ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಸೋರಿದ ತೈಲದ ಸ್ವಚ್ಛತೆ ಹೇಗೆ? (ಭಾಗ ೨)

ಬಿರಡೆಗಳಿರುವ ಬಲೆಯನ್ನು ನೀರಿನ ಮೇಲೆ ನಿಧಾನವಾಗಿ ಎಳೆಯುತ್ತಾ ಸಾಗುತ್ತಾರೆ. ಅದು ನೀರಿನ ಮೇಲೆ ತೇಲುತ್ತಿರುವ ಟಾರ್‌ನ್ನು ಸ್ವಚ್ಛಗೊಳಿಸುತ್ತಾ ಬರುತ್ತದೆ. ಹೀಗೆ ಸಂಗ್ರಹವಾದ ಟಾರ್‌ನ್ನು ಜೆಸಿಬಿಯಲ್ಲಿರುವ ಮೊಗಚು ಕೈಯನ್ನು ಬಳಸಿOS 1 ತೊಟ್ಟಿಗೆ ತುಂಬುತ್ತಾ ಬರುತ್ತಾರೆ. ಕೆಲವೊಮ್ಮೆ ತೆಪ್ಪಗಳನ್ನು ಬಳಸಿ ಬಾಚುತ್ತಾ ದಡಕ್ಕೆ ಎಳೆಯುತ್ತಾರೆ. ಇದೆಲ್ಲಾ ಸಾಮಾನ್ಯ ವಿಧಾನ. ಇದರಿಂದ ಸಮುದ್ರದ ನೀರು ಸಂಪೂರ್ಣ ಸ್ವಚ್ಛವಾಗುವುದಿಲ್ಲ. ಅದಕ್ಕಾಗಿ ತೈಲವನ್ನು ಹೀರಿಕೊಳ್ಳುವ ಪದಾರ್ಥಗಳನ್ನು ಬಳಸಲಾಗುತ್ತದೆ. ಅಕಾರ್ಬನಿಕ ಘನ ಪದಾರ್ಥಗಳಾದ ಸಿಲಿಕಾ, ಹಗುರವಾದ ಸೂಕ್ಷ್ಮ ರಂಧ್ರಗಳಿರುವ ವರ್ಮಿಕ್ಯುಲೇಟ್ ಎಂಬ ಮಣ್ಣಿನಚಿತಹ ಟಾಲ್ಕ್ ಎಂಬ ಪದಾರ್ಥ (ಟಾಲ್ಕ್‌ಮ್ ಪೌಡರ್ ನೆನಪಿಸಿಕೊಳ್ಳಿ), ಗ್ಲಾಸ್ ವೂಲ್, ನೈಸರ್ಗಿಕ ಜೈವಿಕ ವಸ್ತುಗಳಾದ ಒಣ ಹುಲ್ಲು, ಮರದ ಹೊಟ್ಟು ಇತ್ಯಾದಿ.., ಪಾಲಿಯುರಥೇನ್, ಪಾಲಿಎಥಿಲೀನ್ ಮುಂತಾದ ಪಾಲಿಮರ್‌ಗಳನ್ನು ಬಳಸಿ ತೈಲದ ಕಣಗಳನ್ನು ಹೀರಿಕೊಳ್ಳುವಂತೆ ಮಾಡುತ್ತಾರೆ. ಅತ್ಯಂತ ವೇಗವಾಗಿ ಸರಿಪಡಿಸಬೇಕಾದರೆ, ಸೋರಿಕೆಯ ಮೇಲೆ ಆಕ್ಸಿಡೆಂಟ್‌ಗಳನ್ನು ಆಥವಾ ದಹನಶೀಲ ವಸ್ತುಗಳನ್ನು ಸುರಿದು ಉರಿಸಿಬಿಡುತ್ತಾರೆ.

