ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಅಮ್ಮಂದಿರ ಮೂಲಕವೇ ಶೌಚಾಲಯ ಕಟ್ಟಿಸಿದ್ದು ಈ ಫೆಲೊ ಬೆಂಚ್‌ಮಾರ್ಕ್!

ಕೋಲಾರ/ ಮುಳಬಾಗಿಲು (ದೊಡ್ಡಮಾದೇನಹಳ್ಳಿ) ಮತ್ತು ಗದಗ (ಕಣವಿ): ಸ್ಕೋಪ್-ಅರ್ಘ್ಯಂ ವಾಟರ್ ಆಂಡ್ ಸ್ಯಾನಿಟೇಷನ್ ಫೆಲೊ ಅನ್ನಪೂರ್ಣಾ ಬೆಣಚಮರಡಿ ಅವರ ವಿಶೇಷತೆ ಎಂದರೆ, (more…)

ಹಾರೋಬೆಳವಡಿ ಅಭಿವೃದ್ಧಿಗೆ ರಮೇಶ ‘ವಾಟ್ಸ್ ಆಪ್’!

ಧಾರವಾಡ (ಹಾರೋಬೆಳವಡಿ): ನಮ್ಮ ರಮೇಶ ಹಿಡದ ಕೆಲಸ ನೂರಕ್ಕ ನೂರ ಆದ್ಹಂಗರೀ.. ನಮ್ಮ ಊರಾಗ ಅವರು ಕೈ ಹಾಕಿದ್ದ ಒಂದ ಕೆಲಸ ಹುಸಿ ಹೋಗಿದ್ದ ತೋರಿಸ್ರೀ.. ನೋಡೋಣು..” ಹಾರೋಬೆಳವಡಿಯ ಶ್ರೀಮತಿ ಕಾಶವ್ವ ಮರಕುಂಬಿ ಅಭಿಮಾನದಿಂದ ಹೇಳುತ್ತಿದ್ದರೆ (more…)

“ನಾನು ಸ್ಕೋಪ್ನವ; ಅಭಿವೃದ್ಧಿ ಪಕ್ಷ ನಮ್ಮದು”

ಗದಗ (ಹಿರೇಹಂದಿಗೋಳ): ‘ಮಾಸ್ಟರ್ಸ್ ಇನ್ ಡೆವಲಪ್‌ಮೆಂಟ್ ಮ್ಯಾನೇಜಮೆಂಟ್’ ಕೋರ್ಸ್ ಕಲಿಯಲು ಫೀ ಹಣ ಹೊಂದಿಸಲಾಗದೇ, ಸ್ನಾತಕ ಪದವಿಯ ನಂತರ ಒಂದು ವರ್ಷ ಕೂಲಿನಾಲಿಯನ್ನೂ ಮಾಡಿಕೊಂಡು ಅರೆಹೊಟ್ಟೆ ಉಂಡುಟ್ಟು, ಗಾರೆ ಕೆಲಸದಿಂದ ಗಳಿಸಿದ ಲಕ್ಷ ರೂಪಾಯಿ ಕೈಯಲ್ಲಿ ಹಿಡಿದುಕೊಂಡು (more…)

ಸಂಸದರ ಆದರ್ಶ ಗ್ರಾಮಕ್ಕೆ ‘ಸ್ವಚ್ಛತಾ ದೂತ’

ಧಾರವಾಡ (ಹಾರೋಬೆಳವಡಿ): ಫೆಲೊಗಳ ಒಂದು ವರ್ಷದ ಗ್ರಾಮವಾಸ್ತವ್ಯ ಕೊನೆಗೊಂಡ, ಆರು ತಿಂಗಳ ಗ್ರಾಮೋದ್ಧಾರದ ತರಬೇತಿ ಪೂರ್ಣಗೊಂಡ ದಿನ. ಹಾರೋಬೆಳವಡಿಯಿಂದ ಫೆಲೊ ಓರ್ವರನ್ನು ಬೀಳ್ಕೊಡುವ ಘಳಿಗೆ..  (more…)

ಈ ಹೆಣ್ಣಮಗಳು ಕಿತ್ತೂರು ಚೆನ್ನಮ್ಮರೀ..

