ಕಾರ್ಯಾಗಾರ: ಸಾಂಪ್ರದಾಯಿಕ ಕಟ್ಟಾಗಳು, ವಾರಣಾಶಿ ಕಟ್ಟ ಹಾಗೂ ನಾವೀನ್ಯತೆ

ಸ್ಥಳ: ವಾರಣಾಶಿ ಫಾರಂ, ಸರವು, ಅಡ್ಯನಡ್ಕ, ದಕ್ಷಿಣ ಕನ್ನಡ

ದಿನಾಂಕ: ಭಾನುವಾರ, ಮೇ 18, 2008

ಸಮಯ: ಬೆಳಿಗ್ಗೆ 7.00ರಿಂದ ಸಂಜೆ 5.30ರವರೆಗೆ

ಮಿಂಚಂಚೆ: info@varanashi.com

ಜಲತಾಣ: www.varanashi.com

ಹಾಗೂಜಲಕೂಟ, ಕಾಸರಗೋಡುಆರ್ಥಿಕ ನೆರವು: ಅರ್ಘ್ಯಂ, ಬೆಂಗಳೂರು ಕಾರ್ಯಕ್ರಮ ವೇಳಾಪಟ್ಟಿಬೆಳಿಗ್ಗೆ 7.00ರಿಂದ 7.30 ರವರೆಗೆ: ನೋಂದಣಿ ಹಾಗೂ ಉಪಾಹಾರ(ವಾರಣಾಶಿ ಸಂಶೋಧನಾ ಪ್ರತಿಷ್ಠಾನದಲ್ಲಿ)7.30ರಿಂದ 8.30 ರವರೆಗೆ: ಸಾವಯವ ರೀತಿಯಲ್ಲಿ ಬೆಳೆದ ಬೆಳೆಗಳ ವೀಕ್ಷಣೆ, ಮಣ್ಣು ಮತ್ತು ನೀರಿನ ಸಂರಕ್ಷಣಾ ರಚನೆಗಳಿಗೆ ಭೇಟಿ, ವಾರಣಾಶಿ ಫಾರಂ8.30ರಿಂದ 9.00ರವರೆಗೆ: ಸರವು ಫಾರಂಗೆ ಭೇಟಿ9.00ರಿಂದ 10.20ರವರೆಗೆ: ಸರವು ಕಟ್ಟೆಗೆ ಭೇಟಿ, ತಿಂಡಿ10.25ರಿಂದ 10.30ರವರೆಗೆ: ಪ್ರಾರ್ಥನೆ10.30ರಿಂದ 10.45ರವರೆಗೆ: ಡಾ. ವಾರಣಾಶಿ ಕೃಷ್ಣಮೂರ್ತಿಯವರಿಂದ ಸ್ವಾಗತ ಭಾಷಣ10.45ರಿಂದ 10.55ರವರೆಗೆ: ಉದ್ಘಾಟನೆ ಸಮೃದ್ಧಿ ಮೀಯಪಡವು ಅಧ್ಯಕ್ಷರಾದ ಡಾ.ಡಿ.ಸಿ.ಚೌಟರಿಂದ10.55ರಿಂದ 11.05ರವರೆಗೆ: ಪುಸ್ತಕ ಬಿಡುಗಡೆ - ಕಟ್ಟಾಗಳು, ವಾರಣಾಶಿ ಕಟ್ಟ ಹಾಗೂ ನಾವೀನ್ಯತೆ 11.05ರಿಂದ 11.30ರವರೆಗೆ: ಸಾಂಪ್ರದಾಯಿಕ ಕಟ್ಟಾಗಳು ಶ್ರೀ ಪಡ್ರೆ, ಹೆಸರಾಂತ ಜಲ ಪತ್ರಕರ್ತರು, ಜಲಕೂಟ, ಕಾಸರಗೋಡ್ 11.30ರಿಂದ 12.00ರವರೆಗೆ: ಯೆತಡ್ಕ ಕಟ್ಟಾಗಳು ಚಂದ್ರಶೇಖರ ಯೆತ್ಕಡ, ಅಭಿವೃದ್ಧಿ ಪತ್ರಕರ್ತರು 12.00ರಿಂದ 12.30ರವರೆಗೆ: ಮಿಟ್ಟ ಬಾಗಿಲು ಕಟ್ಟಾಗಳು ಶ್ರೀ. ಬಿ.