ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ನೆಲದಡಿಯ ಅಣೆಕಟ್ಟು

CD

ದಕ್ಷಿಣ ಇಸ್ರೇಲಿನ ‘ಅರವಾ ಮರುಭೂಮಿ’ಯಲ್ಲಿ ಕರೆದೊಯ್ಯುತ್ತಿದ್ದ ಸಹಕಾರ ಕೃಷಿ ಸಮಿತಿ ಮುಖ್ಯಸ್ಥ ಶಮಿ ಬರ್ಕಾನ್ ತೋಳನ್ನು ನೀಳ ಚಾಚಿದು. ‘ಅದೋ! ಪಕ್ಕದಲ್ಲಿ ಕಾಣಿಸುತ್ತಿರುವುದು ಶೈಜಾಫ್‌ಡ್ಯಾಂ’ ಎಂದು ತೋರಿಸಿದರು. ಅತ್ತಕಡೆ ನೋಡಿದಾಗ ಎಕರೆಗಟ್ಟಲೇ ವಿಸ್ತೀರ್ಣದಲ್ಲಿ ಟಾರ್ಪಾಲಿನ್ (ತಾಡಪತ್ರೆ) ಹಾಕಿದ್ದು ಬಿಟ್ಟರೆ ಬೇರಾವಅಣೆಕಟ್ಟುಕಾಣಿಸಲಿಲ್ಲ.

ಸ್ವಲ್ಪ ಸಮಯದಲ್ಲಿ ನಾವಿದ್ದ ವಾಹನ ಮಣ್ಣಿನ ದಿಬ್ಬವೊಂದನ್ನುಏರಿ, ಬೆಟ್ಟದತುದಿಯಲ್ಲಿ ನಿಂತಿತು. ಇಳಿದು ಕೆಳಗೆ ನೋಡಿದಾಗಲೂಟಾರ್ಪಾಲಿನ್ ಹಾಸಿದ ಪ್ರದೇಶ ಹೊರತುಪಡಿಸಿದರೆ ಜಲಾಶಯಎಲ್ಲೂಕಾಣಲಿಲ್ಲ. ‘ಅದೇ ಶೈಜಾಫ್‌ ಡ್ಯಾಮ್’ ಎಂದು ಶಮಿ ಬರ್ಕಾನ್‌ ಅದರತ್ತಲೇ ಬೊಟ್ಟು ಮಾಡಿ ತೋರಿಸಿದರು. ಇದು ನೀರನ್ನು ಸಂಗ್ರಹಿಸಿಟ್ಟುಕೊಂಡ ಜಲಾಶಯ ಎಂದಾಗಲಷ್ಟೇ ಅದರ ಸ್ವರೂಪ ಗೊತ್ತಾಯಿತು. ಅಣೆಕಟ್ಟುಎಂದರೆ ನದಿಗೆ ಅಡ್ಡಲಾಗಿಕಟ್ಟಿದಎತ್ತರದಗೋಡೆ ಎಂಬ ಭಾವನೆ ಮೂಡುತ್ತದೆ. ಆದರೆಇದು ನದಿಪಾತ್ರದಲ್ಲಿರುವ, ನೆಲದೊಳಗಿನ ಅಣೆಕಟ್ಟು. ಎತ್ತರವಲ್ಲ; ಆಳ ಇರುವಂಥದು!

