ನಮ್ಮ ಕೊಳವೆ ಬಾವಿಯ ಮರುಪೂರಣ
ನೀರು ಕೃಷಿಕನಿಗೆ ಉಸಿರಿದ್ದಂತೆ. ಅಡಿಕೆ ಪತ್ರಿಕೆಯವರು ಹೇಳುವಂತೆ 'ನೀರ ನಿಶ್ಚಿಂತೆ' (ಬಹುಶ: ಶ್ರೀಪಡ್ರೆ ಕಾಯಿನ್ ಮಾಡಿದ ಶಬ್ದ), ನಿಜಕ್ಕೂ ಒಂದು ಸುಂದರ ಅನುಭವ. ನಾನು ಹುಟ್ಟುವುದಕ್ಕೂ ಮೊದಲು, ತಂದೆಯವರು ಆರ್ಥಿಕವಾಗಿ ಆಗಿನ್ನೂ ಸಾಕಷ್ಟು ಅಸ್ಥಿರವಾಗಿದ್ದಾಗ, ವರುಷಾನುಗಟ್ಟಲೆ ನೀರಿಲ್ಲದೆ ಪರದಾಡಿದ್ದರು. ಆ ಕಾಲವೆಲ್ಲ ಕಳೆದ ಮೇಲೆ ನಾನು ಸೆಕೆಂಡ್ ಪಿಯುಸಿಯಲ್ಲಿದ್ದಾಗ ನಾವೊಂದು ಬೋರ್ ವೆಲ್ಲ್ ಮಾಡಿಸಿದೆವು. ಅದು ಬಹಳ ವರ್ಷಗಳವರೆಗೆ ನಮ್ಮೆಲ್ಲಾ ಕೃಷಿಕಾರ್ಯಗಳನ್ನು ಆಧರಿಸುವ ಏಕೈಕ ನೀರಿನ ಮೂಲ ಆಗಿತ್ತು (ಈಗ ಇನ್ನೊಂದು ಬೋರ್ವೆಲ್ಲ್ ಇದೆ). ಆಗ ನಾವು ಅಡಿಕೆ ಪತ್ರಿಕೆಯ ಅನುಭವಗಳನ್ನು ನೋಡಿ ನಮ್ಮ ಬೋರ್ ಗೂ ಮರುಪೂರಣ ಮಾಡಬೇಕೆಂದು ಹೊರಟೆವು. ಬೇರೆ ಬೇರೆ ಕೃಷಿಕರು ಸರಳ ತಂತ್ರಗಳಿಂದ ತೊಡಗಿ ಸಾಕಷ್ಟು ಕ್ಲಿಷ್ಟ ವಿಧಾನಗಳ ವರೆಗೆ ಬೇರೆ ಬೇರೆ ತಂತ್ರಗಳನ್ನು ಪ್ರಯೋಗಿಸಿದ್ದರು. ನಾವು (ಅಂದರೆ ತಂದೆ) ಇದ್ದುದರಲ್ಲಿ ಸರಳವಾದ ವಿಧಾನವನ್ನು ಆಯ್ದುಕೊಂಡೆವು.
ನಮ್ಮ ಬೋರ್ವೆಲ್ ಇರುವ ಜಾಗ ಮೊದಲನೆಯ ಚಿತ್ರದಲ್ಲಿ ತೋರಿಸಿದಂತೆ ಇದೆ. ಬೋರ್ ವೆಲ್ ಇರುವೆಡೆಗೆ ಸ್ಥಳ ಸ್ವಲ್ಪ ಇಳಿಜಾರಾಗಿ ಇದೆ. ಮೊದಲೆಲ್ಲ ನೀರು ಪಕ್ಕದಲ್ಲಿ ಇರುವ ರಸ್ತೆಯ ಮೂಲಕ ಹರಿದು ನಮ್ಮ ಜಾಗದಿಂದ ಹೊರಗೆ ಹೋಗುತ್ತಿತ್ತು. ನಾವು ಅದನ್ನು ಸ್ವಲ್ಪ ತಿರುಗಿಸಿ, ಬೋರ್ ವೆಲ್ ನ ಬದಿಗೆ ಹರಿಸಿದೆವು.

