Submitted by VasanthKaje on Sun, 03/08/2008 - 12:03.
ನೀರು ಕೃಷಿಕನಿಗೆ ಉಸಿರಿದ್ದಂತೆ. ಅಡಿಕೆ ಪತ್ರಿಕೆಯವರು ಹೇಳುವಂತೆ 'ನೀರ ನಿಶ್ಚಿಂತೆ' (ಬಹುಶ: ಶ್ರೀಪಡ್ರೆ ಕಾಯಿನ್ ಮಾಡಿದ ಶಬ್ದ), ನಿಜಕ್ಕೂ ಒಂದು ಸುಂದರ ಅನುಭವ. ನಾನು ಹುಟ್ಟುವುದಕ್ಕೂ ಮೊದಲು, ತಂದೆಯವರು ಆರ್ಥಿಕವಾಗಿ ಆಗಿನ್ನೂ ಸಾಕಷ್ಟು ಅಸ್ಥಿರವಾಗಿದ್ದಾಗ, ವರುಷಾನುಗಟ್ಟಲೆ ನೀರಿಲ್ಲದೆ ಪರದಾಡಿದ್ದರು. ಆ ಕಾಲವೆಲ್ಲ ಕಳೆದ ಮೇಲೆ ನಾನು ಸೆಕೆಂಡ್ ಪಿಯುಸಿಯಲ್ಲಿದ್ದಾಗ ನಾವೊಂದು ಬೋರ್ ವೆಲ್ಲ್ ಮಾಡಿಸಿದೆವು. ಅದು ಬಹಳ ವರ್ಷಗಳವರೆಗೆ ನಮ್ಮೆಲ್ಲಾ ಕೃಷಿಕಾರ್ಯಗಳನ್ನು ಆಧರಿಸುವ ಏಕೈಕ ನೀರಿನ ಮೂಲ ಆಗಿತ್ತು (ಈಗ ಇನ್ನೊಂದು ಬೋರ್ವೆಲ್ಲ್ ಇದೆ). ಆಗ ನಾವು ಅಡಿಕೆ ಪತ್ರಿಕೆಯ ಅನುಭವಗಳನ್ನು ನೋಡಿ ನಮ್ಮ ಬೋರ್ ಗೂ ಮರುಪೂರಣ ಮಾಡಬೇಕೆಂದು ಹೊರಟೆವು. ಬೇರೆ ಬೇರೆ ಕೃಷಿಕರು ಸರಳ ತಂತ್ರಗಳಿಂದ ತೊಡಗಿ ಸಾಕಷ್ಟು ಕ್ಲಿಷ್ಟ ವಿಧಾನಗಳ ವರೆಗೆ ಬೇರೆ ಬೇರೆ ತಂತ್ರಗಳನ್ನು ಪ್ರಯೋಗಿಸಿದ್ದರು. ನಾವು (ಅಂದರೆ ತಂದೆ) ಇದ್ದುದರಲ್ಲಿ ಸರಳವಾದ ವಿಧಾನವನ್ನು ಆಯ್ದುಕೊಂಡೆವು.
ನಮ್ಮ ಬೋರ್ವೆಲ್ ಇರುವ ಜಾಗ ಮೊದಲನೆಯ ಚಿತ್ರದಲ್ಲಿ ತೋರಿಸಿದಂತೆ ಇದೆ. ಬೋರ್ ವೆಲ್ ಇರುವೆಡೆಗೆ ಸ್ಥಳ ಸ್ವಲ್ಪ ಇಳಿಜಾರಾಗಿ ಇದೆ. ಮೊದಲೆಲ್ಲ ನೀರು ಪಕ್ಕದಲ್ಲಿ ಇರುವ ರಸ್ತೆಯ ಮೂಲಕ ಹರಿದು ನಮ್ಮ ಜಾಗದಿಂದ ಹೊರಗೆ ಹೋಗುತ್ತಿತ್ತು. ನಾವು ಅದನ್ನು ಸ್ವಲ್ಪ ತಿರುಗಿಸಿ, ಬೋರ್ ವೆಲ್ ನ ಬದಿಗೆ ಹರಿಸಿದೆವು. ಮುಂದೆ ಓದಿ »
Bookmark/Search this post with:
Recent comments
6 days 10 hours ago
6 days 20 hours ago
1 week 4 days ago
1 week 6 days ago
2 weeks 3 hours ago
2 weeks 6 hours ago
2 weeks 2 days ago
2 weeks 3 days ago
2 weeks 3 days ago
2 weeks 4 days ago