ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಹವಾಮಾನ ಬದಲಾವಣೆಯನ್ನು ನಿರ್ವಹಿಸಲು ಸಾಂಪ್ರದಾಯಿಕ ಜ್ಞಾನವು ಉತ್ತರವೇ?

ಇರುವೆಗಳು ಹಾಗೂ ಚಿಟ್ಟೆಗಳ ಚಲನವಲನವನ್ನು ಗಮನಿಸಿಕೊಂಡು, ಮಳೆ ಬರುವ ಸಮಯವನ್ನು ಊಹಿಸುತ್ತಾರೆ.   ಹವಾಮಾನ ಬದಲಾವಣೆಯನ್ನು ಉದ್ದೇಶಿಸುವಲ್ಲಿ, ಇಂತಹ ಸ್ಥಳೀಯ ಆಚರಣೆಗಳು ಮಹತ್ವ ಪಡೆಯುವುದೇ?

Is traditional wisdom a key to combating climate change - picture copyಅನಿರ್ದಿಷ್ಟ ಹಾಗೂ ಅನಿಯಮಿತವಾದ ಮಳೆ, ಗುಡುಗು-ಮಿಂಚುಗಳಿಂದ ಕೂಡಿದ ಭಾರಿ ಮಳೆ, ಹವಾಮಾನ ವೈಪರೀತ್ಯಗಳು ಹಾಗೂ ಬರಗಾಲಗಳು ಹವಾಮಾನ ಬದಲಾವಣೆಗಳಿಂದ ಉಂಟಾಗುವ ಗಂಭೀರ ಪರಿಣಾಮಗಳು. ಇದು ಎಲ್ಲರ ಮೇಲೆ ಪರಿಣಾಮ ಬೀರಿದರೂ, ನಿಸರ್ಗದ ನಡುವೆ ಜೀವಿಸುವ ಮೂಲ ನಿವಾಸಿಗಳು ಈ ವೈಪರೀತಿಯಗಳಿಂದ ಹೆಚ್ಚು ಪ್ರಭಾವಿತರಾಗುತ್ತಾರೆ. ಆದರೆ, ಹವಾಮಾನ ಬದಲಾವಣೆಗೆ ಹೊಂದಿಕೊಳ್ಳಲು ಅಗತ್ಯವಾದ ಕಾರ್ಯತಂತ್ರಗಳನ್ನು ಗುರುತಿಸಿ, ರೂಪಿಸುವಲ್ಲೂ ಅವರೇ ಮೊದಲಿಗರು.  ಮೂಲ ನಿವಾಸಿಗಳು ಈ ಜ್ಞಾನ, ಒಳಸುಳಿವು ಹಾಗೂ ತಿಳುವಳಿಕೆಯನ್ನು ಮೂಲ ಜನರ ತಾಂತ್ರಿಕ ತಿಳುವಳಿಕೆ (ಐಟಿಕೆ) ಎಂದು ಕರೆಯಲಾಗುತ್ತದೆ.  ಹವಾಮಾನ ಬದಲಾವಣೆಯನ್ನು ನಿರ್ವಹಿಸುವುದನ್ನು ಕುರಿತಾದ ಔಪಚಾರಿಕ ಮೂಲಭೂತ ಸಂಶೋಧನೆಯೊಂದಿಗೆ ಸಂಯೋಜಿಸಲು ಈ ಜ್ಞಾನ ಹಾಗೂ ಈಗಾಗಲೇ ಲಭ್ಯವಿರುವ ತಿಳುವಳಿಕೆಯನ್ನು ಗುರುತಿಸಬಹುದೇ?

