ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆ ನೋಟ- ನೋಟ ೪೦: ಕೆರೆಗಳ ಪರಿಸ್ಥಿತಿಯ ಕನ್ನಡಿ ನೋಟ-೪

ಕೆರೆಗಳ ಗಡಿಯನ್ನು ಗುರುತಿಸದೆ ಕೆರೆಯನ್ನು ಎಷ್ಟು ಅಭಿವೃದ್ದಿ ಮಾಡಿದರೆ ಏನು? ನೀರು ಇರುವವರೆಗೂ ಮಾತ್ರ ಕೆರೆ ಎಂದಷ್ಟೇ ಭಾವನೆ. ಇನ್ನು ನೀರಿಲ್ಲದೆ ಒಣಗಿದ ಪ್ರದೇಶವನ್ನೂ ಮುಚ್ಚಲು ಇದೊಂದೇ ಸಾಕಲ್ಲವೇ? ಇಂತಹ ಪರಿಸ್ಥಿತಿ ನಗರದ ಅಭಿವೃದ್ಧಿ ಕೆರೆಗಳಲ್ಲಿದೆ.

ನಾಗಾವರ ಕೆರೆಯನ್ನು ಗುತ್ತಿಗೆ ನೀಡಿದ್ದರೂ ಅದನ್ನು ನಿರ್ವಹಣೆ ಮಾಡುವಲ್ಲಿ ಅದನ್ನು ವಹಿಸಿಕೊಂಡಿರುವ ಪ್ರಾಧಿಕಾರ ಹಾಗೂ ಗುತ್ತಿಗೆ ಪಡೆದವರಿಬ್ಬರೂ ವಿಫಲವಾಗಿದ್ದಾರೆ. ಇನ್ನು, ಚೊಕ್ಕನಹಳ್ಳಿ ಕೆರೆಯಲ್ಲಿ ಏರಿಯಲ್ಲೇ ಮನೆಗಳನ್ನು ನಿರ್ಮಿಸಲಾಗಿದೆ ಎಂದು ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರ ವ್ಯಾಪ್ತಿಯ ಕೆರೆಗಳ ಸಂರಕ್ಷಣೆ ಮತ್ತು ಪರಿಸರ ಪುನಶ್ಚೇತನದ ಮೇಲಿನ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆ ೨೦೧೫ನೇ (ಸಿಎಜಿ) ವರ್ಷದ ವರದಿಯಲ್ಲಿ ಪರೀಕ್ಷಾ-ತನಿಖೆ ನಡೆಸಿದ ಕೆರೆಗಳ ನಿರ್ದಿಷ್ಟ ಫಲಿತಾಂಶಗಳಲ್ಲಿ ನೀಡಲಾಗಿದೆ.

ನಾಗಾವರ ಕೆರೆ

Nagavara-Kere40ನಾಗಾವರ ಕೆರೆಯು ಬೆಂಗಳೂರು (ಪೂರ್ವ) ತಾಲ್ಲೂಕಿನಲ್ಲಿದೆ ಮತ್ತು ಹೊರ ವರ್ತುಲ ರಸ್ತೆಯನ್ನು ಕೆರೆಯ ಒಂದು ಭಾಗದಲ್ಲಿ ನಿರ್ಮಿಸಲಾಗಿದೆ. ಕೆರೆಯನ್ನು ೨೦೦೨-೦೩ರಲ್ಲಿ ಎನ್‌ಎಲ್‌ಸಿಪಿ ಅನುದಾನಗಳನ್ನು ಬಳಸಿಕೊಂಡು ಕೆರೆ ಅಭಿವೃದ್ಧಿ ಪ್ರಾಧಿಕಾರವು ಅಭಿವೃದ್ಧಿಪಡಿಸಿತ್ತು. ಕೆರೆಯನ್ನು ಗುತ್ತಿಗೆಯ ಆಧಾರದ ಮೇಲೆ ಮೆ.ಲುಂಬಿನಿ ಗಾರ್ಡನ್ಸ್ ಅವರಿಗೆ ೨೦೦೪ರಲ್ಲಿ ನೀಡಲಾಗಿತ್ತು.

