ಒಂದಾದರೂ ಕೊಳವೆ ಬಾವಿ ಇಲ್ಲದ ಊರನ್ನು ಇದೇ ಮೊದಲು ನಾನು ನೋಡಿದ್ದು. ಕೊಳವೆ ಬಾವಿ ಇರಲಿ ತೆರೆದ ಬಾವಿಗಳಾಗಲೀ, ಕಟ್ಟೆ-ಕುಂಟೆ-ಒರತೆಗಳಾಗಲೀ ಇಲ್ಲದ ಊರದು. ಜನರು ಅಂತರ್ಜಲದ ಸುದ್ದಿಗೇ ಹೋಗುವುದಿಲ್ಲ. ಹರಿಯುವ ನೀರು ಇಲ್ಲಿನ ಸಕಲ ಸರ್ವಸ್ವ. ವಾರಕ್ಕೊಮ್ಮೆ ನೀರಿನ ದರ್ಶನ ಪಡೆಯುವ, ನೀರಿನ ಸಮರ್ಪಕ ಪಾಲಿಗಾಗಿ ಬಿಂದಿಗೆ, ಬಕೀಟುಗಳನ್ನಿಡಿದು ಗುದ್ದಾಡುವ ನಿತ್ಯ ಬರಗಾಲದ ಊರಿನವರಿಗೆ ಹೋದವರಿಗೆ ಈ ಊರಿನ ನೀರ ಸಮೃದ್ಧಿಯನ್ನು ಕಂಡರೆ ಅಪಾರ ಸಂತೋಷವಾಗುತ್ತದೆ.
ಇಂತಹ ನೀರ ಸಮೃದ್ಧಿಯ ಊರಿನ ಹೆಸರು ಶಿವಪುರ. ಉತ್ತರ ಕನ್ನಡ ಜಿಲ್ಲೆ ಜೋಯಿಡಾ ತಾಲ್ಲೂಕಿನ ದಟ್ಟ ಅರಣ್ಯವೊಂದರ ಬುಡದಲ್ಲಿ ಹರಡಿರುವ 50 ಮನೆಗಳ, 275 ಜನಸಂಖ್ಯೆಯ ಮಲೆನಾಡ ಹಳ್ಳಿ. ಈ ಪುಟ್ಟ ಹಳ್ಳಿಗೆ ಐತಿಹಾಸಿಕ ಮಹತ್ವವೂ ಇದೆ.
ಕಲ್ಯಾಣದಲ್ಲಿ ಬಸವಣ್ಣನವರ ಸಾಮಾಜಿಕ ಸುಧಾರಣೆಯನ್ನು ಸಹಿಸದವರ ಕುತಂತ್ರದಿಂದ ಕ್ರಾಂತಿಯುಂಟಾದುದು ನಮಗೆಲ್ಲಾ ತಿಳಿದ ವಿಷಯ. ಆ ಸಂದರ್ಭದಲ್ಲಿ ಅಲ್ಲಿನ ಅಮೂಲ್ಯ ಗ್ರಂಥಗಳನ್ನು ಕಾಪಾಡುವ ಸಲುವಾಗಿ ಮತ್ತು ಆಶ್ರಯಕ್ಕಾಗಿ ಶರಣರು ವಿವಿಧ ಪ್ರದೇಶಗಳಿಗೆ ವಲಸೆ ಹೋಗುತ್ತಾರೆ,
ಅವರಲ್ಲಿ ಚನ್ನಬಸವಣ್ಣನವರು ಶಿವಪುರದ ಪ್ರದೇಶಕ್ಕೆ ಬರುತ್ತಾರೆ. ಶಿವಪುರದ ಗೌಡ ಜನಾಂಗದ ಮುಖ್ಯಸ್ಥ ‘ರಕ್ಷಿ' ಎಂಬುವರು ಚನ್ನಬಸವಣ್ಣನಿಗೆ ರಕ್ಷಣೆ ನೀಡಿದ್ದರಿಂದ ಇಲ್ಲಿನ ಘಟ್ಟ ಪ್ರದೇಶಕ್ಕೆ ‘ರಕ್ಷಿ ಘಟ್ಟ' ಎಂಬ ಹೆಸರೂ ಇದೆ. ಈಗಲೂ ಸಹ ಪಕ್ಕದ ಉಳವಿಯಲ್ಲಿ ಚನ್ನ ಬಸವಣ್ಣನ ಆಲಯವಿದೆ. ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತದೆ. read more »
Bookmark/Search this post with:
ಇತ್ತೀಚಿನ ಪ್ರತಿಕ್ರಿಯೆ
2 weeks 4 days ago
3 weeks 4 days ago
12 weeks 1 day ago
12 weeks 5 days ago
15 weeks 2 days ago
16 weeks 4 days ago
17 weeks 6 days ago
18 weeks 3 days ago
22 weeks 6 days ago
23 weeks 5 days ago