Blogs

ಹುಬ್ಬಳ್ಳಿಯಲ್ಲಿ "ನೀರ ನಿಶ್ಚಿಂತೆ"

banner-graphic.png

ಹುಬ್ಬಳ್ಳಿಯಲ್ಲಿ ಈ ಭಾನುವಾರ "ನೀರ ನಿಶ್ಚಿಂತೆ!" ಕಾರ್ಯಕ್ರಮ. ಈಗಿನಂತೆ ಇರುವ ನೀರಿನ ಸೆಲೆಗಳನ್ನು ಹೇಗೆ ಚೆನ್ನಾಗಿ ಬಳಸಿಕೊಳ್ಳಬಹುದು ಎಂಬುದರ ಬಗ್ಗೆ ವಿಸ್ತೃತ ಚರ್ಚೆ.

ಕಾರ್ಯಕ್ರಮದ ವಿವರ ಕೆಳಗಿನಂತಿದೆ:

(ಕಾರ್ಯಕ್ರಮಕ್ಕೆ ಮುನ್ನುಡಿ)
ಮೊದಲನೆಯ ಅವಧಿ: ಕಾರ್ಯಕ್ರಮಕ್ಕೊಂದು ಮುನ್ನುಡಿ, (ಸುಮಾರು ೨೦ ನಿಮಿಷ)
ಎರಡನೆಯ ಅವಧಿ: ಸ್ಥಳೀಯ ಸಮುದಾಯದ ಪರಿಚಯ, ಸ್ಥಳೀಯ ಸಮಸ್ಯೆಗಳತ್ತ ಒಂದು ನೋಟ.
(ಸುಮಾರು ೩೦ ನಿಮಿಷ, ೧೫ ನಿಮಿಷ - ಪ್ರಶ್ನೋತ್ತರ)


(ಸಮುದಾಯ)
ಮೂರನೆಯ ಅವಧಿ:  ಆನ್ಲೈನ್ ಸಮುದಾಯದ ಪರಿಚಯ ಹಾಗು ಅದರಲ್ಲಿ ಭಾಗವಹಿಸುವ ಬಗ್ಗೆ ಮಾಹಿತಿ.
ನಾಲ್ಕನೆಯ ಅವಧಿ: ಕಂಪ್ಯೂಟರಿನಲ್ಲಿ ಕನ್ನಡ ಬಳಸಿ ನೀರ ಸಮಸ್ಯೆಗಳು ಮತ್ತದರ ಪರಿಹಾರಗಳ ಕುರಿತು ಬರೆದು ಅರಿವು ಮೂಡಿಸುವುದರ ಬಗ್ಗೆ ಒಂದು ಪುಟ್ಟ ದೃಶ್ಯಾವಳಿ.

ವಿರಾಮ

(ದೃಶ್ಯಾವಳಿ)
ಐದನೆಯ ಅವಧಿ: "ಕಾಲಿ ಬೇಯ್ನ್" (ಸಾಕ್ಷ್ಯಚಿತ್ರ)
ಮರುಪೂರಣ ಕುರಿತ ದೃಶ್ಯಾವಳಿ

(ಚರ್ಚೆ)
ಆರನೆಯ ಅವಧಿ:  ಚರ್ಚೆ.  ಮುಂದೆ ಓದಿ »

