Home ›
ಜಡೆಯಲ್ಲಿ ಜಿನುಗುವ ಗಂಗೆ
Submitted by editor on Tue, 10/03/2009 - 21:50.
ಭಗೀರಥನ ತಪಸ್ಸಿಗೆ ಮೆಚ್ಚಿ ಗಂಗೆಯು ಶಿವನ ಮುಡಿಯಿಂದ ಈ ಧರೆಗೆ ಬಂದ ಕಥೆ ತಮಗೆ ತಿಳಿದಿದೆ. ಆ ಗಂಗೆಯ ಅವತರಣದಂತೆ ಗದಗ ಜಿಲ್ಲೆ ಗಜೇಂದ್ರಗಡ ಸಮೀಪದ ಶ್ರೀ ಕಾಲಕಾಲೇಶ್ವರ ದೇವಸ್ಥಾನದಲ್ಲಿ ಸದಾ ಜಿನುಗುವ ನೀರು ತುಂಬ ಜನರಿಗೆ ದೈವಿಕ ಭಾವನೆ ಹುಟ್ಟಿಸುತ್ತದೆ.
ಕಾಲಕಾಲೇಶ್ವರ ಗ್ರಾಮಕ್ಕೆ ಹೆಸರು ಬಂದಿರುವುದೇ ಊರಿನ ತಪ್ಪಲಿನಲ್ಲಿರುವ ಕಾಲಕಾಲೇಶ್ವರ ಬೆಟ್ಟದಿಂದಾಗಿ. ಇಲ್ಲಿರುವ ಸ್ಥಳದಲ್ಲಿ ಶ್ರೀ ಕಾಲಕಾಲೇಶ್ವರನ ಗುಡಿಯಿದೆ. ಇಲ್ಲಿ ಶಿವನ
ಜಡೆಗಳು ಜೋತು ಬಿದ್ದಂತೆ ಆಲ ಮತ್ತು ಅರಳೆ ಬೇರುಗಳು ಇಳಿ ಬಿದ್ದಿವೆ. ಈ ಬಿಳಿಲುಗಳಿಂದ ಗಂಗೆಯ ಅವತರಣವಾದಂತೆ ನೀರು ಸದಾ ಜಿನುಗುತ್ತದೆ. ದೈವಿಕ ಭಾವನೆ ಹೊಂದಿರುವವರಿಗೆ, ಈ ಬೇರುಗಳ ಮುಖಾಂತರ ಬೀಳುತ್ತಿರುವ ನೀರು ಶಿವನ ಜಡೆಯಲ್ಲಿರುವ ಗಂಗೆಯಿಂದ ಉಕ್ಕಿ ಹರಿಯುತ್ತಿರುವಂತೆ ಭಾಸವಾಗುತ್ತದೆ. ಮೇಲ್ಭಾಗದ ಪಡಿಯಿಂದ ಬೀಳುವ ತುಂತುರು ನೀರ ಹನಿಗಳು ನೋಡುಗರ ಮುಖಕ್ಕೆ ಮುತ್ತಿಟ್ಟು ಮಾಯವಾಗುತ್ತವೆ.
- 304 reads
Email this page
Printer-friendly version
ಲೇಖಕರು
ವಿಶೇಷ ಬರಹಗಳು
ಇತ್ತೀಚಿನ ಬ್ಲಾಗ್ ಬರಹಗಳು
- ಫೊಟೊ ಅಲ್ಬಮ್
- ಗಣಿಗಾರಿಕೆಯಲ್ಲಿ- ತಡೆಆಣೆಕಟ್ಟು (ಚೆಕ್-ಡ್ಯಾ೦)
- ಪ್ರಥಮ್ ಬುಕ್ಸ್ ""ಕಾವೇರಿ" ಪುಸ್ತಕದ ಬಿಡುಗಡೆ ಮತ್ತು "ನಿಮ್ಮ ನದಿಯನ್ನು ಕಾಪಾಡಿ ನೀರನ್ನು ಉಳಿಸಿ" ಆಂದೋಲನ
- ಇಲ್ಲಿ ‘ಕೊಳಚೆ ನೀರು ಕುಡಿಯುವ ನೀರು’!`ಪಲ್ಸಡ್ ಪ್ಲೇಟ್' ತಂತ್ರಜ್ಞಾನ ಎಸ್.ಡಿ.ಎಂ. ಇಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿಗಳ ಆವಿಷ್ಕಾರ.
- ಮಳೆ ಬಂದರೆ ಬೆಂಗಳೂರಿಗೆ ಭೇದಿ
- ಮಳೆ ಎಂದರೆ ಬಾಲ್ಯದ ನೆನಪು ಕಣಾ...
- ನಾವು ವೃತ್ತಿ/ಕೆಲಸ ಮಾಡುವಲ್ಲಿ ನೀರಿನ ಮಿತಬಳಕೆಯ ಬಗ್ಗೆ ಜಾಗೃತಿ ಹೇಗೆ ಮೂಡಿಸಬಹುದು ?
- ರೇಡಿಯೋದಲ್ಲಿ K2K
- ಮಡಿವಾಳ ಕೆರೆಯ ಉಳಿಸಿ - ಒಂದು ಕೂಗು
- ಕೆರೆ ಕರಗುವ ಸಮಯ: ನಿಮಗಿದೋ ಆಮಂತ್ರಣ
| Subscribe to IWP Kannada list |
| Visit this group |


ಇತ್ತೀಚಿನ ಪ್ರತಿಕ್ರಿಯೆ
1 week 5 days ago
2 weeks 5 days ago
11 weeks 3 days ago
11 weeks 6 days ago
14 weeks 3 days ago
15 weeks 5 days ago
17 weeks 12 hours ago
17 weeks 4 days ago
22 weeks 9 hours ago
22 weeks 6 days ago