ಇಂಡಿಯನ್ ಜರ್ನಲ್ ಆಫ಼್ ಟ್ರೆಡಿಷನಲ್ ನಾಲೆಜ್ – ಐಟಿಕೆ (Indian Journal of Traditional Knowledge)’ ಪ್ರಕಟಿಸಿದ ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವಂತಹ ಸ್ಥಳೀಯ ತಿಳುವಳಿಕೆಂi’ ಸಾಮರ್ಥ್ಯದ ಮಾಪನ ಮಾಡುವುದನ್ನು ಕುರಿತಾದ ‘ಹಿಮಾಲಯ ಹಾಗೂ ಒಣ ಪರಿಸರ ವ್ಯವಸ್ಥೆಗಳಲ್ಲಿ ಹವಾಮಾನ ಬದಲಾವಣೆಗೆ ಒಗ್ಗಿಕೊಳ್ಳುವ ಸಲುವಾಗಿ ಸ್ಥಳೀಯ ತಾಂತ್ರಿಕ ತಿಳುವಳಿಕೆಯ ಸಾಮರ್ಥ್ಯದ ಮಾಪನ  ಎಂಬ ಪ್ರಬಂಧದಲ್ಲಿ (Assessing the Potential of Indigenous Technological Knowledge (ITK) for Adaptation to Climate Change in the Himalayan and Arid ecosystems) ಈ ವಿಷಯವನ್ನು ಕುರಿತಾಗಿ ಚರ್ಚಿಸಲಾಗಿದೆ.  ಹಿಮಾಲಯ ಪ್ರದೇಶ ಹಾಗೂ ಒಣ ಪರಿಸರ ಪ್ರದೇಶವನ್ನು ಪ್ರತಿನಿಧಿಸುವ ತಲಾ ೧೦೦ ರೈತರ ಮಾದರಿಯನ್ನು ಒಳಗೊಂಡ ಅಧ್ಯಯನವನ್ನು ಕೈಗೊಳ್ಳಲಾಯಿತು.  ಪ್ರಾಥಮಿಕ ಹಾಗೂ ದ್ವಿತೀಯ ಮೂಲಗಳನ್ನೊಳಗೊಂಡ ಮಾಹಿತಿಯನ್ನು ಐಟಿಕೆಗಳ ದಾಖಲಾತಿಯಲ್ಲಿ ಬಳಸಲಾಗಿದೆ.

ಅಧ್ಯಯನದಲ್ಲಿ ಈ ಪ್ರಮುಖ ಐಟಿಕೆ ವಿಚಾರಗಳು ಬೆಳಕಿಗೆ ಬಂದವು:

ಹಿಮಾಚಲ ಪ್ರದೇಶದ ರೈತರು:

 •  ಹುಳ-ಹುಪ್ಪಟೆಗಳು ಹಾಗೂ ಪ್ರಾಣಿಗಳ ಚಲನವಲದ ಮೂಲಕ ಮಳೆಯ ಮುನ್ಸೊಚನೆ. ಉದಾಹರಣೆಗೆ, ಉತ್ತರದ ಬೆಟ್ಟಗಳಿಗೆ ಜೇನುಹುಳಗಳು ಹಾರಿದರೆ ಮಳೆ ಬರುವುದಿಲ್ಲ;  ಹಾರದಿದ್ದರೆ ಮಳೆ ಬರುತ್ತದೆ
 • ಪೋಷಕಾಂಶಗಳನ್ನು ಒದಗಿಸಿ, ಕೀಟಬಾಧೆಯನ್ನು ನಿಯಂತ್ರಿಸಲು ರೋಗ ನಿರ್ವಹಣೆಯನ್ನು ಕಟ್ಟಿಗೆಯ ಬೂದಿಯನ್ನು ಹಾಕಲಾಗುತ್ತದೆ
 • ಭತ್ತದ ಹೊಲಗಳಲ್ಲಿ ಕೀಟಗಳನ್ನು ನಿಯಂತ್ರಿಸಲು ನೀರಾವರಿಯ ನೀರಿನೊಂದಿಗೆ ಸ್ಥಳೀಯವಾಗಿ ಬೆಳೆದ ಗಿಡ’ರಾಮಬಾಣ್’ಅನ್ನು ಅರಿದು ಬೆರೆಸಲಾಗುತ್ತದೆ
 • ಸುದೀರ್ಘವಾದ ಒಣ ಹವಾಮಾನದಲ್ಲಿ ರೈತರ ಸಂಕಷ್ಟವನ್ನು ಕಡಿಮೆ ಮಾಡಲು ‘ಛಲ್’ ಎಂಬ ಸ್ಥಳೀಯ ಸಣ್ಣ ನೀರು ಶೇಖರಣಾ ರಚನೆಯನ್ನು ಮಳೆನೀರು ಕೊಯ್ಲಿಗಾಗಿ ಬಳಸಲಾಗುತ್ತದೆ
 • ತೀವ್ರ ಚಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು, ಸ್ಥಳೀಯವಾಗಿ ತಯಾರು ಮಾಡುವ ಕಿಣ್ವನಿಸಿದ ಗೋಧಿಯ ಉತ್ಪನ್ನವಾದ ‘ಸಿದ್ದು’ ಅಥವಾ “ಖೋಬ್ಲಿ’ ಎಂಬ ಖಾದ್ಯವನ್ನು ಸೇವಿಸುತ್ತಾರೆ
 • ಸ್ಥಳೀಯವಾಗಿ ದೊರೆಯುವ ಅಗ್ಗ ಬೆಲೆಯ ಪಾಲಿಥೀನ್‌ನಿಂದ ತ್ರಿಕೋನಾಕಾದ ಮೇವಿನ ಕಣಜವನ್ನು ಮುಚ್ಚುತ್ತಾರೆ.