OS 3ರಾಸಾಯನಿಕ ಮಾರ್ಜಕಗಳನ್ನು ಬಳಸಿ ತೈಲಪದರಗಳನ್ನು ಚದುರಿಸುವ ಪ್ರಯತ್ನ ಮಾಡಲಾಯಿತು. ಸಮುದ್ರವೇ ಅದನ್ನು ಸ್ವಚ್ಛಗೊಳಿಸಿಕೊಳ್ಳುತ್ತದೆ ಎನ್ನುವ ಧೋರಣೆ. ಮಾರ್ಜಕಗಳಲ್ಲಿರುವ ವಿಷವಸ್ತುಗಳನ್ನು ಕರಗಿಸುವುದು ಹೇಗೆ? ತೈಲದ ಕಣಗಳು ಚದುರಿದವೇ ವಿನಃ ನೀರಿನೊಂದಿಗೆ ಬೆರೆಯಲಿಲ್ಲ. ಹೀಗೆ ಮಾರ್ಜಕಗಳಲ್ಲಿರುವ ವಿಷವಸ್ತುಗಳು ಮತ್ತು ಚದುರಿದ ತೈಲ ಕಣಗಳು ಇನ್ನಷ್ಟು ಸಮುದ್ರಜೀವಿಗಳ ನಾಶಕ್ಕೆ ಕಾರಣವಾಯಿತು. ಹೀಗಾಗಿ ಚದುರಿಸುವ ಪ್ರಯೋಗವನ್ನು ಕೈಬಿಡಲಾಯಿತು.

ಇಸವಿ ೧೯೮೯ರ ಮಾರ್ಚ್ನಲ್ಲಿ ಇನ್ನೊಂದು ಅನಾಹುತ ಘಟಿಸಿತ್ತು. ದಕ್ಷಿಣ ಅಲಾಸ್ಕಾದ ಕರಾವಳಿಯಲ್ಲಿ ಒಂದು ತೈಲ ಟ್ಯಾಂಕರ್‌ನಿಂದ ಸುಮಾರು ೫೦ ಮಿಲಿಯನ್ ಲೀಟರ್ ತೈಲವು ಸೋರಿಹೋಯಿತು. ಅಂದಾಜು ೧೨,೪೦೦ ಚದರ ಕಿಲೋಮೀಟರ್‌ಗಳಷ್ಟು ವ್ಯಾಪಿಸಿತು. ೧೧೦೦ ಕಿಲೋಮೀಟರ್ ಕರಾವಳಿಯ ಉದ್ದಕ್ಕೂ ಮಲಿನಗೊಳಿಸಿತ್ತು. ಅದು ಪಾರಿಸರಿಕವಾಗಿ ಸೂಕ್ಷ್ಮ ಪ್ರದೇಶವಾಗಿರುವುದರಿಂದ, ಆದ ಹಾನಿ ಅಪಾರ. ಸುಮಾರು ೩೪೦೦೦ ಕಡಲ ಹಕ್ಕಿಗಳು, ೧೦,೦೦೦ ನೀರು ನಾಯಿಗಳು, ೧೬ ತಿಮಿಂಗಿಲಗಳು ದಡಕ್ಕೆ ಸತ್ತು ಬಂದವು. ಇದರಿಂದಾಗಿ ತೈಲ ಸೋರಿಕೆಯನ್ನು ತಡೆಗಟ್ಟುವ ವಿಧಾನಗಳು, ಸ್ವಚ್ಛತೆಯ ವಿಧಾನಗಳು ಮತ್ತು ಅದರ ಕುರಿತಾದ ಕಾನೂನುಗಳನ್ನು ರೂಪಿಸಬೇಕಾದ ಅವಶ್ಯಕತೆಯ ಅರಿವಾಯಿತು.

