ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ನೆಲ-ಜಲ-ಜನ ಜಾಗೃತಿ ಜಾಥಾಗೆ ವಿದ್ಯುಕ್ತ ಚಾಲನೆ

ಬೆಂಗಳೂರಿನ ಭೂಮ್ತಾಯಿ ಬಳಗ ಹಾಗು ಕಾಡು ಮಲ್ಲೇಶ್ವರ ಗೆಳೆಯರ ಬಳಗದ ಸಹಯೋಗದೊಂದಿಗೆ ‘ಹಾಡು ಬೆಂಗಳೂರು’ ಶೀರ್ಷಿಕೆಯ ಅಡಿಯಲ್ಲಿ  ಮಲ್ಲೇಶ್ವರಂನಲ್ಲಿರುವ ಕಾಡು ಮಲ್ಲೇಶ್ವರ ದೇವಾಲಯದ ಬಯಲು ರಂಗಮಂದಿರದಲ್ಲಿ  ‘ನೆಲ-ಜಲ-ಜನ  ಜಾಗೃತಿ ಜಾಥಾ’ಗೆ ವಿದ್ಯುಕ್ತ ಚಾಲನೆ ದೊರೆಯಿತು.

ಕಾರ್ಯಕ್ರಮಕ್ಕೆDSC_0064 ಮುಖ್ಯ ಅತಿಥಿಗಳಾಗಿ ಆಗಮಿಸಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಚಂದ್ರಶೇಖರ ಕಂಬಾರ, ವೃಕ್ಷಮಾತೆ, ನಾಡೋಜ ಪ್ರಶಸ್ತಿ ಪುರಸ್ಕೃತ ಸಾಲುಮರದ ತಿಮ್ಮಕ್ಕ, ಹಾಗೂ ಕಾಡು ಮಲ್ಲೇಶ್ವರ ಗೆಳೆಯರ ಬಳಗದ ಅಧ್ಯಕ್ಷರಾದ ಶ್ರೀ ಬಿ.ಕೆ ಶಿವರಾಂ ಗಿಡ ನೆಡುವ ಹಾಗೂ ಜಂಬೆ ವಾದ್ಯ ಬಾರಿಸುವದರ ಮೂಲಕ ಜಾಥಾಗೆ ಜಾಲನೆ ನೀಡಿದರು

ಶ್ರೀ ಚಂದ್ರಶೇಖರ ಕಂಬಾರರು  ಮಾತನಾಡಿ, “ಆ ಕಾಲದಲ್ಲೇ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ, ಸಾಲು ಮರದ ತಿಮ್ಮಕ್ಕ ದಂಪತಿಗಳು ಮಾಡಿದ  ಪರಿಸರ ಸಂರಕ್ಷಣೆ ಕೆಲಸ ನಿಜವಾಗಿಯೂ ಶ್ಲಾಘನೀಯ. ಇತ್ತೀಚೆಗೆ ಅಭಿವೃದ್ದಿ ಹೆಸರಿನಲ್ಲಿ ಸರಕಾರ ಸೇರಿದಂತೆ, ಕೆಲವರು ಕಾಡನ್ನು ಪಣಕ್ಕಿಟ್ಟು ನಾಶಗೊಳಿಸುತ್ತಿದ್ದಾರೆ.  ಅದಕ್ಕೆ ಪ್ರತ್ಯಕ್ಷ ಸಾಕ್ಷಿ ಎಂಬಂತೆ, ಈ ವರ್ಷ ಮಳೆಯೇ ಇಲ್ಲದಿರುವದು. ಕಾಡು ಮತ್ತು ಪರಿಸರ ನಾಶವೇ ಅಭಿವೃದ್ಧಿ  ಎಂದು ಹಲವರು ತಿಳಿದಿದ್ದಾರೆ,” ಎಂದರು. ಆಧುನಿಕತೆಯ ಭರಾಟೆಯಲ್ಲಿ ಭುಯ್ತಾಯಿ ಬಳಗದ  ಅವಿರತ ಪ್ರಯತ್ನ ನಿಜಕ್ಕೂ ಪ್ರಶಂಸನೀಯ ಎಂದ ಅವರು,  ಇಂತಹ ಪ್ರಯತ್ನಗಳು ಬಲು ಅಪರೂಪ, ಆದರೆ ಇಂದಿನ ವಾತಾವರಣ ಇದನ್ನು ನಾಶಪಡಿಸಲು ಯತ್ನಿಸುತ್ತದೆ ಎಂದರು. “ಆದರೆ ನಿಮ್ಮ ಪ್ರಯತ್ನ ಮಾತ್ರ ಅವಿರತವಾಗಿ ಸಾಗಿ, ನೆDSC_0103ಲ-ಜಲ-ಜನದ ಜಾಗೃತಿ ಮುಂದುವರಿಯಲಿ,” ಎಂದರು. ಇಂದಿನ ಮಕ್ಕಳಿಗೆ ಇಂಗ್ಲೀಷ್ ವ್ಯಾಮೋಹದಿಂದ  ಪರಿಸರದಲ್ಲಿರುವ ವಿವಿಧ ಜಾತಿ ಪ್ರಬೇಧದದ ಮರಗಿಡಗಳ  ವಿಶೇಷತೆಗಳು ತಿಳಿಯದಾಗಿದ್ದು ಅವುಗಳ ಹೆಸರನ್ನು ಇಂಗ್ಲೀಷ್‌ನಲ್ಲಿ ತಿಳಿಯುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪರಿಸರ ಪ್ರೇಮಿ, ಶತಾಯುಶಿ ಸಾಲುಮರದ ತಿಮ್ಮಕ್ಕ ಮಾತನಾಡಿ, “ಪರಿಸರ ರಕ್ಷಣೆ ಎಲ್ಲರ ಜವಾದ್ಬಾರಿಯಾಗಬೇಕು”, ಎಂದರು. ಬಿ.ಕೆ ಶಿವರಾಂ  ಮಾತನಾಡಿ, “ಪರಿಸರ ರಕ್ಷಣೆ ಹೆಸರಿನಲ್ಲಿ ಹಲವಾರು ಅಕ್ರಮಗಳು ನಡೆಯುತ್ತಿವೆ – ಅದನ್ನು ತಡೆಯುವ ಪ್ರಯತ್ನವಾಗಬೇಕು,” ಎಂದರು.

