ಮಳೆ ಶುರುವಾಯ್ತು!
ಇನ್ನು ಮಳೆ ಶುರುವಾಯ್ತು! ಮತ್ತೊಂದು ವಾರ, ವಾಟರ್ ಪೋರ್ಟಲ್ಲಿನಲ್ಲಿ ಮತ್ತಷ್ಟು ಕನ್ನಡ ಲೇಖನಗಳ ಸುರಿಮಳೆ!
ಮಳೆ ಹೊರಗೂ ಶುರುವಾಗಿದೆ, ಮಳೆನೀರು ಹಿಡಿದಿಡುವ, ಕೊಳವೆ ಬಾವಿಯ ನೀರನ್ನು ಪುನಃ ತುಂಬಿಸುವ ಕಾರ್ಯಕ್ಕೆ ಸಜ್ಜಾಗಬಯಸುವವರಿಗೆ, ನೀರ ಕುರಿತು ಆಲೋಚನೆಗೆ ಹಚ್ಚಿಸುವ ಮತ್ತಷ್ಟು ಓದು ಇಲ್ಲಿದೆ:
ಅಂತರ್ಜಲಕ್ಕೆ ಕೊರೆವ ಕನ್ನ ಕೊಳವೆ ಬಾವಿ
ಅಡ್ಡೂರು ಕೃಷ್ಣರಾವ್
ಒಂದು ಬೋರ್ ವೆಲ್ ನಿಂದ ನೀರೆತ್ತುವುದು ಎಂದರೆ ೬ ಇಂಚಿನ ಕೇಸಿಂಗ್ ಪೈಪಿನಿಂದ ನೀರೆತ್ತುವುದು. ಆದರೆ ಒಂದು ಗ್ರಾಮದಲ್ಲಿ ಹಲವಾರು ಬೋರ್ ವೆಲ್ ಗಳಿಂದ ನೀರೆತ್ತುವಾಗ
ಏನಾಗುತ್ತದೆ? ಈ ಪ್ರಶ್ನೆ ಹಾಕಿದವರು ಡಾ. ಕೆ. ಎಂ. ಕೃಷ್ಣ ಭಟ್. ಅವರು ದಕ್ಷಿಣ ಕನ್ನಡದ ಪುತ್ತೂರು ಹತ್ತಿರದ ಇಡ್ಕಿದು ಗ್ರಾಮದಅಮ್ರತ ಸಿಂಚನ ರೈತರ ಸೇವಾ ಒಕ್ಕೂಟದ ಅಧ್ಯಕ್ಷರು.
"ವರ್ಷದಲ್ಲಿ ಆರು ತಿಂಗಳ ಕಾಲ, ಕರೆಂಟು ಇರುವಾಗೆಲ್ಲ, ಸುಮಾರು ೬೦ ಅಡಿ ವ್ಯಾಸದ ಪೈಪ್ ಲೈನ್ ಬಳಸಿ ಎತ್ತಬಹುದಾದಷ್ಟು ನೀರನ್ನು ನಮ್ಮ ಗ್ರಾಮದಲ್ಲಿ ಬೋರ್ ವೆಲ್ ಗಳಿಂದ ಮೇಲೆತ್ತುತ್ತೇವೆ. ಯೋಚಿಸಿ ನೋಡಿ. ಇಷ್ಟು ನೀರನ್ನು ಭೂಮಿಗೆ ಪುನಃ ತುಂಬಿ ಕೊಡಲು ಸಾಧ್ಯವೇ?" ಎಂದವರು ಕೇಳುವಾಗ ನಮ್ಮ ತಲೆಗೆ ಮಿಂಚು ಹೊಡೆದಂತಾಗುತ್ತದೆ.
ಮುಂದೆ ಓದಿ >>
http://kannada.
ನದಿ ಪಕ್ಕದಲ್ಲೇ ನೀರಡಿಕೆ
ಚಾಮರಾಜ ಸವಡಿ
![]()
ಹರಿವ ನದಿ ಪಕ್ಕ ಕೂತು ಬಾಯಾರಿಕೆಯಿಂದ ಚಡಪಡಿಸುವ ಸ್ಥಿತಿ ಊಹಿಸಬಲ್ಲಿರಾ?
ಅಂಥ ಪರಿಸ್ಥಿತಿಯಲ್ಲಿದೆ ಮಣಿಪುರ ರಾಜ್ಯದ ರಾಜಧಾನಿ ಇಂಫಾಲ್. ಇಲ್ಲಿ ಪ್ರತಿ ವಾರ್ಷಿಕ ಮಳೆ ಪ್ರಮಾಣ ೧೪೭೬.೫ ಮಿಮೀ. ಮೇ ತಿಂಗಳಿಂದ ಅಕ್ಟೋಬರ್‌ವರೆಗೆ, ಅಂದರೆ ಸತತ ಆರು
ತಿಂಗಳುಗಳ ಇಲ್ಲಿ ಮಳೆಗಾಲ. ಮುಂಗಾರು ಮೋಡಗಳು ಮೊದಲು ತಲುಪುವುದು ದೇಶದ ಈಶಾನ್ಯ ಭಾಗದಲ್ಲಿರುವ ಈ ರಾಜ್ಯಕ್ಕೇ.
