ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆನೋಟ – ನೋಟ ೪೬: ನ್ಯಾಯಾಂಗ ನಿಂದನೆ ನೋಟೀಸೂ ಕೆರೆ ಸಂರಕ್ಷಿಸುತ್ತಿಲ್ಲ!

ರಾಜಧಾನಿ ಬೆಂಗಳೂರಿನಲ್ಲಿ ಒಂದು ಕಾಲದಲ್ಲಿ ೨೫೦೦ಕ್ಕೂ ಹೆಚ್ಚು ಕೆರೆಗಳಿದ್ದವಂತೆ. ಅದಕ್ಕೇ ಈ ನಗರಿಯನ್ನು ಕೆರೆಗಳ ನಗರಿ (ಲೇಕ್ ಸಿಟಿ) ಎಂದೇ ಬ್ರಿಟಿಷರು ಕರೆಯುತ್ತಿದ್ದರಂತೆ. ಆದರೆ, ಇಂದಿನ ದಿನದಲ್ಲಿ ಉಳಿದಿರುವ ಒಂದೆರಡು ನೂರು ಕೆರೆಗಳ ರಕ್ಷಣೆ ಸರ್ಕಾರದಿಂದಲೂ ಆಗುತ್ತಿಲ್ಲ. ನ್ಯಾಯಾಲಯ ರಕ್ಷಣೆ ಮಾಡಿ ಎಂದು ಆದೇಶ ನೀಡಿದರೂ ಅನುಸರಿಸುತ್ತಿಲ್ಲ. ಅಷ್ಟೇ ಅಲ್ಲ, ನ್ಯಾಯಾಲಯದ ಆದೇಶ ಪಾಲಿಸುತ್ತಿಲ್ಲ ಎಂದು ನ್ಯಾಯಾಂಗ ನಿಂದನೆ ನೋಟಿಸ್ ಜಾರಿಯಾಗಿದ್ದರೂ, ಸರ್ಕಾರ, ಅಧಿಕಾರಿಗಳು ಕೆರೆಗಳನ್ನು ಅಭಿವೃದ್ಧಿ ಮತ್ತು ಸಂರಕ್ಷಣೆ ಮಾಡದಿರುವುದು ನೋವಿನ ಸಂಗತಿ.

Hebbalaಬೆಂಗಳೂರಿನಲ್ಲಿದ್ದ ಬಹುತೇಕ ಕೆರೆಗಳನ್ನು ಒತ್ತುವರಿ ಮಾಡಿಕೊಂಡಿದ್ದು, ಅವುಗಳನ್ನು ಹೆಚ್ಚಾಗಿ ನಿರ್ಮಾಣ ಚಟುವಟಿಕೆಗೇ ಬಳಸಿಕೊಳ್ಳಲಾಗಿದೆ. ಇದಕ್ಕೆ ಅನುವು ಮಾಡಿಕೊಟ್ಟಿರುವುದು ಕರ್ನಾಟಕ ಸರ್ಕಾರ. ಏಕೆಂದರೆ ರಾಜ್ಯ ಸರ್ಕಾರ ಜಲಸಂಪನ್ಮೂಲಗಳನ್ನು ರಕ್ಷಿಸುವ ಕಾರ್ಯದಲ್ಲಿ ಬಹುತೇಕ ವಿಫಲವಾಗಿದೆ. ಅದು ಸಾಕಷ್ಟು ಬಾರಿ ನಾಗರಿಕರು ಇದರ ಬಗ್ಗೆ ಎಚ್ಚರಿಸಿದರೂ ಕ್ರಮ ಕೈಗೊಂಡಿಲ್ಲ. ೨೦೧೩ರ ಆಗಸ್ಟ್ ನಲ್ಲಿ ಕರ್ನಾಟಕ ಹೈಕೋರ್ಟ್ ನ ವಿಭಾಗೀಯ ಪೀಠ ಮುಖ್ಯ ಕಾರ್ಯದರ್ಶಿ ಅವರನ್ನು ನ್ಯಾಯಾಂಗ ನಿಂದನೆ ಬಗ್ಗೆ ಪ್ರಶ್ನಿಸಿತ್ತು. ಎನ್ವಿರಾನ್ಮೆಂಟ್ ಸಪೋರ್ಟ್ ಗ್ರೂಪ್ (ಇಎಸ್ ಜಿ) ದಾಖಲಿಸಿದ್ದ ಪ್ರಕರಣಕ್ಕೆ ಆದೇಶ ನೀಡಿದ ಹೈಕೋರ್ಟ್ ೨೦೧೨ ಏಪ್ರಿಲ್ ನಲ್ಲಿ ಕೆರೆಗಳ ರಕ್ಷಣೆ ಬಗ್ಗೆ ಆದೇಶ ನೀಡಿತ್ತು. ಆದರೆ, ಕ್ರಮವಾಗಿರಲಿಲ್ಲ. ಹೆಬ್ಬಾಳ, ನಾಗವಾರ, ವೆಂಗಯ್ಯನಕೆರೆ ಮತ್ತು ಅಗರ ಕೆರೆಗಳನ್ನು ಲೀಸ್ ಆಧಾರದ ಮೇಲೆ ಖಾಸಗಿ ಕಂಪನಿಗಳಿಗೆ ನೀಡಿದ್ದನ್ನು ಪ್ರಶ್ನಿಸಿ, ಇಎಸ್ ಜಿ ಹೈಕೋರ್ಟ್ ಮೆಟ್ಟಿಲೇರಿತ್ತು. ಆದರೆ ಈ ಬಗ್ಗೆ ಕ್ರಮವಾಗದಿರುವುದು ದುರಂತವೇ ಸರಿ.

