ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ನೀರಿನ ಪರಿಸ್ಥಿತಿ

ಕರ್ನಾಟಕದಲ್ಲಿ ನೀರಿನ ಪರಿಸ್ಥಿತಿ


 

  • “ನಾಗರಿಕತೆಗಳು ಬೆಳೆದಂತೆ ಅರಣ್ಯಗಳು ಹಿಮ್ಮೆಟ್ಟುತ್ತವೆ; ಮರಭೂಮಿಗಳು ಹಿಂಬಾಲಿಸುತ್ತವೆ.” ಇದರ ಪರಿಣಾಮವನ್ನು ನಾವು ಇವತ್ತು ಅನುಭವಿಸುತ್ತಿದ್ದೇವೆ. ಅದಕ್ಕೆ ಸಾಕ್ಷಿಯಾಗಿ ಕರ್ನಾಟಕ ನೀರಿನ ಸಮಸ್ಯೆಯಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಮೊದಲನೆಯದು ರಾಜಸ್ಥಾನ.
  • ರಾಜ್ಯದ ೧೨೩ ತಾಲ್ಲೂಕುಗಳು ನೀರಿನ ಸಮಸ್ಯೆ ಎದುರಿಸುತ್ತಿವೆ.
  • ಪ್ರಸಕ್ತ ಸಾಲಿನಲ್ಲಿ ೨೦೦ ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.
  • ಕರಾವಳಿ ಮತ್ತು ಮಲೆನಾಡಿನ ಕೆಲವು ಪ್ರದೇಶಗಳಲ್ಲೂ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.
  • ಕರ್ನಾಟಕದಲ್ಲಿ ಒಟ್ಟು ೨೦೮ ಸ್ಥಳೀಯ ಸಂಸ್ಥೆಗಳು ಆಡಳಿತ ನಡೆಸುತ್ತವೆ. ಅವುಗಳಲ್ಲಿ ೪೧ ಸ್ಥಳೀಯ ಸಂಸ್ಥೆಗಳು ಸಂಪೂರ್ಣವಾಗಿ ಅಂತರ್ಜಲದ ಮೇಲೆ ಅವಲಂಬಿತ.
  • ಧಾರವಾಡ-ಹುಬ್ಬಳ್ಳಿಯನ್ನು ಉದಾಹರಿಸುವುದಾದರೆ. ಇತ್ತೀಚೆಗೆ ೬೧ ಹೊರವಲಯಗಳು, ವಸತಿ ಸಂಕೀರ್ಣಗಳು ನಿರ್ಮಾಣಗೊಂಡಿವೆ. ಕುಡಿಯುವ ನೀರಿನ ಪೂರೈಕೆ ಮಾತ್ರ ಮೊದಲಿನಷ್ಟೇ ಇದೆ. ಆದರೆ ಬೇಡಿಕೆ ದಿನೇ ದಿನೇ ಗಗನ ಮುಟ್ಟುತ್ತಿದೆ.
  • ೨೦೦೭ರಲ್ಲಿ ಅಂದಾಜಿಸಲಾದ ಅಂಕಿ-ಸಂಖ್ಯೆಗಳ ಪ್ರಕಾರ ಹುಬ್ಬಳ್ಳಿಯಲ್ಲಿ ೮,೯೬೭ ಕೊಳವೆ ಬಾವಿಗಳು ಧಾರವಾಡದಲ್ಲಿ ೨,೭೧೬ ಕೊಳವೆ ಬಾವಿಗಳನ್ನು ಕೊರೆಸಲಾಗಿತ್ತು. ೨೦೦೯ಕ್ಕೆ ಕೊಳವೆ ಬಾವಿಗಳ ಸಂಖ್ಯೆ ಸುಮಾರು ೨೫% ದಷ್ಟು ಏರಿಕೆಯಾಗಿದೆ ಎಂದು ಅಂದಾಜಿಸಲಾಗಿದೆ. ಮೇಲಾಗಿ ನಗರದ ೨೫% ಬಡಾವಣೆಗಳಲ್ಲಿ ಒಳಚರಂಡಿ ವ್ಯವಸ್ಥೆ ಇದೆ. ಇನ್ನುಳಿದ ೭೫% ಬಡಾವಣೆಗಳಲ್ಲಿ “ಸೆಪ್ಟಿಕ್ ಟ್ಯಾಂಕ್” ಬಳಸಿ ಶೌಚ ವಿಸರ್ಜನೆ ವ್ಯವಸ್ಥೆಗೊಳಿಸಲಾಗಿದೆ. ಅವಳಿ ನಗರದ ಅರ್ಧದಷ್ಟು ಬಡಾವಣೆಗಳಿಗೆ ಗಟಾರುಗಳ ವ್ಯವಸ್ಥೆ ಇಲ್ಲ. ಕೊಚ್ಚೆ ನೀರು ಹಾಗು ತ್ಯಾಜ್ಯಗಳ ವಿಲೇವಾರಿ ತೀರ ಅವೈಜ್ಞಾನಿಕವಾದದ್ದು.
  • ಕೋಲಾರ, ವಿಜಾಪುರ, ಧಾರವಾಡ, ರಾಮನಗರ ಮತ್ತು ಬೆಳಗಾವಿ ಜಿಲ್ಲೆಗಳ ಹಳ್ಳಿಗಳಲ್ಲಿ ತೀವ್ರ ನೀರಿನ ಸಮಸ್ಯೆ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ದಾವಣಗೆರೆ, ಹಾಸನ, ತುಮಕೂರು, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ.
  • ಮೈಸೂರು ಜಿಲ್ಲೆಯ ಹುಣಸೂರು, ಕೆ.ಆರ್.ನಗರ, ಬನ್ನೂರು, ತಿರುಮಕೂಡಲು ನರಸೀಪುರ ಮತ್ತು ಸರಗೂರು ಪಟ್ಟಣಗಳಲ್ಲಿ ಕುಡಿಯುವ ನೀರನ್ನು ಸಕಾಲದಲ್ಲಿ ಪೂರೈಸಲು ನಗರ ಸ್ಥಳೀಯ ಸಂಸ್ಥೆಗಳಿಗೆ ಸಾಧ್ಯವಾಗುತ್ತಿಲ್ಲ. ಮಂಡ್ಯ ಜಿಲ್ಲೆಯ ಪಾಂಡವಪುರ, ಮದ್ದೂರು, ಮಳವಳ್ಳಿ ಮತ್ತು ನಾಗಮಂಗಲದ ಕತೆಯೂ ಇದೇ ಆಗಿದೆ. ದಾವಣಗೆರೆ ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಮೂರು ದಿನಕ್ಕೊಮ್ಮೆ ಟ್ಯಾಂಕರ್ ಮೂಲಕ ಕುಡಿವ ನೀರು ಸರಬರಾಜು ಮಾಡುತ್ತಿವೆ.
  • ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಳಗಾವಿ, ಗದಗ, ಹಾವೇರಿ, ಬಾಗಲಕೋಟೆ ಮತ್ತು ವಿಜಾಪುರ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಒಟ್ಟು ೮೦ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರು ಅಗತ್ಯ ಪ್ರಮಾಣದಲ್ಲಿ ಲಭ್ಯವಾಗದ ಸ್ಥಿತಿ ಇದೆ.
