುದು.

"ತಲೆ ಸ್ನಾನ ಮಾಡಿ ಮುಂಡಾಸು ಧರಿಸಿ, ಸೊಂಟಕ್ಕೆ ಉಪವೇತಿಕೆ ಕಟ್ಟಿಕೊಂಡು ಪಾದರಕ್ಷೆ ಧರಿಸದೇ ಭಯ-ಭಕ್ತಿಯಿಂದ ನಾವು ರಾಶಿಯ ಕಣಕ್ಕೆ ಇಳಿಯುತ್ತಿದ್ದೆವು. ಹಿರಿಯರು ಕಿರಿಯರಿಗೆ ನೀಡಿದ ಸಂಸ್ಕಾರವದು. ಆದರೆ ಈಗ ರಸ್ತೆಯ ಮೇಲೆ ಜನಗಳು ತಾವು ಬೆಳೆದ ಬೆಳೆಗಳ ತೆನೆ ಹರಡುತ್ತಾರೆ. ಆ ರಾಶಿಯ ಮೇಲೆ ವಾಹನಗಳು ಹಾಯ್ದು ಹೋಗಿ ಕಾಳುಗಳು ಬಿಡಿಯಾಗುತ್ತವೆ. ಕೃಷಿ ಸಂಸ್ಕೃತಿಯ ರಾಷ್ಟ್ರವಾದ ಭಾರತದಲ್ಲಿ ಜನ ರಾಶಿ ಎಂಬ ಭಯ-ಭಕ್ತಿಯ ಕಾಯಕವನ್ನು ಇಷ್ಟು ‘ಪ್ರಗತಿಪರರಾಗಿ’ ರಸ್ತೆಗೆ ಇಳಿಸಿದರೆ, ಅದನ್ನು ವ್ಯವಹಾರ ಮಟ್ಟಕ್ಕೆ ಒಯ್ದಿಟ್ಟರೆ... ಬದುಕಲು ಅವಶ್ಯವಾದ ಜೀವನ ಮೌಲ್ಯಗಳನ್ನು ಅಪಮೌಲ್ಯಗೊಳಿಸಿದರೆ?"

ಅತ್ಯಂತ ಗಂಭೀರವಾದ ಅಧೋಮುಖ ‘ಬೆಳವಣಿಗೆ’ ಯೊಂದನ್ನು ಖ್ಯಾತ ಜಲ ವಿಜ್ಞಾನಿ, ತಂತ್ರಜ್ಞಾನಿ ಹುಲಕೋಟಿಯ ಡಾ.ಅರುಣ ಪಾಟೀಲರು ಗುರುತಿಸಿದ್ದಾರೆ. ಕೃಷಿಯನ್ನು ಇಳಿಸಿದ ಮಟ್ಟಕ್ಕೆ ನಾವು ನೀರನ್ನೂ ಇಳಿಸಿದ್ದೇವೆ ಎಂದು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಳ್ಳಬೇಕಾದ ಸ್ಥಿತಿ ಇದೆ ಎಂದು ಸಹ ಅವರು ಉದಾಹರಣೆಗಳ ಮೂಲಕ ವಿವರಿಸುತ್ತಾರೆ. ಕಳೆದ ಶನಿವಾರ ಸ್ವಾಮಿ ವಿವೇಕಾನಂದ ಯುಥ್ ಮೂವಮೆಂಟ್ (ಎಸ್.ವಿ.ವಾಯ್.ಎಂ), ಧಾರವಾಡ ಹಾಗೂ ಫ್ರೆಷ್ ವಾಟರ್ ಆಕ್ಷನ್ ನೆಟವರ್ಕ್ ಸೌಥ್ ಏಷಿಯಾ (ಫಾನ್ಸಾ) ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ ವಿಚಾರ ಸಂಕಿರಣ ಜರುಗಿತು. ಧಾರವಾಡದ ಇನ್ಸ್ಟಿಟ್ಯೂಷನ್ ಆಫ್ ಇಂಜಿನೀಯರ್ಸ್ ನ ಸರ್. ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಚಾರ ಸಂಕಿರಣದಲ್ಲಿ ಡಾ. ಅರುಣ್ ಪಾಟೀಲ ತಮ್ಮ ವಿಚಾರಗಳನ್ನು ಮಂಡಿಸಿದರು.

 read more »

ಕರ್ನಾಟಕ: ಬಳಕೆಯಲ್ಲಿ ‘ನೀರಿಗೆ’ ಪ್ರಥಮ ಸ್ಥಾನ, ‘ಪ್ಲಾಸ್ಟಿಕ್’ಗೆ ಎರಡನೇಯ ಸ್ಥಾನ!

