ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಖಾಸಗೀ ವಲಯದ ಹಣ… ಕೆರೆ ಸಂರಕ್ಷಣೆ ಪಣ.

ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಜಿಗಣಿ ಇಂಡಸ್ಟ್ರಿಯಲ್ ಏರಿಯಾಗಳಲ್ಲಿ ಕೆಲ ಉತ್ಪಾದಕ ಮತ್ತು ಅನುತ್ಪಾದಕ ಖಾಸಗೀ ಕಂಪನಿಗಳೇ ಕೆರೆ ಮಾಲಿನ್ಯಕ್ಕೆ ಕಾರಣ ಎಂಬ ಮಾತು ದಟ್ಟವಾಗಿ ಕೇಳಿಬರುತ್ತಿರುವ ಬೆನ್ನಲ್ಲೇ ಖಾಸಗೀ ವಲಯದ ಕಂಪನಿಗಳೆಲ್ಲಾ ಒಂದಾಗಿ ಕೆರೆ ಸಂರಕ್ಷಣೆಗೆ ಪಣ ತೊಟ್ಟಿವೆ. ಕಳೆದ ವರ್ಷ ಜಿಗಣಿಯ ಸನ್ಸೆರಾ ಎಂಬ ಖಾಸಗೀ ಕಂಪನಿ ಕೆರೆಯೊಂದನ್ನ ಅಭಿವೃದ್ಧಿ ಪಡಿಸಿದ ಬೆನ್ನಲ್ಲೇ ಸಾಕಷ್ಟು ಕಂಪನಿಗಳು ಈ ಕೆರೆ ಅಭಿವೃದ್ಧಿ ದಾರಿ 34747709_1999197130153114_203309879048273920_nತುಳಿದಿವೆ. ಸನ್ಲೆರಾ ಕಂಪನಿಯ ಸಿಎಸ್ ಆರ್ ಮುಖ್ಯಸ್ಥ ಆನಂದ್ ನೇತೃತ್ವದಲ್ಲಿ ಕಳೆದ ವರ್ಷ ಅಭಿವೃದ್ದಿಪಡಿಸಲಾಗಿದ್ದ 45 ಎಕರೆಯ ಕ್ಯಾಲಸನಹಳ್ಳಿ ಕೆರೆಯಲ್ಲಿ ನೀರು ತುಂಬಿದ ಬೆನ್ನಲ್ಲೇ ಈ ವರ್ಷ ಅಲ್ಲೇ ಪಕ್ಕದಲ್ಲಿರುವ ವಾಬಸಂಧ್ರ ಗ್ರಾಮಸ್ಥರ ಒತ್ತಾಸೆ ಮೇರೆಗೆ ಹೆಚ್ ಪಿ, ಸೇಫ್ ಟ್ರೀ ಕಂಪನಿಗಳ ಸಹಯೋಗದಲ್ಲಿ 9 ಎಕರೆಯ ವಾಬಸಂಧ್ರ ಕೆರೆಯನ್ನ ಅಭಿವೃದ್ದಿ ಪಡಿಸಲಾಗಿದೆ. ವಾಬಸಂಧ್ರ ಕೆರೆ ಅಭಿವೃಧ್ಧಿ ಪಡಿಸಿದ್ದೇ ತಡ ಆನಂದ್ ಅವರ ಕಾರ್ಯವೈಖರಿ ಗಮನಿಸಿದ ಸಾಕಷ್ಟು ಖಾಸಗೀ ಕಂಪನಿಗಳು ಒಂದಾಗಿ ಈಗ ಕೆರೆ ಅಭಿವೃದ್ದಿಗೆ ಮತ್ತಷ್ಟು ನೆರವಿನ ಹಸ್ತ ನೀಡಲು ಮುಂದಾಗಿವೆ. ಟಿಸಿಎಸ್, ಇನ್ಫೋಸಿಸ್, ಸನ್ಸೆರಾ, ಹೆಚ್ ಪಿ, ಸೇಫ್ ಟ್ರೀ ಮುಂತಾದ 15ಕ್ಕೂ ಅಧಿಕ ಕಂಪನಿಗಳು ಈಗ ಕೆರೆ ಸಂರಕ್ಷಣೆಗೆ ನೆರವು ನೀಡಲು ಮುದಾಗಿದ್ದು ಆನೇಕಲ್ ತಾಲೂಕೊಂದರಲ್ಲೇ ಸುಮಾರು 40 ಕೆರೆಗಳನ್ನ ಅಭಿವೃದ್ಧಿ ಪಡಿಸಲು ಪಣ ತೊಟ್ಟು ಆ ನಿಟ್ಟಿನಲ್ಲಿ ಕಾರ್ಯಪ್ರೌವೃತ್ತವಾಗಿವೆ. ಜಲಮೂಲ ನಾಶವಾಗುತ್ತಿರುವ ಈ ಹೊತ್ತಿನಲ್ಲಿ ಈ ದಿಗ್ಗಜ ಕಂಪನಿಗಳೆಲ್ಲಾ ನೆಲ, ಜಲ ಉಳಿಸುವ ನಿಟ್ಟಿನಲ್ಲಿ ದಾಪುಗಾಲಿಟ್ಟಿದ್ದು ಒಂದೊಂದೇ ಕೆರೆಯನ್ನ ಅಭಿವೃದ್ಧಿ ಪಡಿಸಲು ಮುಂದಾಗಿದ್ದು ಹೆಮ್ಮೆಯ ವಿಚಾರ.

