ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಉದ್ಯಾನಕ್ಕೆ ನೀರೆರೆಯುವುದು – ಲಾಲ್‌ಬಾಗ್ ಕಥೆ

ನಮ್ಮ ನಗರದ ಉದ್ಯಾನಗಳು - ಪುರಾತನ ಹಾಗೂ ಆಧುನಿಕ ನೀರಿನ ಆಗರಗಳು

ಹಲವಾರು ಉದ್ಯಾನಗಳಿರುವ ಉದ್ಯಾನನಗರ ಬೆಂಗಳೂರಿಗೂ, ಲಾಲ್‌ಬಾಗ್ ವಿಶಿಷ್ಟವಾದುದೇ. ೨೪೦ ಎಕರೆ ಪ್ರದೇಶದfor Vishwanath article set 2 - pic 1ಲ್ಲಿ ಹರಡಿ, ೧,೮೫೪ ಜಾತಿಯ ಗಿಡಗಳಿದ್ದು, ಅದು ಸಸ್ಯಶಾಸ್ತ್ರಜ್ಞರಿಗೆ ಒಂದು ಕನಸಿದ್ದಂತೆ. ೧೭೬೦ರಲ್ಲಿ ಹೈದರಾಲಿ ಈ ಉದ್ಯಾನವನ್ನು ಖಾಸಗಿ ಉದ್ಯಾನವಾಗಿ ಪ್ರಾರಂಭಿಸಿದಾಗ, ಅದು ಕೇವಲ ೪೦ ಎಕರೆಗಳಲ್ಲಿ ಹರಡಿತ್ತು. ೧೮೦೦ರಲ್ಲಿ ಬರೆದ ತಮ್ಮ ಸುಪ್ರಸಿದ್ಧ ಪ್ರವಾಸ ಕಥನದಲ್ಲಿ ಡಾ.ಫ಼್ರಾನ್ಸಿಸ್ ಬಕಾನನ್ ಈ ರೀತಿ ತಿಳಿಸಿದ್ದಾರೆ, “ವಿಸ್ತೃತವಾಗಿ ಹರಡಿರುವ ತೋಟವನ್ನು ಚೌಕಾಕಾರದ ಪ್ಲಾಟ್‌ಗಳಾಗಿ ವಿಂಗಡಿಸಲಾಗಿದೆ. ಪಕ್ಕದಲ್ಲಿ ಕಾಲ್ನಡಿಗೆಯ ದಾರಿಯಿದ್ದು, ಇಕ್ಕೆಲೆಗಳಲ್ಲಿ ಸೈಪ್ರಸ್ ಜಾತಿಯ ಮರಗಳನ್ನು ನೆಡಲಾಗಿದೆ……ಈ ತೋಟದಲ್ಲಿ ನೀರು ಇಲ್ಲದಿರುವುದೇ ದೊಡ್ಡ ಕೊರತೆ – ಏಕೆಂದರೆ ಈ ಒಣ ಪ್ರದೇಶದಲ್ಲಿ, ಒಣ ಋತುವಿನಲ್ಲಿ ಎಲ್ಲ ಸಸ್ಯಸಂಕುಲಕ್ಕೂ ಕೃತಕವಾಗಿಯೇ ನೀರೆರೆಯಬೇಕು. ಟಿಪ್ಪುವಿನ ತೋಟದಲ್ಲಿ ೩ ಬಾವಿಗಳಿದ್ದು, ಅದರಿಂದ ‘ಕ್ಯಾಪಿಲಿ’ ಅಥವಾ ಚರ್ಮದ ಚೀಲದಲ್ಲಿ ನೀರನ್ನು ಎಳೆಯಲಾಗುತ್ತದೆ; ಈ ಚೀಲವನ್ನು ರಾಟೆಗೆ ಕಟ್ಟಿ, ಅದನ್ನು ಜೋಡಿ ಎತ್ತುಗಳು ಇಳಿಜಾರು ಸಮತಲದಲ್ಲಿ ನಡೆಯುತ್ತಾ ಎಳೆಯುತ್ತದೆ.”