  • ಈ ನಗರಗಳ ಪಾಲಿಗೆ ಕುಡಿಯುವ ನೀರಿನ ಏಕೈಕ ಮೂಲವಾದ ಅಂತರ್ಜಲ ಆತಂಕಕಾರಿ ಮಟ್ಟಕ್ಕೆ ಕುಸಿದಿದೆ. ಬಾವಿಗಳಿಂದ ದೊರೆಯುತ್ತಿರುವ ನೀರು ಹೆಚ್ಚಿನ ಪ್ರದೇಶಗಳಲ್ಲಿ ಕುಡಿಯಲು ಯೋಗ್ಯವಾಗಿಲ್ಲ.
  • ಬೆಂಗಳೂರು ಮತ್ತು ಕೆಲವು ದೊಡ್ಡ ನಗರಗಳನ್ನು ಹೊರತುಪಡಿಸಿದರೆ ರಾಜ್ಯದ ಇತರೆಡೆ ವಿದ್ಯುತ್ ಕಡಿತ ಇತ್ತೀಚೆಗೆ ಹೆಚ್ಚಾಗಿರುವ ಕಾರಣ, ನಿಯಮಿತವಾಗಿ ಕುಡಿಯುವ ನೀರು ಪೂರೈಸಲು ಸ್ಥಳೀಯ ಸಂಸ್ಥೆಗಳಿಗೆ ಸಾಧ್ಯವಾಗುತ್ತಿಲ್ಲ.
  • ಕಳೆದ ವರ್ಷ ರಾಜ್ಯದಲ್ಲಿ ಬರ ಪರಿಸ್ಥಿತಿ ಇಲ್ಲದಿದ್ದರೂ ೪೯ ನಗರ ಸ್ಥಳೀಯ ಸಂಸ್ಥೆಗಳು ಕುಡಿಯುವ ನೀರಿನ ತೀವ್ರ ಕೊರತೆ ಎದುರಿಸಿದ್ದವು.
  • ಆನೇಕಲ್ (ಬೆಂಗಳೂರು ನಗರ ಜಿಲ್ಲೆ), ದೇವನಹಳ್ಳಿ, ವಿಜಯಪುರ, ನೆಲಮಂಗಲ (ಬೆಂಗಳೂರು ಗ್ರಾಮಾಂತರ ಜಿಲ್ಲೆ), ಚಿತ್ರದುರ್ಗ, ಹೊಸದುರ್ಗ (ಚಿತ್ರದುರ್ಗ), ಚಿಕ್ಕಬಳ್ಳಾಪುರ, ಚಿಂತಾಮಣಿ, ಶಿಡ್ಲಘಟ್ಟ, ಬಾಗೇಪಲ್ಲಿ (ಚಿಕ್ಕಬಳ್ಳಾಪುರ), ಕೋಲಾರ, ಕೆಜಿಎಫ್, ಬಂಗಾರಪೇಟೆ, ಮುಳಬಾಗಿಲು (ಕೋಲಾರ), ಮಧುಗಿರಿ, ಪಾವಗಡ (ತುಮಕೂರು), ಜಮಖಂಡಿ ಮತ್ತು ಇಳಕಲ್ (ಬಾಗಲಕೋಟೆ) ತಾಲ್ಲೂಕುಗಳಲ್ಲೂ ನೀರಿನ ಬರ ವ್ಯಾಪಕವಾಗಿದೆ.
  • ಉತ್ತರ ಕರ್ನಾಟಕದ ಮುಂಡರಗಿ, ದಕ್ಷಿಣ ಭಾಗದ ಕೋಲಾರ, ತುಮಕೂರು ಜಿಲ್ಲೆಯ ಪಾವಗಡ, ಮಧುಗಿರಿ, ಕೊರಟಗೆರೆಯಲ್ಲಿ ಕುಡಿವ ನೀರಿನ ಕೊರತೆ ಜೊತೆಗೆ ಫ್ಲೋರೋಸಿಸ್ ಸಮಸ್ಯೆ
  • ಕರ್ನಾಟಕದಲ್ಲಿ ಗದಗ, ತುಮಕೂರು, ಕೋಲಾರ, ರಾಯಚೂರು, ಕೊಪ್ಪಳ, ಚಿಕ್ಕಬಳ್ಳಾಪುರ, ಬಿಜಾಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಫ್ಲೋರೈಡ್ ಸಮಸ್ಯೆ.
  • ಮುಂಡರಗಿಯ ೧೫-೨೦ ಗ್ರಾಮಗಳಲ್ಲಿ ನೀರಿನ ಜೊತೆಗೆ ಆಹಾರದಲ್ಲಿ ಫ್ಲೋರೈಡ್ ಅಂಶ ಕಾಣಿಸಿಕೊಂಡಿದೆ.

