ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಜಲದ ಬರಕ್ಕೆ ತೆರೆ ಎಳೆದ ನೀರಿನ ಬ್ಯಾಂಕ್

ತುಮಕೂರು: ಶಾಶ್ವತ ನದಿಗಳಿಲ್ಲದ ತುಮಕೂರು ಜಿಲ್ಲೆ ಬಯಲುಸೀಮೆಯಲ್ಲಿ ಹಬ್ಬಿಕೊಂಡಿದೆ. ಕಳೆದ ೧೦ ವರ್ಷಗಳಿಂದಲೂ ಬರಗಾಲದ ಮೇಲೆ ಬರ ಬರುತ್ತಿದೆ. ಕೃಷಿ ಜಮೀನುಗಳೆಲ್ಲ ಖಾಲಿ, ಖಾಲಿ ಇವೆ. ನೀರಿನ ಸಮಸ್ಯೆ ಆಗಾಧವಾಗಿ ಜಟಿಲವಾಗುತ್ತಿದೆ. ರಾಜಸ್ತಾನದ ನಂತರ ಕರ್ನಾಟಕ ಭಾರತದ ೨ನೇ ಮರುಭೂಮಿಯಾಗುತ್ತಿದೆ ಎಂದು ಜಲತಜ್ಞರು ಆತಂಕ ಪಡುತ್ತಿದ್ದಾರೆ. (more…)

ಬಳ್ಳಾರಿ ಕೋಟೆ ಬೆಟ್ಟ; ನಮ್ಮ ನೀರಿನ ಬುದ್ಧಿ ಮಟ್ಟ!

ಬಳ್ಳಾರಿ. ಊರ ಹೆಸರಷ್ಟೇ ಸಾಕು; ಮಲೆನಾಡ ಸೆರಗು ಧಾರವಾಡದಲ್ಲಿದ್ದವರಿಗೆ ಮೈಯೆಲ್ಲ ಕಾದು, ಬೆವರಿಳಿದ ಅನುಭವ!

ಕಾರದ ಮೆಣಸಿನಕಾಯಿ ಮಿರ್ಚಿ, ಬಳ್ಳೊಳ್ಳಿ ಚುರಮುರಿ.. ಪಾನಕದಂತಹ ಬಿಸಿ ಬಿಸಿ ಚಹಾ! ಸೂರ್ಯ ಹುಟ್ಟಿ ಮುಳುಗುವ ವರೆಗೆ ಯಾವುದೇ ಸಮಯ, ವಯಸ್ಸಿನ ಮಿತಿ ಇಲ್ಲದೇ ಕಾದ ಕೆಂಡದ ನೆಲದಲ್ಲಿ ಮನಸೋ ಇಚ್ಛೆ ಬಳಸುವುದು ಇಲ್ಲಿನ ಜನರ ಡಿ.ಎನ್.ಎ ಹೊಕ್ಕಿದೆ! (more…)

‘ನೀರ ನೆಮ್ಮದಿಗೆ ಪತ್ರಿಕೋದ್ಯಮ’