ನಾವು ಹೀಗೂ ಬದುಕುತ್ತಿದ್ದೇವೆ..ಪ್ಲಾಸ್ಟಿಕ್ ಅಕ್ಷರಶ: ಸರ್ವಶಕ್ತ ಹಾಗೂ ಸರ್ವವ್ಯಾಪಿಯಾಗುತ್ತಿದೆ.

ಕರ್ನಾಟಕದಲ್ಲಿ ನೀರಿನ ನಂತರ ಎರಡನೇ ಸ್ಥಾನದಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ವಸ್ತು ಪ್ಲಾಸ್ಟಿಕ್! ‘ಪ್ಲಾಸ್ಟಿಕ್’ ಗೆ ಭೂಮಿಯ ಕ್ಯಾನ್ಸರ್ ಎಂದೂ ಕೂಡ ಪರ್ಯಾಯ ವಾಚಕ ಶಬ್ದವನ್ನು ಪರಿಸರ ತಜ್ಞರು ಬಳಸುತ್ತಾರೆ!

೧೮೫೫ ರಲ್ಲಿ ಅಲೆಕ್ಸಾಂಡರ್ ಪಾರ್ಕ್ಸ್ ಪ್ರಥಮ ಬಾರಿಗೆ ಪ್ಲಾಸ್ಟಿಕ್ ರೂಪಿಸಿದ ಮೇಲೆ, ಎಂದೂ ತನ್ನ ಕನಸಿನಲ್ಲಿಯೂ ಎಣಿಸರಲಿಲ್ಲ ತನ್ನ ಪ್ಲಾಸ್ಟಿಕ್ ಇಡೀ ಬ್ರಹ್ಮಾಂಡವನ್ನು ಹೀಗೆ ‘ಕೈಚೀಲ’ದಲ್ಲಿ ಹಾಕಿಕೊಳ್ಳುತ್ತದೆ ಎಂದು. ನಾವು ನಿತ್ಯ ಹಲವಾರು ಕೆಲಸಗಳ ದೆಸೆಯಿಂದ ಪೇಟೆಗೆ ಹೋಗುತ್ತೇವೆ. ಅಪ್ಪಿತಪ್ಪಿಯೂ ಹಣ ಮರೆತು ಹೋಗುವುದಿಲ್ಲವಾದರೂ, ಮುದ್ದಾಮ ಕೈಚೀಲ ಮನೆಯಲ್ಲಿ ಬಿಟ್ಟು ಹೋಗುತ್ತೇವೆ;ಕಾರಣ ಬಟ್ಟೆಯ ಅಥವಾ ಪೇಪರ್ ಕೈಚೀಲ ಮನೆಯಿಂದ ಒಯ್ಯುವುದು ನಮಗೆ ಭಾರವೆನಿಸುತ್ತದೆ. ಕೆಲವೊಮ್ಮೆ ಅದು ನಮ್ಮ ‘ಗೌರವ’, ಸಾಮಾಜಿಕ ‘ಸ್ಥಾನ-ಮಾನ’ದ ಪ್ರಶ್ನೆಯೂ ಆಗಿರಬಹುದು.  ‘ಫಾಸ್ಟ್ ಪುಡ್’ ಯುಗದಲ್ಲಿ ಅತ್ಯಂತ ಬ್ಯುಸಿಯಾಗಿರುವವರು ಪ್ಲಾಸ್ಟಿಕ್ ಚೀಲದಲ್ಲಿ ಖರೀದಿಸಿದ ವಸ್ತುಗಳನ್ನು ಮನೆಗೆ ಒಯ್ಯುವುದು ‘ಸ್ಟೇಟಸ್ ಸಿಂಬಾಲ್’ ಆಗಿಸಿಕೊಂಡಿದ್ದಾರೆ. ಮೇಲಾಗಿ ಒಂದು ರೂಪಾಯಿಗೆ ಅನಾಯಾಸವಾಗಿ, ಆಯಾಚಿತವಾಗಿ ಪ್ಲಾಸ್ಟಿಕ್ ಬ್ಯಾಗ್ ಮಾರುಕಟ್ಟೆಯಲ್ಲಿ ದೊರಕುವುದರಿಂದ ‘ಅಫೊರ್ಡೆಬಿಲಿಟಿ’ -ಪ್ಲಾಸ್ಟಿಕ್  ರಕ್ತಗತ ಗುಣವಾಗಿಸಿಕೊಂಡಿದೆ.