ಭಾರತದ ಪರಿಸ್ಥಿತಿ

ಭಾರತದ ಒಟ್ಟು ೧೫ ರಾಜ್ಯಗಳಲ್ಲಿ ನೀರಿನ ಸಮಸ್ಯೆ ಇದೆ.

  • ಕೆಲವು ರಾಜ್ಯಗಳಲ್ಲಿ ಅಚಿತರ್ಜಲ ಸಮಸ್ಯೆ, ಇನ್ನೂ ಕೆಲವು ರಾಜ್ಯಗಳಲ್ಲಿ ನೀರಿದ್ದರೂ ಕುಡಿಯಲು ಯೋಗ್ಯವಲ್ಲದ ಪರಿಸ್ಥಿತಿ.
  • ಜಮ್ಮು ಮತ್ತು ಕಾಶ್ಮೀರ, ಕೇರಳ, ಒರಿಸ್ಸಾ – ಶೇ ೩೦ ಜಿಲ್ಲೆಗಳಲ್ಲಿ ನೀರಿನಲ್ಲಿ ಫ್ಲೋರೈಡ್ ಅಂಶ.
  • ಬಿಹಾರ, ಹರಿಯಾಣ, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ಪಚಿಜಾಬ್  – ಶೇ ೩೦-೫೦ ಜಿಲ್ಲೆಗಳು ನೀರಿನ ಕಲುಷಿತತೆಯಿಂದ ಬಳಲುತ್ತಿವೆ.
  • ಆಂಧ್ರಪ್ರದೇಶ, ಗುಜರಾತ್, ರಾಜಸ್ಥಾನ, ತಮಿಳುನಾಡು ಹಾಗೂ ಉತ್ತರ ಪ್ರದೇಶದ ಶೇ ೫೦ಕ್ಕೂ ಹೆಚ್ಚು ಜಿಲ್ಲೆಗಳ ನೀರಿನಲ್ಲಿ ಫ್ಲೋರೋಸಿಸ್ ಸಮಸ್ಯೆ.

 ಪ್ರಪಂಚದಲ್ಲಿ ನೀರಿನ ಪ್ರಮಾಣ

ಶೇ ೭೫ ಬಾಗ ನೀರಿನಿಂದ ಆವೃತವಾಗಿದೆ. ಅಂದರೆ ೧೪೦೦ ಮಿಲಿಯನ್ ಘನ ಕಿಲೋ ಮೀಟರ್‌ಗಳಷ್ಟು. ಅದನ್ನು ಹೀಗೆ ಹೇಳಬಹುದು; ಈ ಅಪಾರ ಜಲಸಂಪತ್ತನ್ನು ಭೂಮಿಯ ಮೇಲೆ ಹರಡಿದರೆ ೩ ಕಿಲೋ ಮೀಟರ್ ಆಳದವರೆಗೆ ನೀರು ನಿಲ್ಲುತ್ತದೆ.

  • ಈ ಒಟ್ಟು ನೀರಿನಲ್ಲಿ ಶೇ ೯೭ರಷ್ಟು ನೀರು ಸಮುದ್ರ ಹಾಗೂ ಮಹಾ ಸಾಗರಗಳಲ್ಲಿದೆ. ಅದು ಅತಿ ಉಪ್ಪು. ಕುಡಿಯಲು ಯೋಗ್ಯವಲ್ಲ.
  • ಉಳಿದ ಶೇ ೩ ಭಾಗ ನೀರಿನಲ್ಲಿ ಶೇ ೨ ಭಾಗ ನೀರ್ಗಲ್ಲುಗಳು ಹಾಗೂ ಮಂಜುಗಡ್ಡೆಗಳ ರೂಪದಲ್ಲಿದೆ. ಉಳಿದದ್ದು ಶೇ ೧ ಭಾಗ ಮಾತ್ರ.
  • ಅಂದರೆ ೧೪ ಮಿಲಿಯನ್ ಘನ.ಮೀ . ಇದರಲ್ಲಿ ಅರ್ಧದಷ್ಟು ನೀರು ಅಂತರ್ಜಲದಲ್ಲಿದೆ. ಉಳಿದ ನೀರು ನದಿಗಳು, ಸರೋವರಗಳು ಹಾಗೂ ಆವಿಯ ರೂಪದಲ್ಲಿದೆ.

ಜಲ ಕ್ಷಾಮದ ವಿಶ್ವ ರೂಪ 

ಏಷ್ಯಾ ಮತ್ತು ಆಫ್ರಿಕಾ ಖಂಡದ ಹಳ್ಳಿಗಳಲ್ಲಿ ಒಬ್ಬ ಬಾಲಕಿ ಶಾಲೆಗೆ ಹೋಗುವ ಮುನ್ನ ಮೂರ‍್ನಾಲ್ಕು ಮೈಲುಗಳಲ್ಲಿರುವ ಬಾವಿಯಿಂದ ನೀರು ಸೇದಿ ತರಬೇಕಾದ ಸ್ಥಿತಿ ಇದೆ.