ಭೂಮ್ತಾಯಿ ಬಳಗದ ಜನಾರ್ಧನ ಕೆಸರಗದ್ದೆ ಮಾತನಾಡಿ, “೨೦೦೮ರಲ್ಲಿ ಶುರುವಾದ ಭೂಮ್ತಾಯಿ ಬಳಗ ಜಲ-ನೆಲ-ಜನ ಜಾಗೃತಿ ಮೂಡಿಸುತ್ತಿದೆ. ಇಲ್ಲಿ ಬದಲಾವಣೆ ಕುರಿತಾದ ಹಾಡುಗಳನ್ನು ಜನ ಜಾಗೃತಿಗೆ ಬಳಸುತ್ತೇವೆ ಹಾಗೂ ಕಾಲಕ್ಕೆ ತಕ್ಕಂತೆ ಹಾಡುಗಳ ವಿನ್ಯಾಸ ಮಾಡುತ್ತೇDSC_0128ವೆ.  ಸರಿಸುಮಾರು ಮೂರು ತಿಂಗಳು  ವಿವಿಧ ಕಡೆ ನಡೆಯುವ ಈ ಜಾಥಾ ೧೦೦ ಕಾರ್ಯಕ್ರಮಗಳನ್ನು ಮಾಡುವ ಉದ್ದೇಶ ಹೊಂದಿದೆ. ೩೦,೦೦೦ ಜನರನ್ನು ತಲುಪುವ ಗುರಿ ಹೊಂದಿದೆ – ಇದಕ್ಕೆ ಎಲ್ಲ ಸಂಘ-ಸಂಸ್ಥೆಗಳ ಸಹಕಾರ ಅತ್ಯಗತ್ಯ,” ಎಂದರು.  ಜನರಲ್ಲಿ  ನೆಲ-ಜಲ ಉಳಿಸುವ ಸಂಸ್ಕೃತಿ ಬೇಕು ಎಂದರು.

ಸಾಹಿತಿ ಡಾ. ಲೀಲಾ ಸಂಪಿಗೆ ಅತಿಥಿಗಳನ್ನು ಸ್ವಾಗತಿಸಿ, ಪರಿಚಯಿಸಿದರು. ಕಾರ್ಯಕ್ರಮದಲ್ಲಿ ಅರ್ಘ್ಯಂ,  ಬೆಂಗಳೂರಿನ ನಾಗರಿಕ ಸಂಸ್ಥೆಗಳು, ನೆಲ-ಜಲ ಜಾಗೃತಿ ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

 

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*