ಕೆರೆ ಅಭಿವೃದ್ಧಿ ಪ್ರಾಧಿಕಾರವನ್ನು ಕೆರೆಗಳ ಅಭಿವೃದ್ಧಿಗೆ ಸರ್ಕಾರ ರಚಿಸಿದ್ದರೂ, ಅದಕ್ಕೆ ಕಾನೂನು ಅಧಿಕಾರ ಇಲ್ಲದೆ ಯಾವುದೇ ರೀತಿಯ ರಕ್ಷಣೆ ಅಥವಾ ಒತ್ತುವರಿ ತೆರವು ಮಾಡಲು ಯಾವುದೇ ಕ್ರಮ ಆಗಲಿಲ್ಲ. ‘ಹಲ್ಲಿಲ್ಲದ ಕೆರೆ ಅಭಿವೃದ್ಧಿ ಪ್ರಾಧಿಕಾರ ಕೆರೆಗಳು ನಾಶವಾಗುವುದಕ್ಕೆ ನಿಧಾನವಾಗಿ ಕೊಡುಗೆಯನ್ನೂ ನೀಡಿತುಎಂದು ಬೆಂಗಳೂರಿನ ಲಾಭರಹಿತ ಸಂಸ್ಥೆಯ ಸಂಯೋಜಕ ಲಿಯೊ ಸಲ್ಡಾನ ಹೇಳಿದ್ದಾರೆಕೆರೆಗಳನ್ನು ಉಳಿಸಲು ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳು ಆಗದ್ದರಿಂದ ಕೆರೆಗಳ ಒತ್ತುವರಿ ಆಗುತ್ತಿವೆ ಎಂಬುದಕ್ಕೆ ಡೌನ್ ಟು ಅರ್ಥ್ ಪ್ರಕಟಿಸಿರುವವೈ ಅರ್ಬನ್ ಇಂಡಿಯಾ ಫ್ಲಡ್ಸ್ಎಂಬ ಪ್ರಕಟಣೆಯಲ್ಲಿ ಈ ಮೇಲಿನ ಎಲ್ಲ ಮಾಹಿತಿಯನ್ನೂ ನೀಡಿದೆ. ನಗರದಲ್ಲಿ ಪ್ರವಾಹಕ್ಕೆ ಕಾರಣ ಏನು ಎಂಬುದು ಈ ಪ್ರಕಟಣೆಯ ಪ್ರಮುಖಾಂಶ. ಇದನ್ನು ಸಂಕ್ಷಿಪ್ತವಾಗಿ ಇಲ್ಲಿ  ನೀಡಲು ಪ್ರಯತ್ನಿಸುತ್ತೇನೆ. ಈ ಲೇಖನದಲ್ಲಿ ಉಲ್ಲೇಖಿಸಲಾಗಿರುವ ನ್ಯಾಯಾಲಯದ ಪ್ರಕರಣಗಳನ್ನು ಈ ವೆಬ್ ಸೈಟ್ www.indiaenvironmentportal.org.in ಹಾಗೂ www.rainwaterharvesting.org ಗಳಲ್ಲಿ ಸಮಗ್ರವಾಗಿ ನೋಡಬಹುದು. ಇನ್ನು ಕೆಲವು ಪ್ರಮುಖ ಮಾಹಿತಿಗಳನ್ನು ಮುಂದಿನ ನೋಟಗಳಲ್ಲಿ ನೀಡಲಿದ್ದೇನೆ. ಅದಕ್ಕೂ ಮುನ್ನ ಒಂದಷ್ಟು ಅಂಕಿ-ಅಂಶ ನಿಮ್ಮ ಮುಂದಿಟ್ಟು ಸ್ವಲ್ಪ ಯೋಚಿಸಲು ಅಣಿ ಮಾಡುತ್ತೇನೆ.