  • ಏಷ್ಯಾ ಮತ್ತು ಆಫ್ರಿಕಾ ದೇಶಗಳ ಹಳ್ಳಿಗಳಲ್ಲಿ ಇಂದಿಗೂ ಮಹಿಳೆಯರು ಕುಡಿಯುವ ನೀರಿಗಾಗಿ ೧೦ ಕಿ.ಮಿ ಕ್ರಮಿಸುತ್ತಾರೆ.
  • ಆಧುನಿಕತೆಯ ಐಕಾನ್ ಎನಿಸಿಕೊಂಡಿರುವ ಚೀನಾದ ಹಳ್ಳಿಗಳಲ್ಲಿರುವ ಬಹಳಷ್ಟು ಯುವಕರಿಗೆ ಚರ್ಮ ರೋಗ. ಕಾರಣ ಕಲುಷಿತ ನೀರಿನ ಬಳಕೆ. ಬಳಸುವ ನೀರಿನಲ್ಲಿ ಆರ್ಸೆನಿಕ್ ಅಂಶ ಹೆಚ್ಚಾಗಿ ಅಂತರ್ಜಲ ಮಲಿನವಾಗಿರುವುದು.
  • ಅಂಗೋಲಾ ದೇಶದ ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಬಡ ಜನರು ನದಿಗೆ ಸೇರುವ ಕೊಳಚೆ ನೀರನ್ನೇ ಆಶ್ರಯಿಸಿದ್ದಾರೆ.
  • ಲಾಸ್‌ವೇಗಾಸ್ ಮತ್ತು ಲಾಸ್ ಎಂಜಲೀಸ್‌ನ ತಗ್ಗು ಪ್ರದೇಶದಲ್ಲಿರುವ ರೈತರು ಕೊಲೊರಡೊ ನದಿಯಿಂದ ನೀರು ಪಡೆಯಲು ಹರಸಾಹಸಪಡುತ್ತಿದ್ದಾರೆ. ಅಲ್ಲಿ ಕೃಷಿ ಕುಂಠಿತವಾಗಿದೆ.
  • ವಿಶ್ವ ಸಂಸ್ಥೆಯ ಮಾಹಿತಿ ಪ್ರಕಾರ ೫ ವರ್ಷದೊಳಗಿನ ೪,೪೦೦ ಮಕ್ಕಳು ಪ್ರತಿ ದಿನ ಕಲುಷಿತ ನೀರಿನಿಂದಾಗಿ ಸಾಯುತ್ತಿದ್ದಾರೆ.
  • ವಿಶ್ವದ ಮೂರನೇ ಒಂದು ಭಾಗದಷ್ಟು ಜನರು ನೀರಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ.
  • ಪ್ರತಿ ಆರು ಮಂದಿಯಲ್ಲಿ ಒಬ್ಬರು ಶುದ್ಧ ಕುಡಿಯುವ ನೀರಿಗಾಗಿ ಕಿಲೋ ಮೀಟರ್‌ಗಟ್ಟಲೆ ಕ್ರಮಿಸಬೇಕಾದ ಪರಿಸ್ಥಿತಿ ಇದೆ.
  • ಅಭಿವೃದ್ಧಿ ಹೊಂದುತ್ತಿರುವ ರಾಷ್ರಗಳಲ್ಲಿರುವ ಅರ್ಧಕ್ಕರ್ಧ ಜನರಿಗೆ ನೀರಿನ ಸಮಸ್ಯೆಯಿಂದಾಗಿ ಸಮರ್ಪಕ ಶೌಚಾಲಯ ವ್ಯವಸ್ಥೆಯಿಲ್ಲ.
  • ಜಾಗತಿಕ ಮಟ್ಟದಲ್ಲಿ ಜೀವನ ಮತ್ತು ಬದುಕಿಗೆ ನೀರು ಬಹಳ ದುಬಾರಿಯಾಗುತ್ತಿದೆ.
  • ನೀರಿನ ಸಮಸ್ಯೆ ದೇಶದಲ್ಲಿನ ಜನರನ್ನು ರೋಗಗ್ರಸ್ಥವನ್ನಾಗಿಸುತ್ತಿದೆ. ಶತ್ರುಗಳನ್ನಾಗಿಸುತ್ತಿದೆ. ಬಡತನ ಪ್ರಮಾಣ ಏರಿಕೆಗೆ ಕಾರಣವಾಗುತ್ತಿದೆ. ದೇಶದ ಪ್ರಗತಿಗೆ ಮಾರಕವಾಗುತ್ತಿದೆ.
  • ಪಟ್ಟಣದಲ್ಲಿ ಕೊಳೆಗೇರಿ, ಗುಡಿಸಿಲುಗಳಲ್ಲಿ ವಾಸಿಸುವ ಜನರಿಗೆ ನೀರು ಒದಗಿಸುವುದು ಕಷ್ಟವಾಗುತ್ತದೆ.

