hpn's blog

ವಾಟರ್ ಏಶಿಯ - ೨೦೦೮

೧೦ ರಿಂದ ೧೨ ಡಿಸೆಂಬರ್, ಪ್ರಗತಿ ಮೈದಾನ, ಹೊಸ ದೆಹಲಿ - ಇಲ್ಲಿ ಈ ವರ್ಷದ "ವಾಟರ್ ಏಶಿಯ" ಕಾರ್ಯಕ್ರಮ ನಡೆಯಲಿದೆಯಂತೆ. ನೀರಿನ ಬಳಕೆ ಹೆಚ್ಚುತ್ತಿರುವಂತೆ ನೀರ ಸುತ್ತ  ಒಂದು ಉದ್ಯಮವೇ ಬೆಳೆದಿದೆ. ಈ ಉದ್ಯಮದ ಹಲವರು ಇದರಲ್ಲಿ ಪಾಲ್ಗೊಳ್ಳುವರು ಎನ್ನುತ್ತದೆ ಇದರ ಕುರಿತ ವೆಬ್ಸೈಟ್:

 

ನೀರಿನ ಉದ್ಯಮ ಮತ್ತಷ್ಟು ಗರಿಬಿಚ್ಚುತ್ತಿರುವಂತೆ ಇಂತಹ ಕಾರ್ಯಕ್ರಮಗಳಲ್ಲಿ ಚರ್ಚಿಸಲ್ಪಡುವ ವಿಷಯಗಳು, ಅಲ್ಲಿ ಪರಿಚಯಿಸುವ ಹೊಸ ಪದ್ಧತಿಗಳು, ಹೊಸ ತಂತ್ರಜ್ಞಾನ ಹಾಗೂ ಅವು ತಂದೊಡ್ಡುವ ಬದಲಾವಣೆಗಳು ಕುತೂಹಲ ಕೆರಳಿಸುವ ವಿಷಯಗಳು ಎಂಬುದಂತೂ ನಿಜ. ಆ ಎರಡು ದಿನ ನೀವು ದೆಹಲಿಯಲ್ಲಿದ್ದು ಈ ಕಾರ್ಯಕ್ರಮಕ್ಕೆ ಭೇಟಿ ಕೊಡಲು ಸಾಧ್ಯವಾದರೆ ನಿಮಗೆ ಕಂಡದ್ದನ್ನು ನಮಗೆ ಬರೆದು ಕಳುಹಿಸಬಹುದು ಅಥವ ಇಲ್ಲಿಯೇ ವಾಟರ್ ಪೋರ್ಟಲ್ಲಿನಲ್ಲಿ ನೇರ ಪ್ರಕಟಿಸಲೂಬಹುದು.  ಮುಂದೆ ಓದಿ »

ಹುಬ್ಬಳ್ಳಿಯಲ್ಲಿ "ನೀರ ನಿಶ್ಚಿಂತೆ"

banner-graphic.png

ಹುಬ್ಬಳ್ಳಿಯಲ್ಲಿ ಈ ಭಾನುವಾರ "ನೀರ ನಿಶ್ಚಿಂತೆ!" ಕಾರ್ಯಕ್ರಮ. ಈಗಿನಂತೆ ಇರುವ ನೀರಿನ ಸೆಲೆಗಳನ್ನು ಹೇಗೆ ಚೆನ್ನಾಗಿ ಬಳಸಿಕೊಳ್ಳಬಹುದು ಎಂಬುದರ ಬಗ್ಗೆ ವಿಸ್ತೃತ ಚರ್ಚೆ.