ಧಾರವಾಡ (ದೇವರ ಹುಬ್ಬಳ್ಳಿ): “ನಮ್ಮ ವಿಜಯಲಕ್ಷ್ಮಿ ಬರಿ ನಮ್ಮ ಹಳ್ಳಿಯನ್ನಷ್ಟೇ ಅಲ್ಲ; ನಮ್ಮೆಲ್ಲರ ಮನಸ್ಸಿನ ಕೊಳೆಯನ್ನೂ ಸ್ವಚ್ಛ ಮಾಡಿದಂಥವಳು!” (more…)

ಸ್ವಚ್ಛ ಭಾರತ: ಬೇಕಾಗಿದೆ ಉಚ್ಛ ಇಚ್ಛಾಶಕ್ತಿ

ಅವರು ಕತ್ತಲಾಗುವುದನ್ನೇ ಕಾಯುತ್ತಿರುತ್ತಾರೆ. ಈ ಸೂರ್ಯನೆಂಬ ಬೆಳಕಿನುಂಡೆ ಯಾವಾಗ ಮುಳುಗಿ ಸಾಯುತ್ತಾನೋ ಎಂದು ಹಿಡಿಶಾಪ ಹಾಕುತ್ತಿರುತ್ತಾರೆ. ಒಮ್ಮೆ ಸೂರ್ಯ ಮುಳುಗಿ ಕತ್ತಲಾವರಿಸಿತೆಂದರೆ ಇವರಿಗೆ  ಎಲ್ಲಿಲ್ಲದ ಆನಂದ. ಬ್ರಹ್ಮಾಂಡದಷ್ಟು ಸಂತಸ! (more…)

ಎಂದೂ ಬಗೆಹರಿಯದ ಬಿಂಗೀಪುರ ಸಮಸ್ಯೆ…….(ಬಿಂಗೀಪುರದ ಕತೆ..(ಕೆರೆ) ವ್ಯಥೆ..)

ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಎಸ್. ಬಿಂಗೀಪುರದಲ್ಲಿ ಕಸ ಎಸೆಯದಂತೆ ಅಲ್ಲಿನ ಸ್ಥಳೀಯರು ನಡೆಸುತ್ತಿರುವ ಡಂಪಿಂಗ್ ಯಾರ್ಡ್ ನ ಮುಖ್ಯದ್ವಾರಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸುತ್ತಿದ್ದುದರಿಂದ ಬಿಬಿಎಂಪಿಗೆ ಈ ಸಮಸ್ಯೆ ಬಗೆಹರಿಸುವುದು ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಆದ್ರೆ ರಾಜಕಾರಣಿಗಳ ಬಣ್ಣದ ಮಾತಿನ ಭರವಸೆಗಳ ಮೂಲಕ ಸಧ್ಯಕ್ಕೆ ಜನ ಪ್ರತಿಭಟನೆಯನ್ನೇನೋ ನಿಲ್ಲಿಸಿದ್ದಾರೆ. (more…)

ಮನಗುಂಡಿಯಲ್ಲಿ ಹೊಸ ಮನ್ವಂತರ

“ಮೊದಲು ಸಂಜೆಯಾದ್ರ ಸಾಕು ಜೀವ ಕೈಯಾಗ ಹಿಡಕೊಂಡು ಊರ ಹೊರಗ ಬಯಲಿಗೆ ಹೋಗಬೇಕಾಗುತ್ತಿತ್ರಿ. ಹುಳ ಹುಪ್ಪಡಿ ಕಾಟ ಒಂದ ಕಡೆ,  ಇನ್ನೊಂದ ಕಡೆ ಯಾರಾರ ಗಂಡಸರು ಬಂದರ ಎದ್ದು ನಿಲ್ಲುವ ಅನಿವಾರ್ಯತೆ. ಯಾರಿಗೂ ಬ್ಯಾಡ್ರಪಾ ಈ ಗೋಳು.. ಈಗ ಅದೇನಿಲ್ರಿ. ನೆಮ್ಮದಿಯಿಂದ ಅದೇನ್ರಿ…ನನಗೂ ಈಗ ಅರ್ಥ ಆಗಾಕತ್ತೈತ್ರಿ…” (more…)

ದ.ಕ.ದಲ್ಲಿ ಕಸದ ಹೊಸ ಪಾಠ: ಗ್ರಾ.ಪಂ.ನ ಮೂಲದಲ್ಲೇ ಹಸಿ- ಒಣ ಕಸ ವಿಂಗಡಣೆ

ಸಂಪೂರ್ಣ ಸ್ವಚ್ಛತಾ ಆಂದೋಲನ ನಡೆಸಿದ, ನಿರ್ಮಲ ಗ್ರಾಮ ಪುರಸ್ಕಾರಗಳಿಗೂ ಭಾಜನವಾದ, ಬಯಲು ಮಲ ವಿಸರ್ಜನೆ ಮುಕ್ತ ಜಿಲ್ಲೆ ಎಂದೂ ಹೆಸರು ಪಡೆದಿರುವ ದಕ್ಷಿಣ ಕನ್ನಡ ಜಿಲ್ಲೆ ಕಸ ವಿಲೇವಾರಿ ಬಗ್ಗೆಯೂ ಕಾಳಜಿ ವಹಿಸಿದೆ. ೧೩ ಗ್ರಾಮ ಪಂಚಾಯಿತಿಗಳಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿರ್ಮಿಸಿ (more…)