 ನೀರಿನ ಸಮಸ್ಯೆ, ಪರಿಣಾಮ

  • ಆಫ್ರಿಕಾದ ನಗರಗಳಲ್ಲಿ ಶೇ ೬೦ರಷ್ಟು ಮಂದಿ ಪಟ್ಟಣಿಗರು ಕೊಳೆಗೇರಿ ನಾಗರಿಕರಾಗುತ್ತಾರೆ.
  • ನೀರಿನಿಂದ ಉತ್ಪತ್ತಿಯಾಗುವ ರೋಗಗಳ ಸಂಖ್ಯೆ ವಿಸ್ತಾರವಾಗುತ್ತದೆ.
  • ನೀರಿನ ಸಮಸ್ಯೆಯಿಂದ ಮಹಿಳೆ ಮತ್ತು ಮಕ್ಕಳಲ್ಲಿ ರೋಗ್ರಸ್ಥ ಸಂಖ್ಯೆ ಹೆಚ್ಚಳ.
  • ಅನೇಕ ರಾಷ್ಟ್ರಗಳಲ್ಲಿ ನೀರಿನ ಕೊರತೆಯಿಂದಾಗಿ ಲಕ್ಷಗಟ್ಟಲೆ ಬಾಲಕಿಯರು ಶಾಲೆ ಬಿಟ್ಟಿರುವ ಉದಾಹರಣೆಗಳಿವೆ.
  • ನೀರಿನ ಕೊರತೆಯಿಂದಾಗಿ ಶಾಲೆಗಳಲ್ಲಿ ಶೌಚಾಲಯಗಳಿಲ್ಲ. ಮಕ್ಕಳು ಶಾಲೆ ತೊರೆಯಲೂ ಇದೂ ಕಾರಣವಾಗಿದೆ.
  • ವಿಶ್ವದಲ್ಲಿ ೮೦೦ ದಶಲಕ್ಷ ಜನರು ‘ನೀರಿನ ಸಮಸ್ಯೆಯ ಒತ್ತಡ’ದಿಂದ ಬಳಲುತ್ತಿದ್ದಾರೆ.

