ನೀರು ಮತ್ತು ಪರಿಸರ
Environmental flows/water for nature ಅಥವಾ ಪರಿಸರಕ್ಕೆ ನೀರು?
ಇದು ಸಾಮಾನ್ಯ ಜನತೆಯನ್ನು ಹಳ್ಳಿಗಾಡಿನ ಜನರನ್ನು ಸ್ವಲ್ಪ ಗಾಬರಿಗೊಳಿಸುತ್ತದೆ.
ಇದೇನು ಇವರು ಪರಿಸರಕ್ಕೆ ನೀರುಣಿಸಲು ಹೋಗುತ್ತಿದ್ದಾರಲ್ಲ ಎಂದು. ನೀರು ಮತ್ತು ಪರಿಸರ
ನಮ್ಮ ನಾಡಿನ ಜನತೆಯಲ್ಲಿ ಎಂದೂ ಬೇರೆ ಬೇರೆಯಾಗಿ ಕಂಡಿಲ್ಲ ಅದೇರಡು ಒಂದರ ಒಳಗೊಂದು
ಶತಮಾನಗಳಿಂದ ಬೆರೆತುಹೋಗಿದೆ. ಆದರೇ ಇತ್ತೀಚೆಗೆ ನದಿ ಹರಿಯುವಿಕೆಗೆ ಅಣೆಕಟ್ಟುಗಳ
ಸಂಖ್ಯೆ ಏರಿಕೆಯಾದ್ದರಿಂದ ಈ ಹೊಸ ವಿಷಯ ಪರಿಸರ ವಿಜ್ನಾನದ ಸಂಶೋಧನೆಯಲ್ಲಿ ಬಹಳ
ಪ್ರಾಮುಖ್ಯತೆ ವಹಿಸುತ್ತಿದೆ. ಇದರ ಬಗ್ಗೆ ಮಾತನಾಡ ಹೊರಟರೆ ದಿನಗಟ್ಟಲೇ
ಮಾತನಾಡಬಹುದಾದರೂ ಇಲ್ಲಿ ನಾನು ಸಂಕ್ಷಿಪ್ತವಾಗಿ ಇದರ ಪರಿಚಯವನ್ನು ನಿಮ್ಮ ಮುಂದಿಡಲು
ಬಯಸಿದ್ದೇನೆ. ನಾನು ಮೈಸೂರು ವಿ.ವಿ.ಯಲ್ಲಿ ನನ್ನ ಪಿ.ಎಚ್.ಡಿ. ಪದವಿಗಾಗಿ
ಆರಿಸಿಕೊಂಡಿರುವ Environmental flows in Tungabhadra River, ಬಗ್ಗೆ ಆಗ್ಗಾಗ್ಗೆ
ತಮ್ಮ ಮುಂದೆ ಚರ್ಚಿಸಲು ಬಯಸಿ ಈ ಲೇಖನವನ್ನು ಬರೆಯುತ್ತಿದ್ದೇನೆ. ಸಂಶೋಧನೆಯಂಬುದು
ಕೇವಲ ವಿಜ್ನಾನಿಗಳ ಮಟ್ಟದಲ್ಲೇ ಉಳಿದು ಸಾಮಾನ್ಯ ಜನತೆಗೆ ಅದರ ಆಗು ಹೋಗು ಗಳು
ತಿಳಿಯುತಿಲ್ಲ. ಇಂಥಹ ಜಾಗೃತಿಗೆ ವೇದಿಕೆ ರೂಪಿಸಿರುವ ಸಂಪದ ಮತ್ತು ಆರ್ಗ್ಯಾಮ್
ಸಂಸ್ಥೆಗೆ ನನ್ನ ವಂದನೆಗಳು.
ಪರಿಸರ ದ್ರವ್ಯ ಅಥವಾ ಎನ್ವಿರಾನ್ಮೆಂಟಲ್ ಫ್ಲೋಸ್ ಎಂದರೇನು?