ರಾಜ್ಯದಲ್ಲಿ ೨.೨೫ ಹೆಕ್ಟೇರ್ ಗಿಂತ ಕಡಿಮೆ ಪ್ರದೇಶದಲ್ಲಿದ್ದ ಜಲಮೂಲಗಳ ಸಂಖ್ಯೆ ೨೫,೨೭೬, ಅಂದರೆ ಇದಕ್ಕಿಂತ ಹೆಚ್ಚಿನ ಪ್ರದೇಶದ ಕೆರೆಗಳು Hebbal-Lakeಇನ್ನೂ ಒಂದಷ್ಟು ಸಾವಿರಗಳಿವೆ. ಬೆಂಗಳೂರಿನಲ್ಲಿ ನಗರೀಕರಣ ಜಲಮೂಲವನ್ನೂ ಬಹುತೇಕ ನಷ್ಟಗೊಳಿಸಿದೆ. ಬೆಂಗಳೂರಿನಲ್ಲಿರುವ ಶೇ.೬೬ ಕೆರೆಗಳಲ್ಲಿ ಒಳಚರಂಡಿ ನೀರಿದೆ, ಕೆರೆಗಳ ಶೇ.೧೪ ಪ್ರದೇಶ ಕೊಳೆಗೇರಿಯಿಂದ ಆವರಿಸಿದೆ. ಶೇ.೭೨ರಷ್ಟು ಕೆರೆಗಳು ತಮ್ಮ ಅಚ್ಚುಕಟ್ಟು ಪ್ರದೇಶವನ್ನೇ ಕಳೆದುಕೊಂಡಿವೆ. ಈ ಅಚ್ಚುಕಟ್ಟು ಪ್ರದೇಶವನ್ನು ನಗರದ ತ್ಯಾಜ್ಯ ಅಥವಾ ಕಟ್ಟಡ ಅವಶೇಷಗಳನ್ನು ತುಂಬಲು ಬಳಸಿಕೊಳ್ಳಲಾಗಿದೆ. ಏನು ಕ್ರಮ ಆಗಿವೆ ಎಂಬುದನ್ನು ಬೂದುಗನ್ನಡಿ ಹಾಕಿ ಹುಡುಕಿದರೂ ಕಾಣಸಿಗುವುದಿಲ್ಲ. ಬದಲಿಗೆ ಇನ್ನಷ್ಟು ಒತ್ತುವರಿ, ಕೊಳಕೇ ಜಲಮೂಲಗಳಿಗೆ ಸೇರಿಕೊಳ್ಳುತ್ತಿದೆ. ಯಾರು ಕೇಳುವವರು?

ಚಿತ್ರ-ಲೇಖನ: ಕೆರೆ ಮಂಜುನಾಥ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*