ಜಲ ಜಾಗೃತಿ ಕುರಿತ ಎರಡು ದಶಕಗಳ ಅವಲೋಕನ

 ಜಲಜಾಗೃತಿಗೆ ೨೦ ವರ್ಷ

 ರಾಜ್ಯದಲ್ಲಿ ಜಲ ಸಂರಕ್ಷಣೆ ಕಾರ್ಯ ಕ್ರಿ,ಶ ೧೯೯೬ರಿಂದ ವಿಶೇಷವಾಗಿ ಆರಂಭವಾಯಿತು. ಇದಕ್ಕೂ ಪೂರ್ವದಲ್ಲಿ ಸರಕಾರದ ಇಲಾಖೆಗಳ ಕರಪತ್ರ, ಹೇಳಿಕೆಗಳಲ್ಲಿ ನೀರಿನ ಮಹತ್ವ ಹೇಳುವ ಅಂಕಿಸಂಖ್ಯೆ ಮಾಹಿತಿಗಳಿದ್ದವು. ದೊಡ್ಡ ಅಣೆಕಟ್ಟು, ಕೆರೆ, ಕೊಳವೆ ಬಾವಿ ನಿರ್ಮಿಸುವ ಮೂಲಕ ನಾಡಿನಲ್ಲಿ ನೀರಿನ ಬಳಕೆ ಹೆಚ್ಚಿಸುವ ಯೋಜನೆಗಳಿದ್ದವು. ಮಲೆನಾಡು, ಕರಾವಳಿಯಲ್ಲಿ ಹೇರಳ ಮಳೆ ಸುರಿಯುವದರಿಂದ ಜಲಸಂರಕ್ಷಣೆ ಅನಗತ್ಯವೆಂದು ಜನ ವಾದಿಸುತ್ತಿದ್ದರು. (more…)

ಹೊಳೆ ದಂಡೆಯ ಹಾದಿಯಲ್ಲಿ……..

ಕೆಂಪಗಿನ ರಾಡಿ ನೀರು, ಕಸಕಡ್ಡಿ ಸಹಿತವಾಗಿ ಹೊಳೆ ತುಂಬಿ ಹರಿಯುತ್ತಿತ್ತು. ಅಕ್ಕಪಕ್ಕದ ಭತ್ತದ ಗದ್ದೆಗಳು ಮುಳುಗಿಹೋಗಿದ್ದವು. ನಮಗೆಲ್ಲಾ ಸುರಿವ ಮಳೆ, ಹರಿವ ಹೊಳೆ ಅದೇನೋ ಪುಳಕ ತರುತ್ತಿತ್ತು. ಊರಿನ ದನಕರುಗಳನ್ನು ಅಟ್ಟಿಸಿಕೊಂಡು ಬಂದ ದನ ಕಾಯುವ ಶಣ್ಯ ನಮ್ಮನ್ನು ಹೊಳೆಯಿಂದ ದೂರ ಇರಲು ಹೇಳಿದನು. ನಾಲ್ಕು ದಿನಗಳ ಹಿಂದೆ ಹೊಳೆ ಅಂಚಿನಲ್ಲಿ ಹುಲ್ಲು ಮೇಯುತ್ತಿದ್ದ ಎಮ್ಮೆ ಮಣಕವೊಂದು ಮಣ್ಣು ಹಿಸಿದು ಹೊಳೆಗೆ ಬಿದ್ದಿತ್ತು. ತೇಲುತ್ತಾ, ಈಜುತ್ತಾ ಬಿದಿರು ಮಟ್ಟಿಯಲ್ಲಿ ಸಿಕ್ಕಿಕೊಂಡ ಅದನ್ನು ಬದುಕಿಸಲು ಊರಿನವರೆಲ್ಲಾ ಸೇರಿ ಹರಸಾಹಸ ಮಾಡಬೇಕಾಯಿತು. (more…)

ಹನಿ ನೀರು-ಜೇನು ಒಂದಾಗದೇ ಜೇನ್ನೊಣಕ್ಕಿಲ್ಲ ಉಳಿಗಾಲ?

