ಬತ್ತಿದ ಕೊಳವೆಬಾವಿಯಲ್ಲಿ ಉಕ್ಕಿದ ಗಂಗೆ

ಮುಖಪುಟ

ನಾಗರೀಕತೆಯನ್ನು ಬದಲಾಯಿಸಿದ , ನಗರೀಕರಣ, ಉದ್ಯಮೀಕರಣಕ್ಕೆ ಹಾಗು ಹಸಿರು ಕ್ರಾಂತಿಗೆ ನಾಂದಿ ಹಾಡಿದ ಒಂದು ದೊಡ್ಡ ಶಕ್ತಿ ಕೊಳವೆಬಾವಿ. ಕೊಳವೆಬಾವಿ ಅದನ್ನು ಹೀರುವ ಒಂದು ಮಾಧ್ಯಮ ಮಾತ್ರ. ಆದರೆ ಯಾವುದೇ ಕಡಿವಾಣವಿಲ್ಲದೆ ಮನಬಂದ ರೀತಿಯಲ್ಲಿ, ಎಲ್ಲರಿಂದಲೂ ದುರುಪಯೋಗಗೊಂಡಿರುವ ಅಮೂಲ್ಯ ವಸ್ತು - ಅಂತರ್ಜಲ.

ಇಂದಿನ ಕೊಳವೆಬಾವಿ ಸಮಸ್ಯೆಗಳಿಗೆ ಸಮಾಧಾನಗಳನ್ನು ಹುಡುಕಲು ಪೂರಕವಾದ ಒಂದು ಪುಸ್ತಕವನ್ನು ನವಕರ್ನಾಟಕ ಪ್ರಕಾಶನ ಹೊರತಂದಿದೆ. ಆದೇ ನುರಿತ ಅಂತರ್ಜಲ ತಜ್ಞ ದೇವರಾಜ ರೆಡ್ಡಿಯವರ ಹೊಸ ಹೊತ್ತಿಗೆ - ಬತ್ತಿದ ಕೊಳವೆಬಾವಿಯಲ್ಲಿ ಉಕ್ಕಿದ ಗಂಗೆ.

ತಂತ್ರಜ್ಞಾನಕ್ಕೆ ಮಾತ್ರ ಒತ್ತುಕೊಡದೆ, ಅಂತರ್ಜಲದ ಸಂಕ್ಷಿಪ್ತ ಇತಿಹಾಸವನ್ನು ನಮ್ಮ ಮುಂದಿಟ್ಟಿದ್ದಾರೆ. ಪುಸ್ತಕದ ಮೊದಲನೆಯ ಭಾಗದಲ್ಲಿ ದೇವರಾಜ ರೆಡ್ಡಿಯವರು ನಮ್ಮ ದೇಶದ ನೀರಿನ ಪರಿಸ್ಥಿತಿ, ಇತ್ತೀಚೆಗೆ ಆಗಿರುವ ಬದಲಾವಣೆಗಳು, ಪ್ರಕೃತಿಯ ಮೇಲೆ ನಾವು ಹೇರುತ್ತಿರುವ ಒತ್ತಡದ ಪರಿಣಾಮ, ಗಣಿಗಾರಿಕೆಯಿಂದ ಕುಸಿಯುತ್ತಿರುವ ಅಂತರ್ಜಲ, ಹೀಗೆ ಒಂದು ಸಣ್ಣ ಪರಿಚಯದಿಂದ ಆರಂಭಿಸಿ ದೊಡ್ಡ ಸಮಸ್ಯೆಯ ವಿಶ್ಲೇಷಣೆಯಲ್ಲಿ ಕೊನೆಗೊಳಿಸುತ್ತಾರೆ.

