ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಸೂಚನಾ ಫಲಕ

ಕನ್ನಡ ವಾಟರ್ ಪೋರ್ಟಲ್ ಈಗ ಹೊಸ ರೂಪದಲ್ಲಿ ನಿಮ್ಮ ಮುಂದಿದೆ.


ಪೋರ್ಟಲ್ ಉತ್ತಮಗೊಳಿಸುವಲ್ಲಿ ನಿಮ್ಮೆಲ್ಲರ ಸಲಹೆ, ಅಭಿಪ್ರಾಯಗಳನ್ನು ಸ್ವಾಗತಿಸುತ್ತೇವೆ. ಸಲಹೆಗಳನ್ನು ಪ್ರತಿಕ್ರಿಯೆ ಮೂಲಕ ಬರೆದು ಕಳುಹಿಸಿ.

ವಾಟರ್ ಪೋರ್ಟಲ್ಲಿನಲ್ಲಿ ನೀವೂ ಬರೆಯಬಹುದು. ನಿಮ್ಮ ಸುತ್ತ ಇರುವ ನೀರಿನ ಸಮಸ್ಯೆ, ನೀರ ಬಳಕೆ ಹಾಗೂ ಮಳೆ ನೀರು ಕೊಯ್ಲಿನ ವಿಧಾನಗಳು, ಪಾರಂಪರಿಕ ಜಲ ಜ್ಞಾನ ಇತ್ಯಾದಿ ನೀರಿಗೆ ಸಂಬಂಧಿಸಿದ ಹತ್ತು ಹಲವು ಮಾಹಿತಿಗಳನ್ನು ಕನ್ನಡ ವಾಟರ್ ಪೋರ್ಟಲ್ ನೊಂದಿಗೆ ಹಂಚಿಕೊಳ್ಳಬಹುದು. ನೀವು ಹಂಚಿಕೊಳ್ಳಬಹುದಾದ ವಿಷಯಗಳು

 • ಸುದ್ದಿ ಚಿತ್ರ
 • ನೀರು ಮತ್ತು ನೈರ್ಮಲ್ಯದ ಬಗೆಗೆ ಆಳವಾದ ಲೇಖನಗಳು
 • ಯಶೋಗಾಥೆಗಳು
 • ಅಧ್ಯಯನ ಲೇಖನಗಳು
 • ಆವಿಶ್ಕಾರಗಳು
 • ಪಾರಂಪರಿಕ ಪದ್ದತಿಗಳು/ರೂಢಿಗಳು
 • ಜಲ ಹಬ್ಬಗಳು
 • ನೀರಿನ ಆಗರಗಳು ಹಾಗೂ ರಚನೆಗಳು
 • ಜಿಂಗಲ್ಸ್ ಗಳು
 • ವಿಡಿಯೋ ಚಿತ್ರಣಗಳು (ಗರಿಷ್ಟ ೫ ನಿಮಿಷ)
 • ಧ್ವನಿ ಮುದ್ರಣಗಳು
 • ಐಇಸಿ ಸಾಮಗ್ರಿಗಳು – ಹಾಡುಗಳು, ಪೋಸ್ಟರ್‌ಗಳು, ನಾಟಕಗಳು ಹಾಗೂ ಸಾಕ್ಷ್ಯಚಿತ್ರಗಳು ಇತ್ಯಾದಿ
 • ರೇಖಾ ಚಿತ್ರಗಳು

ಲೇಖನಗಳು ೩೫೦-೪೦೦ ಪದಗಳನ್ನು ಮೀರಬಾರದು. ಜಾಲತಾಣದಲ್ಲಿ ಪ್ರಕಟಗೊಂಡ  ಬರಹಗಳಿಗೆ ಸೂಕ್ತ ಗೌರವಧನ ನೀಡಲಾಗುವುದು.

 ಈ ಹೊಸ ಪ್ರಯತ್ನಕ್ಕೆ ನಮ್ಮೊಂದಿಗೆ ಕೈಜೋಡಿಸಲು ತಮ್ಮನ್ನು ಆತ್ಮೀಯವಾಗಿ ಆಹ್ವಾನಿಸುತ್ತೇವೆ. ನೀರು ಮತ್ತು ನೈರ್ಮಲ್ಯ ವಿಷಯದ ಬಗೆಗಿನ ಎಲ್ಲಾ ಮಾಹಿತಿಗಳನ್ನು ಒಂದೆಡೆ ಸೇರಿಸುವಲ್ಲಿ ಮತ್ತು ಜನರಿಗೆ ತಲುಪಿಸುವಲ್ಲಿ ತಮ್ಮ ಅನಿಸಿಕೆ, ಅಭಿಪ್ರಾಯ ಮತ್ತು ಪ್ರೋತ್ಸಾಹ ಸದಾ ದೊರೆಯುವದು ಎಂದು ಭಾವಿಸುತ್ತೇವೆ.

ಲೇಖನಗಳನ್ನು ನುಡಿ, ಬರಹ ಅಥವಾ ಯುನಿಕೋಡ್ ತಂತ್ರಾಂಶದಲ್ಲಿ ಟೈಪ್ ಮಾಡಿ ಈ ಮೇಲ್ ಮೂಲಕ ಕಳುಹಿಸಬಹುದು. ಛಾಯಾ ಚಿತ್ರಗಳು ಉತ್ತಮ ಗುಣಮಟ್ಟದ ಜೆಪೆಗ್ (jpeg)   ಮಾದರಿಯಲ್ಲಿರಬೇಕು. ಲೇಖನದ  ಕೊನೆಯಲ್ಲಿ ಲೇಖಕರ ಹೆಸರು  ಹಾಗು ಸಂಪೂರ್ಣ ವಿಳಾಸವನ್ನು ನಮೂದಿಸತಕ್ಕದ್ದು


ಶ್ರೀ ಗಣಪತಿ ಹೆಗಡೆ
ಕಮ್ಯುನಿಕೇಷನ್ ಫಾರ್ ಡೆವಲಪ್‌ಮೆಂಟ್ ಆಂಡ್ ಲರ್ನಿಂಗ್ (ಸಿಡಿಎಲ್)
೧೧/ಎ, ೭ನೇ ಅಡ್ಡರಸ್ತೆ, ೧೭  ನೇ ಮುಖ್ಯ ರಸ್ತೆ
ಕೋರಮಂಗಲ ೬ ನೇ ಬ್ಲಾಕ್, ಬೆಂಗಳೂರು -೫೬೦೦೯೫
ಮೊ  – ೮೭೬೨೪ ೮೬೪೬೭,  ೦೮೦-೪೧೪೭೮೪೭೦
ಮೇಲ್- kannadaindiawaterportal@gmail.com

Share on FacebookTweet about this on TwitterShare on LinkedIn