ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ನೈರ್ಮಲ್ಯ ಕುರಿತಾದ ಲೇಖನಗಳು ಮತ್ತು ಚರ್ಚೆ

ಸ್ವಚ್ಛ ಭಾರತ ಅಭಿಯಾನದ ಬಗ್ಗೆ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ


ಪರಿಸರ ಸ್ನೇಹಿ ಶೌಚಾಲಯಗಳ ಬಳಕೆಯಿಂದ ನೀರಿನ ಮಿತವ್ಯಯ ಸಾಧ್ಯ ಮತ್ತು ಮನುಷ್ಯನ ಮಲ ಮೂತ್ರವನ್ನು ಗೊಬ್ಬರವನ್ನಾಗಿ ಪರಿವರ್ತಿಸಿ ಹೇಗೆ ಬೇಸಾಯಕ್ಕೆ ಬಳಸಬಹುದು ಎಂಬುದನ್ನು ಈ ವೀಡಿಯೋದಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ


ಬಯಲು ಮಲ ವಿಸರ್ಜನೆಯಿಲ್ಲದ, ಕಸ ಕೊಳಚೆ ದುರ್ನಾತಗಳಿಲ್ಲದ, ಸ್ವಚ್ಛ ಹಳ್ಳಿಗಳ ನಿರ್ಮಾಣವೆ ಸಂಪೂರ್ಣ ಸ್ವಚ್ಛತಾ ಆಂದೋಲನದ ಉದ್ದೇಶ ಆಂದೋಲನವನ್ನು ಕೈಗೊಳ್ಳುವ ಮೊದಲು ಶಿವಮೊಗ್ಗದ ಸುತ್ತಮುತ್ತಲಿನ ಪರಿಸರ ಹೇಗಿತ್ತು ? ಮತ್ತು ಈಗ ಹೇಗೆ ಅಭಿವೃದ್ಧಿ ಹೊಂದಿದೆ ಎಂಬುದನ್ನು ತಿಳಿಸಿಕೊಡುತ್ತದೆ. ಅಲ್ಲಿಯ ಜನತೆ ಬಯಲು ಮಲ ವಿಸರ್ಜನೆಯನ್ನು ತಡೆಯಲು ಶೌಚಾಲಯಗಳನ್ನು ಕಟ್ಟಿಸಿದರು. ಮನೆ, ಓಣಿ, ಬಿದಿ, ಶಾಲೆ ಮತ್ತು ಹಳ್ಳಿಗಳ್ಳನ್ನು ಸ್ವಚ್ಛವಾಗಿಡುವಂತೆ ಜನರಲ್ಲಿ ಅರಿವು ಮೂಡಿಸುವುದರ ಜೊತೆ ಕ್ರಮಗಳನ್ನು ಕೈಗೊಂಡರುಇದರ ಪರಿಣಾಮವಾಗಿ, ಶಿವಮೊಗ್ಗವು ಒಂದು ಸ್ವಚ್ಛ ಸಮೃದ್ಧ ಪರಿಸರ, ವೈವಿಧ್ಯಮಯ ಜಾನಪದ, ಶ್ರೀಮಂತ ಸಾಹಿತ್ಯ ಹಾಗೂ ಕ್ರಾಂತಿಕಾರಿ ಚಳುವಳಿಗಳ ತೊಟ್ಟಿಲು ಎಂಬುದಕ್ಕೆ ಪಾತ್ರವಾಗಿದೆಇದು ಜನರಲ್ಲಿ  ಹೇಗೆ ಪರಿಸರ ಪ್ರಜ್ನೆ ಮೂಡಿಸಬಹುದು ಎನ್ನುವುದನ್ನು ತಿಳಿಸಿಕೊಡಲಾಗಿದೆ.

ವಿಡಿಯೋ ಲಿಂಕ್ – 1       ವಿಡಿಯೋ ಲಿಂಕ್ – 2       ವಿಡಿಯೋ ಲಿಂಕ್ – 3

 

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*