ದೊರೆಯ ವ್ಯಥೆ; ಸಾರಕ್ಕಿಯ ಕಥೆ

ಸಾರಕ್ಕಿ ಕೆರೆಯಿಂದ ಹೊರಬರುವ ನೀರು ಇದು. ನೀರಲ್ಲ ಇದು ಕಲ್ಮಶ ತುಂಬಿದ ವಿಷಕಾರಕ.

ವಿಜಯಕರ್ನಾಟಕದಲ್ಲಿ ಬೆಂಗಳೂರಿನ ಕೆರೆಗಳ ಈಗಿನ ಪರಿಸ್ಥಿತಿ ಪರಿಚಯಿಸುತ್ತ ಬಂದ ಮಂಜುನಾಥ್, ಈಗ ವಾಟರ್ ಪೋರ್ಟಲ್ಲಿನಲ್ಲಿ ಬರೆಯುತ್ತಿದ್ದಾರೆ, ಕನ್ನಡ ವಾಟರ್ ಪೋರ್ಟಲ್ಲಿನಲ್ಲಿ ಇವರ ಮೊದಲ ಲೇಖನ, ಸಾರಕ್ಕಿ ಕೆರೆಯ ಕುರಿತು ಇಲ್ಲಿದೆ:
ಸಾಮ್ರಾಜ್ಯ ಇಲ್ಲದ ಅಧಿಪತಿ: ದೊರೆ ಎಂದ ಕೂಡಲೇ ಸಾಮ್ರಾಜ್ಯದ ಅಧಿಪತಿ. ಸಾಕಷ್ಟು ಪ್ರದೇಶವನ್ನು ತನ್ನ ಅಧೀನದಲ್ಲಿಟ್ಟುಕೊಂಡು, ಸಮೃದ್ಧವಾದ ಜೀವನ ನಡೆಸುವವನು. ಇವನಿಗೆ ಆಳು-ಕಾಳು, ಸೇನೆ-ಸೇನಾಧಿಪತಿ, ರಾಣಿ-ಮಹಾರಾಣಿ, ಅರಮನೆ-ಅಂತಃಪುರ ಎಲ್ಲವೂ ಇರುತ್ತದೆ. ಆದರೆ, ಈಗ ನಾನು ಹೇಳ ಹೊರಟಿರುವ ದೊರೆ ಮಾತ್ರ ತಿರುಕ. ಅದೂ ಬೆಂಗಳೂರಿನಲ್ಲಿ ಇಪ್ಪತ್ತೊಂಬತ್ತು ಎಕರೆ ಪ್ರದೇಶವನ್ನೂ ಹೊಂದಿದ್ದರೂ ಈತ ಕಳಾಹೀನ. ಕೊಳಕಿನ ರಾಜ. ಬೆಂಗಳೂರು ದಕ್ಷಿಣ ತಾಲೂಕಿನ ಉತ್ತರಹಳ್ಳಿ ವ್ಯಾಪ್ತಿಯಲ್ಲಿರುವ ದೊರೆ ಕೆರೆಯ ಸ್ಥಿತಿ ಇದು.

ಮುಂದೆ ಓದಿ >>