ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಬರಮುಕ್ತ ಭಾರತಕ್ಕಾಗಿ ರಾಷ್ಟ್ರೀಯ ಜಲ ಸಮಾವೇಶ

ಬರದ ಜಿಲ್ಲೆಯಲ್ಲಿ ರಾಷ್ಟ್ರೀಯ ಜಲಸಮ್ಮೇಳನಕ್ಕೆ ಅದ್ದೂರಿ ಚಾಲನೆ

ಬರಮುಕ್ತ ಭಾರತ ಅಭಿಯಾನಕ್ಕಾಗಿ ಸಂಘಟನೆಗಳಾದ ತರುಣ ಭಾರತ ಸಂಘ ಹಾಗೂ ಜಲ ಬಿರಾದಾರಿ ಸಂಘಟನೆ ಸಹಯೋಗದಲ್ಲಿ ಹಮ್ಮಿಕೊಂಡ ಕಾರ್ಯಕ್ರಮ, ‘ಬರಮುಕ್ತ ಭಾರತಕ್ಕಾಗಿ ರಾಷ್ಟ್ರೀಯ ಜಲ ಸಮಾವೇಶ’.

IMG-20170816-WA0019ಅನಾರೋಗ್ಯದ ಹಿನ್ನೆಲೆ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಗೈರು. ಗೈರಾದ ಗಣ್ಯರ ಪಟ್ಟಿಯೇ ದೊಡ್ಡದು. ಆದರೂ ಅದ್ದೂರಿ ಚಾಲನೆ ಪಡೆದುಕೊಂಡ ಕಾರ್ಯಕ್ರಮ.

ಬಿಎಲ್ ಡಿಇ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಮಹಾಂತೇಶ ಬಿರಾದಾರ ಕಾರ್ಯಕ್ರಮಕ್ಕೆ ಆಗಮಿಸಿದವರೆಲ್ಲರನ್ನೂ ಸ್ವಾಗತಿಸಿದರು.

೧೦೧ ನದಿಗಳಿಂದ  ಸಂಗ್ರಹಿಸಿದ ನೀರಿನ ಬಿಂದಿಗೆ ಸಿದ್ಧೇಶ್ವರ ಶ್ರೀಗಳಿಂದ ಸಚಿವ ಎಂ.ಬಿ.ಪಾಟೀಲರಿಗೆ ಹಸ್ತಾಂತರ.

ಉದ್ಘಾಟನೆ ನೆರವೇರಿಸಿದ ಸಚಿವ ಎಂ.ಬಿ.ಪಾಟೀಲ ಮಾತನಾಡಿ,” ರಾಜಸ್ಥಾನದ ಜೈಸಲ್ಮೇರ್ ಹಾಗೂ ವಿಜಯಪುರ ತೀವ್ರ ಬರಕ್ಕೆ ತುತ್ತಾದ ಜಿಲ್ಲೆಯ ಎಂದು ಬ್ರಿಟಿಷ್ ರು ಘೋಷಿಸಿದ್ದರು. ಈ ಎರಡೂ ಜಿಲ್ಲೆಯಲ್ಲಿ ಬರಗಾಲ ನಿವಾರಣಾ ಕೇಂದ್ರಗಳು ಇವೆ. ಈಗಲೂ ಅವುಗಳನ್ನು ನೋಡಬಹುದು. ಆಲಮಟ್ಟಿ ಡ್ಯಾಂ ಆಯ್ತು, ಲಕ್ಷಾಂತರ ಎಕರೆ ಭೂಮಿ ಕಳೆದುಕೊಂಡೆವು, ಆದರೆ, ದುರಾದೃಷ್ಟವಶಾತ್ ಇಂದು ಕೇವಲ ೭೫ ಸಾವಿರ ಎಕರೆ ಮಾತ್ರ ನೀರಾವರಿ ಆಯಿತು. 86 ಟಿಎಂಸಿ ಜಿಲ್ಲೆಗೆ ನೀರು ಸಿಕ್ಕಿದೆ. ಅದಕ್ಕಾಗಿ ಬ್ರಿಜೇಶ್ ಕುಮಾರ್ ನ್ಯಾಯಾಧಿಕರಣಕ್ಕೆ ಅಭಿನಂದನೆ ಸಲ್ಲಬೇಕು. ನೆರೆಯ ಬಾಗಲಕೋಟೆ ಜಿಲ್ಲೆಯಲ್ಲಿ ೭೦ ಸಾವಿರ ಎಕರೆ ಹನಿನೀರಾವರಿ ರಾಮಥಾಳ ಯೋಜನೆ ಮುಕ್ತಾಯ ಆಗಿರುವುದು ಸಂತಸ ತಂದಿದೆ. ಮುಂದಿನ ತಿಂಗಳು ಲೋಕಾರ್ಪಣೆ ಆಗಲಿದೆ,” ಎಂದರು.

