ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಮಲಿನವಾದ ಜಲಮೂಲ; ಮರೆಯಾದ ಪಕ್ಷಿ ಸಂಕುಲ

ಬೆಳಗಾವಿ ಜಲ್ಲೆಯ ಗೋಕಾಕ ತಾಲೂಕಿನ ಘಟಪ್ರಭಾ ಪಕ್ಷಿಧಾಮ ಪಕ್ಷಿಗಳಿಲ್ಲದೇ ಬಣಗುಡುತ್ತಿದೆ. ಪ್ರತಿ ವರ್ಷ ಚಳಿಗಾಲದಲ್ಲಿ ದೇಶ ವಿದೇಶಗಳಿಂದ ಹಲವು ಜಾತಿಯ ಪಕ್ಷಿಗಳು ಇಲ್ಲಿಗೆ ವಲಸೆ ಬರುತ್ತಿದ್ದವು. ಈ ರೀತಿ ಬರುವ ವಿವಿಧ ಪಕ್ಷಿಗಳಿಂದ, ಅವುಗಳ ಚಿಲಿಪಿಲಿ ಸದ್ದಿನಿಂದ, ಅವುಗಳ ಸಂತಾನಾಭಿವೃದ್ಧಿಯ ಸೊಬಗಿನಿಂದ ಕಂಗೊಳಿಸಿ ನಿಸರ್ಗಪ್ರಿಯರ ಗಮನಸೆಳೆದಿದ್ದ ಈ ತಾಣಕ್ಕೆ ಈ ಸ್ಥಿತಿ ಬಂದಿದ್ದಾದರೂ ಹೇಗೆ?DUPADHAL_BIRD_SANCTUARY_(9)

ಅದಕ್ಕೆ ಕಾರಣ ಪಕ್ಷಿಧಾಮದ ನೀರಿನಲ್ಲಿ ಆವರಿಸಿರುವ ಅಂತರಗಂಗೆ (Haishinthet vidd) ಎಂಬ ಜಲಸಸ್ಯ. ಇದೊಂದು ರೀತಿಯ ಪಾಚಿ. ಇದು ಇಡೀ ಜಲಮೂಲದಲ್ಲಿ ಬೆಳದಿದ್ದು ವಲಸೆ ಬರುವ ಪಕ್ಷಿಗಳಿಗೆ ಸರಿಯಾದ ಆಹಾರ ದೊರಕದೆ ಪರದಾಡುವಂತಾಗಿದೆ. ವರ್ಷದಿಂದ ವರ್ಷಕ್ಕೆ ವಲಸೆ ಬರುವ ಪಕ್ಷಿಗಳ ಸಂಖ್ಯೆ ಕಡಿಮೆಯಾಗುತ್ತಾ ಹೋಗಿ ಇತ್ತೀಚಿನ ವರ್ಷಗಳಲ್ಲಿ ತೀರಾ ಕಡಿಮೆಯಾಗಿದೆ.  ಕೃಷಿ ಭೂಮಿಗೆ ನೀರಾವರಿ ಕಲ್ಪಿಸುವ ನಿಟ್ಟಿನಲ್ಲಿ ೧೮೮೪ರಲ್ಲಿ ಘಟಪ್ರಭಾ ನದಿಗೆ ಧುಪದಾಳ ಬಳಿ ನಿರ್ಮಿಸಿರುವ ಧುಪದಾಳ ಜಲಾಶಯದ ಹಿನ್ನೀರಿನಲ್ಲಿ ಸುಮಾರು ೨೯.೮೭೫ ಚದರ ಕಿ.ಮೀ, ವ್ಯಾಪ್ತಿಯಲ್ಲಿ ೨೨ ನಡುಗಡ್ಡೆಗಳು ಉಂಟಾಗಿ ಅವು ಕ್ರಮೇಣ ಪಕ್ಷಿಧಾಮವಾಗಿ ಅರಳಿ ನಿಂತಿದ್ದವು. ಅದರಲ್ಲಿ ಧುಪದಾಳ ಜಲಾಶಯ ಬಳಿ ಅತಿ ದೊಡ್ಡ ನಡುಗಡ್ಡೆಯಾಗಿದ್ದು ಪಕ್ಷಿಗಳ ಏಕಾಂತಕ್ಕೆ  ಸ್ವಚ್ಛ ಸುಂದರ ಸ್ಥಳವಾಗಿತ್ತು. ೧೯೭೪ರಲ್ಲಿ ಕೇಂದ್ರ ಸರಕಾರವು ಈ ಪಕ್ಷಿಧಾಮವನ್ನು “ರಾಷ್ಟ್ರೀಯ ಪಕ್ಷಿಧಾಮ” ಎಂದು ಘೋಷಿಸಿದೆ. ಈ ಹಿಂದೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ವನ್ಯಜೀವಿ ಉಪವಿಭಾಗಕ್ಕೆ ಒಳಪಟ್ಟಿದ್ದ ಪಕ್ಷಿಧಾಮ ೨೦೦೯ರಲ್ಲಿ ಗೋಕಾಕ ವಲಯದ ಅರಣ್ಯ ವಿಭಾಗಕ್ಕೆ ಸೇರಿದೆ.