'ಕಾಶ್ಮೀರ್ ಟು ಕನ್ಯಾಕುಮಾರಿ' - ನೀರಿನ ಸೆಲೆ ಹಿಡಿದು

ಸಿ ಎಸ್ ಶಾರದಾ ಪ್ರಸಾದ್ ನೀರಿನ ಸೆಲೆಗಳನ್ನು ಹುಡುಕಿಕೊಂಡು ಇಡಿಯ ದೇಶ ಬೈಕಿನಲ್ಲಿ ಸುತ್ತಲು ಹೊರಟದ್ದರ ಬಗ್ಗೆ ಈ ಹಿಂದೆ ಬರೆದಿದ್ದೆ. ಅವರು ೯೦ ದಿನಗಳಲ್ಲಿ ೧೯,೦೦೦ಕ್ಕೂ ಹೆಚ್ಚು ಕಿ.ಮಿ. ಪ್ರಯಾಣ ಮಾಡಿದರೂ ಟ್ರಿಪ್ ಯಶಸ್ವಿಯಾಗಿ ಮುಗಿಸಿಕೊಂಡು ಬಂದದ್ದು ಈಗ ಹಳೆಯ ಸುದ್ದಿ. ಆದರೆ ಈ ಯಾತ್ರೆಯಲ್ಲಿ ಅವರಿಗಾದ ಅನುಭವದ ಪುಟಗಳಲ್ಲಿನ ಭಾಗಗಳನ್ನು ಕೇಳಿ ತಿಳಿದು, ಜೋಡಿಸಿ ಕಳೆದ ವಾರದ ತರಂಗದಲ್ಲಿ ಮಾನ್ಯ ಶ್ರೀ ಪಡ್ರೆಯವರು ಒಂದು ಸಚಿತ್ರ ಲೇಖನ ಬರೆದಿದ್ದಾರೆ. ತರ‌ಂಗದ ಕಾಪಿ ಸಿಕ್ಕರೆ ಓದಿ.  ಮುಂದೆ ಓದಿ »

ಮಳೆ

250px-Rain_in_Kerela_01.jpg

ಸಮುದ್ರ, ಮಹಾಸಾಗರಗಳ ನೀರು ಆವಿಯಾಗಿ ಆಕಾಶ ತಲುಪಿ ಅಲ್ಲಿ ಮೋಡಗಳ ರೂಪದಲ್ಲಿ ಸಂಗ್ರಹವಾಗುತ್ತದೆ. ಮೋಡಗಳ ಸಾಂದ್ರತೆ ಹೆಚ್ಚಿ ಮತ್ತು ಅಲ್ಲಿನ ವಾತಾವರಣ ತಂಪಾದಾಗ ಮೋಡಗಳ ತೇವಾಂಶ ಹನಿಗೂಡಿ ಭೂಮಿಯನ್ನು ಸೇರುತ್ತದೆ.  ಮುಂದೆ ಓದಿ »

ನಮ್ಮ ಕೊಳವೆ ಬಾವಿಯ ಮರುಪೂರಣ

ನೀರು ಕೃಷಿಕನಿಗೆ ಉಸಿರಿದ್ದಂತೆ. ಅಡಿಕೆ ಪತ್ರಿಕೆಯವರು ಹೇಳುವಂತೆ 'ನೀರ ನಿಶ್ಚಿಂತೆ' (ಬಹುಶ: ಶ್ರೀಪಡ್ರೆ ಕಾಯಿನ್ ಮಾಡಿದ ಶಬ್ದ), ನಿಜಕ್ಕೂ ಒಂದು ಸುಂದರ ಅನುಭವ. ನಾನು ಹುಟ್ಟುವುದಕ್ಕೂ ಮೊದಲು, ತಂದೆಯವರು ಆರ್ಥಿಕವಾಗಿ ಆಗಿನ್ನೂ ಸಾಕಷ್ಟು ಅಸ್ಥಿರವಾಗಿದ್ದಾಗ, ವರುಷಾನುಗಟ್ಟಲೆ ನೀರಿಲ್ಲದೆ ಪರದಾಡಿದ್ದರು. ಆ ಕಾಲವೆಲ್ಲ ಕಳೆದ ಮೇಲೆ ನಾನು ಸೆಕೆಂಡ್ ಪಿಯುಸಿಯಲ್ಲಿದ್ದಾಗ ನಾವೊಂದು ಬೋರ್ ವೆಲ್ಲ್ ಮಾಡಿಸಿದೆವು. ಅದು ಬಹಳ ವರ್ಷಗಳವರೆಗೆ ನಮ್ಮೆಲ್ಲಾ ಕೃಷಿಕಾರ್ಯಗಳನ್ನು ಆಧರಿಸುವ ಏಕೈಕ ನೀರಿನ ಮೂಲ ಆಗಿತ್ತು (ಈಗ ಇನ್ನೊಂದು ಬೋರ್ವೆಲ್ಲ್ ಇದೆ). ಆಗ ನಾವು ಅಡಿಕೆ ಪತ್ರಿಕೆಯ ಅನುಭವಗಳನ್ನು ನೋಡಿ ನಮ್ಮ ಬೋರ್ ಗೂ ಮರುಪೂರಣ ಮಾಡಬೇಕೆಂದು ಹೊರಟೆವು. ಬೇರೆ ಬೇರೆ ಕೃಷಿಕರು ಸರಳ ತಂತ್ರಗಳಿಂದ ತೊಡಗಿ ಸಾಕಷ್ಟು ಕ್ಲಿಷ್ಟ ವಿಧಾನಗಳ ವರೆಗೆ ಬೇರೆ ಬೇರೆ ತಂತ್ರಗಳನ್ನು ಪ್ರಯೋಗಿಸಿದ್ದರು. ನಾವು (ಅಂದರೆ ತಂದೆ) ಇದ್ದುದರಲ್ಲಿ ಸರಳವಾದ ವಿಧಾನವನ್ನು ಆಯ್ದುಕೊಂಡೆವು.