ಕೆ. ಪರಮೇಶ್ವರ ರಾವ್, ಕಾರ್ಯದರ್ಶಿ, ನಾಗರೀಕ ಸೇವಾ ಟ್ರಸ್ಟ್ 12.30ರಿಂದ 1.10ರವರೆಗೆ: ವನರೈ ಬಂಧರ: ಶ್ರೀ. ಪ್ರಕಾಶ ಜಗತಪ್, ಯೋಜನಾ ಅಧಿಕಾರಿ, ವನರೈ ಟ್ರಸ್ಟ್ ಪುಣೆ 1.10ರಿಂದ 2.10ರವರೆಗೆ: ಊಟದ ವಿರಾಮ 2.10ರಿಂದ 2.40ರವರೆಗೆ: ಕಟ್ಟಾಗಳು ಹಾಗೂ ಅಣೆಕಟ್ಟುಗಳು ಹೋಲಿಕೆಯ ವರದಿ- ಶ್ರೀ ಶಿವಾನಂದ ಕಳವೆ, ಮಳೆ ಕೇಂದ್ರ, ನೀರ್ನಳ್ಳಿ 2.40ರಿಂದ 3,10ರವರೆಗೆ: ವಾರಣಾಶಿ ಕಟ್ಟಾಗಳು ಡಾ. ವಾರಣಾಶಿ ಕೃಷ್ಣಮೂರ್ತಿ ಹಾಗೂ ಡಾ. ಡಿ. ವಸಂತ ಕುಮಾರ ದರ್ಬೆ 3.10ರಿಂದ 3.40ರವರೆಗೆ: ತೆರೆದ ಅಧಿವೇಶನ 3.40ರಿಂದ 4.40ರವರೆಗೆ: ತಾಂತ್ರಿಕ ಅಧಿವೇಶನಕಟ್ಟಾ ಕಟ್ಟುವಿಕೆಯಲ್ಲಿ ಎದುರಾಗುವ ತೊಂದರೆಗಳು ಹಾಗೂ ಪರಿಹಾರಗಳು 1. ಸಾಮಾಜಿಕ ತೊಂದರೆಗಳು: ಶ್ರೀ. ರವಿಶಂಕರ ದೊಡ್ಡಮನಿ, ಅಭಿವೃದ್ಧಿ ಪತ್ರಕರ್ತರು2. ಸರ್ಕಾರದ ನಿಬಂಧನೆಗಳು: ಡಾ.ಪಿ. ವೀರರಾಜು, ಜಂಟಿ ನಿರ್ದೇಶಕರು, ಶ್ರೀ. ಮಧುಸೂಧನ ನಾಯರ್, ಸಹಾಯಕ ಜಿಲ್ಲಾ ಕಾರ್ಯಕ್ರಮ ಆಯೋಜಕರು, ಎನ್.ಆರ್.ಇ.ಜಿ.ಎಸ್., ಕಾಸರಗೋಡ್4.40ರಿಂದ 5.30ರವರೆಗೆ: ಮುಕ್ತಾಯ ಸಮಾರಂಭನಿರ್ಣಯಗಳುಅಧ್ಯಕ್ಷರ ಭಾಷಣ: ಡಾ. ಪಿ.ವಿ. ವೀರರಾಜು, ಜಂಟಿ ನಿರ್ದೇಶಕರು, ಕರ್ನಾಟಕ ಜಲಾನಯನ ವಿಭಾಗ, ಬೆಂಗಳೂರು ಧನ್ಯವಾದಗಳು: ಡಾ. ಅಶ್ವಿನ ಕೃಷ್ಣಮೂರ್ತಿ, ವಿ.ಆರ್.ಎಫ್., ಅಡ್ಯನಡ್ಕ ಜನ ಗಣ ಮನ ಕಾರ್ಯಾಗಾರದ ಬಗ್ಗೆ

  • ಸಮಾರಂಭದ ವ್ಯವಸ್ಥಾಪಕ: ಶಂಕರ ಸಾರದ್ಕ, ಪತ್ರಕರ್ತರು
  • ಕಾರ್ಯಕ್ರಮವನ್ನು ಕನ್ನಡದಲ್ಲಿ ನಡೆಸಲಾಗುತ್ತದೆ
  • ಭಾಷಣಕಾರರು ಪವರ್ ಪಾಯಿಂಟ್ ಪ್ರಸ್ತುತಿಗಳನ್ನು ನೀಡುತ್ತಾರೆ
  • ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವವರು ನಮಗೆ ಅಂಚೆ ಚೀಟಿ / ದೂರವಾಣಿ / ಮಿಂಚಂಚೆಯ ಮೂಲಕ ಮುಂಚಿತವಾಗಿಯೇ ತಿಳಿಸಬೇಕು