೨೨೫ ಪ್ರಬೇಧದ ಪಕ್ಷ್ಕಿಗಳು

ಈ ಪಕ್ಷಿಧಾಮಕ್ಕೆ ಈಗ್ಗೆ ಕೆಲ ವರ್ಷಗಳ ಹಿಂದೆ ಬರುತ್ತಿದ್ದ ಪಕ್ಷಿಗಳ ಸಂಖ್ಯೆ ಇನ್ನೂರಕ್ಕೂ ಹೆಚ್ಚು. ಅವುಗಳಲ್ಲಿ ಚಮಚ ಕೊಕ್ಕು ಬಾತು, ಬಣ್ಣದ ಕೊಕ್ಕರೆ, ಮತ್ಸ್ಯ ಬಕ್ಷಕ ಗಿಡುಗ, ಕೆನ್ನೇಲಿ ಬಕ್, ಮರಗಾಲ ಹಕ್ಕಿ, ನೀಲಕಂಠ, ನೀಲಬಾಲದ ಕಳ್ಳಿಪೀಠ, ನೀಲಿ ಮುಂಚುಳ್ಳಿ, ಬೆಳ್ಳಕ್ಕಿ ಮುಂತಾದ ಹತ್ತು-ಹಲವು ಅಪರೂಪದ, ಅಂದಚೆಂದದ, ಬಣ್ಣಬಣ್ಣದ ಪಕ್ಷಿಗಳು ಸೇರಿದ್ದವು. ಪ್ರತಿ ವರ್ಷ ಅಕ್ಟೋಬರ ತಿಂಗಳಿನಲ್ಲಿ ವಲಸೆ ಬರುವ ಪಕ್ಷಿಗಳು ಗೂಡು ಕಟ್ಟಿ ಸಂತಾನೋತ್ಪತ್ತಿ ಪೂರೈಸಿ ಫೆಬ್ರುವರಿ ತಿಂಗಳಲ್ಲಿ ಮರಳುತ್ತವೆ. ನೀರು ಸ್ವಚ್ಚವಾಗಿರುವವರೆಗೂ ಈ ದೃಶ್ಯ ನಿರಂತರವಾಗಿತ್ತು. ಈ ಅವಧಿಯಲ್ಲಿ ಆಸಕ್ತರು, ಪಕ್ಷಿ ಪ್ರಿಯರು, ಪಕ್ಷಿ ಸಂಶೋಧಕರು, ಶಾಲಾ ಕಾಲೇಜು ಮಕ್ಕಳು ದೇಶ ವಿದೇಶಗಳಿಂದ ಬರುತ್ತಿದ್ದರು.

ವರ್ಷದಿಂದ ವರ್ಷಕ್ಕೆ ವಲಸೆ ಬರುವ ಹಕ್ಕಿಗಳ ಸಂಖ್ಯೆ ಇಳಿಮುಖವಾಗುತ್ತ ಸಾಗಿದೆ. ಮೊದಲೇ ಹೇಳಿದಂತೆ ಇದಕ್ಕೆ ಕಾರಣ ಪಕ್ಷಿಧಾಮದ ತುಂಬ ಹಬ್ಬಿರುವ ವಿಷದ ಬಳ್ಳಿಯಾಟ, ಇದರಿಂದಾಗಿ ನೀರಿನಲ್ಲಿ ಜಲಚರಗಳ ಬೆಳವಣಿಗೆ ಕುಂಠಿತವಾಗಿದೆ. ಮೀನುಗಳ ಸಂಖ್ಯೆ ಇಳಿಮುಖವಾಗಿದೆ, ಅಲ್ಲದೆ ಚಾಪೆ ಹಾಸಿದಂತೆ ಜಲಸಸ್ಯ ಆವರಿಸಿರುವುದರಿಂದ ಪಕ್ಷಿಗಳಿಗೆ ಮೀನುಗಳನ್ನು ಹಿಡಿಯಲು ಸಾಧ್ಯವಾಗುತ್ತಿಲ್ಲ. ಒಟ್ಟಾರೆಯಾಗಿ ಇದರಿಂದ ಆಹಾರಕ್ಕಾಗಿ ಪಕ್ಷಿಗಳ ಪರದಾಟ, ಪ್ರವಾಸಿಗರಿಂದ ಪಕ್ಷಿಗಳ ಹುಡುಕಾಟ ನಡೆದಿದೆ.