ಕಾರ್ಯಕ್ರಮದ ವಿವರ ಕೆಳಗಿನಂತಿದೆ:

(ಕಾರ್ಯಕ್ರಮಕ್ಕೆ ಮುನ್ನುಡಿ)
ಮೊದಲನೆಯ ಅವಧಿ: ಕಾರ್ಯಕ್ರಮಕ್ಕೊಂದು ಮುನ್ನುಡಿ, (ಸುಮಾರು ೨೦ ನಿಮಿಷ)
ಎರಡನೆಯ ಅವಧಿ: ಸ್ಥಳೀಯ ಸಮುದಾಯದ ಪರಿಚಯ, ಸ್ಥಳೀಯ ಸಮಸ್ಯೆಗಳತ್ತ ಒಂದು ನೋಟ.
(ಸುಮಾರು ೩೦ ನಿಮಿಷ, ೧೫ ನಿಮಿಷ - ಪ್ರಶ್ನೋತ್ತರ)


(ಸಮುದಾಯ)
ಮೂರನೆಯ ಅವಧಿ:  ಆನ್ಲೈನ್ ಸಮುದಾಯದ ಪರಿಚಯ ಹಾಗು ಅದರಲ್ಲಿ ಭಾಗವಹಿಸುವ ಬಗ್ಗೆ ಮಾಹಿತಿ.
ನಾಲ್ಕನೆಯ ಅವಧಿ: ಕಂಪ್ಯೂಟರಿನಲ್ಲಿ ಕನ್ನಡ ಬಳಸಿ ನೀರ ಸಮಸ್ಯೆಗಳು ಮತ್ತದರ ಪರಿಹಾರಗಳ ಕುರಿತು ಬರೆದು ಅರಿವು ಮೂಡಿಸುವುದರ ಬಗ್ಗೆ ಒಂದು ಪುಟ್ಟ ದೃಶ್ಯಾವಳಿ.

ವಿರಾಮ

(ದೃಶ್ಯಾವಳಿ)
ಐದನೆಯ ಅವಧಿ: "ಕಾಲಿ ಬೇಯ್ನ್" (ಸಾಕ್ಷ್ಯಚಿತ್ರ)
ಮರುಪೂರಣ ಕುರಿತ ದೃಶ್ಯಾವಳಿ

(ಚರ್ಚೆ)
ಆರನೆಯ ಅವಧಿ:  ಚರ್ಚೆ.  ಮುಂದೆ ಓದಿ »

'ಕಾಶ್ಮೀರ್ ಟು ಕನ್ಯಾಕುಮಾರಿ' - ನೀರಿನ ಸೆಲೆ ಹಿಡಿದು

ಸಿ ಎಸ್ ಶಾರದಾ ಪ್ರಸಾದ್ ನೀರಿನ ಸೆಲೆಗಳನ್ನು ಹುಡುಕಿಕೊಂಡು ಇಡಿಯ ದೇಶ ಬೈಕಿನಲ್ಲಿ ಸುತ್ತಲು ಹೊರಟದ್ದರ ಬಗ್ಗೆ ಈ ಹಿಂದೆ ಬರೆದಿದ್ದೆ. ಅವರು ೯೦ ದಿನಗಳಲ್ಲಿ ೧೯,೦೦೦ಕ್ಕೂ ಹೆಚ್ಚು ಕಿ.ಮಿ. ಪ್ರಯಾಣ ಮಾಡಿದರೂ ಟ್ರಿಪ್ ಯಶಸ್ವಿಯಾಗಿ ಮುಗಿಸಿಕೊಂಡು ಬಂದದ್ದು ಈಗ ಹಳೆಯ ಸುದ್ದಿ. ಆದರೆ ಈ ಯಾತ್ರೆಯಲ್ಲಿ ಅವರಿಗಾದ ಅನುಭವದ ಪುಟಗಳಲ್ಲಿನ ಭಾಗಗಳನ್ನು ಕೇಳಿ ತಿಳಿದು, ಜೋಡಿಸಿ ಕಳೆದ ವಾರದ ತರಂಗದಲ್ಲಿ ಮಾನ್ಯ ಶ್ರೀ ಪಡ್ರೆಯವರು ಒಂದು ಸಚಿತ್ರ ಲೇಖನ ಬರೆದಿದ್ದಾರೆ. ತರ‌ಂಗದ ಕಾಪಿ ಸಿಕ್ಕರೆ ಓದಿ.  ಮುಂದೆ ಓದಿ »

Syndicate content