ಧಾರವಾಡ: ರಾಣಿ ಜೇನಿನ ಆಣತಿಯಂತೆ ಸಾವಿರಾರು ಹೂವುಗಳಿಗೆ ಭೇಟಿ ನೀಡಿ, ಆಯ್ದ ನೂರಾರು ಹೂವುಗಳಿಂದ ಒಂದು ಹನಿ ಮಕರಂದ ಇಡೀ ದಿನ ಸಂಗ್ರಹಿಸಿ ತರುವ ಕಾರ್ಮಿಕ ಜೇನು ನೊಣ ‘ಬ್ಯೂಸಿ ಬೀ’ಗಳು, ಅಗತ್ಯ ಬಿದ್ದಾಗ ನೂರಾರು ಬಾರಿ ಎಡತಾಕಿ ಹನಿ ಶುದ್ಧ ನೀರನ್ನು ಸಹ ಹೊತ್ತು ತಂದು ಆ ಹನಿ ಜೇನಿಗೆ ಪ್ರೋಕ್ಷಿಸಿ, ತುಪ್ಪವನ್ನು ಹದದಿಂದ ತಿಳಿಗೊಳಿಸಿ ಆಹಾರವಾಗಿಸಿಕೊಳ್ಳುತ್ತವೆ! (more…)

ಕಡಲ ತಡಿಯ ಕವಚ ಕಾಂಡ್ಲಾ

kandal (7)ಪರಿಸರ ಪ್ರಿಯ “ಮ್ಯಾಂಗ್ರೋವ” ಸಸ್ಯ (ಕಾಂಡ್ಲಾ) ಸಕಲ ರೀತಿಯಲ್ಲೂ ಹೊಸ ನಿರೀಕ್ಷೆ ಮೂಡಿಸಿದೆ. ಮ್ಯಾಂಗ್ರೋವ ಸಸ್ಯ ವಿಶೇಷ ವರ್ಗಕ್ಕೆ ಸೇರಿದ ಸಸ್ಯ ಸಂಕುಲ. ಆದ್ರೆ, ಈ ಕಾಂಡ್ಲಾ ಮೊದಲಿನಿಂದಲೂ ಮಾನವನ ದುರ್ಬಳಕೆ, ತಿರಸ್ಕಾರಕ್ಕೆ ಒಳಗಾದ ಸಸ್ಯ.

ಕಾಂಡ್ಲಾ ಬೇರೆಲ್ಲಾ ಸಸ್ಯಗಳಿಗಿಂತ ಗಟ್ಟಿಮುಟ್ಟಾದ ಬೇರು, ಸದಾ ಕಾಲ ಚಿಗುರುತ್ತಾ ಪ್ರಾಕೃತಿಕ ಪಕ್ಷಿಧಾಮವಾಗಿ, ವಿಭಿನ್ನವಾಗಿ ಗಮನ ಸೆಳೆಯುತ್ತದೆ. ಹಚ್ಚಹಸಿರಿನ ಬಿಂಬವಾಗಿ ನೋಡುಗರನ್ನು ಅತ್ಯಾಪ್ತವಾಗಿ ಆಕರ್ಷಿಸುತ್ತದೆ. ತಟ್ಟನೆ ಕಣ್ಸೆಳೆದು ಬಿಡುವಷ್ಟು ದಟ್ಟನೆಯ ಮೋಹಕ ಸಸ್ಯರಾಶಿ ಇದು. ಇದರ ಹುಟ್ಟು, ಬೆಳವಣಿಗೆ, ಉಪಯೋಗ, ಜೊತೆಗೆ ಅದರ ಸೌಂದರ್ಯ, ಎಲ್ಲವೂ ಆಕರ್ಷಕ.

(more…)