ಪ್ಲಾಸ್ಟಿಕ್ ತಯಾರಿಸುವಾಗ ಬಳಕೆಯಾಗುವ ರಾಸಾಯನಿಕಗಳು ನಂಜುಕಾರಕ ಮಾತ್ರವಲ್ಲದೆ, ನಮ್ಮನ್ನು ಪೋಷಿಸುತ್ತಿರುವ ಪರಿಸರದ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಹಾನಿಕಾರಕವಾಗಿವೆ. ‘ಬೆನಝೀನ್’ ಹಾಗೂ ‘ವಿನಾಯಿಲ್ ಕ್ಲೋರೈಡ್’ ರಾಸಾಯನಿಕಗಳು ಕ್ಯಾನ್ಸರ್ ನಂತಹ ಮಾರಕರೋಗಗಳನ್ನು ತಂದೊಡ್ಡಬಲ್ಲವು. ಪ್ಲಾಸ್ಟಿಕ್ ಉತ್ಪಾದಿಸುವಾಗ ಬಳಕೆಯಾಗುವ ರಾಸಾಯನಿಕಗಳು ಹೊರಸೂಸುವ ಗಾಳಿ  ಅನೇಕ ಕಶ್ಮಲಗಳನ್ನು ಒಳಗೊಂಡಿದ್ದು, ಸಿಂಥೆಟಿಕ್ ರಾಸಾಯನಿಕಗಳಾದ ಎಥಿಲಿನ್ ಆಕ್ಸೈಡ್, ಬೆಂನಜೀನ್ ಕ್ಸೈಲೀನ್ಸ್ ನಿಸರ್ಗಕ್ಕೆ ಸೇರ್ಪಡೆಗೊಳ್ಳುತ್ತವೆ. ಈ ಪ್ರಕ್ರಿಯೆ ಇಷ್ಟಕ್ಕೆ ನಿಲ್ಲದೇ, ವಿಕಲಾಂಗ ಮಕ್ಕಳ ಜನನಕ್ಕೆ, ತಾಯಿಯ ಗರ್ಭಪಾತಕ್ಕೆ, ಮಕ್ಕಳ ನರ ಮಂಡಲದ ಅಕ್ಷಮತೆಗೆ ಕಾರಣವಾಗಿ ಸರಣಿ ಅನಾಹುತಗಳಿಗೆ ಪ್ಲಾಸ್ಟಿಕ್ ಜವಾಬ್ದಾರಿಯಾಗುತ್ತದೆ. 

 read more »

ಆಗ ವಿಮಾನ ಏರಿ ‘ಜಾಲಿ ಬಿತ್ತಿದ್ದೆವು’; ಈಗ ‘ಮೋಡ ಬಿತ್ತನೆ’ಗೆ ಇಳಿದಿದ್ದೇವೆ’!

ಬಿಜಾಪುರ ಜಿಲ್ಲೆ ತಿಕೋಟಾ ಬಳಿಯ ಕೋಟ್ಯಾಳದಲ್ಲಿ ನೆರೆ ಹಾವಳಿಗೆ ಕಾರಣವಾದ ಡೋಣಿ ನದಿಯ ಪಾತಳಿ ತುಂಬ ಬಳ್ಳಾರಿ ಜಾಲಿ ಮನೆ ಮಾಡಿರುವುದು. ಚಿತ್ರ: ಎಸ್.ವಿ.ವಾಯ್ ಎಂ. ಕೃಪೆ. 