ಇನ್ನೊಂದು ರೀತಿಯಲ್ಲೂ ತೈಲ ಸೋರಿಕೆಯಾಗುತ್ತದೆ. ಅದನ್ನು ಆಯಿಲ್ ಸ್ಲಿಕ್ ಎನ್ನುತ್ತಾರೆ. ತೈಲವನ್ನು ತುಂಬುವಾಗ, ಭೂಮಿಯಿಂದ Picture3ಮೇಲೆತ್ತುವಾಗ ಹಾಗೂ ನೈಸರ್ಗಿಕವಾಗಿಯೂ ತೈಲವು ಸಾಗರ-ಸಮುದ್ರಗಳನ್ನು ಸೇರುತ್ತಿರುತ್ತದೆ. ಹೀಗೆ ಪ್ರತಿ ವರ್ಷ ನೀರಿಗೆ ಸೇರುವ ಪ್ರಮಾಣ ನಾಲ್ಕು ಮಿಲಿಯನ್ ಟನ್‌ಗಳು. ಅದರಲ್ಲಿ ಅರ್ಧದಷ್ಟು ಟ್ಯಾಂಕರ್‌ಗಳಿಂದ ಚೆಲ್ಲಿದ್ದು, ಉಳಿದರ್ಧ ಮೇಲೆತ್ತುವಾಗ ಜಾರಿದ್ದು. ಇಸವಿ ೧೯೭೫ರಿಂದ ೧೯೭೮ರವರೆಗೆ ಈ ರೀತಿಯ ಒಂದು ಲಕ್ಷ ತೈಲ ಸೋರಿಕೆ ಪ್ರಕರಣಗಳು ದಾಖಲಾದವು.

ಭೂಮಿಯಿಂದ ಮೇಲೆತ್ತುವಾಗ ಉಂಟಾಗುವ ತೈಲ ಸೋರಿಕೆಯಲ್ಲಿ ನೀರಿನ ಮೇಲೆ ತೆಳುವಾದ, ನಯವಾದ ತೈಲದ ಪದರ ಉಂಟಾಗುತ್ತದೆ. ಇದರಲ್ಲಿರುವ ಆವಿಯಾಗುವ ವಸ್ತುಗಳು ಎರಡು ವಾರಗಳಲ್ಲಿ ಆವಿಯಾಗಿ ಹೋಗುತ್ತವೆ. ಉಳಿದದ್ದು ಟಾರ್ ಆಗಿ ತೀರ ಸೇರುತ್ತದೆ. ಅಥವಾ ಎಡ್ಡಿ ಪ್ರವಾಹಗಳಲ್ಲಿ ಸೇರಿಕೊಳ್ಳುತ್ತದೆ. ಒಂದಿಷ್ಟು ಕಪ್ಪು ಪದರಗಳಾಗಿ ಕೆಲವು ದಿನಗಳ ಬಳಿಕ ಸಮುದ್ರದ ತಳವನ್ನು ಸೇರುತ್ತದೆ.

OS 2ಇದೆಲ್ಲದರೊಂದಿಗೆ ಕೆಲವೊಮ್ಮೆ ಉದ್ದೇಶಪೂರ್ವಕವಾಗಿಯೇ ತೈಲವನ್ನು ಸಮುದ್ರಗಳಿಗೆ ಹರಿಯಬಿಡಲಾಗುತ್ತದೆ. ಉದಾಹರಣೆಗೆ ಹಡಗಿನ ತೈಲಮಿಶ್ರಿತ ನಿಲುಭಾರವನ್ನು ಚೆಲ್ಲಲಾಗುತ್ತದೆ. ಹೀಗೆ ಸಾಗರ ಮಾಲಿನ್ಯವು ಟ್ಯಾಂಕರ್ ಮಾರ್ಗಗಳಲ್ಲಿ ಮತ್ತು ಹಡಗು ಮಾರ್ಗಗಳಲ್ಲಿ ಹೆಚ್ಚಾಗಿರುತ್ತದೆ.