ಮಿತಿ ತಪ್ಪಿದ ನೀರಾವರಿ – ಸವುಳಾಯ್ತು ಫಲವತ್ತಾದ ಭೂಮಿ

ನೀರಿಲ್ಲದೆ ಕೃಷಿ ಮಾಡಲು ಸಾಧ್ಯವಿಲ್ಲ ಎಂಬುದು ತಿಳಿದ ವಿಚಾರ. ಊರಿನ ಪಕ್ಕದಲ್ಲೇ ಕೃಷ್ಣಾ ನದಿ ಹರಿಯುತ್ತಿದ್ದರೂ, ಕೃಷಿಗೆ ನೀರಿರಲಿಲ್ಲ. ಮಳೆ ನಂಬಿಕೊಂಡು ಕೃಷಿ ಮಾಡಿದರೆ ಬೆಳೆ ಬರುತ್ತಿರಲಿಲ್ಲ.shirguppi (1) ಒಟ್ಟಿನಲ್ಲಿ ಫಲವತ್ತಾದ ಜಮೀನು ಇದ್ದರೂ, ಫಸಲು ಬರುತ್ತಿರಲಿಲ್ಲ. ಹೀಗಾಗಿ, ಅಥಣಿ ತಾಲ್ಲೂಕಿನ ಶಿರಗುಪ್ಪಿ ಗ್ರಾಮದ ರೈತರು ನೀರಿನ ಸಮಸ್ಯೆ ಚರ್ಚಿಸಿದರು. ಇದರ ಫಲವಾಗಿಯೇ, ೧೯೭೬ರಲ್ಲಿ ಸಹಕಾರಿ ತತ್ವದಡಿ ಏತ ನೀರಾವರಿ ಯೋಜನೆ ರೂಪುಗೊಂಡಿತು.

ಕೃಷ್ಣಾ ನದಿಯಲ್ಲಿ ಹರಿದು ಹೋಗುತ್ತಿದ್ದ ನೀರನ್ನು ಪಂಪ್‌ಸೆಟ್ – ಪೈಪ್‌ಲೈನ್‌ಗಳ ಮೂಲಕ ತಂದು ಹೊಲಕ್ಕೆ ಹಾಯಿಸಿದರು. ಸಹಕಾರಿ ತತ್ವದ ನೀರಾವರಿ ವ್ಯವಸ್ಥೆಯಡಿ, ರೈತರು ಬರೋಬ್ಬರಿ ೫ ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಮಾಡಿಕೊಂಡರು. ನದಿಯಿಂದ ಹೊಲದವರೆಗೆ ನೀರು ಸಾಗಿಸಲು, ೬ ಸಾವಿರ ಅಡಿಗೂ ಹೆಚ್ಚು ದೂರ ಪೈಪ್‌ಲೈನ್ ಅಳವಡಿಸಿಕೊಂಡಿದ್ದಾರೆ. ೨೦ಕ್ಕೂ ಹೆಚ್ಚು ನೀರಾವರಿ ಸಂಘಗಳಿದ್ದು, ೨,೫೦೦ಕ್ಕೂ ಹೆಚ್ಚು ರೈತರು ಸದಸ್ಯರಿದ್ದಾರೆ. ಕಬ್ಬು, ದ್ರಾಕ್ಷಿ, ಬಾಳೆ ಸೇರಿದಂತೆ, ವಾಣಿಜ್ಯ ಬೆಳೆ ಬೆಯುತ್ತಾರೆ. ಸರಕಾರದ ನೆರವಿಲ್ಲದೆ, ರೈತರೇ ಒಗ್ಗಟ್ಟಾಗಿ ಮಾಡಿಕೊಂಡ ಈ ವ್ಯವಸ್ಥೆ, ಮಾದರಿ ಎನ್ನುವುದರಲ್ಲಿ ಎರಡು ಮಾತಿಲ್ಲ.ಆದರೆ, ಅರಿವಿಲ್ಲದೇ ರೈತರು ಇಂದು ಸಮಸ್ಯೆಗೆ ಸಿಲುಕಿದ್ದಾರೆ. ಅತೀ ನೀರಿನ ಬಳಕೆ ಮಣ್ಣನ್ನು ಸವುಳು ಮಾಡಿದೆ. ನೀರಾವರಿ ಯೋಜನೆ ಆರಂಬದಿಂದ ೨೦ ವಷಗ ವರೆಗೆ ಸಮಸ್ಯೆ ಇರಲಿಲ್ಲ. ೧೯೯೫ರಲ್ಲಿ ಕೆಲ ರೈತರ ಜಮೀನಿನಲ್ಲಿ ಸವುಳು ಸಮಸ್ಯೆ ಕಾಣಿಸಿಕೊಂಡಿತು. ೨೦೦೫ರ ಹೊತ್ತಿಗೆ, ಈ ಸಮಸ್ಯೆ ಇನ್ನುಷ್ಟು ಪ್ರದೇಶಕ್ಕೆ ವಿಸ್ತಾರಗೊಂಡಿತು. ಇಂದು ೧,೩೦೦ ಎಕರೆಗೂ ಅಧಿಕ ಭೂಮಿ ಸವುಳಾಗಿದೆ. ಅಲ್ಲಿ ಬೆಳೆ ಬರುತ್ತಿಲ್ಲ.  ಕಬ್ಬು ಬೆಯುತ್ತಿಲ್ಲ. ಮಣ್ಣು ಕ್ಷಾರಯುಕ್ತವಾಗಿದ್ದು, ಬಿಳಿ ಬಣ್ಣಕ್ಕೆ ತಿರುಗಿದೆ. (more…)