ನೀರನ್ನು ಹಿಡಿದಿಡಲು ವೆಲ್ ಪಕ್ಕದಲ್ಲಿ ಒಂದು ದೊಡ್ಡದಾದ ಗುಂಡಿಯನ್ನು ತೋಡಿದೆವು. ಬಹುಶ: ಗುಂಡಿ ನನ್ನ ಎದೆಯೆತ್ತರಕ್ಕೆ ಇದೆ. ಅಗಲದ ಅಂದಾಜು ಸಿಕ್ಕಲು ನನ್ನ ಕೊಡೆಯನ್ನು ಅದರ ಪಕ್ಕ ಇಟ್ಟಿದ್ದೇನೆ. ಗುಂಡಿ ತೋಡಿದಾಗ ಸಿಕ್ಕಿದ ಮಣ್ಣನ್ನು ಬದು ಕಟ್ಟಲು ಉಪಯೋಗಿಸಿಕೊಂಡೆವು. ಅದರಿಂದ ಗುಂಡಿಯ effective depth ಸಾಕಷ್ಟು ಹೆಚ್ಚಾದಂತಾಯಿತು.

ನೀರಿಂಗಿಸುವ ಸುಖ!
ಹರಿದು ಹೋಗುವಷ್ಟು ಮಳೆ ಬಂದಾಗಲೆಲ್ಲ ಸುಮಾರು 100X60 ft ಜಾಗದ ನೀರು ಈ ಗುಂಡಿಯೊಳಕ್ಕೆ ಹರಿದು ಬರುತ್ತದೆ. ರಾತ್ರಿಯೆಲ್ಲ ಮಳೆ ಬಂದರೆ ಗುಂಡಿ ತುಂಬಿ, ಬದುವಿನ ಕುತ್ತಿಗೆಯ ತನಕ ನೀರು ಬಂದಿರುತ್ತದೆ. ಆದರೆ ನೀರು ಹೊರಕ್ಕೆ ಹರಿದು ಹೋಗುವುದಿಲ್ಲ.

ಈ ನೀರು ಎಲ್ಲಿಗೆ ಹೋಗುತ್ತದೆ?
ಈ ಪ್ರಶ್ನೆಗೆ ಉತ್ತರ ಹೇಳುವುದು ಸ್ವಲ್ಪ ಕಷ್ಟ. ಬಹುಶ: ಮೂರು ಸಾಧ್ಯತೆಗಳಿವೆ..
ಸುತ್ತಮುತ್ತಲ ತಗ್ಗು ಪ್ರದೇಶದಲ್ಲಿ ಒಂದು ಹೊರದಾರಿಯನ್ನು ಕಂಡುಹುಡುಕಿ ಬಸಿದು ಹೊರಹೋಗಿಬಿಡುತ್ತದೆ (ನಿರಾಶಾವಾದ!)
ಇಂಗಿ ಯಾರದೋ ನೆರೆಹೊರೆಯವರ ಬಾವಿಯ ಅಂತರ್ಜಲ ಹೆಚ್ಚಿಸಬಹುದು
ನಮ್ಮದೇ ಕೊಳವೆಬಾವಿಯ ಅಂತರ್ಜಲ ರೇಖೆಗೆ ಸೇರುತ್ತದೆ
ಮೊದಲ ಸಾಧ್ಯತೆ ಬಹಳ ಕಡಿಮೆ. ಏಕೆಂದರೆ ಹಾಗಿದ್ದಲ್ಲಿ, ಶೇಖರಗೊಂಡ ನೀರು ಬುರ್ರನೆ ಕ್ಷಣಾರ್ಧದಲ್ಲಿ ಖಾಲಿಯಾಗಿಬಿಡಬೇಕಷ್ಟೆ; ಇಲ್ಲಿ ಹಾಗಾಗುತ್ತಿಲ್ಲ.
ನೆರೆಹೊರೆಯವರ ಬಾವಿಯ ಅಂತರ್ಜಲ ಮಟ್ಟ ಹೆಚ್ಚಿದರೆ ನಮಗೆ ಒಂದಿನಿತೂ ಬೇಜಾರಿಲ್ಲ. ಭೂಮಿಯ ಮೇಲ್ಪದರದ ಒಂದು ಅಡಿಯನ್ನಷ್ಟೇ ನಮ್ಮದೆಂದು ನಂಬಿ, ಅದಕ್ಕೆ ಬೇಲಿ ಹಾಕಿ ಇದು ನನ್ನದು ಇದು ನಿನ್ನದು ಎಂದು ವಿಭಾಗಿಸಿಕೊಳ್ಳುವ ವ್ಯವಸ್ಥೆಯೇ ನನಗೆ ಒಮ್ಮೊಮ್ಮೆ ಹಾಸ್ಯಾಸ್ಪದದ ಪರಮಾವಧಿಯಂತೆ ಕಾಣುತ್ತದೆ. ಹಾಗಿರುವಾಗ ಇಂಗಿದ ನೀರು ನಮ್ಮ ಗಡಿರೇಖೆಗಳನ್ನು ಗುರುತಿಸದೆ ತನಗೆ ನೆಮ್ಮದಿಯಾಗುವ ಸ್ಥಳದಲ್ಲಿ ಉಳಕೊಳ್ಳುವುದಿದ್ದರೆ ಇರಲಿ ಬಿಡಿ!