ಏನಿದು ಸಾಗರ ಮಾಲಿನ್ಯ

ವಿಷಕಾರಿ ಪದಾರ್ಥಗಳು ಸಾಗರದಲ್ಲಿ ವಿಲೀನವಾದಾಗ, ಅದರಲ್ಲಿರುವ ಜೀವಿಗಳಿಗೆ ಹಾನಿಯುಂಟಾಗುತ್ತದೆ. ಇದನ್ನೇ ಸಾಗರ ಮಾಲಿನ್ಯ ಎನ್ನುತ್ತಾರೆ. ನಗರಗಳ ಕೊಚ್ಚೆ, ಕಾರ್ಖಾನೆಗಳ ದ್ರವ ತ್ಯಾಜ್ಯ, ಬೈಜಿಕ ತ್ಯಾಜ್ಯಗಳನ್ನು ಹಡಗಿನಲ್ಲಿ ಸಾಗಿಸಿ ಸಾಗರಗಳ ಮಧ್ಯೆ ಬಿಡುತ್ತಾರೆ. ಯುಟ್ರೋಫೀಕರಣದಿಂದಲೂ ಜಲಮಾಲಿನ್ಯ ಆಗುತ್ತದೆ. ಅಂದರೆ ನದಿಗಳೆಲ್ಲಾ ಹೊತ್ತು ತರುವ ಪೋಷಕಾಂಶಗಳಿಂದ ಸಸ್ಯಪ್ಲವಕಗಳು ಅಧಿಕವಾಗಿ ಬೆಳೆಯುತ್ತವೆ. ಪೋಷಕಾಂಶಗಳು ಸಾಂದ್ರೀಕೃತಗೊಳ್ಳುತ್ತವೆ. ಆಗಲೂ ಅಲ್ಲಿನ ಜೀವಿಗಳಿಗೆ ಸಮಸ್ಯೆ ಉಂಟಾಗುತ್ತದೆ.  ಟರ್ಕಿಯ ಕಪ್ಪು ಸಮುದ್ರವು ಪೋಷಕಾಂಶಗಳಿಂದಲೇ ಮಲಿನಗೊಂಡಿದೆ. ಸ್ವಯಂ-ಶುದ್ಧೀಕರಣ ಮಾಡಿಕೊಳ್ಳಲಾಗದಷ್ಟು ಬಿಗಡಾಯಿಸಿದೆ.

ಸ್ವಯಂ-ಶುದ್ಧೀಕರಣ ಕ್ರಿಯೆ ಹೇಗೆ?

ಮಲಿನವಾದ ಪರಿಸರವು ತನ್ನೊಳಗಿನ ಜೀವಿಗಳು ಹಾಗೂ ಇನ್ನಿತರ ಪದಾರ್ಥಗಳನ್ನು ಬಳಸಿಕೊಂಡು ಶುದ್ಧಗೊಳ್ಳುವ ಮತ್ತು ಪೂರ್ವಸ್ಥಿತಿಗೆ ಮರಳುವ ಕ್ರಿಯೆಯನ್ನೇ ಸ್ವಯಂ ಶುದ್ಧೀಕರಣ ಕ್ರಿಯೆ ಎನ್ನುತ್ತಾರೆ. ಸಾಮಾನ್ಯವಾಗಿ ಈ ಪದವನ್ನು ಜೈವಿಕ ತ್ಯಾಜ್ಯಗಳಿಂದ ಕಲುಷಿತಗೊಳ್ಳುವ ನೀರು ಮತ್ತೆ ತನ್ನನ್ನು ಶುದ್ಧೀಕರಿಸಿಕೊಂಡು ಸುಸ್ಥಿತಿಗೆ ಮರಳುವ ಕ್ರಿಯೆಗೆ ಅನ್ವಯಿಸಲಾಗುತ್ತದೆ. ನೀರಿನಲ್ಲಿರುವ ಬ್ಯಾಕ್ಟೀರಿಯಾಗಳು ಮೊದಲು ತ್ಯಾಜ್ಯಗಳನ್ನು ವಿಭಜಿಸುವ ಕ್ರಿಯೆಗೆ ಮುಂದಾಗುತ್ತವೆ. ಇದಕ್ಕೆ ಆಮ್ಲಜನಕ ಬೇಕು. ಅದಕ್ಕಾಗಿ ನೀರಿನಲ್ಲಿ ಕರಗಿರುವ ಆಮ್ಲಜನಕವನ್ನು ಅವು ಬಳಸಿಕೊಳ್ಳುತ್ತವೆ. ಅಂದರೆ ಅದು ಒಳಗಿರುವ ಎನ್ನುವ ಆಮ್ಲಜನಕವಲ್ಲ. ಇದು ಪ್ರತ್ಯೇಕ ಆಮ್ಲಜನಕವಾಗಿದ್ದು ಕಡಿಮೆ ಪ್ರಮಾಣದಲ್ಲಿ ನೀರಿನಲ್ಲಿ ಹುದುಗಿರುತ್ತದೆ. ಇದು ಸಿಗುವವರೆಗೂ ಸ್ವಯಂ ಶುದ್ಧೀಕರಣ ಕ್ರಿಯೆಗೆ ಅಡ್ಡಿಯಿರುವುದಿಲ್ಲ. ಸ್ವಯಂ-ಶುದ್ಧೀಕರಣ ಕ್ರಿಯೆಗೆ ನೀರು ಸಾರರಿಕ್ತವಾಗಿರಬೇಕು. ಸೂರ‍್ಯನ ಕಿರಣಗಳು ಬೀಳುತ್ತಿರಬೇಕು.