ಪುಸ್ತಕದ ಎರಡನೇ ಭಾಗ ಅಂತರ್ಜಲದ ಶೋಷಣೆಯನ್ನು ಕಡಿಮೆಗೊಳಿಸಲು ಬಳಸಬಹುದಾದ ತಂತ್ರಜ್ಞಾನಗಳ ಕುರಿತಾಗಿದೆ. ಈ ಭಾಗದಲ್ಲಿ ರೆಡ್ಡಿಯವರು ಎರಡು ದಶಕಕ್ಕೂ ಹೆಚ್ಚಿನಿಂದ ಅಂತರ್ಜಲವನ್ನು ಸಂಶೋಧಿಸುತ್ತಾ ಬಂದಿರುವವರು. ಕಳೆದ ದಶಕದಲ್ಲಿ ಸುಮಾರು ೨೫೦೦ಕ್ಕೂ ಹೆಚ್ಚು ಕೊಳವೆ ಬಾವಿಗಳಿಗೆ ಜೀವ ತುಂಬಿದ್ದಾರೆ. ಅವರ ಪರಿಣಿತಿಯ ವೈಶಿಷ್ಟ್ಯ ಬರೀ ತಂತ್ರಜ್ಞಾನ ಅಲ್ಲ, ಜನ ಸಾಮಾನ್ಯನೂ ಸಹ ಸ್ವಶಕ್ತಿಯಿಂದ, ಅತ್ಯಲ್ಪ ಖರ್ಚಿನಿಂದ ತಂತ್ರಜ್ಞಾನವನ್ನು ಅನುಷ್ಟಾನಕ್ಕೆ ತರಬಹುದಾದಂತಹ ಸರಳತೆ ಕೂಡ.

ಮೂರನೆಯ ಭಾಗದಲ್ಲಿ ರೆಡ್ಡಿಯವರ ಜಲಯಜ್ಞದ ಯಶೋಗಥೆಗಳನ್ನು ವಿವರಿಸಲಾಗಿದೆ. ಮನೆ, ಶಾಲೆ, ಕೈಗಾರಿಕೆ ಹೀಗೆ ಪ್ರತಿಯೊಂದು ಜಾಗಕ್ಕೂ ಸೂಕ್ತವಾದ ಉಪಾಯಗಳನ್ನು ಉದಾಹರಿಸುತ್ತಾ, ರೆಡ್ಡಿಯವರು ಸೂರಿನ ಮೇಲೆ ಬೀಳುವ ಮಳೆ ನೀರನ್ನು ಸರಳ ಹಾಗು ಸುಲಭವಾದ ರೀತಿಯಲ್ಲಿ ಬಳಸುವ ವಿಧಾನಗಳನ್ನು ತಿಳಿಸುತ್ತಾರೆ.

ಇನ್ನೆರಡು ತಿಂಗಳುಳಲ್ಲಿ ಗುಡುಗಿಕ್ಕಿ ಹರಿಯುವ ಮಳೆಯನ್ನು ಹಿಡಿಯಲು ತಯಾರಿ ನಡೆಸಲು ಇದು ಸರಿಯಾದ ಸಮಯ. ರೆಡ್ಡಿಯವರ ಈ ಪುಸ್ತಕ ಹಲವರಿಗೆ ಪ್ರೇರಕ ಹಾಗೂ ಮಾರ್ಗದರ್ಶಕವಾಗಲಿದೆ. ಸಮಯೋಚಿತವಾಗಿ ನವಕರ್ನಾಟಕ ಪ್ರಕಾಶನ ಈ ಪುಸ್ತಕವನ್ನು ಹೊರತಂದಿದೆ.
ಪುಸ್ತಕದ ಐ ಎಸ್ ಬಿ ಏನ್ ಸಂಖ್ಯೆ - 978-81-8467-057-8
ಬೆಲೆ - ರೂ.೮೦

Namaste

If I want this book whom can I contact.
Please let me know

Girish

You can get the book here:
Navakarnataka Publications Pvt. Ltd.
Embassy Centre, 11,Crescent Road
Kumara Park (East) Post Box 5159
Bangalore - 560 001
Phone: 080-22203580

You can even contact Devraj Reddy on - 94481 25498

Post new comment

The content of this field is kept private and will not be shown publicly.