 ರಾಜಸ್ಥಾನದ ರೈತರು:

 • ಚಿಟ್ಟೆಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರೆ, ಅಲ್ಲದೆ ಇರುವೆಗಳು ಅಥವಾ ಗೆದ್ದಲುಗಳು ಕಾಣಿಸಿಕೊಂಡಲ್ಲಿ, ಅದು ಉತ್ತಮ ಮಳೆಗಾಲದ ಮುನ್ಸೂಚಕವೆಂಬ ನಂಬಿಕೆ
 • ‘ಖೈರ್’ ಎಂಬ ಸ್ಥಳೀಯ ಮರವು ಹೆಚ್ಚು ಸೊಂಪಾಗಿ ಬೆಳೆದರೆ, ಅದು ಒಣ ಋತುವಿನ ಆಗಮನದ ಸಂಕೇತ
 • ಚಂದ್ರನ ಬಣ್ಣದಿಂದ ಮಳೆ ಬರುವುದರ ಮುನ್ಸೂಚನೆ; ನಸುಕಂದು ಬಣ್ಣದ ಚಂದ್ರನೆಂದರೆ ಉತ್ತಮ ಮಳೆ; ಕೆಂಪು ಅಥವಾ ಬಿಳಿ ಚಂದ್ರನಿದ್ದರೆ, ಮಳೆ ಬಾರದೆ ಇರುವುದರ ಸೂಚನೆ
 • ಪ್ರತಿ ಐದು ವರ್ಷಗಳಿಗೊಮ್ಮೆ ಉತ್ತಮ ಮಳೆಯಾಗುವುದೆಂಬ ನಂಬಿಕೆ
 • ಅಧಿಕ ವೇಗದ ಗಾಳಿಯನ್ನು ತಡೆಯಲು, ಸ್ಥಳೀಯವಾಗಿ ಲಭ್ಯವಿರುವ ಗಿಡ-ಗಂಟೆಗಳನ್ನು ಬಳಸಿ/ಬೆಳೆಸಿ, ಗಾಳಿಯ ವೇಗವನ್ನು ತಡೆಗಟ್ಟುವ ‘ಕಾನಾಬಂದಿ’ ಎಂಬ ಸಾಧನದ ನಿರ್ಮಾಣ
 • ಮಣ್ಣಿನ ಗುಣಮಟ್ಟ ಹಾಗೂ ಉತ್ಪಾದಕತೆಯನ್ನು ಸುಧಾರಣೆ ಮಾಡಲು, ಉಳುಮೆ ಮಾಡುವ ಮುನ್ನ ಹೊಲದ ಮೇಲೆ, ಚಿಕ್ಕಚಿಕ್ಕ ಚೂರುಗಳಾಗಿ ಕತ್ತರಿಸಿದ ಸ್ಥಳೀಯ ಪೊದೆಗಳು ಹಾಗೂ ಹುಲ್ಲುಗಳನ್ನು ಹರಡುವ ‘ಝೂರ್’ ಎಂಬ ಸಾಂಪ್ರದಾಯಿಕ ಮಣ್ಣು ನಿರ್ವಹಣಾ ವ್ಯವಸ್ಥೆಯ ಅನುಸರಣೆ
 • ಪ್ರಖರವಾದ ಸೂರ್ಯ, ಗಾಳಿ, ತೀಕ್ಷಣವಾದ ಚಳಿಗಾಲ, ಹಾಗೂ ಮುಕ್ತವಾಗಿ ಅಲೆದಾಡುವ ಪ್ರಾಣಿಗಳು ಮೇಯುವುದನ್ನು ರಕ್ಷಿಸುವ ಸಲುವಾಗಿ ಸ್ಥಳೀಯ ಕುರುಚಲು ಗಿಡಗಳಿಂದ ಮರಗಳ ಸಸಿಗಳನ್ನು ಬೆಳೆಸುವ ಸಾಂಪ್ರದಾಯಿಕ ಪದ್ಧತಿಯಾದ ‘ಝೋಪಾ’ವನ್ನು ಕೈಗೊಳ್ಳುವುದು