ಮರೀಚಿಕೆಯಾಯ್ತು ವಾರಾಹಿ ನೀರು

ಹಿಂದೆ, ಅಂದಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರಂಭಗೊಂಡ ಬಹೋಪಯೋಗಿ ನೀರಾವರಿ ಯೋಜನೆ. ಸರ್ಕಾರಿ ಖಜಾನೆಯಿಂದ ಕೋಟ್ಯಾಂತರರೂಪಾಯಿಯನ್ನು ಸತತ ಕೊಳ್ಳೆ ಹೊಡೆದ ಯೋಜನೆ; ರಾಜ್ಯದ ೧೫ ಜನ ಮುಖ್ಯ ಮಂತ್ರಿ, ೨೦ ಜನ ನೀರಾವರಿ ಸಚಿವರನ್ನು ಕಂಡಿದೆ! ಪೈಪ್ ಲೈನ್‌ಗಳ ಮೂಲಕ ನಗರ-ಮಹಾನಗರಗಳಿಗೆ ನೀರು ಒದಗಿಸಿದಂತೆ ನಿರ್ಮಿಸಬಹುದಾದಂತಹ ಸಣ್ಣ ನೀರಾವರಿ ಯೋಜನೆಯೊಂದನ್ನು ಬೃಹಾದಾಕರಗೊಳಿಸಿ, ಜನತೆಯ ಕಣ್ಣಿಗೆ ಮಣ್ಣೆರೆಚಿ, ಹಣ ಕೊಳ್ಳೆ ಹೊಡೆಯಲು ನಡೆಸಿದ ಸರ್ಕಾರಿ ಪ್ರಾಯೋಜಿತ ಬೃಹತ್ ಕಾರ್ಯಕ್ರಮ. ಅದು ವಾರಾಹಿ ನೀರಾವರಿ ಯೋಜನೆ. (more…)

ಮಲಿನವಾದ ಜಲಮೂಲ; ಮರೆಯಾದ ಪಕ್ಷಿ ಸಂಕುಲ

ಬೆಳಗಾವಿ ಜಲ್ಲೆಯ ಗೋಕಾಕ ತಾಲೂಕಿನ ಘಟಪ್ರಭಾ ಪಕ್ಷಿಧಾಮ ಪಕ್ಷಿಗಳಿಲ್ಲದೇ ಬಣಗುಡುತ್ತಿದೆ. ಪ್ರತಿ ವರ್ಷ ಚಳಿಗಾಲದಲ್ಲಿ ದೇಶ ವಿದೇಶಗಳಿಂದ ಹಲವು ಜಾತಿಯ ಪಕ್ಷಿಗಳು ಇಲ್ಲಿಗೆ ವಲಸೆ ಬರುತ್ತಿದ್ದವು. ಈ ರೀತಿ ಬರುವ ವಿವಿಧ ಪಕ್ಷಿಗಳಿಂದ, ಅವುಗಳ ಚಿಲಿಪಿಲಿ ಸದ್ದಿನಿಂದ, ಅವುಗಳ ಸಂತಾನಾಭಿವೃದ್ಧಿಯ ಸೊಬಗಿನಿಂದ ಕಂಗೊಳಿಸಿ ನಿಸರ್ಗಪ್ರಿಯರ ಗಮನಸೆಳೆದಿದ್ದ ಈ ತಾಣಕ್ಕೆ ಈ ಸ್ಥಿತಿ ಬಂದಿದ್ದಾದರೂ ಹೇಗೆ?DUPADHAL_BIRD_SANCTUARY_(9)