ನಾವು ಈ ಕೊಳವೆಬಾವಿಯನ್ನು ಸುಮಾರು ಕಳೆದ ಹತ್ತು ವರ್ಷದಿಂದ ಉಪಯೋಗಿಸುತ್ತಿದ್ದೇವೆ. ಇಲ್ಲಿಯವರೆಗೆ ನೀರು ಕಡಿಮೆಯಾದ ಯಾವುದೇ ಲಕ್ಷಣ ಇಲ್ಲ. ಅದಕ್ಕೆ ಈ ವ್ಯವಸ್ಥೆಯ ಕಿಂಚಿತ್ ಕೊಡುಗೆ ಇದ್ದಿರಬಹುದಲ್ಲವೇ?. ನಮಗೆ ಇದಕ್ಕಾಗಿ ಹೆಚ್ಚೆಂದರೆ ೨೫೦ ರೂಪಾಯಿ ಖರ್ಚಾಗಿದೆ. ಈ ಖರ್ಚಿನ ಎದುರು ಇದರ ಪ್ರಯೋಜನ ಯಾರಿಗೆ, ಎಷ್ಟು ಆಗಿದೆ ಎನ್ನುವುದು ತೀರಾ ಅಸಂಗತ ಸಂಗತಿಗಳು. ಭೂಮಿ ತಂಪಾಗಲಿ..!
ನೀವೂ ಒಮ್ಮೆ ಪ್ರಯತ್ನಿಸಿ..
ವಸಂತ್ ಕಜೆ.
ಲೇಖಕರು
ವಿಶೇಷ ಬರಹಗಳು
ಇತ್ತೀಚಿನ ಬ್ಲಾಗ್ ಬರಹಗಳು
- ಫೊಟೊ ಅಲ್ಬಮ್
- ಗಣಿಗಾರಿಕೆಯಲ್ಲಿ- ತಡೆಆಣೆಕಟ್ಟು (ಚೆಕ್-ಡ್ಯಾ೦)
- ಪ್ರಥಮ್ ಬುಕ್ಸ್ ""ಕಾವೇರಿ" ಪುಸ್ತಕದ ಬಿಡುಗಡೆ ಮತ್ತು "ನಿಮ್ಮ ನದಿಯನ್ನು ಕಾಪಾಡಿ ನೀರನ್ನು ಉಳಿಸಿ" ಆಂದೋಲನ
- ಇಲ್ಲಿ ‘ಕೊಳಚೆ ನೀರು ಕುಡಿಯುವ ನೀರು’!`ಪಲ್ಸಡ್ ಪ್ಲೇಟ್' ತಂತ್ರಜ್ಞಾನ ಎಸ್.ಡಿ.ಎಂ. ಇಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿಗಳ ಆವಿಷ್ಕಾರ.
- ಮಳೆ ಬಂದರೆ ಬೆಂಗಳೂರಿಗೆ ಭೇದಿ
- ಮಳೆ ಎಂದರೆ ಬಾಲ್ಯದ ನೆನಪು ಕಣಾ...
- ನಾವು ವೃತ್ತಿ/ಕೆಲಸ ಮಾಡುವಲ್ಲಿ ನೀರಿನ ಮಿತಬಳಕೆಯ ಬಗ್ಗೆ ಜಾಗೃತಿ ಹೇಗೆ ಮೂಡಿಸಬಹುದು ?
- ರೇಡಿಯೋದಲ್ಲಿ K2K
- ಮಡಿವಾಳ ಕೆರೆಯ ಉಳಿಸಿ - ಒಂದು ಕೂಗು
- ಕೆರೆ ಕರಗುವ ಸಮಯ: ನಿಮಗಿದೋ ಆಮಂತ್ರಣ
ಇತ್ತೀಚಿನ ಪ್ರತಿಕ್ರಿಯೆ
- Re: ಬ್ಯಾಂಕ್ ಅಧಿಕಾರಿ ...
1 week 3 days ago - Re: ವೃಷಭಾವತಿ ಎಂಬ ನದಿ ...