ನೆಲದಲ್ಲೇ ಆಳವಾಗಿ ಈ ಅಣೆಕಟ್ಟು ನಿರ್ಮಿಸಿದ ಕಾರಣ? ಮತ್ತದೇ ನೀರಿನಕೊರತೆ. ಇಸ್ರೇಲಿನ ಉತ್ತರ ಭಾಗದಜನವಸತಿ ಪ್ರದೇಶಗಳು ಸಮುದ್ರದ ನೀರನ್ನು ಬಟ್ಟಿ ಇಳಿಸಿದ ಅಥವಾ ‘ಗೆಲಿಲೀ’ ಸರೋವರದ ನೀರನ್ನು ಪಡೆಯುತ್ತವೆ. ಇದನ್ನು ಬಳಸಿದ ಬಳಿಕ ಸಂಸ್ಕರಿಸಿ, ಆ ಭಾಗದ ಕೃಷಿಗೆ ಬಳಸುತ್ತಾರೆ. ಆದರೆದಕ್ಷಿಣದ (ನೆಗೆವ್ ಮರುಭೂಮಿ) ಭಾಗಕ್ಕೆ ಆ ಭಾಗ್ಯಇಲ್ಲ. ಕೃಷಿಗೆ ಬೇಕಾದ ಮಳೆ ನೀರು ಸಮುದ್ರಕ್ಕೆ ಸಾಗಿ ಹೋದದಂತೆಇಲ್ಲೇ ದಿಗ್ಬಂಧನ ಹಾಕಿ ಸೆರೆ ಹಿಡಿದಿಟ್ಟುಕೊಳ್ಳಬೇಕು. ಇದನ್ನೇ ಸವಾಲಾಗಿ ಸ್ವೀಕರಿಸಿ, ಇಲ್ಲಿನ ಎಂಜಿನಿಯರ್‌ಗಳು ವಿಶಿಷ್ಟ ಡ್ಯಾಂ ನಿರ್ಮಿಸಿದ್ದಾರೆ.

ಈ ಪ್ರದೇಶದಲ್ಲಿ ಸುರಿಯುವ ಮಳೆ ವಾರ್ಷಿಕ ಹೆಚ್ಚೆಂದರೆ ೩೦ ಮಿ.ಮೀ. ಮಾತ್ರ (ಅಂದರೆ ನಮ್ಮರಾಜಸ್ತಾನದತೀರ ಒಣ ಪ್ರದೇಶದಲ್ಲಿ ಬೀಳುವಷ್ಟು ಮಳೆ). ಇದರ ಪೂರ್ವಕ್ಕೆಇಡಮ್ ಪರ್ವತ; ವಾಯವ್ಯಕ್ಕೆ ನೆಗೆವ್ ಪರ್ವತ ಶ್ರೇಣಿ ವ್ಯಾಪಿಸಿದೆ. ಮಳೆ ಬಂದಾಗಆಚೀಚಿನ ಪರ್ವತಗಳಿಂದ ಕೆಳಕ್ಕೆ ಹರಿದು ಸುಮಾರು ೫೦ ಕಿ.ಮೀ ಕ್ರಮಿಸಿ ಬರುವ ‘ನೆಕರಾಟ್’ ನದಿಯ ನೀರು, ಮುಂದೆ ಸಮುದ್ರ ಸೇರದಂತೆಇಲ್ಲಿ ಭೂಗತಅಣೆಕಟ್ಟಿನ ದಿಗ್ಬಂಧನ ಹಾಕಿ ಇಂಗುವಂತೆ ಮಾಡಲಾಗುತ್ತದೆ. ಅಲ್ಲಿಂದ ಸುಮಾರು ೫೦ ಕೊಳವೆಬಾವಿಗಳ ಮೂಲಕ ಹೊರತೆಗೆದು ಈ ಭಾಗದ ಹಳ್ಳಿ- ಪಟ್ಟಣಗಳಿಗೆ ಹಾಗೂ ಉದ್ಯಮಗಳಿಗೆ ಪೂರೈಸಲಾಗುತ್ತದೆ.

ಹಗಲು ಹೊತ್ತಿನಲ್ಲಿ ಕೊಳವೆಬಾವಿಗಳು ಮನೆಗಳಿಗೆ, ಉದ್ಯಮಗಳಿಗೆ ನೀರು ಪೂರೈಸಿದರೆ ರಾತ್ರಿ ಸಮಯದಲ್ಲಿಜಲಾಶಯಕ್ಕೆ ಪಂಪ್ ಮಾಡುತ್ತವೆ. ಇಲ್ಲಿಂದಅಗತ್ಯವಿದ್ದಾಗಲೆಲ್ಲ ಕೃಷಿಗೆ ನೀಡಲಾಗುತ್ತದೆ. ‘ಭಾರತದಂತೆ ನಮ್ಮಲ್ಲಿ ನದಿ ದೊಡ್ಡ ಪ್ರಮಾಣದಲ್ಲಿ ಹರಿಯುವುದಿಲ್ಲ. ಹೀಗಾಗಿ ಅದರ ಹರಿವಿನ ಹಾದಿಯಲ್ಲೇ ಹಿಡಿದಿಟ್ಟುಕೊಳ್ಳಬೇಕು. ಅದಕ್ಕಾಗಿಇಂಥಐದು ವಿಭಿನ್ನಅಣೆಕಟ್ಟುಕಟ್ಟಿಕೊಂಡಿದ್ದೇವೆ’ ಎಂದು ಶಮಿ ಬರ್ಕಾನ್ ವಿವರಿಸುತ್ತಾರೆ.

