ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ನೀರಿನ ವರಿ ತಪ್ಪಿಸಿದ ಏತ ನೀರಾವರಿ

ನೀರಾವರಿ ಕೃಷಿಯ ಜೀವನಾಡಿ. ಅನ್ನದಾತನ ಭೂಮಿಗೆ ನೀರುಣಿಸುವ ಕನಸು ಕಂಡವರು ನಮ್ಮ ಮಧ್ಯೆ ಅನೇಕರು. ಆದರೆ ನನಸಾಗಿಸಿದವರು ವಿರಳರು. ಇಂಥ ವಿರಳಾತಿವಿರಳರಲ್ಲಿ ಶಾಸಕ ಬಸವರಾಜ ಬೊಮ್ಮಾಯಿ ಅವರು ಒಬ್ಬರು. ಜಲಸಂಪತ್ತಿನ ಸಮರ್ಥ ಬಳಕೆಯ ಪರಿಕಲ್ಪನೆ ಹೊಂದಿರುವ ಇವರ ದೂರದೃಷ್ಟಿಯ ಪರಿಣಾಮ ಅನುಷ್ಠಾನಗೊಂಡಿರುವ ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕು ಏತ ನೀರಾವರಿ ಯೋಜನೆ ದೇಶಕ್ಕೆ ಮಾದರಿಯಾಗಿದೆ ಎಂದರೆ ಅತಿಶಯೋಕ್ತಿಯಾಗದು.

1SGN-1ನೀರು ಇಂದು ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತ. ತುಪ್ಪದ ಹಾಗೆ ನೀರು ಬಳಸುವ ಸ್ಥಿತಿ ಬಂದೆರಗಿದ್ದು ವಿಪರ್ಯಾಸ. ಅದಕ್ಕೆ ಕಾರಣ ಸಕಾಲಕ್ಕೆ ಬೀಳದ ಮಳೆ ಮತ್ತು ಜಲಮೂಲಗಳ ಸಂರಕ್ಷಣೆ ಮರೆತ ಸಮುದಾಯ. ನಾಡಿನ ಹಲವೆಡೆ ಬರದ ಛಾಯೆ ಆವರಿಸಿದ್ದು, ಜನ ಜೀವಜಲಕ್ಕಾಗಿ ಪರಿತಪಿಸುವಂತಾಗಿದೆ. ಈ ಮಧ್ಯೆ ಜಲಸಂಕಟಕ್ಕೆ  ಶಿಗ್ಗಾವಿ ಏತ ನೀರಾವರಿ ಯೋಜನೆ ಹಾಗೂ ವರದಾ ನದಿ ನೀರಿನಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯೊಂದು ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ರೈತರ ಪಾಲಿಗೆ ವರದಾನವಾಗಿ ಪರಿಣಮಿಸಿದೆ.

ಸಾಂಪ್ರದಾಯಿಕ ಜಲಮೂಲಗಳು ಬದಲಾದ ಸನ್ನಿವೇಶದಲ್ಲಿ ಬಾಯಿ ತೆರೆದು ನಿಂತಿವೆ. ಪರಿಣಾಮ ಜನ ಬರದ ಬವಣೆ ಎದುರಿಸುವಂತಾಗಿದೆ. ಜಾನುವಾರುಗಳಿಗೆ ಮಾತ್ರವಲ್ಲ, ಕೃಷಿಗೆ ನೀರು ಸಿಗದ ಹತಾಶೆಯ ಸ್ಥಿತಿ ನಮ್ಮ ರೈತರದ್ದಾಗಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ  ತಾಲೂಕಿನಲ್ಲಿ ಕೆರೆಗಳಿಗೆ ಆಸರೆ ಕಲ್ಪಿಸುವ ನಿಟ್ಟಿನಲ್ಲಿ ಈ ಏತ ನೀರಾವರಿ ಯೋಜನೆ ವರದಾನವಾಗಿ ಪರಿಣಮಿಸಿದೆ.