ಸ್ವಯಂ-ಶುದ್ಧೀಕರಣ ಕ್ರಿಯೆಗೆ ಸಹಾಯ ಮಾಡುವ ಜೀವಿಗಳೆಂದರೆ, ಶಿಲೀಂಧ್ರಗಳು, ಪಾಚಿ, ಬ್ಯಾಕ್ಟೀರಿಯಾ, ಪ್ರೊಟೊಝೋವಾ, ಕ್ರಸ್ಟೇಶಿಯನ್ಸ್,Picture2 ಹುಳುಗಳು, ಕೀಟಗಳ ಲಾರ್ವಾ ಹಂತ, ಚಿಪ್ಪು ಮೀನು, ಬಸವನ ಹುಳು, ನೀರುಕೋಳಿ ಹಾಗೂ ಇನ್ನಿತರ ಭಕ್ಷಕ ಪ್ರಾಣಿಗಳು. ಶಿಲೀಂಧ್ರಗಳು, ಪಾಚಿ, ಬ್ಯಾಕ್ಟೀರಿಯಾಗಳು ಕರಗಿದ ಜೈವಿಕ ಮತ್ತು ಅಜೈವಿಕ ಪದಾರ್ಥಗಳನ್ನು ಹೀರಿಕೊಳ್ಳುತ್ತವೆ. ಅವುಗಳ ದೇಹದಲ್ಲಾಗುವ ಉಪಾವಚಯ ಕ್ರಿಯೆಯ ಮೂಲಕ ಆ ಪದಾರ್ಥಗಳು ವಿಭಜನೆಯಾಗುತ್ತದೆ ಅಥವಾ ದೇಹಕ್ಕೆ ಸೇರಿಕೊಳ್ಳುತ್ತದೆ. ಜೊತೆಗೆ ಪಾಚಿ ಮತ್ತು ಇನ್ನಿತರ ಜಲಸಸ್ಯಗಳು ಹಗಲಿನಲ್ಲಿ ದ್ಯುತಿಸಂಶ್ಲೇಷಣೆಯ ಮೂಲಕ ಆಮ್ಲಜನಕವನ್ನು ಮತ್ತೆ ನೀರಿಗೆ ಸೇರಿಸುತ್ತವೆ. ಕ್ರಸ್ಟೇಶಿಯನ್ಸ್ ಮತ್ತು ಬಸವನ ಹುಳುಗಳು ಕರಗದ ಹಾಗೂ ತೇಲುತ್ತಿರುವ ವಸ್ತುಗಳನ್ನು ತಿನ್ನುತ್ತವೆ. ಪ್ರೊಟೊಝೋವಾಗಳನ್ನೂ ಸಹಾ ಜೀರ್ಣಿಸಿಕೊಳ್ಳುತ್ತವೆ. ದೊಡ್ಡ ಕ್ರಸ್ಟೇಶಿಯನ್ಸ್, ಕೀಟಗಳ ಲಾರ್ವಾಗಳು ಸಣ್ಣ ಕ್ರಸ್ಟೇಶಿಯನ್ಸ್‌ನ್ನು, ಪ್ರೊಟೊಝೋವಾ, ಹುಳುಗಳನ್ನು ತಿನ್ನುತ್ತವೆ. ಮೀನುಗಳು ಮತ್ತು ನೀರುಕೋಳಿಗಳು ದೊಡ್ಡ ಕ್ರಸ್ಟೇಶಿಯನ್ಸ್‌ನ್ನು, ಹುಳುಗಳನ್ನು ತಿನ್ನುತ್ತವೆ. ಈ ರೀತಿಯಲ್ಲಿ ಜಲ ಆಹಾರ ಜಾಲದಿಂದ ಮಾಲಿನ್ಯವು ನಿವಾರಣೆಯಾಗುತ್ತದೆ. ಸಮುದ್ರದಲ್ಲಿ ಅಲೆಗಳ ಏರಿಳಿತಗಳಿಂದಾಗಿ ವಾತಾವರಣದಲ್ಲಿರುವ ಆಮ್ಲಜನಕವು ಸೇರಿಕೊಳ್ಳುತ್ತಲೇ ಇರುತ್ತದೆ. ಹೀಗಾಗಿ ತೀರ ಪ್ರದೇಶಗಳಲ್ಲಿ ಬೇಗ ಶುದ್ಧೀಕರಣವಾಗುತ್ತದೆ.  ಆಳ ಸಮುದ್ರದಲ್ಲಿ ಬಲು ನಿಧಾನ. ನೀರಿನ ಉಷ್ಣತೆಯು ಹೆಚ್ಚಿದಂತೆ ಜೀವರಾಸಾಯನಿಕ ಕ್ರಿಯೆಗಳು ಹೆಚ್ಚುತ್ತವೆ. ಅಂದರೆ ಚಳಿಗಾಲದಲ್ಲಿ ಶುದ್ಧೀಕರಣ ಕ್ರಿಯೆ ನಿಧಾನ, ಬೇಸಿಗೆಯಲ್ಲಿ ವೇಗವಾಗಿ ಆಗುತ್ತದೆ. ಮಳೆಗಾಲದಲ್ಲಿ ನದಿ ನೀರು ಸಮುದ್ರವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇರುವುದರಿಂದ ಸಮುದ್ರದ ನೀರು ಸಾರರಿಕ್ತವಾಗುತ್ತದೆ. ಆಗ ಸ್ವಶುದ್ಧೀಕರಣ ಕ್ರಿಯೆಗೆ ಕಡಿಮೆ ಆಮ್ಲಜನಕ ಸಾಕಾಗುತ್ತದೆ. ಕ್ರಿಯೆಯು ಇನ್ನಷ್ಟು ವೇಗವಾಗುತ್ತದೆ. ಹೀಗಾಗಿ ನದಿಯ ನೀರು ಸಮುದ್ರ ಸೇರಿದಷ್ಟೂ ಸಮುದ್ರ ಸ್ವಚ್ಚವಾಗುತ್ತಿರುತ್ತದೆ.

