Submitted by harshavardhan on Fri, 21/11/2008 - 23:29.
"ತಮ್ಮ..ಅದನೇನ್ ನೋಡ್ತಿ..ನಮ್ಮನೇನ್ ಕೇಳ್ತಿ..? ಒಂದ ಮಾತಿನ್ಯಾಗ ಹೇಳ್ಯಾ..?
- ಈ ನೀರು ಕುಡದ್ರ ಉಚ್ಚಿ ಕುಡಧಾಂಗ ಆಗತೈತಿ ನೋಡಪಾ..!"

ಆಹೆಟ್ಟಿ ಗ್ರಾಮದ ಕಮಲಮ್ಮನ ಮಾತುಗಳಿವು. ಕೇಳಿದ ನನಗೂ, ಗೆಳೆಯ ಛಾಯಾಪತ್ರಕರ್ತ ಕೇದಾರನಾಥ್ ಅವರಿಗೂ ಕರುಳು ಕಿತ್ತು ಬಂದಂತಹ ಅನುಭವ.
ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಕಟ್ಟಕಡೆಯ ಹಳ್ಳಿ ಆಹೆಟ್ಟಿ (ಆಯಟ್ಟಿ). ಮೂರು ಸಾವಿರ ಜನಸಂಖ್ಯೆ. ಹದಿನೆಂಟುನೂರರಷ್ಟು ‘ಪ್ರೌಢ’ ಮತದಾರರನ್ನು ಹೊಂದಿರುವ ಗ್ರಾಮ. ಧಾರವಾಡ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ, ತೊಟ್ಟು ನೀರಿಗೂ ದೈನೇಸಿಯಾಗಿರುವ ಬಾಯಾರಿದ ಹಳ್ಳಿ. ಇಲ್ಲಿನ ಗ್ರಾಮಸ್ಥರ ದಾಹ ತೀರಿಸಿಕೊಳ್ಳುವ ಪರಿ ಶೋಚನೀಯ. ನಾಗರಿಕ ಸಮಾಜ ಮಾನವೀಯತೆಯ ನೆಲೆಯಲ್ಲಿ ಒಮ್ಮೆ ನಿಂತು ಯೋಚಿಸಬೇಕಾದಷ್ಟು ಗಂಭೀರ ಸ್ಥಿತಿ ಇಲ್ಲಿದೆ.
ಆಹೆಟ್ಟಿ ಗ್ರಾಮದ ಹೆಣ್ಣು ಮಕ್ಕಳು, ಗಂಡಸರು ತಮ್ಮ ಚಿಕ್ಕ ಮಕ್ಕಳೊಂದಿಗೆ ನೀರು ಹೊರುವುದನ್ನು ನಿತ್ಯ ಕಾಯಕ ಮಾಡಿಕೊಂಡಿದ್ದಾರೆ. ನಿತ್ಯ ೪-೬ ಕಿಲೋ ಮೀಟರ್ ದೂರ ಕ್ರಮಿಸಿ ಕುಡಿಯಲು ಕಲುಷಿತ ನೀರು ಒಗ್ಗೂಡಿಸುವುದೇ ಹರಸಾಹಸದ ಕೆಲಸ. ಗ್ರಾಮದ ಪಕ್ಕದಲ್ಲಿ ಹರಿದಿರುವ ‘ತುಪರಿ ಹಳ್ಳ’ ದಲ್ಲಿ ‘ಒರ್ತಿ’ ತೋಡಿ ಕಪ್ಪಾದ ನೀರನ್ನು ಪ್ಲಾಸ್ಟಿಕ್ ಬಿಂದಿಗೆಗಳಲ್ಲಿ ತಾಸುಗಟ್ಟಲೇ ತುಂಬಿಸುವುದು ಅವರಿಗೆ ಅನಿವಾರ್ಯ. ಹೊತ್ತುಕೊಂಡು, ಇಲ್ಲವೇ ಸೈಕಲ್, ಎತ್ತಿನ ಬಂಡಿ, ಕೈಗಾಡಿ, ಟ್ರ್ಯಾಕ್ಟರ್ ಹೀಗೆ ನೂರೊಂದು ರೀತಿಯಲ್ಲಿ ಬಣ್ಣದ ಪ್ಲಾಸ್ಟಿಕ್ ಕೊಡಗಳಲ್ಲಿ ಕಲುಷಿತ ನೀರು ‘ಕುಡಿಯಲು’ ಹೊತ್ತೊಯ್ಯದೇ ಉಪಾಯವಿಲ್ಲ.
ಈ ತುಪರಿಹಳ್ಳದಲ್ಲಿ ೮ ತಿಂಗಳು ಸಣ್ಣ ಗಟಾರಿನ ಗಾತ್ರದಲ್ಲಿ ಹರಿಯುವ ನೀರಿನ ಪರಿ ವರ್ಣಿಸಲು ನನ್ನಲ್ಲಿ ಶಬ್ದಗಳ ಕೊರತೆ ಕಾಡೀತು ಎಂಬ ಭಯವಿದೆ. ಉಪ್ಪಿನ ಬೆಟಗೇರಿ, ಇನಾಮಹೊಂಗಲ, ಹಾರೋ ಬೆಳವಡಿ ಹಾಗು ಶಿರೂರಗಳ ಮೂಲಕ ಹಾಯ್ದು ಬರುವ ಈ ಹಳ್ಳ, ಆಯಾ ಊರುಗಳ ಗಟಾರು ಮಲೀನವನ್ನು ಸಹ ಹೊತ್ತು ಆಹೆಟ್ಟಿಗೆ ಪೂರೈಸುತ್ತದೆ. ಇಂತಹ ಗಟಾರು ನೀರಿನ ಕೆರೆಯಲ್ಲಿ ಅಲ್ಲಲ್ಲಿ ‘ಒರ್ತಿ’ ಹೊಂಡಗಳನ್ನು ತೆರೆದು, ಮೂಗು ಮುಚ್ಚಿಕೊಂಡು ಜನ ನೀರನ್ನು ಬಿಂದಿಗೆಗಳಿಗೆ ಹಣಿಸಿಕೊಳ್ಳುತ್ತಾರೆ. ಹಾಗೆಯೇ, ಮೂಗು ಮುಚ್ಚಿಕೊಂಡು ಮನೆ ಮಂದಿಯೆಲ್ಲ ಕುಡಿಯುತ್ತಾರೆ! ಮುಂದೆ ಓದಿ »
Bookmark/Search this post with:
Recent comments
4 hours 6 min ago
6 days 15 hours ago
1 week 1 hour ago
1 week 4 days ago
1 week 6 days ago
2 weeks 8 hours ago
2 weeks 10 hours ago