ಕೆರೆನೋಟ-82 : ಕೆರೆ ಒತ್ತುವರಿ: ಅಧಿಕಾರ ಇಲ್ಲದಾಗ ಏನೆಂದಿದ್ದರು?-2
ಬ್ರಿಟಿಷ್ ವೈಸರಾಯ್ ಲಾರ್ಡ್ ಕಾರ್ನ್‍ವಾಲಿಸ್ ರವರು ಬೆಂಗಳೂರನ್ನು ‘ಸಾವಿರ ಕೆರೆಗಳ ನಾಡು’ಎಂದು ಹೇಳಿರುವುದು ಬೆಂಗಳೂರಿನ ಗತವೈಭವದ ಚಿತ್ರಣ ಮುಂದಿನ ಪೀಳಿಗೆಗೆ ಚರಿತ್ರೆ ಮಾತ್ರ. ಎಂಬುದನ್ನು ನೆನಪಿಸಿಕೊಂಡಿದ್ದ ಕುಮಾರಸ್ವಾಮಿ ಅವರು, ಕೆ.ಟಿ.ಸಿ.ಪಿ. ಕಾಯ್ದೆಯನುಸಾರ ಬಡಾವಣೆ ನಿರ್ಮಿಸುವುದನ್ನು ನಿಯಂತ್ರಿಸಲು ಸಾಕಷ್ಟು ಅಧಿಕಾರವಿದ್ದರೂ ಇಲಾಖೆಯು ಮೂಕ ಪ್ರೇಕ್ಷಕರಾಗಿ ಅನಧಿಕೃತ ಬಡಾವಣೆಗಳು ನಿರ್ಮಾಣವಾಗಲು ಮತ್ತು ನಗದಾದ್ಯಂತ ಸರ್ವವ್ಯಾಪಿ ಅಕ್ರಮಗಳು ತಲೆ ಎತ್ತಲು ಸಹಕಾರಿಯಾಗಿವೆ ಎಂದು ಹೇಳಿದ್ದರು.
ಅಂದು ವಿಧಾನಸಭೆಯಲ್ಲಿ ಕೆರೆಗಳ ಒತ್ತುವರಿ ಸಂದರ್ಭದಲ್ಲಿ ಆಡಿದ್ದ ಮಾತು, ನೀಡಿದ್ದ ದಾಖಲೆಗಳು ಹೀಗೆ ಮುಂದುವರಿಯುತ್ತವೆ.
2006 ರಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಸಮ್ಮಿಶ್ರ ಸರ್ಕಾರವು ಶ್ರೀ ಎ.ಟಿ. ರಾಮಸ್ವಾಮಿ ಅಧ್ಯಕ್ಷತೆಯಲ್ಲಿ ಬೆಂಗಳೂರು ಸುತ್ತಮುತ್ತ ಸರ್ಕಾರಿ ಭೂಮಿ ಒತ್ತುವರಿ ಬಗ್ಗೆ ವರದಿ ನೀಡಲು ವಿಧಾನಮಂಡಲದ ಉಭಯ ಸದನದ ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಿದ್ದರ ಪರಿಣಾಮವಾಗಿ ಸಮಿತಿಯು ದಿನಾಂಕ: 14-02-2007 ರ ಪ್ರಥಮ ಮಧ್ಯಂತರ ವರದಿಯಲ್ಲಿ ಅಂದಾಜು ರೂ.27,377.75 ಕೋಟಿಯ ಮೌಲ್ಯದ 13,614.37 ಎಕರೆ ಒತ್ತುವರಿಯನ್ನು ಮತ್ತು ದಿನಾಂಕ: 26-06-2007 ರ ಎರಡನೇ ವರದಿಯಲ್ಲಿ 33,878 ಒತ್ತುವರಿದಾರರು 27,336.09 ಎಕರೆ ಒತ್ತುವರಿಯಾಗಿರುವುದಾಗಿ ವರದಿ ಸಲ್ಲಿಸಿರುತ್ತದೆ.
ವರದಿಯಲ್ಲಿ ಗೃಹ ನಿರ್ಮಾಣ ಸಹಕಾರ ಸಂಘಗಳು ಮತ್ತು ಖಾಸಗಿ ಡೆವಲಪ್‍ರ್‍ಗಳು ಸರ್ಕಾರಿ ಭೂ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಮತ್ತು ಅರಣ್ಯ ಜಮೀನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ವರದಿ ಸಲ್ಲಿಸಲಾಗಿದೆ.