1 week 4 days ago - Re: ಟಾಯ್ಲೆಟ್ಗೆ ಫ್ಲಶ್ ...
18 weeks 18 hours ago - Re: ಅಕ್ಷಯನಗರ ಕೆರೆಗೆ ...
18 weeks 1 day ago - Re: ವೃಷಭಾವತಿ ಎಂಬ ನದಿ ...
33 weeks 2 days ago - Re: ವೃಷಭಾವತಿ ಎಂಬ ನದಿ ...
33 weeks 3 days ago - Re: ವೃಷಭಾವತಿ ಎಂಬ ನದಿ ...
33 weeks 5 days ago - Re: ವೃಷಭಾವತಿ ಎಂಬ ನದಿ ...
33 weeks 5 days ago - Re: ವೃಷಭಾವತಿ ಎಂಬ ನದಿ ...
33 weeks 6 days ago - Re: ವೃಷಭಾವತಿ ಎಂಬ ನದಿ ...
33 weeks 6 days ago
| Subscribe to IWP Kannada list |
| Visit this group |









Good common sense approach and nice documentation.
Congrats to Vasanth Kaje & his father.
- Shree Padre
ಧನ್ಯವಾದಗಳು ಸರ್,
ವಸಂತ್ ಕಜೆ.
ಚೆನ್ನಾಗಿದೆ ಸ್ವಾಮೀ! ಈ ರೀತಿ ಹೆಚ್ಚಿನವರು ಮಾಡಿದರೆ ಎಷ್ಟೋ ಒಳ್ಳೆಯದಾಗುತ್ತದೆ.
ನಿಮ್ಮ ಪರಿಶ್ರಮ ನಿಜಕ್ಕೂ ಮೆಚ್ಚುವಂತದ್ದು.
ನಾನೂ ಈಗಷ್ಟೆ ನಿರ್ಮಿಸಿರುವ ಮನೆಯಲ್ಲಿ "borewell recharging" ವ್ಯವಸ್ಥೆ ಮಾಡಿಸಿದ್ದೀನಿ. ಇನ್ನು ಕೆಲವು ದಿನಗಳಲ್ಲಿ ಕೊಳವೆಗಳನ್ನು ಅಳವಡಿಸಲಾಗತ್ತೆ. ಕಾತುರದಿಂದ ಕಾದಿದ್ದೇನೆ.. "groundwater/borewell recharging" ಹೇಗೆ ನಡೆಯುತ್ತದೆ ಅಂತ ನೋಡಲಿಕ್ಕೆ...
Dear Vasanth Very good article helful for farmers
A good article .....
ಪ್ರತಿಕ್ರಿಯಿಸಿದವರಿಗೆ ವಂದನೆಗಳು..
ನಿಮ್ಮ ಮರುಪೂರಣದ ಪ್ರಯತ್ನಗಳೂ ಯಶಸ್ವಿಯಾಗಲಿ..
ವಸಂತ್ ಕಜೆ.
ವಸಂತ್,
ಈ ಸರಳ ವಿಧಾನ ನಿಜಕ್ಕೂ ತುಂಬಾ ಪರಿಣಾಮಕಾರಿಯಾಗಿದೆ ಅಂತ ಅನ್ನಿಸತ್ತೆ. ಇದನ್ನು ಇತರರು ಅಳವಡಿಸಿಕೊಳ್ಳುವುದೂ ಸುಲಭವೆಂದು ತೋರುತ್ತದೆ.
ನಮ್ಮ ಮನೆಯ ಬೋರು ೫-೬ ವರ್ಷಗಳ ನಂತರ ನಿಂತು ಹೋದಾಗ ಅದರ ಕೇಸಿಂಗ್ ಪೈಪ್ ತೆಗೆಯದೇ ಮನೆಯ ಮೇಲೆ ಬೀಳುವ ಮಳೆಯ ನೀರು ಅದರಲ್ಲೇ ಇಳಿಯುವ ವ್ಯವಸ್ಥೆ ಮಾಡಿಸಿದ್ದೇವೆ. ಪಕ್ಕದಲ್ಲೇ ಹೊಸ ಬೋರ್ ಇದೆ. ಹೊಸ ಬೋರಿಗೆ ಎಂದೂ ನೀರಿನ ತೊಂದರೆಯಾಗಿಲ್ಲ.