ಸಿರಿಧಾನ್ಯಗಳ ಕೊರತೆ

ಮುಂಚೆ ಈ ಪಕ್ಷಿಧಾಮದ ಸುತ್ತ-ಮುತ್ತಲಿನ ಜಮೀನುಗಳಲ್ಲಿ ಸಿರಿಧಾನ್ಯಗಳಾದ ಜೋಳ, ನವಣೆ, ಸಾವೆ ಹೀಗೆ ಹತ್ತು ಹಲವು ವೈವಿಧ್ಯDUPADHAL_BIRD_SANCTUARY_(4)ಮಯ ಸಿರಿಧಾನ್ಯಗಳು ಬೆಳೆಯಲ್ಪಡುತ್ತಿದ್ದವು. ಇದರಿಂದ ಪಕ್ಷಿಗಳಿಗೆ ಹೇರಳವಾಗಿ ಆಹಾರ ದೊರೆಯುತ್ತಿತ್ತು. ಸಣ್ಣಕಾಳುಗಳ ಈ ಬೆಳೆ ಪಕ್ಷಿಗಳಿಗೆ ಬಹುಪ್ರಿಯವಾದ ಆಹಾರ. ಕಾಲ ಬದಲಾದಂತೆ ಇತ್ತೀಚಿನ ವರ್ಷಗಳಲ್ಲಿ ಈ ಪ್ರದೇಶದಲ್ಲಿ ವಾಣಿಜ್ಯ ಬೆಳೆಗಳಾದ ಕಬ್ಬು, ಗೋವಿನ ಜೋಳ ಇತ್ಯಾದಿಗಳೇ ಹೆಚ್ಚಿವೆ, ಇವನ್ನು ಪಕ್ಷಿಗಳು ತಿನ್ನಲು ಸಾಧ್ಯವಿಲ್ಲ. ಇದೂ ಸಹ ಈ ಪ್ರದೇಶದಲ್ಲಿ ಪಕ್ಷಿಗಳ ಸಂಖ್ಯೆ ಕಡಿಮೆಯಾಗಲು ಕಾರಣ.

‘ಈ ವರ್ಷ ಘಟಪ್ರಭಾ ಪಕ್ಷಿಧಾಮ ನೋಡಲು ಪ್ರವಾಸ ಕೈಗೊಂಡಾಗ ಹಕ್ಕಿಯಂತಾದ ನಮ್ಮ ಮನಸ್ಸುಗಳು ಅಲ್ಲಿ ಪ್ರವೇಶಿಸುತ್ತಿದಂತೆ ಹಕ್ಕಿಗಳೇ ಇಲ್ಲದೆ ನಿರಾಶೆಗೊಂಡವು. ಒಂದೇ ಒಂದು ಪಕ್ಷಿಯೂ ಕಾಣದೆ ಮರಳಿದೆವು, ಪಕ್ಷಿಧಾಮದಲ್ಲಿ ಅಳವಡಿಸಿದ ಮಾಹಿತಿ ಫಲಕದಲ್ಲಿ ನೀಡಲಾಗಿರುವ ಪಕ್ಷಿಗಳ ಮಾಹಿತಿಯಷ್ಟೇ ನೋಡಲು ಸಿಕ್ಕಿತು’ ಎನ್ನುತ್ತಾರೆ ಸ್ಥಳೀಯ ಛಾಯಾಚಿತ್ರಕಾರ ಮಲ್ಲಿಕಾರ್ಜುನ.

ಈ ಸಮಸ್ಯೆ ಕೇವಲ ಘಟಪ್ರಭ ಪಕ್ಷಿಧಾಮದ್ದಲ್ಲ, ಕೆರೆಗಳು ಹಾಗೂ ನದಿ ನಡುಗಡ್ಡೆಗಳು ಮಲಿನವಾದ ಕಾರಣ ಇಡೀ ದಕ್ಷಿಣ ಭಾರತದಲ್ಲಿಯೇ ವಲಸೆ ಪಕ್ಷಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ಇತ್ತೀಚಿಗಿನ ಪತ್ರಿಕಾ ವರದಿಗಳು ತಿಳಿಸುತ್ತಿವೆ. ಕೆರೆಗಳು ಒತ್ತುವರಿಯಾಗಿ, ನೀರಿನ ಕೊರತೆಯಾಗಿರುವುದೂ ಇದಕ್ಕೆ ಮತ್ತೊಂದು ಕಾರಣ.