ಮೊದಲು ಈ ತಾಣದಲ್ಲಿ ಸಣ್ಣಕೆರೆಯೊಂದಿತ್ತು. ಇಲ್ಲೇ ‘ಶೈಜಾಫ್’ ಅಣೆಕಟ್ಟು ನಿರ್ಮಿಸಲು ನಿರ್ಧರಿಸಲಾಯಿತು. ನಿರ್ಮಾಣಕಾಮಗಾರಿಯನ್ನುಇಸ್ರೇಲಿನ ಮೆಕೊರೊ ವಾಟರ್ ಕಂಪೆನಿ ವಹಿಸಿಕೊಂಡು, ಬರೀಒಂದೇ ವರ್ಷದಲ್ಲಿ (೨೦೦೫) ಮುಗಿಸಿದ್ದೊಂದು ವಿಶೇಷ. ಸುಮಾರು ೧೧.೫ ಮೀಟರ್ ಆಳದವರೆಗೆ ಅಗೆದImg_2528 ಮಣ್ಣಿನ ಪ್ರಮಾಣ ೩.೨ ಲಕ್ಷ ಘನ ಮೀಟರ್‌ನಷ್ಟಿದೆ. ಇದನ್ನು ಪಕ್ಕದಲ್ಲೇ ಪೇರಿಸಲಾಗಿದೆ.
ಒಟ್ಟು ನಾಲ್ಕು ಎಕರೆ ವಿಸ್ತಾರದ ಈಅಣೆಕಟ್ಟೆಜಲಾಶಯದಸಂಗ್ರಹ ಸಾಮರ್ಥ್ಯ ೧೫ ಕೋಟಿ ಲೀಟರ್. ತಲಾ ಮೂರೂವರೆ ಮೀಟರ್‌ಎತ್ತರದ ಮೂರು ಟ್ಯಾಂಕುಗಳನ್ನು ಒಂದರ ಮೇಲೊಂದು ಜೋಡಿಸಿ ಇಟ್ಟಂತೆ ಈ ಅಣೆಕಟ್ಟುರೂಪುಗೊಂಡಿದೆ. ತೀರಾ ಕೆಳಗಿನ ಟ್ಯಾಂಕ್‌ನ ತಳಭಾಗ ಯಾವುದೇಕಾರಣಕ್ಕೂ ಸೋರದಂತೆ ನಿರ್ಮಿಸಲಾಗಿದೆ. ಆದರೆ ಹೇಗೋ ಏನೋ ಕಣಕಣಗಳಾಗಿ ಜಿನುಗುವ ನೀರು, ಟ್ಯಾಂಕಿನ ತಳದಿಂದ ನೆಲದತ್ತ ಸೋರಿಕೆಯಾಗಿ ಬಿಡುತ್ತದೆ. ‘ಅದನ್ನೂ ಬಿಡುವುದಿಲ್ಲ ನಾವು. ಹೀಗೆ ಜಿನುಗಿ ಪುಟ್ಟತೊಟ್ಟಿಯಲ್ಲಿ ಸಂಗ್ರಹವಾಗುವ ನೀರು ಮತ್ತೆಮೇಲಕ್ಕೆ ಟ್ಯಾಂಕಿಗೆ ಬಂದು ಸೇರುವಂತೆ ಮಾಡಿದ್ದೇವೆ’ ಎಂದು ‘ಒಳಚರಂಡಿ ವಿಭಾಗ’ದ ನಿರ್ದೇಶಕಿ ಅಮಿ ಶಸೆಮ್ ಹೇಳುತ್ತಾರೆ.