 • ಮಣ್ಣು ಫಲವತ್ತಾಗಿ ಇರುವುದರಿಂದ, ನೀರಾವರಿ ಇಲ್ಲದೆ ಬೆಳೆಗಳನ್ನು ಬೆಳೆಯುವ ಸಲುವಾಗಿ ನೀರಿನ ಕೊಯ್ಲು ಮಾಡಲು ‘ಖಾದಿನ್/ಖುದಿ’ ಅಥವಾ ಓಯೆಸಿಸ್ ಕೃಷಿ ವ್ಯವಸ್ಥೆಯನ್ನು ಬಳಸುವುದು
 • ಹವಾಮಾನ ಬದಲಾವಣೆಗಳಿಂದ ಮೇವು ಕೆಡದಂತೆ ನೋಡಿಕೊಳ್ಳಲು, ‘ಜುಪ್ಕ’ ಎಂಬ ಮೇವಿನ ಶೇಖರಣಾ ರಚನೆಯ ನಿರ್ಮಾಣ
 • ಒಳಗೆ ತಾಪಮಾನ ಕಡಿಮೆ ಇರುವ ಹಾಗೂ ಗೆದ್ದಲು ಮತ್ತೆ ಹುಳ-ಹುಪ್ಪಟ್ಟೆಗಳ ದಾಳಿಯನ್ನು ತಪ್ಪಿಸಲು, ಸಿಮೆಂಟ್ ತಳವಿರುವ ಹಾಗೂ ಸೆಗಣಿ, ಮಣ್ಣು ಹಾಗೂ ಸ್ಥಳೀಯವಾಗಿ ಬೆಳೆಯುವ ಹುಲ್ಲಿನಿಂದ ನಿರ್ಮಾಣ ಮಾಡಲಾಗುವ ‘ಕೋಠಿ/ಟುಕೆ’ ಎಂಬ ಧಾನ್ಯಗಳ ಕಣಜ
 • ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿ, ಗೆದ್ದಲು ಬೆಳೆಯುವುದನ್ನು ಕಡಿಮೆ ಮಾಡಲು, ಕೃಷಿ ಗೊಬ್ಬರವನ್ನು ಬಳಸಬೇಕು
 • ಮೇಲ್ಮೈ ಹರಿವಿನ ನೀರನ್ನು ಶೇಖರಿಸುವ ‘ಟಂಕ’ ಎಂಬ ನೀರಿನ ಕೊಯ್ಲಿನ ನಿರ್ಮಾಣ
 • ಆಹಾರ ಕ್ರಮದಲ್ಲಿ ಸ್ಥಳೀಯ ಗಿಡಗಳನ್ನು ಬಳಸುವ ಮೂಲಕ ಹವಾಮಾನ ಬದಲಾವಣೆಯಿಂದ ಉಂಟಾಗುವ ಆರೋಗ್ಯ ಸಂಬಂಧಿತ ಅಪಾಯಗಳ ವಿರುದ್ಧ ಕ್ರಮ ಕೈಗೊಳ್ಳಬೇಕು
 • ಅಧಿಕ ತಾಪಮಾನಗಳಿಂದ ಪ್ರಾಣಿಗಳನ್ನು ರಕ್ಷಿಸಲು, ಸ್ಥಳೀಯ ಹುಲ್ಲಿನಿಂದ ಮಾಡಿದ ‘ಓಲಾ/ಚಪ್ಪರ್’ ಎಂಬ ಹೊದಿಕೆ/ಆಶ್ರಯವನ್ನು ಮಾಡಿ
 • ಭೇದಿ ಹಾಗೂ ಸಂಂಧಿವಾತದಂತಹ ರೋಗಗಳಿಗಾಗಿ ಪ್ರಾಣಿಗಳಿಗೆ ಸ್ಥಳೀಯ ಮದ್ದನ್ನು ಬಳಸುವುದು.