1995 ರಲ್ಲಿ ರಾಜ್ಯ ಉಚ್ಛ ನ್ಯಾಯಾಲಯವು ಕೆರೆ ಅಂಗಳದಲ್ಲಿ ರಾಜ್ಯ ಸರ್ಕಾರಕ್ಕೆ ಕೆರೆಯನ್ನು ಇತರೆ
- ಉದ್ದೇಶಕ್ಕೆ ಮಂಜೂರು ಮಾಡುವ ಅಧಿಕಾರವಿಲ್ಲವೆಂದು ನಿರ್ದೇಶನ ನೀಡಿದ್ದರೂ ನ್ಯಾಯಾಲಯದ
- ಆದೇಶವನ್ನು ಉಲ್ಲಂಘಿಸಿ ಸರ್ಕಾರ ಕೆರೆಗಳನ್ನು ಇತರೆ ಉದ್ಧೇಶಕ್ಕಾಗಿ ಬಳಸಲು ಅನುಮತಿ ನೀಡಿರುತ್ತದೆ. ಪ್ರಕರಣ
ಸಂಖ್ಯೆ 1251/2006 (Intellectuals Forum vs. the State of Andhra Pradesh)ರಲ್ಲಿ ಸರ್ವೋಚ್ಛ ನ್ಯಾಯಾಲಯವು ಕೆರೆಯು ಸಮುದಾಯದ ಆಸ್ತಿಯಾಗಿದ್ದು, ರಾಜ್ಯದ ಪ್ರಾಧಿಕಾರಿಗಳು ಟ್ರಸ್ಟ್‍ನಂತೆ ಸಮುದಾಯದ ಒಳಿತಿಗಾಗಿ ನಿರ್ವಹಣೆ ಮಾಡಲು ಮತ್ತು ಬೇರಾವುದೇ ವ್ಯಕ್ತಿ ಅಥವಾ ಪ್ರಾಧಿಕಾರಕ್ಕೆ ಪರಭಾರೆ ಮಾಡದಂತೆ ಆದೇಶಿಸಿರುತ್ತದೆ.
- ಶ್ರೀ ಎ.ಟಿ. ರಾಮಸ್ವಾಮಿ ನೇತೃತ್ವದ ವರದಿಯಲ್ಲಿ ಕೆ.ಟಿ.ಸಿ.ಪಿ. ಕಾಯ್ದೆಯನುಸಾರ ಬಡಾವಣೆ
- ನಿರ್ಮಿಸುವುದನ್ನು ನಿಯಂತ್ರಿಸಲು ಸಾಕಷ್ಟು ಅಧಿಕಾರವಿದ್ದರೂ ಇಲಾಖೆಯು ಮೂಕ ಪ್ರೇಕ್ಷಕರಾಗಿ
- ಅನಧಿಕೃತ ಬಡಾವಣೆಗಳು ನಿರ್ಮಾಣವಾಗಲು ಮತ್ತು ನಗದಾದ್ಯಂತ ಸರ್ವವ್ಯಾಪಿ ಅಕ್ರಮಗಳು ತಲೆ ಎತ್ತಲು ಸಹಕಾರಿಯಾಗಿವೆ. 108 ಗೃಹ ನಿರ್ಮಾಣ ಸಹಕಾರ ಸಂಘಗಳು ಮತ್ತು ಖಾಸಗಿ
- ಡೆವಲಪ್ಪರ್‍ಗಳು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಅನಧಿಕೃತ ಬಡಾವಣೆಗಳನ್ನು
- ನಿರ್ಮಿಸಿರುವುದು ಪತ್ತೆ ಹಚ್ಚಿದೆ. ಕರ್ನಾಟಕ ನ್ಯಾಯಾಂಗ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ, ವೈಯಾಲಿಕಾವಲ್ ಗೃಹ ನಿರ್ಮಾಣ ಸಹಕಾರ ಸಂಘ ಮತ್ತು ಶಾಂತಿನಗರ ಗೃಹ ನಿರ್ಮಾಣ ಸಹಕಾರ ಸಂಘಗಳು ಸೇರಿದಂತೆ ಇತರೆ ಗೃಹ ನಿರ್ಮಾಣ ಸಹಕಾರ ಸಂಘಗಳು ಸರ್ಕಾರಿ ಭೂಮಿ ಒತ್ತುವರಿ ಬಡಾವಣೆ ನಕ್ಷೆ ಉಲ್ಲಂಘನೆ, ಸಿ.ಎ. ಸೈಟ್‍ಗಳ ಬಿಡದಿರುವುದು ಕೆ.ಟಿ.ಸಿ.ಪಿ. ಕಾಯ್ದೆ ಉಲ್ಲಂಘಿಸಿ ಭೂ ಪರಿವರ್ತನೆ ಮಾಡದೇ ಬಡಾವಣೆಗಳನ್ನು ನಿರ್ಮಿಸಿರುವ ಬಗ್ಗೆ ಸವಿಸ್ತಾರವಾಗಿ ವರದಿಯಲ್ಲಿ ತಿಳಿಸಲಾಗಿದೆ.