ನಮ್ಮ ಬೋರ್ವೆಲ್ ಇರುವ ಜಾಗ ಮೊದಲನೆಯ ಚಿತ್ರದಲ್ಲಿ ತೋರಿಸಿದಂತೆ ಇದೆ. ಬೋರ್ ವೆಲ್ ಇರುವೆಡೆಗೆ ಸ್ಥಳ ಸ್ವಲ್ಪ ಇಳಿಜಾರಾಗಿ ಇದೆ. ಮೊದಲೆಲ್ಲ ನೀರು ಪಕ್ಕದಲ್ಲಿ ಇರುವ ರಸ್ತೆಯ ಮೂಲಕ ಹರಿದು ನಮ್ಮ ಜಾಗದಿಂದ ಹೊರಗೆ ಹೋಗುತ್ತಿತ್ತು. ನಾವು ಅದನ್ನು ಸ್ವಲ್ಪ ತಿರುಗಿಸಿ, ಬೋರ್ ವೆಲ್ ನ ಬದಿಗೆ ಹರಿಸಿದೆವು.  ಮುಂದೆ ಓದಿ »

ದೊಡ್ಡ ನೀರಿನ ತೊಟ್ಟಿ ನೀರಿನ ದುರ್ವ್ಯಯವನ್ನು ತಡೆಯುತ್ತದೆ!

ದೊಡ್ಡ ನೀರಿನ ತೊಟ್ಟಿ

ನೀರಿನ ಧಾರಾಳ ಲಭ್ಯತೆ ಹಲವೊಮ್ಮೆ ಅದರ ದುರ್ವ್ಯಯಕ್ಕೆ ಕಾರಣವಾಗುವುದು ನೀವೆಲ್ಲಾ ಗಮನಿಸಿರಬಹುದು.ದೊಡ್ಡ ದೊಡ್ಡ ಪಂಚತಾರಾ ಹೋಟೆಲುಗಳಲ್ಲಿ,ಶ್ರೀಮಂತರ ಮನೆಗಳಲ್ಲಿ,ದೊಡ್ಡ ನೀರಿನ ಸಂಗ್ರಾಹಕ ತೊಟ್ಟಿಗಳಿದ್ದು,ದಿನದ ಇಪ್ಪತ್ತನಾಲ್ಕು ಗಂಟೆಯೂ ನೀರು ನಳ್ಳಿಯಲ್ಲಿ ಧಾರಾಳವಾ  ಮುಂದೆ ಓದಿ »

ಸಾಂಪ್ರದಾಯಿಕ ಬಾವಿಗಳಿಗೊಂದು ಹೊಸ ಕಳೆ!

ದೊಡ್ಡಬಳ್ಳಾಪುರದ ಬಾವಿ

ವಿಶ್ವನಾಥ್ ಬರೆಯುತ್ತಾರೆ:
"ಶಾಂತ ಶೀಲಾ ನಾಯರ್ ಹಾಗೂ ಭಾರತ ಸರ್ಕಾರದ ರೂರಲ್ ಡಿಪಾರ್ಟ್ಮೆಂಟು, ಸಾಂಪ್ರದಾಯಿಕ ಬಾವಿಗಳನ್ನುಳಿಸುವ ಸಲುವಾಗಿ ಒಂದಷ್ಟು ಗೈಡ್ ಲೈನುಗಳನ್ನು ಹೊರತಂದಿದ್ದಾರೆ.  ಮುಂದೆ ಓದಿ »

Syndicate content