ಬಿಜಾಪುರ ಜಿಲ್ಲೆ ತಿಕೋಟ ಬಳಿಯ ಕೋಟ್ಯಾಳ. ಬಿಜಾಪುರದಿಂದ ಸುಮಾರು ೨೩ ಕಿಲೊ ಮೀಟರ್ ದೂರದಲ್ಲಿರುವ ಕೋಟ್ಯಾಳ ಗ್ರಾಮ, ಕಳೆದ ಬಾರಿಯ ಮಳೆಯಲ್ಲಿ ಡೋಣಿ ಪ್ರವಾಹಕ್ಕೆ ಸಿಲುಕಿ ನಲುಗಿತ್ತು. ಈ ಗ್ರಾಮದ ಪುನರ್ವಸತಿಗಾಗಿ ಸರಕಾರ ಈಗಾಗಲೇ ಯೋಜನೆ ರೂಪಿಸಿದೆ. ಈ ಯೋಜನೆಯ ಸಾಧಕ-ಬಾಧಕಗಳನ್ನು ಪಟ್ಟಿ ಮಾಡಲು ಸ್ವಾಮಿ ವಿವೇಕಾನಂದ ಯುಥ್ ಮೂವಮೆಂಟ್ ಇತ್ತೀಚೆಗೆ ‘ಮೈಕ್ರೋ ಪ್ಲಾನಿಂಗ್’ ಕೈಗೊಂಡಿತ್ತು. ನಾನು ಸ್ವಯಂ ಸೇವಕನಾಗಿ ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಸದವಕಾಶ ನನಗೆ ಲಭಿಸಿತ್ತು.

ಎರಡು ದಿನಗಳ ನನ್ನ ವಾಸ್ತವ್ಯದ ಸಂದರ್ಭದಲ್ಲಿ ನಾನು ಅನುಭವಿಸಿದ ಫಜೀತಿ -ಒಂದು ಸ್ನಾನದ್ದು; ಮತ್ತೊಂದು ಬಯಲು ಶೌಚಾಲಯದ್ದು. ಇಲ್ಲಿ ಬಹಿರ್ದೆಸೆಯ ತಾಣಗಳೆಂದರೆ ಜಾಲಿ ಮುಳ್ಳಿನ ಪೊದೆಗಳು! ಅವುಗಳ ಮುಳ್ಳು ನೋಡಿದಾಗಲೊಮ್ಮೆ ಮೈಜುಮ್ಮೆನ್ನುತ್ತಿತ್ತು. ನಾನು ಹಾಕಿಕೊಂಡಿದ್ದ ಪಾದರಕ್ಷೆಯನ್ನೂ ತೂರಿ ಹಿಮ್ಮಡಿ ಅಥವಾ ಅಂಗಾಲಿಗೆ ನಡಬಲ್ಲಷ್ಟು ಶಕ್ತಿಯುತವಾಗಿದ್ದವು ಜಾಲಿ ಮುಳ್ಳು. ಊರಿಗೆ ಊರೇ ಮುಳುಗಡೆ  ಆಗುವಂತೆ ಮಾಡಿದ ಡೊಣಿಯ ಬಗ್ಗೆ ಕುತೂಹಲ ತಾಳಿ, ಪಾತಳಿ ನೋಡಲು ತೆರಳಿದೆ. ಎರಡೂ ಬದಿಯ ಹರಿವಿನ ತುಂಬ ಜಾಲಿ ಮುಳ್ಳಿನ ಕಂಟಿ ಆವರಿಸಿ ಬಿಟ್ಟಿತ್ತು. ಡೊಣಿಯ ಒಳ ಹರಿವಿನ ಕಣಿವೆಯನ್ನು ಜಾಲಿ ಮುಳ್ಳು  ಸಂಪೂರ್ಣ ನುಂಗಿತ್ತು!

 read more »

ನೀರಿನ ಗಳಿಕೆ, ಉಳಿಕೆ ಹಾಗೂ ಬಳಕೆ; ‘ವಾಟರ್ ಲೈಫ್’ ಗೆ ಒಂದು ಸಾಮಾಜಿಕ ಉದ್ಯಮ!

ಬನ್ನಿ ಒಗ್ಗೂಡೋಣ..ನಾಳಿನ ನೀರ ನೆಮ್ಮದಿಗಾಗಿ. ಕೈ ಜೋಡಿಸೋಣ ಇಂದೇ.
ಒಂದು ಪ್ರಾಮಾಣಿಕ ಸಮೀಕ್ಷೆ. ಪಶ್ಚಿಮ ಬಂಗಾಳದ ೨೫೦ ಹಳ್ಳಿಗಳ ೫೦,೦೦೦ ಜನ ಕಲುಷಿತ ನೀರು ಸೇವಿಸಿ ‘ಆರ್ಸೆನಿಕೋಸಿಸ್’ ಎಂಬ ಜಲಜನ್ಯ ಚರ್ಮದ ಕ್ಯಾನ್ಸರ್ ಕಾಯಿಲೆಗೆ ಬಲಿಯಾಗದೇ ಉಳಿದರು. ಕಾರಣ ಈ ಹಳ್ಳಿಗರು ‘ವಾಟರ್ ಲೈಫ್’ ಆಶ್ರಯಿಸಿದ್ದು. ‘ವಾಟರ್ ಲೈಫ್’ - ಕುಡಿಯುವ ನೀರನ್ನು ಸ್ವಚ್ಛಗೊಳಿಸಿ, ಶುದ್ಧೀಕರಿಸಿ ನೀಡುವ ಒಂದು ಪರಿಹಾರ ವ್ಯವಸ್ಥೆ.
 