ಪರಿಸರವನ್ನು ಸುಸ್ಥಿಯಲ್ಲಿಡಲು ಅವಶ್ಯಕತೆಯಿರುವ ಕನಿಷ್ಠ ನೀರಿನ ಬಳಕೆಯನ್ನು ಪರಿಸರ
ದ್ರವ್ಯವೆನ್ನುತ್ತೇವೆ. ೧೯೭೨ರ ಸ್ಟಾಕ್ ಹೋಮ್ ಕಮ್ಮಟದಲ್ಲಿ ಇದು ಕನಿಷ್ಟ ನೀರಿನ
ಬೇಡಿಕೆಯೆಂದು ನಿರ್ಧರಿಸಿತ್ತು ಆದರೇ, ಇತ್ತೀಚಿನ ಸಂಶೋಧನೆಯ ಪ್ರಕಾರ ಕೇವಲ ಕನಿಷ್ಟ
ನೀರನ್ನು ಪರಿಸರ ದ್ರವ್ಯವೆನ್ನಲಾಗುವುದಿಲ್ಲ. ಪರಿಸರವನ್ನು ಸುಸ್ಥಿಯಲ್ಲಿಡಲು
ಅವಶ್ಯಕತೆಯಿರುವ ಅಷ್ಟೂ ನೀರನ್ನು ಪರಿಸರ ದ್ರವ್ಯವೆನ್ನಬಹುದೆಂದು ತೀರ್ಮಾನಿಸಲಾಗಿದೆ.
ಅಂದರೆ ಇದನ್ನು ಕಂಡುಹಿಡಿದು ಇಷ್ಟೇ ನೀರಿನ ಅವಶ್ಯಕವೆಂದು ನಿರ್ದರಿಸುವುದು ಹೇಗೆ? ಯಾವ
ಮಾಪನಗಳನ್ನು ಬಳಸಲಾಗುತ್ತದೆ, ಇದು ಹೆಚ್ಚಿನ ಕುತೂಹಲಕಾರಿಯಾಗಿದೆ. ಪ್ರಪಂಚದ್ಯಾಂತ ೨೦೦
ಕ್ಕೂ ಹೆಚ್ಚು ಬಗೆಯ ವಿಧಾನಗಳಿವೆಯಂದು ದೃಢಪಡಿಸಿದ್ದಾರೆ. ೭೦ರ ದಶಕದಲ್ಲಿ ಕೇವಲ,
ಒಲಹರಿವು ಮತ್ತು ಹೊರಹರಿವನ್ನು ಮುಂದಿಟ್ಟುಕೊಂಡು ನಿರ್ಧರಿಸುತ್ತಿದ್ದರು, ನಂತರ ೮೦ರ
ದಶಕದಲ್ಲಿ ಅದನ್ನು ಮಾರ್ಪಾಡು ಮಾಡಿ, ಭೌಗೋಳಿಕ ಅಂಶಗಳನ್ನು ಮತ್ತು ಜೀವ ಸಂಕುಲವನ್ನು
ಗಣನೆಗೆ ತೆಗೆದು ಕೊಂಡು ನಿರ್ಧರಿಸತೊಡಗಿದರು. ೯೦ರ ದಶಕದಲ್ಲಿ ಅದು ಇನ್ನು
ಮುಂದುವರೆದು, ಕೇವಲ ಒಂದು ಜೀವಸಂಕುಲದಿಂದ ನಿರ್ದರಿಸಲಾಗುವುದಿಲ್ಲವೆಂದು ತೀರ್ಮಾನಿಸಿ,
ಅಲ್ಲಿನ ಅಷ್ಟೂ ಜೀವ ಸಂಕುಲವನ್ನು ಪರೀಕ್ಷಿಸಿ ನಿರ್ಧರಿಸಲು ತೀರ್ಮಾನಿಸಲಾಯಿತು. ೨೦೦೦
ದಿಂದ ಈಚೆಗೆ ಸಮಗ್ರ ಪರಿಸರವನ್ನು ಮತ್ತು ಮಾನವ ಸಂಕುಲವನ್ನು ಒಗ್ಗೂಡಿಸಿ
ತೀರ್ಮಾನಿಸಲಾಗುತ್ತಿದೆ.