ಜೈವಿಕ ಪದಾರ್ಥಗಳು ಆಕ್ಸಿಡೀಕರಣಗೊಳ್ಳುತ್ತಿರುತ್ತವೆ. ಮೊದಲ ಹಂತದಲ್ಲಿ ಅವು ಇಂಗಾಲದ ಡೈಯಾಕ್ಸೈಡ್ ಆಗಿ ಬದಲಾಗುತ್ತದೆ. ಜೊತೆಗೆ ನೀರು ಮತ್ತು ಅಮೋನಿಯಾಗಳು ಉತ್ಪತ್ತಿಯಾಗುತ್ತವೆ. ಎರಡನೇ ಹಂತದಲ್ಲಿ ಅಮೋನಿಯಾವು ನೈಟ್ರಸ್ ಆಕ್ಸೈಡ್ ಆಗುತ್ತದೆ. ಅದು ಮತ್ತೆ ನೈಟ್ರಿಕ್ ಆಸಿಡ್ ಆಗಿ ಬದಲಾಗುತ್ತದೆ. ಹೀಗೆ ಆದ ಮಲಿನವು ಹ್ಯೂಮಸ್ ಆಗಿ ನೀರಿನ ತಳದಲ್ಲಿ ಶೇಖರಣೆಗೊಳ್ಳುತ್ತದೆ. ಇವುಗಳನ್ನು ಸಮುದ್ರದ ಒಳಗಿರುವ ಸೂಕ್ಷಜೀವಿಗಳು ಮತ್ತೆ ವಿಭಜಿಸಲಾರವು. ಇವುಗಳನ್ನು ಹೊರತಂದರೆ ಮಾತ್ರ ನೆಲದ ಮೇಲಿನ ಸೂಕ್ಷ್ಮಜೀವಿಗಳು ವಿಭಜಿಸಬಲ್ಲವು. ನೀರಿನಲ್ಲೇ ಇರುವಷ್ಟು ದಿನ ಅದು ಮಲಿನತೆಯೆಂದೇ ಪರಿಗಣಿಬಹುದು. ಈ ಹ್ಯೂಮಸ್‌ನಲ್ಲಿರುವ ಇಂಗಾಲ ಮತ್ತು ಸಾರಜನಕದ ಪರಿಮಾಣ ೧೦:೧.