ನೀರಿನ ಸಮಸ್ಯೆಯ ಮತ್ತೊಂದು ಮುಖ

  • ನದಿಗಳು ಬತ್ತುತ್ತಿವೆ. ಕೊಳಗಳು ಕರಗುತ್ತಿವೆ. ಅಂತರ್ಜಲ ಬರಿದಾಗುತ್ತಿದೆ. ಪರಿಣಾಮ ಏಷ್ಯಾ ಹಾಗೂ ಆಫ್ರಿಕಾ ರಾಷ್ರಗಳಲ್ಲಿ ೨೦೨೫ರ ಹೊತ್ತಿಗೆ ನೀರಿನ ಒತ್ತಡದಿಂದ ಬಳಲುವವರ ಸಂಖ್ಯೆ ೮ ಶತಕೋಟಿ ದಾಟುವ ಲಕ್ಷಣಗಳಿವೆ.
  • ನೀರಿನ ಸಮಸ್ಯೆಯಿಂದಾಗಿ ಶ್ರೀಮಂತ ರಾಷ್ಟ್ರಗಳು ಆಹಾರ ಬೆಳೆಯುವುದನ್ನೇ ಬಿಟ್ಟು, ಆಮದು ಮಾಡಿಕೊಳ್ಳಲಾರಂಭಿಸಿವೆ.
  • ಹೆಚ್ಚಾಗಿ ನೀರು ಬೇಡುವ ಬೆಳೆಗಳನ್ನು ಬೆಳೆಯುತ್ತಿರುವ ಪರಿಣಾಮ ಅಂತರ್ಜಲ ಕುಸಿಯುತ್ತಿದೆ.
  • ಶೇ ೪೦ ರಷ್ಟು ನೀರು ವಿತರಣೆಯ ಸಂದರ್ಭದಲ್ಲಿ ಸೋರಿಕೆಯಾಗುತ್ತಿದೆ. ಪೈಪ್‌ಗಳಲ್ಲಿ, ಕಾಲುವೆಗಳಲ್ಲಿರುವ ಬಿರಕು ಈ ಸೋರಿಕೆ ಕಾರಣ. ಇದೆಲ್ಲದಕ್ಕೆ ಮೂಲ ಕಾರಣ ಆಡಳಿತದಲ್ಲಿರುವ ಭ್ರಷ್ಟಾಚಾರ. ಪರಿಣಾಮ ನೀರಿನ ಬೆಲೆ ಕೂಡ ದುಬಾರಿಯಾಗುತ್ತಿದೆ. ಬಡವರು ನೀರನ್ನು ಕೊಂಡು ಬದುಕಲಾರದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
  • ಆಸ್ಟ್ರೇಲಿಯಾದ ಹೂಸ್ಟನ್ ಮತ್ತು ಸಿಡ್ನಿಯಲ್ಲಿ ನೀರಿನ ಸಮಸ್ಯೆ ತಾರಕಕ್ಕೇರಿದೆ. ಇಲ್ಲಿ ನೀರನ್ನು ಉಪಯೋಗಿಸುವುದಕ್ಕಿಂತ ಅಲಂಕಾರಕ್ಕಾಗಿ ಬಳಸುವುದೇ ಹೆಚ್ಚು. ಹಾಗಾಗಿ ಆಸ್ಟ್ರೇಲಿಯಾವನ್ನು Woಡಿಟಜ ಜಡಿiesಣ ಛಿoಟಿಣiಟಿeಟಿಣ ಎನ್ನುತ್ತಾರೆ. ಈ ದೇಶಗಳಲ್ಲಿ ಕೃಷಿಗೆ ಬಳಸುವ ನೀರಿನಲ್ಲಿ ಕ್ಷಾರ ಅಂಶ (ಸಲೈನಿಟಿ ) ಹೆಚ್ಚಾಗಿದೆ.
  • ನೀರಿನ ಕೊರತೆಯಿಂದಾಗಿ ಯೂರೋಪ್‌ನ ಹಲವು ಕಡೆ ವರ್ಷ ಪೂರ್ತಿ ಬರಗಾಲ

 ಜಾಗತಿಕ ತಾಪಮಾನ

  • ನೀರಿನ ಕೊರತೆ, ಜಾಗತಿಕ ತಾಪಮಾನ ಏರಿಕೆಗೆ ಪೂರಕವಾಗಿದೆ. ವಿಶ್ವದ ಕೆಲವು ರಾಷ್ರಗಳಲ್ಲಿ ಮಳೆ ಪ್ರಮಾಣ ಕ್ಷೀಣಿಸಿದೆ. ಕೆಲವು ಕಡೆ ಹಿಮಪಾತ, ಗ್ಲೇಸಿಯರ್ ಸಮಸ್ಯೆ ಆರಂಭವಾಗಿದೆ. ಸಮುದ್ರ ಮಟ್ಟದಲ್ಲಿ ಏರಿಕೆಯಾಗಿದೆ. ಪ್ರಾಕೃತಿಕ ವಿಕೋಪಗಳು ಸಂಭವಿಸಿದೆ.
  • ಚೀನಾದಲ್ಲಿ ಪ್ರತಿ ವರ್ಷ ಯಂಗ್ಟ್ಜೆ ಎಂಬ ನದಿಯಲ್ಲಿ ಪ್ರವಾಹ ಹರಿಯುತ್ತದೆ.
  • ೨೦೦೪ರಲ್ಲಿ ಹಿಂದೂ ಮಹಾಸಾಗರದಲ್ಲಿ ಉಂಟಾದ ಸುನಾಮಿಯಿಂದ ಎರಡು ಲಕ್ಷ ಮಂದಿ ಸಾವನ್ನಪ್ಪಿದ್ದು ಇದೇ ಜಾಗತಿಕ ತಾಪಮಾನದ ಏರುಪೇರಿನಿಂದಲೇ.

(ಸಂಗ್ರಹ, ವಿವಿಧ ಮೂಲಗಳಿಂದ)

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*