ಜಗತ್ತಿನಾದ್ಯಂತ ಎಲ್ಲ ನದಿಗಳಿಗೂ ಒಂದರ ಮೆಲೊಂದರಂತೆ ಅಣೆಕಟ್ಟುಗಳನ್ನು ನಿರ್ಮಿಸಿ,
ಅಣೆಕಟ್ಟಿನ ಕೆಳದಂಡೆಯ ಸಸ್ಯವರ್ಗ, ಸಕಲ ಜೀವ ಜಂತುಗಳ ನಾಶಕ್ಕೆ ಕಾರಣವಾಗಿದೆ.
ಅಣೆಕಟ್ಟೆಯಿಂದ ಹಿನ್ನೀರಿನಿಂದ ಉಂಟಾಗುವ ಸಮಸ್ಯೆಗಳನ್ನು ನಾವು ಬಹಳ ವರ್ಷಗಳಿಂದಲೂ
ಗಮನಿಸುತ್ತಿದ್ದೇವೆ.ಆದರೇ, ಅಣೆಕಟ್ಟಿನಿಂದ ಕೆಳಗಿನ ತೊಂದರೆಗಳನ್ನು ಅಷ್ಟೂ ಗಂಭೀರವಾಗಿ
ನಮ್ಮ ಪಂಡಿತರು ಗಮನಿಸಿಲ್ಲ. ಕೃಷಿ ಪ್ರಧಾನ ರಾಷ್ಟವಾದ ನಮಗೆ ಅಣೆಕಟ್ಟು ನಿರ್ಮಾಣ ಅತಿ
ಅವಶ್ಯಕವೆಂಬುದು ಸರಿಯೆನಿಸುತ್ತದೆ. ಆದರೇ, ಶತಮಾನದಿಂದ ಹರಿಯುತಿದ್ದ ನದಿಯೂ ದಿಡಿರ್
ಎಂದು ನಿರ್ಮಿಸಿದ ಅಣೆಕಟ್ಟಿನಿಂದಾಗಿ ತನ್ನತನವನ್ನು ಕಳೆದುಕೊಳ್ಳತೊಡಗುತ್ತದೆ.
ಲೇಖಕರು
ಹೆಸರು
ಹರಿಶ್ ಬಾನುಗೊಂದಿ
ಪರಿಚಯ
ನನ್ನೂರು ಬಾನುಗೊಂದಿ, ಹಾಸನ ಜಿಲ್ಲೆಯಲ್ಲಿದೆ. ಹೇಳಿಕೊಳ್ಳುವುದಕ್ಕೆ ಕಾವೇರಿ ನದಿ ದಂಡೆಯಲ್ಲಿದ್ದರೂ, ಕಾವೇರಿ ನದಿಯ ನೀರನ್ನು ಕುಡಿಯುವುದಿಲ್ಲ ವ್ಯವಸಾಯಕ್ಕೂ ಬಳಸುವುದಿಲ್ಲ. ನದಿ ಕೊಳ್ಳದಲ್ಲಿ ಮೇಲ್ದಂಡೆ ಜನರ ಜೀವನವೇ ಇಂತಹದ್ದು ಎನಿಸುತ್ತದೆ. ಅಚ್ಚುಕಟ್ಟು ಪ್ರದೇಶದವರ ಕೂಗಾಟ ನನ್ನೂರಲಿಲ್ಲ. ಸದ್ಯದಲ್ಲಿ ಹೈದರಾಬಾದಿನಲ್ಲಿ ನೀರು ಮತ್ತು ಪರಿಸರ ಕುರಿತಂತೆ ಖಾಸಗೀ ಸಂಸ್ಥೆಯೊಂದರಲ್ಲಿ ಸಂಶೋಧನೆ ಮಾಡುತಿದ್ದೇನೆ.
