ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಸರಕಾರದ ಸಿಹಿನೀರ ಯೋಜನೆ… ರೈತರಿಗೆ ಉಪ್ಪುನೀರಿನ ಬವಣೆ…!

ನಮ್ ಭೂಮೀಲಿ ಇನ್ಮುಂದೆ ಹಿಂಗಾರುಬೆಳೆ ಬೆಳೆಯೋಕೆ ನೀರಿನ್ ಸಮಸ್ಯೆ ಆಗುದಿಲ್ಲ ನಾವೆಲ್ಲಾ ಮೊದಲಿನ ಹಾಗೆ ಶೇಂಗಾ, ಕಬ್ಬು, ತರಕಾರಿ ಬೆಳೆಯಬಹುದು ಎಂದು ರೈತರು ಕನಸು ಕಾಣುತ್ತಿದ್ದರು ಆ ಗ್ರಾಮದ ರೈತರು. ಆದರೆ ಇತ್ತೀಚಿನ ಬೆಳವಣಿಗೆಯಿಂದ ಕ್ಷಾರಭೂಮಿ ಮತ್ತು ಸಿಹಿನೀರು ಸಂಗ್ರಹಣೆ ಯೋಜನೆಗಳೇ ಕೃಷಿಭೂಮಿಗೆ ಮಾರಕವಾಗಿದೆ.  ಸದ್ಯ ನಮ್ಮ ರಾಜ್ಯದಲ್ಲಿನ ರೈತರು ನಷ್ಟದಲ್ಲಿಯೂ  ಕೃಷಿಚಟುವಟಿಕೆಯನ್ನು ಮಾಡಿಕೊಂಡು ಬಂದಿದ್ದಾರೆ. ಸರಕಾರ ಅಭಿವ್ರದ್ದಿಯ ಹೆಸರಲ್ಲಿ ಕೆಲವಷ್ಟು ಕೃಷಿಭೂಮಿಯನ್ನು ವಶಪಡಿಸಿ ಕೊಂಡರೆ, ಇನ್ನೂ ಕೆಲವು ಕೃಷಿಭೂಮಿ ನೀರಾವರಿಯ ಸಮಸ್ಯೆಯಿಂದ ಹಾಳುಬಿದ್ದಿವೆ. ಇನ್ನುಳಿದ ಕೆಲವು ಕೃಷಿಭೂಮಿಗಳು ಸರಕಾರೀ ಅಧಿಕಾರಿಗಳ ಬೇಜವ್ದಾರಿಯಿಂದ ಕೃಷಿಗೆ ಅಯೋಗ್ಯವಾಗಿವೆ. ಇಂತಹಾ ಸಮಸ್ಯೆಯಿರುವ ಕರಾವಳಿಯಲ್ಲಿನ ಎಷ್ಟೋ ಗ್ರಾಮಗಳಲ್ಲಿ ಅಂಕೋಲಾ ತಾಲೂಕಿನ ಚಂದೂಮಠ ಕೂಡಾ ಒಂದು. ಗಂಗಾವಳಿನದಿ ಅರಬ್ಬೀಸಮುದ್ರವನ್ನು ಸೇರುವ ಪೂರ್ವದಲ್ಲಿ ತನ್ನ ಮೂಲಹರಿವಿನ ಜೊತೆಯಲ್ಲಿ ಆಲದಮರವೊಂದು ಬುಡದಲ್ಲಿ ಬೇರುಬಿಡುವಂತೆ ಅಲ್ಲಲ್ಲಿ ಹರಿದುಬರುವ ಹಳ್ಳಕೊಳ್ಳಗಳ ಹರಿವನ್ನು ಕೂಡಿಕೊಂಡಿದೆ. ಆ ಎಲ್ಲಾ ಹರಿವಿಗೂ ಅದು ಕೂಡಿಕೊಳ್ಳುವ ಗ್ರಾಮದ ಹೆಸರಿನಿಂದ ಕರೆಯImage 3ಲಾಗುತ್ತಿದೆ. ಅಂತವುಗಳಲ್ಲಿ ಒಂದು ಈ ಬೆಳಸೆ ಹಳ್ಳ. ಗುಡ್ಡದಮೇಲಿಂದ ಹರಿದುಬಂದು ಅಂಕೋಲಾ ತಾಲೂಕಿನ ಬೆಳಸೆ ಗ್ರಾಮದ ಮುಖಾಂತರ ಹರಿದು ಆ ಕಡೆ ಶಿರೂರು, ಈ ಕಡೆ ಚಂದೂಮಠ ಎನ್ನುವ ಎರಡು ಗ್ರಾಮಗಳನ್ನು ಬೇರ್ಪಡಿಸಿ ಮಧ್ಯದಲ್ಲಿ ಹರಿದು ಗಂಗಾವಳಿನದಿಯನ್ನು