21SGN-2ಈ ಏತ ನೀರಾವರಿ ಯೋಜನೆಯಿಂದ ಶಿಗ್ಗಾವಿ ತಾಲೂಕಿನ ರೈತ ಸಮುದಾಯ ಜಲಸಂಕಟಕ್ಕೆ ಸೆಡ್ಡು ಹೊಡೆಯಲು ಸಜ್ಜಾಗಿದ್ದಾರೆ. ಜಲಸಂರಕ್ಷಣೆ ಮರೆತ ಪರಿಣಾಮ  ಅನುಭವಿಸಿದ ಸಂಕಟಕ್ಕೆ ಪರಿಹಾರ ಕಂಡುಕೊಂಡಿದ್ದಾರೆ. ಕೃಷಿ ಹಾಗೂ ದಿನಬಳಕೆಗೆ ಮೂಲವಾಗಿದ್ದ ಕೆರೆಗಳು  ಬರಿದಾದಾಗ, ಆಶಾಕಿರಣವಾಗಿ ಹೊರಹೊಮ್ಮಿದ್ದು ಶಿಗ್ಗಾವಿ ಏತ ನೀರಾವರಿ ಯೋಜನೆ. ಈ ನೀರಾವರಿ ಯೋಜನೆ ಗ್ರಾಮೀಣ ಭಾಗದ ನೀರಿನ ಬವಣೆ ತೀರಿಸುವುದರ ಜೊತೆಗೆ, ಅಂತರ್ಜಲ ವೃದ್ಧಿಗೆ ಅನುಕೂಲವಾಗಲಿರುವುದು ವಿಶೇಷ.

ತಾಲೂಕಿನ ಚಂದಾಪುರ ಗ್ರಾಮದ ಬಳಿ ಕೆರೆ ತುಂಬಿಸುವ ಕಾಮಗಾರಿ ಅಂತಿಮ ಹಂತ ತಲುಪಿದೆ. ಈ ಯೋಜನೆಯ ಮೊದಲ ಹಂತವಾಗಿ ತಾಲೂಕಿನ ೨೨ ಕೆರೆಗಳಿಗೆ ವರದಾ ನದಿಯಿಂದ ನೀರು ಹರಿಯಲಿದೆ. ವಿದ್ಯುತ್ ಸಂಪರ್ಕ ದೊರೆತ ಕ್ಷಣ, ಪ್ರಾಯೋಗಿಕ ಪರೀಕ್ಷೆ ನಡೆಸಿ ಯೋಜನೆಗೆ ಚಾಲನೆ ನೀಡಲಾಗಿದೆ.

೧೩ ಮುಖ್ಯ ಕೆರೆ ಮತ್ತು ಅದರಿಂದ ಸಂಪರ್ಕ ಪಡೆಯುವ ೯ ಸಣ್ಣ ಕೆರೆಗಳು ಒಳಗೊಂಡಂತೆ, ೨೨ ಕೆರೆಗಳು ಮೊದಲ ಹಂತದಲ್ಲಿ ಭರ್ತಿಯಾಗಿವೆ.

ಅದರಲ್ಲಿ ನಿಡಗುಂದಿ, ಚಂದಾಪುರದ ಕಳಸಕೆರಿ, ಮುಗಳಿಕಟ್ಟಿ, ಹುನಗುಂದ, ತೊರೂರು, ಕೋಣನಕೆರೆ, ಹಿರೇಕೆರೆ ಸೇರಿದಂತೆ, ಅಂದಲಗಿ ಗ್ರಾಮದ ೬ ಕೆರೆಗಳು ಹಾಗೂ ಉಪಸಂಪರ್ಕದಡಿ ಬಂಕನಾಥ ಕೆರೆ, ಕರೀಕೆರೆ, ಮೂಕಬಸರೀಕಟ್ಟಿಯ ೨ ಕೆರೆ, ಶಿಂಗಾಪುರ, ಮಲ್ಲನಾಯಕನಕೊಪ್ಪದ ೪ ಕೆರೆಗಳಿಗೆ ಯೋಜನೆಯ ಲಾಭ ಪಡೆಯುತ್ತಿವೆ.