IMG-20170816-WA0015“ಸಿಂಗಟಾಲೂರ ಯೋಜನೆಯಡಿ ಹನಿನೀರಾವರಿ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ. ಮೊದಲು ಹರಿವ ನೀರಿನಿಂದ ಕೈಗೊಳ್ಳಲಾಗುತ್ತಿತ್ತು. ಅದನ್ನು ಹನಿನಿರಾವರಿಗೆ ಪರಿವರ್ತನೆ ಮಾಡಲಾಗುತ್ತಿದೆ.  ಕೊಪ್ಪಳ ಭಾಗ ೧,೨ ಹನಿ ನೀರಾವರಿ ಯೋಜನೆ ಪ್ರಗತಿ ಯಲ್ಲಿವೆ. ಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಳಕ್ಕೆ ಅನುಮತಿ ದೊರೆತಿದೆ. ಶೀಘ್ರದಲ್ಲೇ ಆ ಕಾರ್ಯಕೈಗೂಡಲಿದೆ. ಹೀಗೆ ಸಿಎಂ ಸಿದ್ದರಾಮಯ್ಯ ಸರ್ಕಾರ ನೀರಿನ ಯೋಜನೆಗೆ ಸಾಕಷ್ಟು ಅನುದಾನ ನೀಡಿದೆ,” ಎಂದರು.

“ಕಾಲುವೆಗಳ ಆಧುನಿಕೀಕರಣ ಕಾರ್ಯ ನಡೆದಿದೆ. ನಾರಾಯಣ ಎಡದಂಡೆ ಕಾಲುವೆಗೆ ೩೮೦೦ ಕೋಟಿ ಅನುದಾನ ನೀಡಿದ ಏಕೈಕ ಸರ್ಕಾರ ನಮ್ಮದು.  ಕೇಂದ್ರ ಸರ್ಕಾರದಿಂದ ಶೇ. ೯೫ರಷ್ಟು ಅನುದಾನ ಸಿಗುವ ಆಶಯವಿತ್ತು. ಆದರೆ, ಕೇವಲ ೨೫ರಷ್ಟು ಮಾತ್ರ ಅನುದಾನ ಸಿಗುತ್ತಿದೆ. ಹೀಗೆ ಕೇಂದ್ರದ ಅನುದಾನದಿಂದ ಸಾಕಷ್ಟು ತೊಂದರೆಯಾಗಿದೆ,” ಎಂದ ಸಚಿವ ಎಂ.ಬಿ. ಪಾಟೀಲ್,  “ಆದರೂ ಈವರೆಗೆ ಕಾಲುವೆಗೆ ನಾಲ್ಕು ಸಾವಿರ ಕೋಟಿ ಖರ್ಚು ಮಾಡುತ್ತ ಇದ್ದೇವೆ,” ಎಂದರು.

ದಾನಿಗಳ ಹಣದಿಂದ ಒಂಭತ್ತು ಕೋಟಿ ರೂ.ವೆಚ್ಚದಲ್ಲಿ ೨೨ ಬಾವಡಿಗಳನ್ನು ಪುನಃಶ್ಚೇತನ ಮಾಡಲಾಗಿದೆ ಎಂದರು.