ನೈಸರ್ಗಿಕ ಶುದ್ಧೀಕರಣ ಕ್ರಿಯೆಯನ್ನು ಹೆಚ್ಚಿಸುವ ಕೆಲಸದಿಂದ ಮಾತ್ರ ಸುಸ್ಥಿರ ಕ್ರಮದಲ್ಲಿ ಮಲಿನತೆಯನ್ನು ನಿವಾರಿಸಬಹುದಾಗಿದೆ.

ಕಚ್ಚಾ ತೈಲ: ಭೂಮಿಯ ಒಳಗೆ ಜೈವಿಕ ವಸ್ತುಗಳ ಆವಾಯುವಿಕ ಕೊಳೆಯುವಿಕೆಯಿಂದ ತೈಲವು ಉತ್ಪತ್ತಿಯಾಗುತ್ತದೆ. ಇದು ಉತ್ಪತ್ತಿಯಾದ ಜಾಗದಲ್ಲಿ ಇರುವುದಿಲ್ಲ. ಅಲ್ಲಿಂದ ಹರಿದು ಶಿಲಾ ಸಂಧಿಗಳಲ್ಲಿರುವ ಜಾಗಗಳಲ್ಲಿ ಸೇರಿಕೊಳ್ಳುತ್ತದೆ. ಸಂಸ್ಕರಣೆ ಮಾಡದ ಪೆಟ್ರೋಲಿಯಮ್ ತೈಲವನ್ನು ಕಚ್ಚಾ ತೈಲವೆನ್ನುತ್ತಾರೆ. ಇದು ನೈಸರ್ಗಿಕವಾಗಿ ದೊರಕುವ ಹೈಡ್ರೋಕಾರ್ಬನ್ ಮಿಶ್ರಣ. ಇದರಲ್ಲಿ ಗಂಧಕದ ಅಂಶ ಜಾಸ್ತಿ ಇರುತ್ತದೆ. ಇತರ ಅಶುದ್ಧ ವಸ್ತುಗಳೂ ಇವೆ. ಇವುಗಳನ್ನೆಲ್ಲಾ ಬೇರ್ಪಡಿಸಿ ಸಂಸ್ಕರಿಸಲಾಗುತ್ತದೆ. ಆಗ ನಮಗೆ ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ ಮುಂತಾದ ವಿವಿಧ ಸಾಂದ್ರತೆಯ ಪದಾರ್ಥಗಳು ದೊರೆಯುತ್ತವೆ.

ನಾಟಿಕಲ್ ಅಥವಾ ನಾವಿಕ ಮೈಲಿ: ಇದು ಅಕ್ಷಾಂಶದ ಜೊತೆ ವ್ಯತ್ಯಯವಾಗುವ ಮಾನಕ. ಸಮುದ್ರಯಾನದಲ್ಲಿ ದೂರವನ್ನು ಅಳೆಯಲು ಬಳಸುವ ಅಂತಾರಾಷ್ಟ್ರೀಯ ಅಳತೆ. ಒಂದು ನಾಟಿಕಲ್‌ಮೈಲಿ ಎಂದರೆ ೧೮೫೨ ಮೀಟರ್‌ಗಳು. ಅಂದರೆ ೧.೮೫೨ ಕಿಲೋಮೀಟರ್‌ಗಳು.

 ಚಿತ್ರ-ಲೇಖನ: ಪೂರ್ಣಪ್ರಜ್ಞ, ಬೇಳೂರು

 

 

 

 

 

 

 

 

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*