"ನಾವು ಸ್ವಚ್ಛವಾದ ಕುಡಿಯುವ ನೀರನ್ನು ೧೦ ಲೀಟರ್ ಗೆ ೩ ರೂಪಾಯಿ ಹಾಗೂ ೨೦ ಲೀಟರ್ ನೀರಿಗೆ ೫ ರೂಪಾಯಿಯಂತೆ ಕೇವಲ ನಾಮಮಾತ್ರ ಸೇವಾ ಶುಲ್ಕ ಆಕರಿಸಿ ನೀಡುತ್ತೇವೆ" ಎನ್ನುತ್ತಾರೆ, ಹೈದ್ರಾಬಾದಿನಲ್ಲಿ ಸ್ಥಾಪಿತವಾದ, ಕುಡಿಯುವ ನೀರು ಪೂರೈಸುವ ಈ ‘ಸಾಮಾಜಿಕ ಉದ್ಯಮ’ದ ಪೂರ್ವ-ಭಾರತ ವಿಭಾಗದ ಪ್ರಬಂಧಕ, ಸ್ವತ: ಸಹ-ಸಂಸ್ಥಾಪಕ, ೩೭ ವರ್ಷದ ಇಂದ್ರನೀಲ್ ದಾಸ್. ಕಳೆದ ಒಂದು ವರ್ಷದ ಹಿಂದೆ ಸುದೇಶ್ ಮೆನನ್, ಮೋಹನ್ ರಣಬಾವೋರೆ ಹಾಗೂ ಇಂದ್ರನೀಲ್ ದಾಸ್ ಅವರುಗಳ ದೂರದೃಷ್ಟಿಯ ಫಲವಾಗಿ ಜನ್ಮ ತಾಳಿದ ಸಂಸ್ಥೆ ‘ವಾಟರ್ ಲೈಫ್’. ‘ವಾಟರ್ ಲೈಫ್’ ಕುಡಿಯುವ ನೀರು ಶುದ್ಧೀಕರಣ ಘಟಕಗಳನ್ನು ಹಳ್ಳಿಗಳಲ್ಲಿ ಸ್ಥಾಪಿಸಿ, ಐದರಿಂದ ಆರು ವರ್ಷಗಳ ವರೆಗೆ ಘಟಕವನ್ನು ನಿರ್ವಹಿಸಿ, ನಡೆಸಿ, ಸುಸ್ಥಿರತೆ ತಂದುಕೊಟ್ಟು ಕೇವಲ ನಾಮಮಾತ್ರ ಶುಲ್ಕ ಹಳ್ಳಿಯ ಬಳಕೆದಾರರಿಂದ ಆಕರಿಸುತ್ತ ಸಮುದಾಯಕ್ಕೆ ತನ್ನಿಂದಾದ ‘ಹಿತ’ವನ್ನು ಲಾಭವೆಂದು ಪರಿಗಣಿಸುತ್ತದೆ!
 read more »

ಮತ್ತಷ್ಟು ವಿಶೇಷ ಬರಹಗಳು »

ಪ್ರಶ್ನೋತ್ತರ

»165 ಸದಸ್ಯರು, »1282 ಪುಟಗಳು, »359 ಪ್ರತಿಕ್ರಿಯೆಗಳು,

Subscribe/Track

Enter your email address:


 Subscribe in a reader

ವೀಡಿಯೋ

ಪರಿಸರ ಸ್ನೇಹಿ ಶೌಚಾಲಯ

ಈ ವೀಡಿಯೋದಲ್ಲಿ ಪರಿಸರ ಸ್ನೇಹಿ ಶೌಚಾಲಯಗಳ ಬಳಕೆಯಿಂದ ನೀರಿನ ಮಿತವ್ಯಯ ಸಾಧ್ಯ ಮತ್ತು ಮನುಷ್ಯನ ಮಲ ಮೂತ್ರವನ್ನು ಗೊಬ್ಬರವನ್ನಾಗಿ ಪರಿವರ್ತಿಸಿ ಹೇಗೆ ಬೇಸಾಯಕ್ಕೆ ಬಳಸಬಹುದು ಎಂಬುದನ್ನು ತಿಳಿಸಲಾಗಿದೆ.
 read more »