  • ಕೆರೆಯ ಗಡಿಯನ್ನು ಗುರುತಿಸಿರಲಿಲ್ಲ ಮತ್ತು ಆಗ್ನೇಯ ಮೂಲೆಯಲ್ಲಿ ಕೆರೆ ಪ್ರದೇಶದ ಒಂದು ಭಾಗವನ್ನು ಮುಂದೆ ಬರುವ ವಿಶೇಷ ಆರ್ಥಿಕ ವಲಯಕ್ಕೆ ಸಂಪರ್ಕ ಕಲ್ಪಿಸಲು ಮಾರ್ಗಾಂತರಣ ಮಾಡಲಾಗಿದೆ. ಕೆರೆ ಪ್ರದೇಶದಲ್ಲಿ ರಸ್ತೆಯ ನಿರ್ಮಾಣವನ್ನು ನಿಲ್ಲಿಸಲು ಬಿಬಿಎಂಪಿ ಮತ್ತು ಬಿಡಿಎಗಳಿಗೆ ತಿಳಿಸಲಾಗಿದೆ ಎಂದು ಕೆರೆ ಅಭಿವೃದ್ಧಿ ಪ್ರಾಧಿಕಾರವು ತಿಳಿಸಿತು (ಏಪ್ರಿಲ್ ೨೦೧೫). ಮುಂದುವರೆದು, ಬಿಬಿಎಂಪಿಯು ಕೊಳಚೆ ನೀರಿನ ಪೈಪ್‌ಲೈನನ್ನು ಹಾಕುತ್ತಿದ್ದು, ಅದನ್ನು ನಾಗಾವರ ಕೆರೆಯ ಮಳೆ ನೀರಿನ ಚರಂಡಿಗೆ ಸೇರಿಸುತ್ತಿದ್ದರಿಂದ ಪೊಲೀಸ್ ದೂರನ್ನು ದಾಖಲಿಸಲಾಗಿದೆ ಎಂದೂ ತಿಳಿಸಲಾಯಿತು.
  • ಗುತ್ತಿಗೆದಾರರು ರೆಸ್ಟೋರೆಂಟ್‌ಗಳನ್ನು, ಪಾರ್ಟಿ ಹಾಲ್‌ಗಳನ್ನು, ಅಮ್ಯೂಸ್‌ಮೆಂಟ್ ಹಾಗೂ ವಾಟರ್ ಪಾರ್ಕ್‌ಗಳನ್ನು, ಮೋಟಾರ್ ಬೋಟ್‌ಗಳನ್ನು ನಡೆಸುತ್ತಿದ್ದರಿಂದ, ಕೆರೆ ಪ್ರದೇಶವು ಮಲಿನಗೊಂಡಿತ್ತು. ಕೊಳಚೆ ನೀರಿನ ಪ್ರವೇಶದಿಂದ ಜೌಗುಭೂಮಿಯು ಸಂಪೂರ್ಣವಾಗಿ ನೀರಿನ ಗಂಟೆ ಹೂವಿನಿಂದ ಮತ್ತು ತೇಲುತ್ತಿರುವ ಕಟ್ಟಡ ಅವಶೇಷಗಳಿಂದ ತುಂಬಿತ್ತು. ಮಾಲಿನ್ಯದ ಮಟ್ಟವನ್ನು ಯಾವುದೇ ಸಂಸ್ಥೆಗಳು ನಿರ್ಧರಣೆ ಮಾಡಿರಲಿಲ್ಲ.  ಕೆರೆಯ ಪರಿಸರೀಯ ಆರೋಗ್ಯವನ್ನು ಸುಧಾರಿಸಲು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕೆರೆ ಅಭಿವೃದ್ಧಿ ಪ್ರಾಧಿಕಾರವು ತಿಳಿಸಿತು (ಏಪ್ರಿಲ್ ೨೦೧೫).

ಮಳೆನೀರಿನ ಚರಂಡಿಯಿಂದ ತೇಲುತ್ತಿರುವ ಕಟ್ಟಡ ಅವಶೇಷಗಳಿರುವ ಕೊಳಚೆ ನೀರು ಕೆರೆಯನ್ನು ಪ್ರವೇಶಿಸುವುದು, ಬಫರ್ ವಲಯದಲ್ಲಿ ವಿಶೇಷ ಆರ್ಥಿಕ ವಲಯವನ್ನು ರಚಿಸಿರುವುದು,  ಜೌಗುಭೂಮಿ ನೀರಿನ ಗಂಟೆ ಹೂ ಮತ್ತು ಕಳೆಯಿಂದ ಕೂಡಿರುವುದು ನಾಗಾವಾರ ಕೆರೆಯ ಹೈಲೈಟ್ಸ್.