ಅದಕ್ಕೆ ಕಾರಣ ಪಕ್ಷಿಧಾಮದ ನೀರಿನಲ್ಲಿ ಆವರಿಸಿರುವ ಅಂತರಗಂಗೆ (Haishinthet vidd) ಎಂಬ ಜಲಸಸ್ಯ. ಇದೊಂದು ರೀತಿಯ ಪಾಚಿ. ಇದು ಇಡೀ ಜಲಮೂಲದಲ್ಲಿ ಬೆಳದಿದ್ದು ವಲಸೆ ಬರುವ ಪಕ್ಷಿಗಳಿಗೆ ಸರಿಯಾದ ಆಹಾರ ದೊರಕದೆ ಪರದಾಡುವಂತಾಗಿದೆ. ವರ್ಷದಿಂದ ವರ್ಷಕ್ಕೆ ವಲಸೆ ಬರುವ ಪಕ್ಷಿಗಳ ಸಂಖ್ಯೆ ಕಡಿಮೆಯಾಗುತ್ತಾ ಹೋಗಿ ಇತ್ತೀಚಿನ ವರ್ಷಗಳಲ್ಲಿ ತೀರಾ ಕಡಿಮೆಯಾಗಿದೆ.  ಕೃಷಿ ಭೂಮಿಗೆ ನೀರಾವರಿ ಕಲ್ಪಿಸುವ ನಿಟ್ಟಿನಲ್ಲಿ ೧೮೮೪ರಲ್ಲಿ ಘಟಪ್ರಭಾ ನದಿಗೆ ಧುಪದಾಳ ಬಳಿ ನಿರ್ಮಿಸಿರುವ ಧುಪದಾಳ ಜಲಾಶಯದ ಹಿನ್ನೀರಿನಲ್ಲಿ ಸುಮಾರು ೨೯.೮೭೫ ಚದರ ಕಿ.ಮೀ, ವ್ಯಾಪ್ತಿಯಲ್ಲಿ ೨೨ ನಡುಗಡ್ಡೆಗಳು ಉಂಟಾಗಿ ಅವು ಕ್ರಮೇಣ ಪಕ್ಷಿಧಾಮವಾಗಿ ಅರಳಿ ನಿಂತಿದ್ದವು. ಅದರಲ್ಲಿ ಧುಪದಾಳ ಜಲಾಶಯ ಬಳಿ ಅತಿ ದೊಡ್ಡ ನಡುಗಡ್ಡೆಯಾಗಿದ್ದು ಪಕ್ಷಿಗಳ ಏಕಾಂತಕ್ಕೆ  ಸ್ವಚ್ಛ ಸುಂದರ ಸ್ಥಳವಾಗಿತ್ತು. ೧೯೭೪ರಲ್ಲಿ ಕೇಂದ್ರ ಸರಕಾರವು ಈ ಪಕ್ಷಿಧಾಮವನ್ನು “ರಾಷ್ಟ್ರೀಯ ಪಕ್ಷಿಧಾಮ” ಎಂದು ಘೋಷಿಸಿದೆ. ಈ ಹಿಂದೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ವನ್ಯಜೀವಿ ಉಪವಿಭಾಗಕ್ಕೆ ಒಳಪಟ್ಟಿದ್ದ ಪಕ್ಷಿಧಾಮ ೨೦೦೯ರಲ್ಲಿ ಗೋಕಾಕ ವಲಯದ ಅರಣ್ಯ ವಿಭಾಗಕ್ಕೆ ಸೇರಿದೆ.