ಹಣ ಉಳಿತಾಯ

೩೨ ಕೋಟಿ ರೂ. ಟೆಂಡರ್ ಕಾಮಗಾರಿಯಲ್ಲಿ ನಿಗದಿತ ಸಮಯಕ್ಕೆ ಕೆಲಸ ಕೈಗೊಂಡು, ಅದರಲ್ಲಿ ೧೯ ಕೋಟಿ ರೂ. ಉಳಿತಾಯ ಮಾಡುವ ಮೂಲಕ ರಾಜ್ಯದಲ್ಲಿ ಅನುದಾನ ಸದ್ಬಳಕೆ ಮಾಡಿದ ಪ್ರಥಮ ತಾಲೂಕು ಮತ್ತು ಯೋಜನೆ ಇದಾಗಿದೆ. ಉಳಿತಾಯದ ಹಣವನ್ನು ಹತ್ತಿರದಲ್ಲೇ ಬರುವ ಉಪಕೆರೆಗಳಿಗೆ ನೀರು ಹರಿಸಲು ಕಾಮಗಾರಿ ಕೈಗೊಳ್ಳುವ ಯೋಜನೆ ಸಿದ್ಧಪಡಿಸಲಾಗುತ್ತಿದ್ದು , ಶೀಘ್ರದಲ್ಲಿ ಇದಕ್ಕೂ ಚಾಲನೆ ಸಿಗಲಿದೆ.

ನೈಸರ್ಗಿಕವಾಗಿ ಮಳೆ ನೀರಿನಿಂದ ಭರ್ತಿಯಾಗಬೇಕಿದ್ದ ಕೆರೆಗಳು, ಮಳೆಯ ಕೊರತೆ ಮತ್ತು ಬರಗಾಲದಿಂದ ಬತ್ತಿಹೋಗುತ್ತಿವೆ. ಹೀಗಾಗಿ ಕೆರೆ ತುಂಬಿಸುವ ಯೋಜನೆಯನ್ನು ಸಿದ್ಧಪಡಿಸಿ, ತ್ವರಿತಗತಿಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಕೆರೆಗಳು ನೀರು ತುಂಬಿಕೊಂಡು ಸಮೃದ್ಧಿಯಾಗಿದ್ದರೆ, ಬರಗಾಲವನ್ನು ಸಮರ್ಥವಾಗಿ ಎದುರಿಸಬಹುದಾಗಿದೆ. ಈ ಯೋಜನೆಯ ಅನುಷ್ಠಾನದ ಕುರಿತು ಜನರಲ್ಲಿ ಹೊಸ ಆಶಾಭಾವನೆ ಹೊರಹೊಮ್ಮಿದೆ.

ಜಲಸಮೃದ್ಧಿಯ ಕನಸು

en-1ಶಿಗ್ಗಾವಿ ತಾಲೂಕಿನ ಬಹುಪಾಲು ಪ್ರದೇಶಕ್ಕೆ ಈ ಏತ ನೀರಾವರಿ ಯೋಜನೆ ವಿಸ್ತಾರಗೊಳ್ಳುತ್ತಿದ್ದು, ಬರುವ ದಿನಮಾನದಲ್ಲಿ ಮಲೆನಾಡಿನ ಸೆರಗಿಗೆ ಹೊಂದಿಕೊಂಡಿರುವ ಹೊಸೂರು, ದುಂಡಶಿ ಮೂಲಕ ತಡಸ ಗ್ರಾಮದವರೆಗೂ ಕೆರೆಗಳನ್ನು ತುಂಬಿಸುವ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಕುಡಿವ ಹಾಗೂ  ಕೃಷಿಗೆ ನೀರಿನ ಸಮಸ್ಯೆ ಎದುರಾಗದಿರಲಿ ಎಂಬ ದೂರದೃಷ್ಟಿಯಿಂದ ಶಾಸಕ ಬಸವರಾಜ ಬೊಮ್ಮಾಯಿ  ಈ ಯೋಜನೆ ಜಾರಿಗೊಳಿಸಿದ್ದು,  ಎಂತಹ ಬರಗಾಲ ಬಂದರೂ ಸಮರ್ಥವಾಗಿ ಎದುರಿಸಬಲ್ಲ ಸಮೃದ್ಧ ಜಲಸಂಪತ್ತನ್ನು ಹೊಂದಿರುವ ಪ್ರದೇಶವನ್ನಾಗಿ ರೂಪಿಸುವತ್ತ ಹೆಜ್ಜೆ ಹಾಕುತ್ತಿದ್ದಾರೆ.

ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದ ವೇಳೆ,  ಕೆರೆಗಳನ್ನು ತುಂಬಿಸುವ ಯೋಜನೆಗೆ ಚಾಲನೆ ನೀಡಿದ್ದ ಬೊಮ್ಮಾಯಿಯವರು   ಈ ವರ್ಷ ಬೇಸಿಗೆ ಮುನ್ನವೇ  ಕುಡಿಯವ ನೀರಿನ ಹಾಹಾಕರ ತಪ್ಪಿಸುವ ನಿಟ್ಟಿನಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಮುಂದಾಗಿದ್ದಾರೆ. ಹಿಂಗಾರು ಬೆಳೆ ಬೆಳೆಯಲು ಇದು ಸಂಜೀವಿನಿಯಾಗಲಿದೆ. ಬೆಳೆದು ನಿಂತು ನೀರಿಲ್ಲದೇ ಒಣಗುತ್ತಿರುವ ಬೆಳೆಗಳಿಗೂ ಅನುಕೂಲವಾಗಲಿದೆ. ಎರಡನೇ ಹಂತದಲ್ಲಿ ಈ ಕೆರೆಗಳ ಕೆಳಗಿನ ಕೆರೆಗಳಿಗೂ ನದಿ ನೀರು ಹರಿಯಲಿದೆ.

ಬರ ಕಲಿಸಿದ ಜಲಪಾಠ

ಪ್ರಸಕ್ತ ವರ್ಷ ಎದುರಾಗಿರುವ ಭೀಕರ ಬರ ತಾಲೂಕಿನ ಕೆರೆಗಳ ಜೀರ್ಣೋದ್ಧಾರಕ್ಕೆ ಪೂರಕವಾಗಿ ಪರಿಮಿಣಿಸಿದೆ. ಐದು ನೂರಕ್ಕೂ ಹೆಚ್ಚುen-2 ಕೆರೆಗಳನ್ನು ಹೊಂದಿರುವ ತಾಲೂಕಿನಲ್ಲಿ ಈಗ ಸ್ವಯಂ-ಪ್ರೇರಣೆಯಿಂದ ರೈತರು ಸುಮಾರು ೨೦ಕ್ಕೂ ಹೆಚ್ಚು ಕೆರೆಗಳ ಹೂಳು ತೆಗೆಯವ ಕಾರ್ಯವನ್ನು ಸದ್ದಿಲ್ಲದೇ ನಡೆಸಿದ್ದಾರೆ. ಆ ಮೂಲಕ ಜಲ ಸಮೃದ್ಧಿಯ ಕನಸು ನನಸಾಗಿಸಲು ಹೊರಟಿದ್ದಾರೆ.

ನಿತ್ಯ ಜನ, ಜಾನುವಾರುಗಳಿಗೆ ಮೂಲ ಆಧಾರವಾಗಿರುವ ಕೆರೆಯ ಜಲ ಸಂಪತ್ತು ಉಳಿಸಿಕೊಳ್ಳುವ ಭಗೀರಥ ಪ್ರಯತ್ನಕ್ಕೆ ಕೈಹಾಕಿದ ರೈತರಿಗೆ ತಡವಾಗಿಯಾದರೂ ಜ್ಞಾನೋದಯವಾಗಿದೆ. ’ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿಗೆ ತೆಗ್ಗು ತೋಡಿದರಂತೆ’ ಎನ್ನುವ ಗಾದಿ ಮಾತಿನಂತೆ ರೈತರು ಜಲಸಂಕಟದ ಸಂದರ್ಭದಲ್ಲಿ ಜಲ ಸಾಕ್ಷರತೆಯತ್ತ ದಿಟ್ಟ ಹೆಜ್ಜೆ ಇಡುತ್ತಿದ್ದಾರೆ. ಇಂದಿನ ಪರಿಸ್ಥಿತಿಗೆ ಏನು ಕಾರಣ ಎಂಬುದನ್ನರಿತು ಜಲಸಂರಕ್ಷಣೆಯ ಮಂತ್ರ ಪಠಿಸುತ್ತಿದ್ದಾರೆ.