ಮತ್ತಷ್ಟು ವೀಡಿಯೋಗಳು »

ನೀರ ನಿಶ್ಚಿಂತೆಯಲ್ಲಿ ‘ಬ್ಲಾಗೀದಾರರು’!

dsc_0563.jpg

‘ಸಮೂಹ’ ಸಂವಹನಕ್ಕಿಂತ ‘ಸಮುದಾಯ’ ಕೇಂದ್ರಿತ ಸಂವಹನಕ್ಕೆ ಈಗ ಎಲ್ಲಿಲ್ಲದ ಬೇಡಿಕೆ. ಸಂತೆಯಲ್ಲಿ ಕಲ್ಲು ಹೊಡೆಯುವ ಬದಲು, ಜಾತ್ರೆಯಲ್ಲಿ ಗುರಿ ಇಟ್ಟು ಭಕ್ತನಿಗೇ ಬೀಸುವ ಕಲ್ಲಿದ್ದಂತೆ! ಗುರಿ ತಲುಪಿದರೆ ಒಂದೋ..ಎರಡೋ..ಹಣ್ಣು. ಗುರಿ ತಪ್ಪಿದರೆ..ಒಂದು ಕಲ್ಲು ಹೋಯಿತಷ್ಟೇ?

ಇಂತಹುದೇ ಪ್ರಯೋಗ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆಯಿತು. ಪತ್ರಿಕೋದ್ಯಮದ ಆಯ್ದ ವಿದ್ಯಾರ್ಥಿ ಸಮುದಾಯವನ್ನು ಒಂದೆಡೆ ಸೇರಿಸಿ ‘ನೀರ ನಿಶ್ಚಿಂತೆ’- ಅನ್ನದ ನೆಲ..ಅರಿವಿನ ಮುಗಿಲು ಎಂಬ ಕಾರ್ಯಾಗಾರದ ಭಾಗೀದಾರರಾಗುವಂತೆ ಮಾಡಲಾಗಿತ್ತು. ಅಷ್ಟೇ ಅಲ್ಲ. ಆನ್ಲೈನ್ ‘ಬ್ಲಾಗೀ’ದಾರರಾಗಿ ಇಂತಹ ಸಮುದಾಯದತ್ತ ನೀರ ನಿಶ್ಚಿಂತೆ ಪ್ರಯೋಗಗಳನ್ನು ಬೆಳಕಿಗೆ ತರಲು ವೇದಿಕೆ ಸೃಷ್ಟಿಸಲಾಯಿತು.  read more »

ಪ್ರಶ್ನೆ ಕೇಳಿ!
ನೀರಿನ ಸುತ್ತ ನಿಮಗಿರುವ ಪ್ರಶ್ನೆಗಳನ್ನು ಕೇಳಿ.

ಜೀವನದಿ ಕಾವೇರಿ

ಚಿತ್ರಗಳು ಮತ್ತು ಮೂಲ ಬರಹ: Claire Arni ಮತ್ತು Oriole Henri

ಕನ್ನಡಕ್ಕೆ ತಂದವರು: ಹೇಮ ಕದ್ರಾಪುರ

ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ >>

ನಿಮಗೆ ಏನನಿಸಿತು? ತಪ್ಪದೆ ತಿಳಿಸಿ!

ಈ ಪೋರ್ಟಲ್ ಕುರಿತ ನಿಮ್ಮ ಅನಿಸಿಕೆಗಳನ್ನು ನಮಗೆ ಬರೆದು ಕಳಿಸಿ. ನಿಮ್ಮ ಸಲಹೆ, ಅಭಿಪ್ರಾಯಗಳು ಈ ಸಮುದಾಯ ಕಟ್ಟುವಲ್ಲಿ ಅತ್ಯವಶ್ಯಕ.

ಅಲ್ಲದೆ, ಈ‌ ಸಮುದಾಯದಲ್ಲಿ ನೀವೂ ಬರೆಯಬಹುದು. ಭಾಗವಹಿಸುವ ಕುರಿತು ಹೆಚ್ಚಿನ ಮಾಹಿತಿಗೆ ನಮಗೊಂದು ಇ-ಮೇಯ್ಲ್ ಕಳುಹಿಸಿ.