(more…)

ಮುದ್ದಿನಕೊಪ್ಪದಲ್ಲಿ ಮೂವತ್ತಮೂರು ಕೆರೆಗಳು……….!

ಮುದ್ದಿನಕೊಪ್ಪ ಭೌಗೋಳಿಕವಾಗಿ ಪುಟ್ಟ ಗ್ರಾಮ. ಆದರೆ, ಈ ಗ್ರಾಮದ ವ್ಯಾಪ್ತಿಗೆ ಸಾವಿರಾರು ಎಕರೆ ವ್ಯವಸಾಯದ ಪ್ರದೇಶವಿದೆ. ಮುದ್ದಿನಕೊಪ್ಪ ಗ್ರಾಮಸ್ಥರಷ್ಟೆ ಅಲ್ಲದೆ, ಸುತ್ತಮುತ್ತಲ ಗ್ರಾಮದ ಜನರೂ ಇಲ್ಲಿ ವ್ಯವಸಾಯ ಮಾಡುತ್ತಾರೆ. ಈ ಎಲ್ಲಾ ವ್ಯವಸಾಯದ ಪ್ರದೇಶಕ್ಕೆ ೩೩ ಕೆರೆಗಳೇ ಉಸಿರು. ಆದರೆ, ಇಂದಿನ ತಲೆಮಾರಿನ ಮಕ್ಕಳಿಗೆ, ತಮ್ಮ ಗ್ರಾಮದ ಈ ವೈಶಿಷ್ಠತೆಯ ಬಗ್ಗೆ ತಿಳಿದೇ ಇಲ್ಲ. ‘ನಿಮ್ಮೂರಲ್ಲಿ ಇಷ್ಟೊಂದು ಕೆರೆಗಳಿವೆ’ ಎಂಬ ಮಾತು ಕೇಳಿದರೆ ಹೌದಾ? ಎಂದು ಹೌಹಾರುತ್ತಾರೆ. ಗ್ರಾಮದ ಈ ವೈಭವ ನೋಡಿ ಮುದ್ದಿನಕೊಪ್ಪ ಎಂದು ನಾಮಕರಣ ಮಾಡಿದರು ಎಂದು ಗ್ರಾಮದ ಅಜ್ಜಿಯೊಬ್ಬರು ಈಗಲೂ ನೆನಪಿಸಿಕೊಳ್ಳುತ್ತಾರೆ. ನೀರಿನ ಅಭಾವವೆಂಬ ಕಠೋರ ವಾಸ್ತವ ನಮ್ಮೆದುರಿಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ, ಕೆರೆಗಳು ನಮಗೆ ಪರಿಹಾರ ರೂಪದಲ್ಲಿವೆ. ನಮ್ಮ ಹಿರಿಯರು ನಮಗಾಗಿ ಕೊಟ್ಟ ಈ ಬಳುವಳಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಪ್ರಯತ್ನವಾಗಬೇಕಿದೆ.