en-4ಜನರ ಈ ಯತ್ನಕ್ಕೆ ಪ್ರೋತ್ಸಾಹ ನೀಡುವುದರ ಜೊತೆಗೆ, ಈ ಕೆರೆಗಳಿಗೆ ವರದಾ ನದಿ ನೀರು ಹರಿಸಲು ಸ್ಥಳೀಯ ಶಾಸಕ ಬಸವರಾಜ ಬೊಮ್ಮಾಯಿ ಮುಂದಾಗಿದ್ದಾರೆ. ತಾಲೂಕಿನಾದ್ಯಂತ ಅಭಿವೃದ್ಧಿ ಕಾಣದೇ ಬಿಕೋ ಎನ್ನುತ್ತಿದ್ದ ದೊಡ್ಡ ಕೆರೆಗಳು ಅಭಿವೃದ್ಧಿ ಕಾಯಕಲ್ಪ ಪಡೆದುಕೊಂಡಿದ್ದು, ಶಿಗ್ಗಾವಿ ಏತ ನೀರಾವರಿ ಯೋಜನೆಯಡಿ ವರದಾ ನದಿ ನೀರು ಹರಿಸಲು ಶಾಸಕರು ಕ್ರಮಕೈಗೊಂಡಿದ್ದಾರೆ. ಇನ್ನು ಕೆಲ ಸಂಘ-ಸಂಸ್ಥೆಗಳು ಕೂಡ ರಚನಾತ್ಮಕ ಕಾರ್ಯಗಳ ಮೂಲಕ ಜಲ ಸಂರಕ್ಷಣೆಗೆ ಮುಂದಾಗಿರುವುದು ತಾಲೂಕಿನಲ್ಲಿ ಒಳ್ಳೆಯ ವಿದ್ಯಮಾನ.

ನೂರು ಎಕರೆಗೂ ಹೆಚ್ಚು ವಿಸ್ತಾರವುಳ್ಳ ಶಿಗ್ಗಾವಿ ನಾಗನೂರು, ಹಿರೇಕೆರೆ ಅಭಿವೃದ್ಧಿ ಕಂಡಿದೆ. ಈ ಎರಡು ಕೆರೆಗಳು ಅಭಿವೃದ್ಧಿಯಿಂದ ಪಟ್ಟಣದ ಜನ, ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ  ತಪ್ಪಿದಂತಾಗಿದೆ. ಜೊತೆಗೆ, ಕೆರೆ ಅಕ್ಕ-ಪಕ್ಕದ ರೈತರ ಭೂಮಿಗಳಿಗೆ ನೀರಾವರಿ ವ್ಯವಸ್ಥೆಗೂ ಅನುಕೂಲವಾಗುತ್ತದೆ.

ಮುಗಳಿಕಟ್ಟಿ ಗ್ರಾಮಕ್ಕೊಂದೇ ಹಿರೆಕೆರೆ ದೊಡ್ಡದು. ಆದರೆ, ಬಿಸಲಿನ ಭೀಕರತೆಯೇ ಗ್ರಾಮದ ರೈತರಲ್ಲಿ ಕೆರೆ ಅಭಿವೃದ್ಧಿ ಜಾಗೃತಿ ಮೂಡಿಸಿದೆ. ಈen-3 ಕೆರೆ ಅಭಿವೃದ್ಧಿಯಿಂದ ಜಲ ಸಮೃದ್ಧಿ ಕನಸು ಕಂಡು ರೈತರು, ಕಳೆದ ಒಂದು ತಿಂಗಳದಿಂದ ಕೆರೆ ಹೂಳು ತೆಗೆಯತ್ತಿದ್ದಾರೆ. ರೈತರು ಕೈಗೊಂಡ ಕೆರೆ ಅಭಿವೃದ್ಧಿಗೆ ಶಾಸಕ ಬೊಮ್ಮಾಯಿ, ಹಿಟಾಚಿ ಯಂತ್ರ ನೀಡಿ, ರೈತರನ್ನು ಹುರದುಂಬಿಸಿದ್ದಾರೆ. ಪರಿಣಾಮ, ಶೀಘ್ರ ವರದಾ ನದಿ ನೀರು ಕೆರೆ ತುಂಬಿಸಲಿದೆ.