ವಿಶೇಷ ಬರಹಗಳು
ಇತ್ತೀಚಿನ ಬ್ಲಾಗ್ ಬರಹಗಳು
- ಫೊಟೊ ಅಲ್ಬಮ್
- ಗಣಿಗಾರಿಕೆಯಲ್ಲಿ- ತಡೆಆಣೆಕಟ್ಟು (ಚೆಕ್-ಡ್ಯಾ೦)
- ಪ್ರಥಮ್ ಬುಕ್ಸ್ ""ಕಾವೇರಿ" ಪುಸ್ತಕದ ಬಿಡುಗಡೆ ಮತ್ತು "ನಿಮ್ಮ ನದಿಯನ್ನು ಕಾಪಾಡಿ ನೀರನ್ನು ಉಳಿಸಿ" ಆಂದೋಲನ
- ಇಲ್ಲಿ ‘ಕೊಳಚೆ ನೀರು ಕುಡಿಯುವ ನೀರು’!`ಪಲ್ಸಡ್ ಪ್ಲೇಟ್' ತಂತ್ರಜ್ಞಾನ ಎಸ್.ಡಿ.ಎಂ. ಇಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿಗಳ ಆವಿಷ್ಕಾರ.
- ಮಳೆ ಬಂದರೆ ಬೆಂಗಳೂರಿಗೆ ಭೇದಿ
- ಮಳೆ ಎಂದರೆ ಬಾಲ್ಯದ ನೆನಪು ಕಣಾ...
- ನಾವು ವೃತ್ತಿ/ಕೆಲಸ ಮಾಡುವಲ್ಲಿ ನೀರಿನ ಮಿತಬಳಕೆಯ ಬಗ್ಗೆ ಜಾಗೃತಿ ಹೇಗೆ ಮೂಡಿಸಬಹುದು ?
- ರೇಡಿಯೋದಲ್ಲಿ K2K
- ಮಡಿವಾಳ ಕೆರೆಯ ಉಳಿಸಿ - ಒಂದು ಕೂಗು
- ಕೆರೆ ಕರಗುವ ಸಮಯ: ನಿಮಗಿದೋ ಆಮಂತ್ರಣ
ಇತ್ತೀಚಿನ ಪ್ರತಿಕ್ರಿಯೆ
- Re: This is very nice in
1 week 5 days ago - Re: ಇಲ್ಲಿ ‘ಕೊಳಚೆ ನೀರು ...
2 weeks 5 days ago - Re: ‘ಇರುವೆ’; ಅಂತರ್ಜಲ ...
11 weeks 3 days ago - Re: ನಮ್ಮ ಮನೆಯ ತಾರಸಿ ಮೇಲೆ ...
11 weeks 6 days ago - Re: ‘ಕುಡಿಯಲು ಬಿಲ್ಕುಲ್ ...
14 weeks 3 days ago - Re: ಧಾರವಾಡದ ನೆಲ ನುಂಗಿ; ...
15 weeks 5 days ago - Re: ದೇಸಿ ತಂತ್ರಜ್ಞಾನದಿಂದ ...
17 weeks 12 hours ago - Re: ದೇಸಿ ತಂತ್ರಜ್ಞಾನದಿಂದ ...
17 weeks 4 days ago - Re: ಧಾರವಾಡದ ಮೂಕಾಂಬಿಕಾ ...
22 weeks 9 hours ago - Re: ಮಳೆ ಎಂದರೆ ಬಾಲ್ಯದ ...
22 weeks 6 days ago
| Subscribe to IWP Kannada list |
| Visit this group |









Post new comment