ಆದರೆ, ಮಳೆ ಬಂದಷ್ಟೇ ವೇಗವಾಗಿ ಹರಿದುಹೋಗುತ್ತದೆ. ಬೆಟ್ಟಪ್ರದೇಶಗಳಿಂದ ತುಂಬಿದ ಮಣಿಪುರದಲ್ಲಿ ಮಳೆ ನೀರು ಸಂಗ್ರಹಿಸುವ ವ್ಯವಸ್ಥೆ ಅಷ್ಟಕ್ಕಷ್ಟೇ. ಪ್ರಗತಿಯ ಭರಾಟೆಯಲ್ಲಿ ಈ ಮೂಲತತ್ವ ಮರೆಯಾಗಿದೆ.
ಮುಂದೆ ಓದಿ >>
http://kannada.
ನಲ್ಲಿ ನೀರಿಗೆ ಬಲಿಯಾದ ನೀಲಮ್ಮನ ಕೆರೆ
ಕವಿತಾ ಹಳ್ಳಿ
![]()
ನಲ್ಲಿ ಬಂದು ಕೆರೆಯನ್ನು ಕೊಂದ ಕಥೆ ಇದು.
ಧಾರವಾಡ ಜಿಲ್ಲೆಯ ನವಲಗುಂದ ಕುಡಿಯುವ ನೀರಿನ ಕೊರತೆಗೆ ಕುಖ್ಯಾತಿ ಗಳಿಸಿದ ಪಟ್ಟಣ. ಇಲ್ಲಿಯ ನೀರಿನ ಬರಕ್ಕೆ ಶತಮಾನಗಳ ಇತಿಹಾಸವಿದೆ. ಅಪ್ಪಟ ಕಪ್ಪುಮಣ್ಣಿನ ಈ ಊರಿನ
ಸಾವಿರಾರು ಎಕರೆ ಹೊಲಗಳು ಮಳೆಗಾಲದಲ್ಲಿ ಕೆಸರು ಗದ್ದೆ. ಬೇಸಿಗೆಯಲ್ಲಿ ಮೊಣಕಾಲಿನವರೆಗೆ ಕಾಲು ಸಿಕ್ಕಿಸಬಲ್ಲ ಕೊರಕು ಮಣ್ಣುಹೆಂಟೆಗಳ ನೆಲವಾಗುತ್ತದೆ. ಕೊಳವೆಬಾವಿ ನೀರು
ಕುಡಿಯಲು ಆಗದಷ್ಟು ಸವುಳು. ಹೀಗಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ನವಲಗುಂದ ಎಂದರೆ ಕುಡಿಯುವ ನೀರಿನ ಬರದ ಊರು ಎಂದೇ ಕುಖ್ಯಾತ.
ಮುಂದೆ ಓದಿ >>
http://kannada.
ವಾರದ ಚಿತ್ರ:

http://kannada.
(ವೆಲ್ಲಿಂಗ್ಟನ್ ವಾಟರ್ ವರ್ಕ್ಸ್)
ಚಿತ್ರ: ರತ್ನೀಶ್ ಎನ್ ಎಸ್
- 421 reads
Email this page
Printer-friendly version
ಲೇಖಕರು
ವಿಶೇಷ ಬರಹಗಳು
ಇತ್ತೀಚಿನ ಬ್ಲಾಗ್ ಬರಹಗಳು
- ಫೊಟೊ ಅಲ್ಬಮ್
- ಗಣಿಗಾರಿಕೆಯಲ್ಲಿ- ತಡೆಆಣೆಕಟ್ಟು (ಚೆಕ್-ಡ್ಯಾ೦)
- ಪ್ರಥಮ್ ಬುಕ್ಸ್ ""ಕಾವೇರಿ" ಪುಸ್ತಕದ ಬಿಡುಗಡೆ ಮತ್ತು "ನಿಮ್ಮ ನದಿಯನ್ನು ಕಾಪಾಡಿ ನೀರನ್ನು ಉಳಿಸಿ" ಆಂದೋಲನ
- ಇಲ್ಲಿ ‘ಕೊಳಚೆ ನೀರು ಕುಡಿಯುವ ನೀರು’!`ಪಲ್ಸಡ್ ಪ್ಲೇಟ್' ತಂತ್ರಜ್ಞಾನ ಎಸ್.ಡಿ.ಎಂ. ಇಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿಗಳ ಆವಿಷ್ಕಾರ.
- ಮಳೆ ಬಂದರೆ ಬೆಂಗಳೂರಿಗೆ ಭೇದಿ
- ಮಳೆ ಎಂದರೆ ಬಾಲ್ಯದ ನೆನಪು ಕಣಾ...
- ನಾವು ವೃತ್ತಿ/ಕೆಲಸ ಮಾಡುವಲ್ಲಿ ನೀರಿನ ಮಿತಬಳಕೆಯ ಬಗ್ಗೆ ಜಾಗೃತಿ ಹೇಗೆ ಮೂಡಿಸಬಹುದು ?
- ರೇಡಿಯೋದಲ್ಲಿ K2K
- ಮಡಿವಾಳ ಕೆರೆಯ ಉಳಿಸಿ - ಒಂದು ಕೂಗು
- ಕೆರೆ ಕರಗುವ ಸಮಯ: ನಿಮಗಿದೋ ಆಮಂತ್ರಣ
| Subscribe to IWP Kannada list |
| Visit this group |


ಇತ್ತೀಚಿನ ಪ್ರತಿಕ್ರಿಯೆ
1 week 5 days ago
2 weeks 5 days ago
11 weeks 3 days ago
11 weeks 6 days ago
14 weeks 3 days ago
15 weeks 5 days ago
17 weeks 12 hours ago
17 weeks 4 days ago
22 weeks 9 hours ago
22 weeks 6 days ago