 ಸಂತಾನೋತ್ಪತ್ತಿಗಾಗಿ ಆಗಮಿಸುವ ವಿದೇಶಿ ಮತ್ತು ಸ್ಥಳೀಯ ಪಕ್ಷಿಗಳು, ಸಾಮಾನ್ಯವಾಗಿ ಹಣ್ಣು-ಹಂDUPADHAL_BIRD_SANCTUARY_(6)ಪಲು, ಸಿರಿಧಾನ್ಯಗಳನ್ನು ತಿಂದುಆಶ್ರಯಿಸುತ್ತವೆ.ಆದರೆಘಟಪ್ರಭಾ ಪಕ್ಷಿಧಾಮದ ಸುತ್ತಲಿನ ಹೊಲ-ಗದ್ದೆಗಳಲ್ಲಿಇತ್ತೀಚಿನ ದಿನಗಳಲ್ಲಿಕಬ್ಬನ್ನು ಮಾತ್ರ ಬೆಳೆಯಲಾಗುತ್ತಿದೆ. ಆದರಿಂದ ಪಕ್ಷಿಗಳಿಗೆ ಸರಿಯಾಗಿಆಹಾರ ಸಿಗುತ್ತಿಲ್ಲ.

 “ಪಕ್ಷಿಧಾಮದತುಂಬಾ ಬೆಳೆದು ನಿಂತ ವಿಷದ ಬಳ್ಳಿ ತೆಗೆಯುವದು, ಪಕ್ಷಿಗಳ ಆಹಾರಕ್ಕಾಗಿ ವ್ಯವಸ್ಥೆ ಮಾಡುವುದು, ಪಕ್ಷಿಧಾಮದ ನಡುಗಡ್ಡೆಗಳಿಗೆ ಸುರಕ್ಷತಾಗೋಡೆ ನಿರ್ಮಾಣ  ಮಾಡುವುದೂಸೇರಿದಂತೆ ಪಕ್ಷಿಧಾಮದಅಭಿವೃದ್ಧಿಗೆ ೮.೧೩ ಕೋಟಿ ವೆಚ್ಚದಯೋಜನೆಯನ್ನು ರೂಪಿಸಿ ಅರಣ್ಯಇಲಾಖೆಯ ಮುಖ್ಯ ನಿರ್ದೇಶಕರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.ಅಲ್ಲದೆಘಟಪ್ರಭಾ ಪಕ್ಷಿಧಾಮದಲ್ಲಿ ಪಕ್ಷಿಗಳ ಸಂಖ್ಯೆಕಡಿಮೆಯಾಗುತ್ತಿರುವಕಾರಣ ತಿಳಿಯಲು ಮತ್ತು ಪಕ್ಷಿಗಳ ಸಂಖ್ಯೆಯನ್ನು ಹೆಚ್ಚಿಸಲು ಪರಿಸರವಾದಿಗಳು ಮತ್ತು ಪಕ್ಷಿತಜ್ಞರನ್ನು ಕರೆಯಿಸಿ ಸಮಗ್ರತನಿಖೆ ನಡೆಸಲು ಪ್ರಯತ್ನಿಸುತ್ತಿದ್ದೇನೆ” ಎನ್ನುತ್ತಾರೆ ಘಟಪ್ರಭಾ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀ ಕೆ.ಎಲ್‌ರಾಘವೇಂದ್ರ,

 ನಮ್ಮ ಜನಜೀವನದ ಅವಿಭಾಜ್ಯ ಅಂಗವಾಗಿರುವ, ನಮ್ಮ ದಿನನಿತ್ಯದ ಬದುಕಿಗೆ ವಿಶಿಷ್ಟ ಲವಲವಿಕೆಯನ್ನು ನೀಡುವ ಪಕ್ಷಿಗಳು ಉಳಿಯಬೇಕೆಂದರೆ ಜಲಮೂಲಗಳ ಸ್ವಚ್ಚತೆ ಅತ್ಯಗತ್ಯ.

ಚಿತ್ರ – ಲೇಖನ  – ವಿನೋದ ರಾ ಪಾಟೀಲ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*