ಹತ್ತಾರು ಗ್ರಾಮದ ಜನರಿಗೆ ಉಪಯುಕ್ತವಾದ ತಾಲೂಕಿನ ಹೊನ್ನಾಪುರದ ಹಿರೆಕೆರೆಯೊಂದು ತುಂಬಿಕೊಂಡರೆ, ಅಕ್ಕ-ಪಕ್ಕದ ನಾಲ್ಕೈದು ಕೆರೆಗಳ ತುಂಬಿಕೊಳ್ಳುತ್ತವೆ. ಜನ, ಜಾನುವಾರುಗಳ ನೀರಿನ ದಾಹವೂ ತೀರುತ್ತದೆ; ಹೀಗಾಗಿ ಈ ಕೆರೆ ಅಭಿವೃದ್ಧಿಗೆ ರೈತರು ಟೊಂಕಕಟ್ಟಿ ನಿಂತಿದ್ದಾರೆ. ಇದೇ ಮಾದರಿಯಲ್ಲಿ ಹಿರೇಮಣಕಟ್ಟಿ, ಅಂದಲಗಿ, ಹಿರೇಬೆಂಡಿಗೇರಿ, ಚಂದಾಪುರ, ಲಕ್ಕಿಕೊಪ್ಪ, ತೊರೂರು, ಮುದ್ದಿನಕೊಪ್ಪ, ಕುನ್ನೂರ ಗ್ರಾಮದ ಕೋಣನಕೇರಿ ಗ್ರಾಮಗಳಲ್ಲಿ ರೈತರು ಕೆರೆಗಳ ಅಭಿವೃದ್ಧಿಗೆ ಸದ್ದಿಲ್ಲದೆ ಶ್ರಮಿಸುತ್ತಿದ್ದಾರೆ. ಶಿಗ್ಗಾವಿ ಏತ ನೀರಾವರಿ ಯೋಜನೆಯಡಿ, ಮೊದಲ ಹಂತವಾಗಿ ಅಂದಲಗಿ ಭಾಗದ ೯ ಕೆರೆಗಳಿಗೆ ವರದಾ ನದಿಯಿಂದ ನೀರು ತುಂಬಿಸುವ ಕಾಮಗಾರಿ ಭರದಿಂದ ಸಾಗಿದೆ.

———————-

ನಮ್ಮ ಪೂರ್ವಜರು ಕೆರೆ ತುಂಬಿದರ ಊರ ಜನರ ಸೇರಿಸಿ ಪೂಜೆ ಮಾಡತ್ತಿದ್ದರು. ಸ್ವಚ್ಛ ಮಾಡಿಸುತ್ತಿದ್ದರು. ಕೆರೆ ಊರಿನ ಜನರಿಗೆ ನೀರುಣಿಸುತ್ತಿತ್ತು. ಇತ್ತೀಚೆಗೆ ನಾವೆಲ್ಲ ಕೆರೆ ಸ್ವಚ್ಛ ಮಾಡಿಲ್ಲ, ಪೂಜೆಯೂ ಮಾಡಿಲ್ಲ. ಹೀಗಾಗಿ, ಈ ವರ್ಷ ಕೆಟ್ಟ ಬರಗಾಲದಿಂದ ಕೆರೆ ಒಣಗಿ ಹೋದವು, ದನಕರುಗಳಿಗೆ ನೀರಿಲ್ಲದಂಗಾಯಿತು. ಕೊಡ ನೀರು ತಂದು ದನಕರುಗಳಿಗೆ ಕುಡಿಸುವ ಸ್ಥಿತಿ ಬಂದಿದೆ. ಇದರಿಂದ ಎಚ್ಚತ್ತುಕೊಂಡು ನಮ್ಮ ಶಾಸಕರ ಸಹಾಯ-ಸಹಕಾರದಿಂದ ಕೆರೆ ಅಭಿವೃದ್ಧಿ ಮಾಡುತ್ತಿದ್ದೇವೆ.

           ಭರಮಗೌಡ್ರ ಪಾಟೀಲ ರೈತರು ಕುನ್ನೂರ.

ಜಲ ಸಂರಕ್ಷಣೆಯ ಮಹತ್ವ ಇಂದು ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತ. ಒಂದೆಡೆ  ಜಾಗತಿಕ ತಾಪಮಾನ ಹೆಚ್ಚಳ, ಇನ್ನೊಂದೆಡೆ ಕ್ಷೀಣಿಸುತ್ತಿರುವ ಕಾಡು – ಪರಿಣಾಮ ಜಲಮೂಲಗಳು ಕಣ್ಮರೆಯಾಗುತ್ತಿವೆ. ಕೃಷಿಗೆ ಅತ್ಯಗತ್ಯವಾದ ಜಲಮೂಲಗಳ ರಕ್ಷಣೆಗೆ ಈ ಬಾರಿಯ ಬರ ಒಂದು ಸದಾವಕಾಶ ಕಲ್ಪಿಸಿಕೊಟ್ಟಿದೆ. ಕೆರೆಗಳ ನೀರು ಉಳಿಸಿದಲ್ಲಿ ಬವಣೆ ಇರದು.

           ಬಸವರಾಜ ಬೊಮ್ಮಾಯಿ, ಶಾಸಕರು ಶಿಗ್ಗಾವಿ-ಸವಣೂರ

ಚಿತ್ರ-ಲೇಖನ: ನಿತ್ಯಸಿರಿ

 

 

 

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*