ಐಟಿಕೆಗಳ ದೃಢೀಕರಣ

ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಗಳ ಅಡಿಯಲ್ಲಿ ಅವುಗಳ ಬಳಕೆ ಹಾಗೂ ಸೂಕ್ತತೆಯ ಪ್ರಮಾಣಕ್ಕೆ ಅನುಗುಣವಾಗಿ ಈ ಪ್ರತಿಯೊಂದು ಐಟಿಕೆಗಳನ್ನೂ ಶ್ರೇಣೀಕರಿಸಲಾಗಿದೆ.  ಹವಾಮಾನ ಬದಲಾವಣೆಗಳಿಂದ ಉಂಟಾಗುವ ಒತ್ತಡಗಳ ನಿರ್ವಹಣೆಯನ್ನು ಮಾಡಲು ಸ್ಥಳೀಯ ಸಮುದಾಯಗಳಿಗೆ ಈ ಐಟಿಕೆಗಳು ಅತ್ಯಂತ ಸೂಕ್ತವೆಂದು ಅಧ್ಯಯನದಿಂದ ತಿಳಿದು ಬಂದಿತು.

ವಿನೂತನ ಪ್ರಯೋಗಗಳು, ಪ್ರಯೋಗಾಲಯದಿಂದ ಭೂಮಿಗೆ ವರ್ಗಾವಣೆಯಾಗಬೇಕೆಂಬ ಪ್ರತೀತಿಯನ್ನು ಅಧ್ಯಯನವು ಅಲ್ಲಗಳೆದಿದೆ. ಕೃಷಿ ಪ್ರಾರಂಭವಾಗುವ ಮುನ್ನ ಸಮುದಾಯಗಳು ವ್ಯಾಪಕವಾಗಿ ಆಚರಿಸುತ್ತಿದ ಸ್ಥಳೀಯ ಜ್ಞಾನವು, ಹವಮಾನ ಬದಲಾವಣೆಯ ಅಳವಡಿಕೆಗೆ ಅತ್ಯಂತ ಸೂಕ್ತವಾಗಿದೆ.  ಈ ತಂತ್ರಜ್ಞಾನಗಳು ಸಮುದಾಯ ಹಾಗೂ ಹೊರಗೂ ಅಸಮಾನವಾಗಿ ಹಂಚಲಾಗಿದ್ದು, ಸರ್ಕಾರದ ಮಧ್ಯಸ್ಥಿಕೆಯ ಅಗತ್ಯವೆಂದು ಪ್ರಬಂಧದಲ್ಲಿ ನಿರ್ಣಯಕ್ಕೆ ಬರಲಾಗಿದೆ.  ಈ ತಿಳುವಳಿಕೆಯನ್ನು ಪ್ರದೇಶದಲ್ಲಿ ಪ್ರಸರಣ ಮಾಡುವುದರೊಂದಿಗೆ, ಅದರ ದೃಢೀಕರಣಕ್ಕೆ ಸೂಕ್ತ ಕಾರ್ಯನೀತಿಯನ್ನು ಅಳವಡಿಸಿ, ಕೃಷಿ ಸಮುದಾಯಗಳು ನಂತರ ಅದನ್ನು ಅಳವಡಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು.

ಲೇಖಕರು:ಸುಜಿತ್ ಸರ್ಕಾರ್, ಆರ್.ಎನ್.ಪಡಾರಿಯ, ಕೆ.ವಿಜಯರಾಘವನ್, ಹಿಮಾಂಶು ಪಾಠಕ್, ಪ್ರಮೋದ್ ಕುಮಾರ್ ಹಾಗೂ ಜಿ.ಕೆ.ಝಾ

ಕನ್ನಡ ಅನುವಾದ: ಕನ್ನಡ ಇಂಡಿಯಾ ವಾಟರ್ ಪೋರ್ಟಲ್ ತಂಡ

 (ಮೂಲ ಆಂಗ್ಲ ಲೇಖನ ಓದಲು ಇಲ್ಲಿ ಕ್ಲಿಕ್ಕಿಸಿ: http://www.indiawaterportal.org/articles/traditional-wisdom-key-combating-climate-change)
Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*