ನಿಮ್ಮ ಇಂಗು ಗುಂಡಿಯ ನೀರು ಮಳೆ ಹೆಚ್ಚಾದಾಗ ಅಲ್ಲಿಯೇ ನಿಂತದ್ದಿದಿಯೇ? ಅದನ್ನು ಇನ್ನೂ ಹೆಚ್ಚು ಅಗಲ ಮಾಡುವ ಸಾಧ್ಯತೆ (ಮತ್ತು ಅದರಿಂದ ಉಪಯೋಗ) ಇದೆಯೆ?
idu "ನಮ್ಮ ಮನೆಯ ಬೋರು ೫-೬ ವರ್ಷಗಳ ನಂತರ ನಿಂತು ಹೋದಾಗ ಅದರ ಕೇಸಿಂಗ್ ಪೈಪ್ ತೆಗೆಯದೇ ಮನೆಯ ಮೇಲೆ ಬೀಳುವ ಮಳೆಯ ನೀರು ಅದರಲ್ಲೇ ಇಳಿಯುವ ವ್ಯವಸ್ಥೆ ಮಾಡಿಸಿದ್ದೇವೆ. ಪಕ್ಕದಲ್ಲೇ ಹೊಸ ಬೋರ್ ಇದೆ. ಹೊಸ ಬೋರಿಗೆ ಎಂದೂ ನೀರಿನ ತೊಂದರೆಯಾಗಿಲ್ಲ." interesting ansatte.
IgAgale iruve koLavE bAviyiMda 2-3 aDi aMtaradalli mattoMdannu tegesidare eraDu oMde jala saMpanmoola baLasikoLLuttaveye?
ಶ್ಯಾಮ್ ಕಶ್ಯಪ್,
ಅಭಿಪ್ರಾಯ ತಿಳಿಸಿದ್ದಕ್ಕೆ ವಂದನೆಗಳು.
ಸದ್ಯಕ್ಕೆ ಆ ಗುಂಡಿಯ ಸಾಮರ್ಥ ಅದಕ್ಕೆ ಬಂದು ಬೀಳುವ ನೀರಿನ ಸಾಮರ್ಥಕ್ಕೆ ಹೊಂದಿಕೆಯಾಗುತ್ತಿದೆ. ಅದು ಯಾವತ್ತೂ ತುಂಬಿ ಹೊರಹರಿದಿದ್ದಿಲ್ಲ. ಬಹುಶ: ಇನ್ನು ಹೆಚ್ಚು ನೀರು ಬೀಳುವಂತೆ ಮಾಡಿ, ಗುಂಡಿಯ ಸಾಮರ್ಥ್ಯವನ್ನು ಹೆಚ್ಚಿಸಬಹುದೇನೋ..
ಮರುಪೂರಣ ಸ್ವಲ್ಪ ಮಟ್ಟಿಗೆ gambling (ಪ್ರಯೋಜನ ಸಿಗದಿರಬಹುದು ಅಥವಾ ಮಾಡಿದವರಿಗೆ ಸಿಗದಿರಬಹುದು) ಆದ್ದರಿಂದ ಇದ್ದುದರಲ್ಲಿ ಸರಳ ಪ್ರಯೋಗಗಳು ಸಾಮಾನ್ಯ ಕೃಷಿಕನಿಗೆ ಒಳ್ಳೆಯದು.
ಪ್ರಸನ್ನ,
ಕೊಳವೆಬಾವಿಯ ಜಲಮೂಲಗಳ ಕಥೆ ಸ್ವಲ್ಪ ಮಜಾ ಇರುತ್ತವೆ. ಅಕ್ಕ ಪಕ್ಕದಲ್ಲೇ ಒಂದರಲ್ಲಿ ನೀರಿದ್ದರೂ ಇನ್ನೊಂದರಲ್ಲಿ ಇರುವುದಿಲ್ಲ. ಬಹುಶ: ಅಂತರ್ಜಲ ರೇಖೆಗಳು ಭೂಮಿಯೊಳಗೆ ಓರೆಕೋರೆಯಾಗಿ ಇರುತ್ತವೆ. ಮತ್ತು ಕಾಲಾನುಕ್ರಮದಲ್ಲಿ ನದಿಗಳು ಪಾತ್ರ ಬದಲಿಸಿದಂತೆ ಇವೂ ಪಾತ್ರ ಬದಲಿಸುತ್ತವೆ. ಇದರ ಬಗ್ಗೆ ಹೆಚ್ಚು ಹೇಳುವಷ್ಟು ನಾನು ಜ್ನಾನಿಯಲ್ಲ!
ವಸಂತ್ ಕಜೆ.
good article,
we badly need this kind of work. we are already applied in our bore well and we are going to suggest others also
thank you
Post new comment