ಸೇರುವ ಮೊದಲು ತನ್ನ ಅಕ್ಕಪಕ್ಕದಲ್ಲಿ ಫಲವತ್ತಾದ ಕೃಷಿಭೂಮಿಯನ್ನು ಆ ಭಾಗದ ಜನತೆ ವರದಾನವನ್ನಾಗಿ ನೀಡಿದೆ. ಆ ಕೃಷಿಭೂಮಿಯಲ್ಲಿ ರೈತರು ಮಳೆಗಾಲದಲ್ಲಿ ಭತ್ತವನ್ನು, ಬೇಸಿಗೆಯಲ್ಲಿ ತರಕಾರಿಗಳಜೊತೆಗೆ ಕಬ್ಬು ಬೆಳೆಯನ್ನು ಬೆಳಯುತ್ತಿದ್ದರು. ೮-೧೦ ವರ್ಷಗಳ ಹಿಂದೆ ಅಂಕೋಲಾದ ಮಾರುಕಟ್ಟೆಗಳಲ್ಲಿ ಮಾರಾಟಮಾಡಲಾಗುತ್ತಿದ್ದ ತರಕಾರಿಗಳಲ್ಲಿ ಈ ಭಾಗದಲ್ಲಿ ಬೆಳೆಯಲಾಗುತ್ತಿದ್ದ ತರಕಾರಿಯೇ ಜಾಸ್ತಿ   ಪ್ರಮಾಣದಲ್ಲಿ ಇರುತ್ತಿತ್ತು ಎನ್ನುವುದು ಆ ಭಾಗದ ರೈತರಾದ ಮಾರುತಿ ಗೌಡರವರ ಮಾತು.

ಗಂಗಾವಳಿ ನದಿ ಮತ್ತು ಬೆಳಸೆಹಳ್ಳ ಸಂದಿಸುವ ಜಾಗದಲ್ಲಿ ಅಡ್ಡಲಾಗಿ  ಹಳೆಯದಾದ ನೀರುತಡೆ ಅಣೆಕಟ್ಟು (ಕ್ಷಾರಭೂಮಿ) ಇತ್ತು. ಮಳೆಗಾಲದಲ್ಲಿ ಸುರಿಯುವ ಮಳೆಯನೀರು ಈ ಹಳ್ಳದಲ್ಲಿ ಹರಿದು ಗಂಗಾವಳಿ ನದಿಯ ಮುಖಾಂತರ ಅರಬ್ಬೀಸಮುದ್ರವನ್ನು ಸೇರುತ್ತದೆ. ಅದಕ್ಕೆಂದೇ ಈ ಭಾಗದ ರೈತರು ಮುಂಗಾರು ಪ್ರಾರಂಭವಾಗುವ ಮುಂಚಿತವಾಗಿ ಈ ಕ್ಷಾರಭೂಮಿಯ ಹಲಗೆಗಳನ್ನು ತೆಗೆದು ಮಳೆಗಾಲ ಮುಗಿದ ನಂತರ ಉಪ್ಪುನೀರು ಹಳ್ಳವನ್ನು ಪ್ರವೇಶಿಸದಂತೆ ಪುನಹಾ ಜೋಡಿಸಿ ಭದ್ರಪಡಿಸಿಕೊಂಡು ಬರುತ್ತಿದ್ದರು. ಇದು ಈ ಭಾಗದ ರೈತರ ಒಗ್ಗಟ್ಟು ಹಾಗೂ ಪರಿಶ್ರಮದ ಪ್ರತೀಕದಂತಿತ್ತು. ದಿನಕಳೆದಂತೆ ಈ ಕ್ಷಾರಭೂಮಿ ಹಳೆಯದಾದ ಕಾರಣ ಹೊಸದಾದ ಕ್ಷಾರಭೂಮಿಯೊಂದನ್ನು ನಿರ್ಮಿಸಲು ಸಣ್ಣನೀರಾವರಿ ಇಲಾಖೆಯ ಅಧಿಕಾರಿಗಳು ಮುಂದಾಗುತ್ತಾರೆ.  ಈ ಭಾಗದ ರೈತರ ಕೃಷಿಭೂಮಿಗೆ ಉಪ್ಪುನೀರು ಪ್ರವೇಶಿಸದಂತೆ ತಡೆಯುವುದು, ೧೧೭ ಖಾತೆದಾರರ ೧೭೫ ಎಕರೆ ಕೃಷಿಭೂಮಿಯಲ್ಲಿ ಹಿಂಗಾರುಬೆಳೆ ಬೆಳೆಯಬಹುದು ಮತ್ತು ಆ ಭಾಗದ ತೆರೆದ ಬಾವಿಗಳ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಉದ್ದೇಶದೊಂದಿಗೆ ಈ ಯೋಜನೆಯನ್ನು ಅನುಮೋದನೆಗೋಳಿಸಿ ೧.