ನೋಂದಣಿ ಶುಲ್ಕ: ರೂ. 75.00ವಾರಣಾಶಿ ಫಾರಂ ಹಾಗೂ ಸಂಶೋಧನಾ ಪ್ರತಿಷ್ಠಾನದ ಬಗ್ಗೆವಾರಣಾಶಿ ಫಾರಂ ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯನಡ್ಕದಲ್ಲಿದೆ. ನೂರು ಎಕರೆ ತೋಟದಲ್ಲಿ, ಸಾವಯವ ರೀತಿಯಲ್ಲಿ ಬೆಳೆದ ವನಿಲ್ಲಾ, ಅಡಿಕೆ, ಕೊಕೊ, ತೆಂಗು, ಮೆಣಸು, ಗೋಡಂಬಿ, ಬಾಳೆ, ಭತ್ತ, ತರಕಾರಿಗಳ ಜೊತೆ, ಅನೇಕ ಅರಣ್ಯ ಗಿಡಗಳು ಇವೆ. ಅನೇಕ ಬಗೆಯ ಮಣ್ಣು ಮತ್ತು ನೀರಿನ ಸಂರಕ್ಷಣೆಯ ವಿಧಾನಗಳನ್ನು ಇಲ್ಲಿ ಬಳಸಲಾಗಿದೆ. ವಾರಣಾಶಿ ಕೃಷ್ಣಮೂರ್ತಿಯವರಿಗೆ ಕೃಷಿ ಪಂಡಿತ ಪ್ರಶಸ್ತಿಯು ದೊರೆತಿದೆ. ಸಾವಯವ ಕೃಷಿಯನ್ನು ಉತ್ತೇಜಿಸುವ ಕಾರ್ಯದಲ್ಲಿ ತೊಡಗಿರುವ ವಾರಣಾಶಿ ಸಂಶೋಧನಾ ಪ್ರತಿಷ್ಠಾನವು ಭಾರತ ಸರ್ಕಾರದಿಂದ ಮನ್ನಣೆ ಪಡೆದ ಸಂಸ್ಥೆ. ವಾರಣಾಶಿಗೆ ಅನೇಕ ಪ್ರಶಸ್ತಿಗಳು ಸಂದಿವೆ. ಅವುಗಳಲ್ಲಿ, ಏ.ಪಿ.ಜೆ. ಅಬ್ದುಲ್ ಕಲಾಂರವರ ಪರಿಸರ ಪ್ರಶಸ್ತಿಯು ಅತ್ಯಂತ ಪ್ರತಿಷ್ಠಿತವಾದುದು.ಜಲಕೂಟ, ಕಾಸರಗೋಡುಜಲಕೂಟವನ್ನು ಹೆಸರಾಂತ ಜಲ ಪತ್ರಕರ್ತ, ಶ್ರೀ ಪಡ್ರೆಯವರು ಬೆಂಬಲಿಸುತ್ತಿದ್ದಾರೆ. ಜಲಕೂಟವು, ಮಣ್ಣು ಮತ್ತು ನೀರಿನ ಸಂರಕ್ಷಣೆಯ ಬಗ್ಗೆ ಮಾಹಿತಿ ಸಂಗ್ರಹಣೆ ಹಾಗೂ ಪ್ರಸರಣದಲ್ಲಿ ತೊಡಗಿದೆ. ಇತ್ತೀಚೆಗೆ, ಅದು ಮಾದಕಗಳು ಎಂಬ ಸಂಪೂರ್ಣ ಪುಸ್ತಕವನ್ನು ಪ್ರಕಟಿಸಿದೆ.