ಚೊಕ್ಕನಹಳ್ಳಿ ಕೆರೆ

ಚೊಕ್ಕನಹಳ್ಳಿ ಕೆರೆಯು ಯಲ್ಲಮಲ್ಲಪ್ಪ ಚೆಟ್ಟಿ ಕೆರೆ ಸರಣಿಯ ಒಂದು ಭಾಗವಾಗಿದೆ.  ಪ್ರಸ್ತುತವಾಗಿ ಕೆರೆಯು ಬಿಬಿಎಂಪಿಯ ಅಭಿರಕ್ಷಣೆಯಲ್ಲಿದೆ.

Chokkanahalli-Kere40

  • ಮುಖ್ಯ ಏರಿಗೆ ಅಡ್ಡಲಾಗಿರುವ ಅಚ್ಚುಕಟ್ಟು ಪ್ರದೇಶವನ್ನು, ವಸತಿ ನಿವೇಶನಗಳನ್ನು ರಚಿಸುವುದಕ್ಕೆ ಗುರುತಿಸಲಾಗಿದೆ.
  • ಕೆರೆಯ ಏರಿಯನ್ನು ಹತ್ತಿರದ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲು ರಸ್ತೆಯನ್ನಾಗಿ ಉಪಯೋಗಿಸಲಾಗುತ್ತಿತ್ತು.
  • ಜಂಟಿ ಭೌತಿಕ ಪರಿಶೀಲನೆಯಲ್ಲಿ ಕೆರೆ ಪ್ರದೇಶದ ಒಳಗೆ ಒಂದು ಸ್ಮಶಾನವನ್ನು ಗಮನಿಸಲಾಯಿತು. ಸ್ಥಳೀಯ ಜನರು ಕೆರೆಯಲ್ಲಿ ಮೀನುಗಾರಿಕೆ ಮಾಡುತ್ತಿದ್ದರು.
  • ನಿರ್ಮಿಸಿದ ಒಳಹರಿವು ದೋಷಪೂರಿತವಾಗಿತ್ತು, ಏಕೆಂದರೆ ಒಳಹರಿವಿನ ಪ್ರವೇಶವು ಅಸ್ತಿತ್ವದಲ್ಲಿದ್ದ ಕೋಡಿಗಿಂತ ಕೆಳಮಟ್ಟದಲ್ಲಿತ್ತು. ಹೂಳು ಬಲೆ, ತಡೆಗೋಡೆ ಮುಂತಾದವುಗಳನ್ನು ಒದಗಿಸಿದ್ದ ಒಳಹರಿವು ಮುಚ್ಚಿಹೋಗಿತ್ತು ಮತ್ತು ಹೆಚ್ಚುವರಿ ನೀರು ಕೆರೆಗೆ ಹರಿಯುತ್ತಿರಲಿಲ್ಲ.

ಮಾಲಿನ್ಯದ ಮಟ್ಟವನ್ನು ಯಾವುದೇ ಸಂಸ್ಥೆಗಳು ನಿರ್ಧರಣೆ ಮಾಡಿರಲಿಲ್ಲ.

ಕೆರೆಯಲ್ಲಿ ಮೀನು ಹಿಡಿಯುತ್ತಿರುವುದು, ಕೆರೆ ಪ್ರದೇಶದ ಒಳಗೆ ಸ್ಮಶಾನ, ಕೆರೆಯ ಒಳಹರಿವಿನ ಪ್ರವೇಶದ್ವಾರವು ಕೋಡಿಗಿಂತ ಕೆಳಮಟ್ಟದಲ್ಲಿರುವುದು ಚೊಕ್ಕನಹಳ್ಳಿ ಕೆರೆಯ ಒಳನೋಟ.

 ಚಿತ್ರ-ಲೇಖನ: ಕೆರೆ ಮಂಜುನಾಥ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*