for Vishwanath article set 2 - pic 2ಹಾಗಾಗಿ, ಅಲ್ಲಿನ ನೀರಿನ ಪರಿಸ್ಥಿತಿಯನ್ನು ಗಮನಿಸಲೆಂದು ಒಂದು ಶನಿವಾರದಂದು ಆಮಂತ್ರಣ ಬಂದಾಗ, ಸಹಜವಾಗಿಯೇ ಉತ್ಸಾಹ ಹೆಚ್ಚಿತು. ಅಂದು ಲಾಲ್‌ಬಾಗ್‌ನ ನೀರಿನ ಅಗತ್ಯಗಳನ್ನು ಪೂರೈಸುತ್ತಿದ್ದ ಸಣ್ಣ ಕೆರೆಯು, ಇದೀಗ ಇನ್ನೂ ೨೦ ಎಕರೆಗೆ ನೀರು ಒದಗಿಸುವುದಕ್ಕೆ ವಿಸ್ತೀರ್ಣಗೊಂಡಿದೆ. ಕೆರೆಯನ್ನು ವಿಸ್ತರಿಸಿ, ಸುಧಾರಣೆ ಮಾಡುವ ಸಲುವಾಗಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಸುಮಾರು ೨.೫ ಕೋಟಿ ಹಣವನ್ನು ಹೂಡಿದೆ. ಈ ಮೊದಲು ಮಳೆನೀರ ಚರಂಡಿಯಿಂದ ಹರಿದು ಬರುತ್ತಿದ್ದ ಸೆಗಣಿ ಹಾಗೂ ಪ್ರಾಣಿ ತ್ಯಾಜ್ಯವು ಕೆರೆಗೆ ಹರಿದು ಬರದಂತೆ ಎಚ್ಚರ ವಹಿಸಿ, ಸ್ವಚ್ಛಗೊಳಿಸಲಾಗುತ್ತದೆ. ಉದ್ಯಾನದ ಒಂದು ಪಕ್ಕದಲ್ಲಿ ಸಣ್ಣ ಒಳಚರಂಡಿ ಸಂಸ್ಕರಣಾ ಸ್ಥಾವರವನ್ನು ಸ್ಥಾಪಿಸಲಾಗಿದ್ದು, ಸುತ್ತಲಿನ ಪ್ರದೇಶದ ಗೃಹಬಳಕೆಯ ಚರಂಡಿ ತ್ಯಾಜ್ಯವನ್ನು ಸಂಸ್ಕರಿಸಿ, ಉದ್ಯಾನಕ್ಕೆ ನೀರೆರೆಯಲು ಕಟ್ಟೆ/ಜಲಾಶಯದಲ್ಲಿ ಶೇಖರಣೆ ಮಾಡಿ ಇಡಲಾಗುತ್ತದೆ. ಸಂಸ್ಕರಣೆಗೊಂಡ ನೀರಿಗಾಗಿ ಲಾಲ್‌ಬಾಗ್‌ಗೆ ತಗಲುವ ವೆಚ್ಚ, ಪ್ರತಿ ಕಿಲೋಲೀಟರ್‌ಗೆ ರೂ.೧೫ ಆಗುತ್ತದೆ. ಅಗತ್ಯಕ್ಕಿಂತ ಹೆಚ್ಚಿನ ಸಂಸ್ಕರಿಸಿದ ತ್ಯಾಜ್ಯ ನೀರು ಇದ್ದರೆ, ಅದನ್ನು ಶೇಖರಣೆಗೆಂದು ಕೆರೆಗೆ ಬಿಟ್ಟು, ಈ ಮೂಲಕ ಅಂತರ್ಜಲವನ್ನು ಮತ್ತಷ್ಟು ಮರುಪೂರಣಗೊಳಿಸಲಾಗುತ್ತದೆ.

ಸಂಸ್ಕರಿಸಿದ ನೀರಿಗೆ ಪೂರಕವಾಗಿರುವಂತೆ, ಉದ್ಯಾನದಲ್ಲಿ ೯ ಕೊಳವೆಬಾವಿಗಳನ್ನು ತೋಡಲಾಗಿದೆ. ಪ್ರತಿಯೊಂದೂ ಬೇರೆಬೇರೆ ಆಳವನ್ನು ಹೊಂದಿದ್ದು, ಅತ್ಯಂತ ಆಳವಾದುದು ೩೭೦ ಅಡಿ ಇದೆ.