ಅರ್ಘ್ಯಂ, ಭಾರತದಲ್ಲಿ 2001ರಲ್ಲಿ ಪ್ರಾರಂಭಿಸಲಾದ ಒಂದು ಪಬ್ಲಿಕ್ ಚಾರಿಟಬಲ್ ಟ್ರಸ್ಟ್. ಇದು ಶ್ರೀಮತಿ ರೋಹಿಣಿ ನಿಲೇಕಣಿಯವರ ವೈಯಕ್ತಿಕ ದತ್ತಿ ನಿಧಿಯ ಕೊಡುಗೆಯಿಂದ ಅಸ್ತಿತ್ವಕ್ಕೆ ಬಂದ ಸಂಸ್ಥೆ. ಸಂಸ್ಥೆಯ ಧ್ಯೇಯ ಸಾಕಷ್ಟು ನೀರು, ಸುರಕ್ಷಿತ ನೀರು ಎಂದಿಗೂ, ಎಲ್ಲರಿಗೂ, ಎಂದು. ಪ್ರತಿಯೊಬ್ಬ ಪ್ರಜೆಗೂ ನೀರು ದೊರಕಿಸುವ ಸುಸ್ಥಿರ ಜಲ ಯೋಜನೆಗಳನ್ನು ಅರ್ಘ್ಯಂ ಬೆಂಬಲಿಸುತ್ತದೆ. ಅರ್ಘ್ಯಂನ ಪ್ರಸ್ತುತ ಯೋಜನಾ ಕ್ಷೇತ್ರಗಳೆಂದರೆ: ಸಮಗ್ರ ಗೃಹ ಬಳಕೆಯ ನೀರಿನ ನಿರ್ವಹಣೆ, ನಿರ್ಮಲೀಕರಣ, ಮಳೆನೀರು ಕೊಯ್ಲು, ಅಂತರ್ಜಲ ನಿರ್ವಹಣೆ, ತ್ಯಾಜ್ಯ ನೀರಿನ ನಿರ್ವಹಣೆ ಹಾಗೂ ನೀರಿನ ಗುಣಮಟ್ಟ. ಭಾರತದ ಜಲ ಕ್ಷೇತ್ರದ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಹಾಗೂ ನೀಡುವ ಸಮಗ್ರ ವೆಬ್ ಆಧಾರಿತ ಚಾವಡಿಯಾಗಿ ಕಾರ್ಯ ನಿರ್ವಹಿಸುವ ಇಂಡಿಯಾ ವಾಟರ್ ಪೋರ್ಟಲ್ ಎಂಬ ವೆಬ್ಸೈಟನ್ನು ಅರ್ಘ್ಯಂ ಅಭಿವೃದ್ಧಿ ಪಡಿಸಿದೆ.

ಅರ್ಘ್ಯಂ, ಎರಡನೆಯ ಮಹಡಿ, #840, 5ನೆಯ ಮುಖ್ಯ ರಸ್ತೆ, ಇಂದಿರಾನಗರ ಮೊದಲನೆಯ ಹಂತ, ಬೆಂಗಳೂರು 560038.

ವಾರಣಾಶಿ ಫಾರಂಗೆ ದಾರಿ:ಮೈಸೂರು ಉಪ್ಪಿನಂಗಡಿ ಮಡಿಕೇರಿ ಪುತ್ತೂರು ಕಲ್ಲಡ್ಕ, ವಿಟ್ಲ ಪರಿಯಲ್ತಡ್ಕ ಬಿ.ಸಿ. ರೋಡ್ ಅಡ್ಯನಡ್ಕ ಸರವು ಸರಡ್ಕ ಉಡುಪಿ ಮಂಗಳೂರು ಕಾಸರಗೋಡು

ಪುತ್ತೂರು ಆಡ್ಯನಡ್ಕ: 25 ಕಿಲೋಮೀಟರ್; ಮಂಗಳೂರು ಅಡ್ಯನಡ್ಕ: 50 ಕಿಲೋಮೀಟರ್; ಬಿ.ಸಿ. ರೋಡ್ ಆಡ್ಯನಡ್ಕ: 25 ಕಿಲೋಮೀಟರ್; ವಿಟ್ಲ ಆಡ್ಯನಡ್ಕ: 10 ಕಿಲೋಮೀಟರ್; ಕಾಸರಗೋಡು ಆಡ್ಯನಡ್ಕ: 41 ಕಿಲೋಮೀಟರ್; ಆಡ್ಯನಡ್ಕ ಸರವು: 5 ಕಿಲೋಮೀಟರ್

 

ಆಸಕ್ತಿ ಇರುವವರಿಗೆ ಸುಸ್ವಾಗತ!

ಪರಿಸರ-ಸ್ನೇಹಿ ಸುಸ್ಥಿರ ಸಾವಯವ ಕೃಷಿಗೆ ಉತ್ತೇಜನ!

 

 

AttachmentSize
Invitation_Eng[1].pdf218.63 KB

ಹೊಸ ಕಾಮೆಂಟ್ ಸೇರಿಸಿ

The content of this field is kept private and will not be shown publicly.
CAPTCHA
This question is for testing whether you are a human visitor and to prevent automated spam submissions.
1 + 16 =
Solve this simple math problem and enter the result. E.g. for 1+3, enter 4.