mudinkoppa p1 copy-2

ಒಂದು ಹಳ್ಳಿಯಲ್ಲಿ ಹೆಚ್ಚೆಂದರೆ ಮೂರು-ನಾಲ್ಕು ಕೆರೆಗಳಿರಬಹುದು. ಆದರೆ ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ ತಾಲ್ಲೂಕಿನ ಸಾಗರ ರಸ್ತೆಯಲ್ಲಿರುವ ಮುದ್ದಿನಕೊಪ್ಪ ಗ್ರಾಮದಲ್ಲಿ ಒಂದಲ್ಲ ಎರಡಲ್ಲ – ಬರೋಬ್ಬರಿ ಮೂವತ್ತಮೂರು ಕೆರೆಗಳಿವೆ….! ಈ ಕೆರೆಗಳು ರೈತರಿಗೆ, ಮೀನುಗಾರರಿಗೆ, ಕುಂಬಾರರಿಗೆ, ಕುಶಲಕರ್ಮಿಗಳಿಗೆ, ಮಹಿಳೆಯರಿಗೆ ಮತ್ತು ಸುತ್ತಮುತ್ತಲ ಗ್ರಾಮಸ್ಥರಿಗೂ ಜೀವನಾಡಿಯಾಗಿದ್ದವು. ಇವರ ಬದುಕಿನೊಂದಿಗೆ ಬೆಸೆದುಕೊಂಡಿದ್ದವು. ಆದರೆ ಸರಿಯಾದ ನಿರ್ವಹಣೆ ಇಲ್ಲದೆ ಈಗ ಈ ಎಲ್ಲಾ ಕೆರೆಗಳು ಕಾಲಗರ್ಭ ಸೇರುತ್ತಿವೆ.

 ಮುದ್ದಿನಕೊಪ್ಪದಲ್ಲಿ ಮೂವತ್ತಮೂರು ಕೆರೆಗಳಿರುವುದು ನಿಜವೇ…..? ಎಂಬ ಅನುಮಾನದೊಂದಿಗೆ ಗ್ರಾಮದ ರೈತರಾದ ರಾಜು, ಸ್ನೇಹಿತರಾದ ಪೂರ್ಣಪ್ರಜ್ಞ, ರಾಜು, ಅವರೊಂದಿಗೆ ಕೆರೆಗಳ ಹುಡುಕಾಟಕ್ಕೆ ತೊಡಗಿದೆವು. ಒಂದು ವಾರಗಳ ಕಾಲ ಮೂವತ್ತಮೂರು ಕೆರೆಗಳನ್ನು ಗುರುತಿಸಿದೆವು. ಏಷ್ಯಾ ಖಂಡದಲ್ಲೆ ಬಹುಶಃ ಬೇರೆಲ್ಲ ಇಷ್ಟೊಂದು ಕೆರೆಗಳಿರುವ ಹಳ್ಳಿಗಳು ಸಿಗಲಾರವು. ವಿಶಿಷ್ಟಗಳಲ್ಲಿ ವಿಶಿಷ್ಟ ಮುದ್ದಿನಕೊಪ್ಪದ ಈ ಮುತ್ತಿನ ಕೆರೆಗಳು.

ನಮ್ಮ ಹುಡುಕಾಟದಲ್ಲಿ ಈ ಎಲ್ಲಾ ಕೆರೆಗಳೂ ಜೀವಂತಿಕೆಯನ್ನು ಕಳೆದುಕೊಂಡಿದ್ದವು. ಇವುಗಳ ಆಯುಷ್ಯ ಮುಗಿದಿದೆಯೇ ಅನ್ನಿಸುತ್ತಿತ್ತು. ಈ ಕೆರೆಗಳು ಹೂಳಿನಿಂದ ತುಂಬಿದ್ದವು. ಪೋಷಕ ಕಾಲುವೆಗಳು ಮಾಯವಾಗಿದ್ದವು. ಕೆರೆ ಏರಿ, ಅಂಗಳ, ತೂಬು, ಕೋಡಿಗಳು ಹಾಳು ಬಿದ್ದಿದ್ದವು. ಒತ್ತುವರಿಯಂತಹ ನೂರಾರು ಸಮಸ್ಯೆಗಳು, ಜೊತೆಗೆ ಸಮುದಾಯದ ನಿರ್ಲಕ್ಷ್ಯದಿಂದಾಗಿ ಕೆರೆಗಳು ಈ ಸ್ಥಿತಿಗೆ ಬಂದಿದ್ದವು.

(more…)