ಆದರೆ, ಹೊಸದಾಗಿ ಕಂಡುಹಿಡಿದಿದ್ದೇನೆಂದರೆ, ಮೂಲ ೪೦ ಎಕರೆ ತೋಟದಲ್ಲಿ ೩ ಬಾವಿಗಳಿರುವುದು. ಇವು ೧೭೬೦ರಲ್ಲಿ ತೋಡಿಸಲಾದ ಮೂಲ ಬಾವಿಗಳೇ? for Vishwanath article set 2 - pic 5ಬಹುಶಃ ಇರಬಹುದು – ಆದರೆ, ಈ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆಗಳ ಅಗತ್ಯವಿದೆ. ಈ ಬಾವಿಗಳನ್ನು ಬಳಸುತ್ತಿರಲಿಲ್ಲ ಹಾಗೂ ಕೆಲವದರಲ್ಲಿ, ಕಸ-ಕಡ್ಡಿ ತುಂಬಿಕೊಂಡಿತ್ತು. ಆದರೆ, ಅವುಗಳನ್ನು ಸ್ವಚ್ಛಗೊಳಿಸಿ, ಹೂಳು ತೆಗೆಯುವುದು ಖಂಡಿತವಾಗಿಯೂ ಸಾಧ್ಯ. ಎಲ್ಲ ಬಾವಿಗಳಲ್ಲೂ ನೀರಿದ್ದು, ೧೫ರಿಂದ ೨೦ ಅಡಿ ಆಳದಲ್ಲಿ ನೀರಿತ್ತು; ಬಹುಶಃ, ಸ್ವಲ್ಪ ದೂರದಲ್ಲಿ, ದೊಡ್ಡ ಕೆರೆ ಇರುವುದರಿಂದ ಹೀಗಿದ್ದಿರಬಹುದು ಎಂದು ತೋರುತ್ತದೆ. ಬಾವಿಯ ಕಲ್ಲಿನ ಪದರವು ಹಾಗೇ ಇತ್ತು – ಕೇವಲ ಅದರ ಕಟ್ಟೆಯನ್ನು ಮಾತ್ರ ರಿಪೇರಿ ಮಾಡುವ ಅಗತ್ಯವಿತ್ತು.

ಬಾವಿಗಳನ್ನು ಸ್ವಚ್ಛಗೊಳಿಸಿ, ಅವುಗಳಿಗೆ ಮರುಜೀವನ ನೀಡಿದರೆ, ಅದ್ಭುತವಾಗಿರುತ್ತದೆ. ಬಾವಿಗಳಿಂದ ನೀರನ್ನು ಎತ್ತಲು ಅತ್ಯಲ್ಪ ಶಕ್ತಿ ಬಳಸಿದರೆ ಸಾಕು – ಏಕೆಂದರೆ, ನೀರನ್ನು ಎತ್ತಬೇಕಾದ ಎತ್ತರ ಕಡಿಮೆ, ಹಾಗಾಗಿ, ನೀರಿನ ವೆಚ್ಚವೂ ಅತ್ಯಂತ ಕಡಿಮೆ ಇರುತ್ತದೆ. ಬಾವಿ ನೀರನ್ನು ಬಳಸುವುದು ಆರ್ಥಿಕವಾಗಿ ಹಾಗೂ ಪಾರಿಸಾರಿಕವಾಗಿಯೂ ಹೆಚ್ಚು ಅರ್ಥಪೂರ್ಣವಾಗಿರುತ್ತದೆ.

ಪರಂಪರೆಯ ಭಾಗವಾಗಿ, ಬಾವಿಗಳಿಗೆ ‘ಕಪಿಲೆ’, ‘ಯೇತ’ ಹಾಗೂ ಪರ್ಷಿಯನ್ ಚಕ್ರವನ್ನು ಜೋಡಿಸುವ ಮೂಲಕ, ಇದು ನಮ್ಮ ಭವ್ಯ ನೀರ ಪರಂಪರೆಯ ನೆನಪನ್ನು ಮರುಕಳಿಸಿದಂತೆ ಆಗುತ್ತದೆ. ಲಾಲ್‌ಬಾಗ್‌ನ ಸುಂದರ ಹೂವುಗಳು, ಗಿಡಗಳು ಹಾಗೂ ಮರಗಳೊಂದಿಗೆ, ಇದೂ ಒಂದು ಆಕರ್ಷಣೆಯ ಕೇಂದ್ರವಾಗುತ್ತದೆ.