೫ ಕೋಟಿ ರೂಪಾಯಿ ವೆಚ್ಚದಲ್ಲಿ ೨೦೧೩-೧೪ ನೇ ಸಾಲಿನಲ್ಲಿ ನಿರ್ಮಾಣ ಮಾಡಲಾಯಿತು. ಆದರೆ ಕೆಲವರ ಬೇಜವ್ದಾರಿತನದಿಂದ ಫಲವತ್ತಾದ ಕೃಷಿಭೂಮಿತ್ತುಂಬೆಲ್ಲಾ ಉಪ್ಪುನೀರು ಆವರಿಸಲಾರಂಬಿಸಿತು. ಸಮುದ್ರದ ಭರತದ ಪ್ರಮಾಣ ಜಾಸ್ತಿಇರುವ ಪ್ರತೀ ಅಮವಾಸೆ ಮತ್ತು ಹುಣ್ಣಿಮೆಯ ಸಮಯದಲ್ಲಿ ಉಪ್ಪುನೀರು ಆವರಿಸುವುದು ಸರ್ವೇಸಾಮಾನ್ಯವಾಯಿತು. ಚಂದೂಮಠ ಗ್ರಾಮದ ಕುಡಿಯುವ ನೀರಿನ ಭಾವಿಯಲ್ಲೆಲ್ಲಾ ಲವಣಯುಕ್ತನೀರು ಮಿಶ್ರಣಗೊಂಡು ಕುಡಿಯಲು ಅಯೋಗ್ಯವಾಯಿತು. ನಮ್ಮ ಬಾವಿಯಲ್ಲಿ ಸದಾಕಾಲ ಸಿಹಿನೀರು ಸಿಗುತ್ತಿತ್ತು ಆದರೆ, ಸಣ್ಣನೀರಾವರಿ ಇಲಾಖೆಯವರು ಹೊಸ ಕ್ಷಾರಭೂಮಿ ಯೋಜನೆ ಮಾಡಿದಮೇಲೆ ಅವರ ಬೇಜವ್ದಾರಿತನದಿಂದ ಬಾವಿಯಲ್ಲಿ ಉಪ್ಪುನೀರು ಮಿಶ್ರಣಗೊಂಡು ಕುಡಿಯಲು ಅಯೋಗ್ಯವಾಯಿತು ಮತ್ತು ನನ್ನ ಕೃಷಿಭೂಮಿಯೂ ಉಪ್ಪುನೀರಲ್ಲಿ ಮುಳುಗಿಹೋಯಿತು ಎನ್ನುವುದು ಹಿರಿಯ ರೈತರಾದ ಚೊಕ್ಕ ತಿಮ್ಮ ಗೌಡರವರ ಆರೋಪ. ಯಾವ ಉದ್ದೇಶದೊಂದಿಗೆ ೧.೫ ಕೋಟಿ ರೂಪಾಯಿ ವೆಚ್ಚದಲ್ಲಿ ಈ ಯೋಜನೆಯನ್ನು ನಿಮಾಣಮಾಡಲಾಗಿತ್ತೋ ಅದು ಸಾರ್ಥಕತೆ ಕಾಣದೇ ಇರುವ ಭೂಮಿಯನ್ನು ಕೃಷಿಗೆ ಅಯೋಗ್ಯವಾಗಿಸಿದೆ. ರೈತರಿಗೆ ಮತ್ತು ಸರಕಾರದ ಬೊಕ್ಕಸಕ್ಕೆ ಅಪಾರ ಪ್ರಮಾಣದ ನಷ್ಟವಾಗಿದೆ. ಆ ಮಗ್ದ ರೈತರಲ್ಲಿ ಮನೆಮಾಡಿರುವ ಆತಂಕ ಒಂದೇ ನಮ್ಮೆಲ್ಲರ ಜೀವನಾಧಾರವಾದ ನಮ್ಮ ಫಲವತ್ತಾದ ಕೃಷಿಭೂಮಿ ಮರಳಿಬಾರದೇ..? ಕೃಷಿಇಲಾಖೆಯ ಅಭಿಪ್ರಾಯದಂತೆ ಒಮ್ಮೆ ಕೃಷಿಭೂಮಿಗೆ  ಉಪ್ಪುನೀರು ನುಗ್ಗಿದಮೇಲೆ ಆ ಭೂಮಿ ಮೊದಲಿನ ಸ್ಥಿತಿಗೆ ಬರಲು ಮೂರುವರ್ಷ ಬೇಕಾಗುತ್ತದೆ. ಇದರಿಂದ ಈ ಮೂರುವರ್ಷ ಚಂದೂಮಠ ಗ್ರಾಮದಲ್ಲಿನ ಕೃಷಿಚಟುವImage 2ಟಿಕೆ ತೀರಾ ಕುಂಟಿತವಾಗಲಿದೆ.