ನದಿಗಳ ಅಂತಾರಾಜ್ಯ ಸಮಸ್ಯೆಗಳು ಬೇಗ ಬಗೆಹರಿಯಬೇಕು. ಬೃಹತ್ ನೀರಾವರಿಗೆ ಸಿಕ್ಕ ಆದ್ಯತೆ ಸಣ್ಣ ನೀರಾವರಿಗೂ ಸಿಗಬೇಕು. ಬಾಂದಾರ, ಚೆಕ್ ಡ್ಯಾಂ, ಕೆರೆಗಳ ಪುನರುಜ್ಜೀವನ IMG-20170816-WA0014ಹಾಗೂ ಹೊಸ ಕೆರೆಗಳ ನಿರ್ಮಾಣ ಕಾರ್ಯ ಆಗಬೇಕು. ದೊಡ್ಡ ನೀರಾವರಿಯಿಂದ ಕೇವಲ ಶೇ.೩೦ರಷ್ಟು ನೀರು ಸಿಗಲಿದೆ. ಆದರೆ ಸಣ್ಣ ನೀರಾವರಿ ಯಿಂದ ಶೇ.೭೦ ರಷ್ಟು ನೀರು ಸಿಗಲಿದೆ ಎಂದರು.

ರಾಜ್ಯದಲ್ಲಿ ನೀರು ನಿರ್ವಹಣೆ ಸಂಸ್ಥೆ ನನ್ನ ಕನಸು. ಅದರ ವಿವಿಯನ್ನೇ ಸ್ಥಾಪಿಸಬೇಕೆಂಬ ಕನಸಿತ್ತು. ಆದರೆ, ಈಗಾಗಲೇ ಗ್ರಾಮೀಣಾಭಿವೃದ್ಧಿ ವಿವಿ ಆಗಿರುವದರಿಂದ ಕಷ್ಟಕರ. ಆದರೂ ಅಧಿಕಾರ ಅವಧಿಯಲ್ಲಿ ಸಂಸ್ಥೆ ನಿರ್ಮಾಣ ಮಾಡುವುದಾಗಿ ತಿಳಿಸಿದರು. ಜತೆಗೆ ಬೆಣ್ಣಿ ಹಳ್ಳ, ಡೋಣಿ ನದಿ ಹಾಗೂ ಭೀಮಾ ನದಿಯ ಪುನಃಶ್ಚೇತನ ಕಾರ್ಯಕೈಗೊಳ್ಳುವುದಾಗಿ ತಿಳಿಸಿದರು.

ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತರು ರಾಜೇಂದ್ರಸಿಂಗ್ ಅವರು ಪ್ರಾಸ್ತಾವಿಕ ಭಾಷಣ ಮಾಡುತ್ತ, “ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅದ್ಭುತವಾಗಿದೆ. ಸಚಿವ ಎಂ.ಬಿ.ಪಾಟೀಲರು ಕೈಗೊಂಡ ನೀರಾವರಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ,” ಎಂದರು.

ಐತಿಹಾಸಿಕ ಬಾವಡಿಗಳು ಹಾಗೂ ಐತಿಹಾಸಿಕ ಸುರಂಗ ಮಾರ್ಗ ಪುನಃಶ್ಚೇತನ ಕಾರ್ಯ ದೇಶಕ್ಕೆ ಮಾದರಿ. ಇಂಥ ಕಾರ್ಯಕ್ಕೆ ಸಾಧು- ಸಂತರು, ಸಾಮಾಜಿಕ ಸಂಘಟನೆಗಳು, ಅಧಿಕಾರಿಗಳು ಹಾಗೂ ರಾಜಕೀಯ ಇಚ್ಛಾಶಕ್ತಿ ಅಗತ್ಯ ಇದೆ ಎಂದರು.

IMG-20170816-WA0017ಕನ್ಯಾಕುಮಾರಿಯಿಂದ ಕಾಶ್ಮೀರ, ಗೋವಾದಿಂದ ಗೌಹಾತಿವರೆಗೆ ಜಲಜಾಗೃತಿ ಕಾರ್ಯ ಕೈಗೊಳ್ಳಲಾಗಿದೆ. ಆದರೆ, ಇಲ್ಲಿಯ ತರಹ ನೀರಿನ ಯೋಜನೆ ಸಮರ್ಪಕವಾಗಿ ಅನುಷ್ಠಾನ ಆಗಿರುವುದು ಅಪರೂಪ. ಇಲ್ಲಿನ ಯೋಜನೆ ಬಗ್ಗೆ ಅಲ್ಲಲ್ಲಿ ಪ್ರಚಾರ ಮಾಡಿ ಜಾಗೃತಿ ನಡೆಸಲಾಗಿದೆ ಎಂದರು.