ಬಿಸಿಲಿಗೆ ನೀರುಆವಿಯಾಗದಂತೆಇಡೀಜಲಾಶಯದ ಮೇಲೆ ಹೊದಿಕೆ ಹಾಕುವುದುಇನ್ನೊಂದುಕುತೂಹಲದ ಅಂಶ. ಒಂದೂವರೆ ಮಿಲಿಮೀಟರ್‌ದಪ್ಪದ ಪಾಲಿಪ್ರೊಪಿಲೀನ್ ಎಂಬ ಪ್ಲಾಸ್ಟಿಕ್‌ನಿಂದ ಪದಾರ್ಥದಿಂದ ತಯಾರಿಸಿದ ಟಾರ್ಪಾಲಿನ್ ಮಾದರಿಯ ಹೊದಿಕೆಯನ್ನು ಸದಾ ನೀರಿನ ಮೇಲೆ ಹಾಕಲಾಗುತ್ತದೆ. ದೂಳು, ಕಸ- ಕಡ್ಡಿ ಬೀಳದಂತೆ ತಡೆಯುವ ಈ ಹೊದಿಕೆ, ಕನಿಷ್ಠ ಪ್ರಮಾಣದ ನೀರುಕೂಡಆವಿಯಾಗದಂತೆ ನೋಡಿಕೊಳ್ಳುತ್ತದೆ.

‘ನಾಲ್ಕು ವರ್ಷಗಳಿಂದ ಬಳಸುತ್ತಿದ್ದೇವೆ. ಈ ಕವಚ ಎಷ್ಟು ಬಲಿಷ್ಠವೆಂದರೆ… ಇತ್ತಕಡೆ ಬನ್ನಿ’ ಎನ್ನುತ್ತ ಅಮಿ ಶಸೆಮ್‌ಎಲ್ಲರನ್ನೂಅದರ ಮೇಲೆ ಕರೆದೊಯ್ದರು. ನಾವು ಅದರ ಮೇಲೆ ಓಡಾಡುತ್ತಿದ್ದರೂ ಹೊದಿಕೆ ಒಂದಷ್ಟೂಅಲ್ಲಾಡಲಿಲ್ಲ!

ಇಲ್ಲಿ ಸಂಗ್ರಹವಾಗುವ ನೀರನ್ನು ಮಣ್ಣಿನ ದಿಬ್ಬದ ಮೇಲಿರುವ (೭೦ ಮೀಟರ್‌ಎತ್ತರದಲ್ಲಿ) ಟ್ಯಾಂಕಿಗೆ ಕಳಿಸಲಾಗುತ್ತದೆ. ಅಲ್ಲಿಂದ ಕೃಷಿ ಜಮೀನುಗಳಿಗೆ ವಿತರಣೆ ಮಾಡಲಾಗುತ್ತದೆ. ಚೆನ್ನಾಗಿ (ಅಂದರೆ ೩ ಸೆಂ.ಮೀ!) ಮಳೆ ಸುರಿದು, ಸರಿಯಾಗಿ ಹರಿದರೆ ಈ ನದಿಯ ಆಳ ಒಂದೆರಡುಅಡಿಗಿಂತ ಹೆಚ್ಚಿರುವುದಿಲ್ಲ. ಅದನ್ನೇ ಪ್ರವಾಹಎಂಬುದಾಗಿ ಪರಿಗಣಿಸಲಾಗುತ್ತದೆ! ಈ ಪ್ರವಾಹವನ್ನು ಹಿಡಿದಿಟ್ಟುಕೊಳ್ಳುವ ಅಣೆಕಟ್ಟುಇದು.

ಈ ಡ್ಯಾಮ್‌ನಲ್ಲಿ ಸಂಗ್ರಹವಾಗುವ ನೀರುಇಂಗುವಂತಿಲ್ಲ; ಆವಿಯಾಗಲುಕೂಡ ಬಿಡುವುದಿಲ್ಲ. ಯಾಕೆಂದರೆ ಹನಿ ನೀರಿಗೂಇಲ್ಲಿ ಬೆಲೆಯಿದೆ.


ಚಿತ್ರಬರಹ:ಆನಂದತೀರ್ಥ ಪ್ಯಾಟಿ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*