ಅಲ್ಲಿನ ಜನರು ನಮ್ಮಲ್ಲಿ ಈ ಸಮಸ್ಯೆಯನ್ನು ತಂದಾಗ ನವು ಈ ಯೋಜನೆಯ ಯೋಜನಾ ವರದಿ, ತಾಂತ್ರಿಕ ವಿನ್ಯಾಸ, ಮತ್ತು ಷರತ್ತುಗಳನ್ನು ಸಂಗ್ರಹಿಸಿ ಆಗಿರುವ ಲೋಪದೋಷಗಳನ್ನು ಅದ್ಯಯನ ಮಾಡಿದೆವು. ತರುವಾಯ ಗ್ರಾಮಸ್ಥರೊಂದಿಗೆ ಚರ್ಚಿಸಿ ಈ ಸಮಸ್ಯೆ ಬಗೆಹರಿಸಲು ವ್ಯವಸ್ಥಿತ ಯೋಜನೆ ರೂಪಿಸಿದೆವು. ಸ್ವತಹಾ ಇಲಾಖೆಯವರು ಮುಂದುಬಾರದೇ ನಮ್ಮ ಮುಖಾಂತರ ಸಮಸ್ಯೆ ಪರಿಹರಿಸಲು ಸಭೆನಡೆಸುವಂತೆ ಕೋರಿಕೊಂಡರು. ಆ ಯೋಜನೆಯಂತೆ ಸಣ್ಣನೀರಾವರಿ ಇಲಾಖೆ, ಸ್ಥಳೀಯ ನೀರುಬಳಕೆದಾರರ ಸಂಘ, ಹಾಗೂ ಸ್ಥಳೀಯ ಜನರೊಂದಿಗೆ ಹೊಂದಾಣಿಕೆ ತಂದು ಇಲಾಖೆಯವರಲ್ಲಿ ನಿರಂತರ ಸಂಪರ್ಕದಲ್ಲಿದ್ದು ಯೋಜನೆಯ ಉದ್ದೇಶ ಪೂರ್ಣಗೊಳಿಸಿ ಇಲ್ಲಿನ ಸಮಸ್ಯೆ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿ ಸಮಸ್ಯೆ ಬಗೆಹರಿಸಿರುತ್ತೇವೆ. ಸಮಸ್ಯೆ ತತ್ಕಾಲಿಕವಾಗಿ ಏನೋ ಬಗೆಹರಿದಿದೆ. ಆದರೆ, ಸಾಶ್ವತ ಪರಿಹಾರ ಆಗಬೇಕಾಗಿದೆ. ಇಂತಹಾ ಸಮಸ್ಯೆಯಿರುವ ಎಲ್ಲಾಕಡೆಗಳಲ್ಲಿ ಸರಕಾರಿ ಇಲಾಖೆ, ಹಾಗೂ ಜನರ ಸಹಭಾಗಿತ್ವ ಇದ್ದಲ್ಲಿ ಯಾವುದೇ ಜಟಿಲ ಸಮಸ್ಯೆಗಳುಕೂಡಾ ಸುಲಲಿತವಾಗಿ ಕಾರ್ಯಾನ್ಮುಕವಾಗುತ್ತವೆ ಎನ್ನಲು ಇದು ಉತ್ತಮ ನಿದರ್ಶನವಾಗಿದೆ.

 ಚಿತ್ರ-ಲೇಖನ: ಮಾರುತಿ ಗೌಡ.

 

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*