ಇಲ್ಲಿನ ನೀರಿನ ಕಾಮಗಾರಿ ಕಂಡು ಇಲ್ಲೇ ರಾಷ್ಟ್ರೀಯ ಸಮ್ಮೇಳನ ಆಯೋಜಿಸಲು ತೀರ್ಮಾನಿಸಲಾಗಿದೆ. ಮೂರು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ನೀರಿನ ಮಹತ್ವ, ಬರಪರಿಹಾರ ಸೇರಿದಂತೆ, ಹಲವು ಮಹತ್ವಪುರ್ಣ ಚರ್ಚೆ ನಡೆದು ಅಂತಿಮ ಪರಿಹಾರ ಕಂಡುಕೊಳ್ಳಲಾಗುವುದು.

ನದಿಗಳ ಜೋಡಣೆಯಿಂದ ದೊಡ್ಡ ಹಿಡುವಳಿದಾರರಿಗೆ, ಶ್ರೀಮಂತರಿಗೆ ಅನುಕೂಲವಾಗಲಿದೆ. ಆದರೆ, ಕೆರೆ ಜೋಡಣೆಯಿಂದ ಅತೀ ಬಡ ಕೃಷಿಕರಿಗೆ ಅನುಕೂಲವಾಗಲಿದೆ. ಈ ಯೋಜನೆ ಮಾದರಿ ಎಂದರು.

ಭಾರತ ಬರ-ಮುಕ್ತ ಮಾಡಲು ಸಣ್ಣ ನದಿಗಳ ಪುನಃಶ್ಚೇತನ ಹಾಗೂ ಸಣ್ಣ ನೀರಿನ ಮೂಲಗಳ ಸಂರಕ್ಷಣೆಯೇ ಪರಿಹಾರ ಎಂದರು.IMG-20170816-WA0021

ಜ್ಞಾನ ಯೋಗಾಶ್ರಮದ ಪೂಜ್ಯ ಸಿದ್ಧೇಶ್ವರ ಶ್ರೀ, ಕೊಲ್ಹಾಪುರ ಕನ್ಹೇರಿ ಮಠದ ಅದೃಶ್ಯಕಾಡಸಿದ್ಧೇಶ್ವರ ಶ್ರೀ ಸಾನ್ನಿಧ್ಯ ವಹಿಸಿದ್ದರು.

ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ, ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಾಧೀಶ ವಿ.ಗೋಪಾಲಗೌಡ, ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಜಲತಜ್ಞ ರಾಜೇಂದ್ರಸಿಂಗ್, ಮಾಜಿ ಶಿಕ್ಷಣ ಸಚಿವ ಚಂದ್ರಶೇಖರ, ಶಾಸಕ ರಾಜು ಆಲಗೂರ, ಬಿ.ಆರ್‌. ಪಾಟೀಲ, ಕುಲಪತಿಗಳಾದ ಪ್ರೊ.ಸಬಿಹಾ ಭೂಮಿಗೌಡ, ಡಿ.ಪಿ.ಬೊರಾದಾರ, ಎಂ.ಎಸ್.ಬಿರಾದಾರ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ, ಕೆಬಿಜೆಎನ್ ಎಲ್ ಅಭಿಯಂತರರು ಆದ ಅರವಿಂದ್ ಗಲಗಲಿ, ಜಗನ್ನಾಥ ರೆಡ್ಡಿ, ಜಿಪಂ ಅಧ್ಯಕ್ಷೆ ನೀಲಮ್ಮ ಮೇಟಿ, ಮಹಾರಾಷ್ಟ್ರದ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಪಾಶಾ ಪಟೇಲ, ಕರ್ನಾಟಕದ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಪ್ರಕಾಶ ಕಮರೆಡ್ಢಿ, ಮೇಯರ್ ಸಂಗೀತಾ ಪೋಳ ಇತರರು ಇದ್ದರು.

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*