ಜಾಣ್ಮೆಯಿಂದ ಸುಸ್ಥಿರ ಪರಿಹಾರಗಳನ್ನು ಕಂಡುಕೊಂಡರೆ, ತನ್ನ ನೀರಿನ ಅಗತ್ಯಗಳನ್ನು ಪೂರೈಸುವುದು ಹೇಗೆಂದು ಲಾಲ್‌ಬಾಗ್‌ನಂತಹ ಹಸಿರಿನಿಂದ ತುಂಬಿದ ಉದ್ಯಾನವು ಸಾಬೀತುಪಡಿಸಿದೆ. ಕೆರೆಯ ಸಂರಕ್ಷಣೆ ಹಾಗೂ ವೃದ್ಧಿ, ಸಂಸ್ಕರಿಸಿದ ತ್ಯಾಜ್ಯ ನೀರಿನ ಬಳಕೆ, ಅಂತರ್ಜಲದ ಬಳಕೆ ಹಾಗೂ ತೆರೆದ ಬಾವಿಗಳ ಮರುಪೂರಣವು ನೀರ ನಿರ್ವಹಣೆಯ ಕಿರು ಸಮನ್ವಯತೆಯಾಗಿದೆ.

ಆದರೂ, ಕೆರೆಯ ನೀರಿನ ಗುಣಮಟ್ಟದ ಮೇಲ್ವಿಚಾರಣೆ, ಒಳಚರಂಡಿ ಸಂಸ್ಕರಣಾ ಸ್ಥಾವರ ಕಾಮಗಾರಿಗಳು ನಿರಂತರವಾಗಿ ಹಾಗೂ ಉತ್ತಮ ರೀತಿಯಲ್ಲಿ ನಡೆಯುವಂತೆ ಖಚಿತಪಡಿಸಿಕೊಳ್ಳುವುದು, ಭೂಜಲ ಹಾಗೂ ಅಂತರ್ಜಲ ಮಟ್ಟದ ನಕ್ಷೆಯನ್ನು ಬಿಡಿಸಿ, ಅರ್ಥಮಾಡಿಕೊಳ್ಳುವುದು ಹಾಗೂ ಆಳವಲ್ಲದ ಜಲಧರ ಮೂಲಗಳನ್ನು ನೀರಿನ ವ್ಯವಸ್ಥೆಯೊಂದಿಗೆ ಉತ್ತಮ ರೀತಿಯಲ್ಲಿ ಸಮನ್ವಯಗೊಳಿಸುವ ಅಗತ್ಯವಿದೆ.

ಸ್ಥಳೀಯ ನಾಗರಿಕರಿಗೆ ಹಾಗೂ ಉದ್ಯಾನಕ್ಕೆ ಭೇಟಿ ನೀಡುವವರಿಗೆ ನೀರಿನ ಈ ಎಲ್ಲ ವ್ಯವಸ್ಥೆಗಳೂ ಹೆಚ್ಚು ಮಾಹಿತಿಪೂರ್ಣವಾಗುವಂತೆ, ಇವುಗಳು ಕೆಲಸ ಮಾಡುವ ಬಗೆಯನ್ನು ತಿಳಿಸುವ ಸೂಚನಾ ಫಲಕಗಳನ್ನು ಹಾಕಬಹುದು; ಇದರಿಂದ ನೀರ ಸಾಕ್ಷರತೆಯು ವೃದ್ಧಿಸುತ್ತದೆ. ಇದೇ ನೀರಿನ ಜ್ಞಾನ.

 ಚಿತ್ರ-ಲೇಖನ: ಎಸ್. ವಿಶ್ವನಾಥ್

ಮೂಲ:https://rainwaterharvesting.wordpress.com/2012/07/
Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*