ಚಿಕ್ಕನಾಯಕನಹಳ್ಳಿ ತಾಲ್ಲೂಕು ತುಮಕೂರು ಜಿಲ್ಲೆಯ ಮಲೆನಾಡು. ಕಣ್ಣು ಹಾಯಿಸಿದಷ್ಟೂ ಅಡಿಕೆ ತೆಂಗಿನ ತೋಟಗಳು, ಗದ್ದೆ ಬಯಲುಗಳು. ಜಿಲ್ಲೆಯ ಇತರೆಡೆ ಬಂಡೆಗಳಿಂದ ಕೂಡಿದ ಬೆಟ್ಟಗಳಾದರೆ ಇಲ್ಲಿ ಹಸಿರು ಹೊದ್ದ ಬೆಟ್ಟ ಸಾಲು. ಮದಲಿಂಗನಕಣಿವೆ ಮತ್ತು ಬೋರನಕಣಿವೆ ಎಂಬ ಎರಡು ಬೃಹತ್ ಬೆಟ್ಟಸಾಲುಗಳು ಈ ತಾಲ್ಲೂಕಿನ ಜೀವನಾಡಿಗಳು. ಮಳೆ ನೀರನ್ನು ನೆಲಕ್ಕೆ ಇಂಗಿಸುವಲ್ಲಿ ಇವುಗಳ ಪಾತ್ರ ಅತಿ ದೊಡ್ಡದು.
ಬೆಟ್ಟಸಾಲುಗಳನ್ನು ಬಿಟ್ಟರೆ ತಾಲ್ಲೂಕಿಗೆ ಪ್ರಮುಖ ನೀರಿನಾಸರೆ ಕೆರೆಗಳು. ಬೆಟ್ಟಗಳು ನೀರು ಇಂಗಿಸಿದರೆ ಕೆರೆಗಳು ನೀರನ್ನು ಸಂಗ್ರಹಿಸಿಟ್ಟುಕೊಂಡು ವರ್ಷೊಂಭತ್ತು ಕಾಲವೂ ತೋಟ ಮತ್ತು ಬೆಳೆಗಳಿಗೆ ಪೂರೈಸುತ್ತಿದ್ದವು. ಕೆರೆಗಳಿಗೆ ನೀರಿನ ಮುಖ್ಯ ಮೂಲ ಅರಣ್ಯಾವೃತ ಬೆಟ್ಟಗಳು. ನಿಸರ್ಗದತ್ತ ಬೆಟ್ಟಗಳಿಂದ ಬರುವ ನೀರನ್ನು ಸಂಗ್ರಹಿಸಲು ಆಯಕಟ್ಟಿನ ಜಾಗಗಳಲ್ಲಿ ಕೆರೆಗಳನ್ನು ಪೂರ್ವಿಕರು ನಿರ್ಮಿಸಿದ್ದಾರೆ. ಇವೆರಡರ ನೆರವಿನಿಂದ ವಾಣಿಜ್ಯ ಬೆಳೆಗಳಾದ ಅಡಿಕೆ ಮತ್ತು ತೆಂಗು ಹಾಗೂ ಆಹಾರ ಬೆಳೆಗಳಾದ ಭತ್ತ, ರಾಗಿಗಳನ್ನು ರೈತರು ಬೆಳೆಯುತ್ತಿದ್ದರು. read more »
Bookmark/Search this post with:
ಇತ್ತೀಚಿನ ಪ್ರತಿಕ್ರಿಯೆ
1 week 5 days ago
2 weeks 5 days ago
11 weeks 3 days ago
11 weeks 6 days ago
14 weeks 3 days ago
15 weeks 5 days ago
17 weeks 12 hours ago
17 weeks 4 days ago
22 weeks 9 hours ago
22 weeks 6 days ago