- ಮುಂದುವರೆದು ಚಾಮರಾಜಪೇಟೆಯ ಧಾರ್ಮಿಕ ದತ್ತಿ ಇಲಾಖೆಯ ರೂ.15.00 ಕೋಟಿ ಮೌಲ್ಯದ
- ಆಸ್ತಿಯ ಖಾತೆಯನ್ನು ನಕಲು ದಾಖಲೆಗಳ ಆಧಾರದ ಮೇಲೆ ಖಾಸಗಿ ವ್ಯಕ್ತಿಗಳಿಗೆ ಖಾತೆ ಮಾಡಿರುವುದನ್ನು ಇಲಾಖೆಯು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಜಂಟಿ ಆಯುಕ್ತರ
- ಮುಂದೆ ಮೇಲ್ಮನವಿ ಸಲ್ಲಿಸಿದಾಗ ಮೇಲ್ಮನವಿಯನ್ನು ಪುರಸ್ಕರಿಸದೇ ವಜಾಕರಿಸುವುದನ್ನು ವರದಿ
- ಮಾಡಲಾಗಿದೆ.
- ರಾಷ್ಟ್ರೀಯ ಮಾನಸಿಕ ಮತ್ತು ನರ
ರೋಗ ವಿಜ್ಞಾನ ಸಂಸ್ಥೆಯ ರೂ.127.00 ಕೋಟಿ ಮೌಲ್ಯದ 100
- ಎಕರೆ 26 ಗುಂಟೆ ಜಮೀನನ್ನು ಕಾನೂನು ಬಾಹಿರ ಕ್ರಯ ಪತ್ರಗಳ ಆಧಾರದ ಮೇಲೆ ಖಾಸಗಿ
- ಬಿಲ್ಡರ್‍ಗಳ ಹೆಸರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಖಾತೆ ಮಾಡಿದೆ.
- ಉತ್ತರಹಳ್ಳಿಯ 344 ಎಕರೆ ಅರಣ್ಯ ಜಮೀನನ್ನು ಬೋಗಸ್ ಕ್ರಯ ಪತ್ರ ಸೃಷ್ಟಿಸಿ ಲಪಟಾಯಿಸಿದ್ದು,
- ಬನಶಂಕರಿ 6ನೇ ಹಂತ ಬಡಾವಣೆಗಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು 344 ಎಕರೆ ಪೈಕಿ 42 ಎಕರೆ ಜಮೀನನ್ನು ಭೂಸ್ವಾಧೀನಪಡಿಸಿಕೊಂಡಿದ್ದು, ರೂ.3.6 ಕೋಟಿ ಭೂಸ್ವಾಧೀನ ಮೊತ್ತ ನಿಗದಿಪಡಿಸಿ ಐತೀರ್ಪು ರಚಿಸಿರುವುದನ್ನು ತಿಳಿಸಿರುವುದು ಸರ್ಕಾರಿ ಭೂ ಒತ್ತುವರಿಯ ಕಬಂಧಬಾಹುಗಳ ಚಿತ್ರಣವನ್ನು ಸಾಮಾನ್ಯರೂ ಊಹಿಸಬಹುದಾಗಿದೆ.
ಹೀಗೆಂದು ಎಚ್.ಡಿ. ಕುಮಾರಸ್ವಾಮಿ ಅವರು ಬೆಂಗಳೂರಿನಲ್ಲಿ ಕೆರೆಗಳ ಒತ್ತುವರಿಯಲ್ಲಿ ಅಡಗಿರುವ “ರಹಸ್ಯ”ಗಳನ್ನು ಎತ್ತಿ ತೋರಿಸಿದ್ದರು. ಇದೆಲ್ಲ ಅಧಿಕಾರದಲ್ಲಿ ಇಲ್ಲದ ಸಮಯದಲ್ಲಿ. ಈಗ ಏನು ಮಾಡುತ್ತಾರೆ ಎಂಬ ಕುತೂಹಲ ಇದ್ದೇ ಇದೆ. ಆಗ ಇನ್ನೂ ಸಾಕಷ್ಟು ಮಾತನಾಡಿದ್ದಾರೆ. ಅದು ಮುಂದುವರಿಯುತ್ತದೆ. ಮುಂದಿನ ನೋಟಗಳಲ್ಲಿ ಅದರ ಸಂಪೂರ್ಣ ಮಾಹಿತಿ ಇರುತ್ತದೆ. ನಂತರ ವರದಿಯ ನೋಟ ಬಿಡಿಸಿಕೊಳ್ಳಲಿದೆ.
ಚಿತ್ರ-ಲೇಖನ: ಕೆರೆ ಮಂಜುನಾಥ್