ಟಿಸಿಎಸ್, ಸೇಫ್ ಟ್ರೀ ಸಹಯೋಗದಲ್ಲಿ ವಾಬಸಂಧ್ರ ಕೆರೆ ಅಭಿವೃದ್ದಿ-
34838332_1999197020153125_7499116003800907776_nಸಂಪೂರ್ಣವಾಗಿ ಹೂಳಿನಿಂದ ತುಂಬಿ ನೀರೇ ಇಲ್ಲದೇ ಖಾಲೀ ಜಾಗದಂತೆ ಬಾಸವಾಗುತ್ತಿದ್ದ ವಾಬಂಸಂಧ್ರ ಕೆರೆಯನ್ನ ಸತತ 75 ದಿನಗಳ ಕಾರ್ಯಾಚರಣೆ ನಡೆಸಿ ಅಭಿವೃದ್ದಿ ಪಡಿಸಲಾಗಿದೆ. ಹೆಚ್ ಪಿ, ಸೇಫ್ ಟ್ರೀ ಕಂಪನಿ ನೀಡಿದ 1 ಕೋಟಿ ರೂ ಹಣಕಾಸಿನ ನೆರವನ್ನ ಸರಿಯಾಗಿ ಬಳಸಿಕೊಂಡ ಸನ್ಸೆರಾ ಕಂಪನಿಯ ಸಿ.ಎಸ್.ಆರ್. ಮುಖ್ಯಸ್ಥ ಆನಂದ್ ಸ್ವತಃ ತಾವೇ ಯೋಜನೆ ರೂಪಿಸಿ 75 ದಿನಗಳ ಜೆಸಿಬಿ, ಇಟ್ಯಾಚಿ, ಟ್ರಾಕ್ಟರ್ ಮತ್ತು ಮಾನವ ಸಂಪನ್ಮೂಲ ಬಳಸಿಕೊಂಡು ಅಭಿವೃದ್ದಿ ಪಡಿಸಿದ್ದಾರೆ. ಮೂಲತಃ ಹಳ್ಳಿಗಾಡಿನಿಂದ ಬಂದಿದ್ದ ಆನಂದ್ ಅವರಿಗೆ ಹಳ್ಳಿಗಾಡಿನ ಕೆರೆ ಕಟ್ಟೆಗಳ ಬಗ್ಗೆ ಸಾಕಷ್ಟು ಅನುಭವ ಮತ್ತು ಅವುಗಳ ಮಹತ್ವದ ಅರಿವಿದ್ದುದರಿಂದ ಮತ್ತು ಕಳೆದ ವರ್ಷ ತಾವೇ ಸ್ವತಃ ಮುಂದೆನಿಂತು ಕ್ಯಾಲಸನಹಳ್ಳಿ ಕೆರೆ ಅಭಿವೃದ್ಧಿ ಪಪಡಿಸಿದ್ದ ಅನುಭವವಿದ್ದುದರಿಂದ ವಾಬಸಂಧ್ರ ಕೆರೆ ಅಭಿವೃದ್ಧಿಗೆ ಹೆಚ್ಚು ನೆರವಾಯ್ತು ಅಂತಾರೆ ಆನಂದ್. ಇನ್ನು ವಾಬಸಂಧ್ರ ಕೆರೆಯನ್ನ ಅಭಿವೃದ್ಧಿ ಪಡಿಸಿದ್ದೇ ತಡ ಈಗ ಸುಮಾರು ತಾಲೂಕಿನ 40 ಕೆರೆ ಅಭಿವೃದ್ಧಿಗೆ ಯೋಜನೆ ರೂಪಗೊಂಡಿದ್ದು ಹಣಕಾಸಿನ ನೆರವು ನೀಡಲು ವಿವಧ ಎಂಎನ್ ಸಿಗಳು ಮುಂದೆ ಬಂದಿವೆ ಅಂತಾರೆ ಸನ್ಸೆರಾ ಕಂಪನಿ ಆನಂದ್.

ಹೊರವಲಯದ ಮಲಿನ ಕೆರೆಗಳ ಅಭಿವೃದ್ಧಿ
34919485_1999197090153118_1626597710922514432_nಒಂದು ಲೆಕ್ಕಾಚಾರದ ಪ್ರಕಾರ ಆನೇಕಲ್ ತಾಲೂಕು ಸುಮಾರು 232 ಕೆರೆಗಳನ್ನ ಹೊಂದಿದ್ದು ಅತ್ಯಂತ ಜಲಸಂಪತ್ತನ್ನ ಹೊಂದಿರುವ ಪ್ರದೇಶ. ಆದ್ರೆ ಬಹುತೇಕ ಕೆರೆಗಳು ಮಲಿನಗೊಂಡಿರುವುದು ಬೇಸರದ ಸಂಗತಿ. ಬಹುತೇಕ ಕೆರೆಗಳು ಗಬ್ಬು ನಾರುತ್ತಿದ್ದು ಕೆಮಿಕಲ್ ಮಿಶ್ರಣದಿದಂದ ತುಂಬಿ ತುಳುಕುತ್ತಿವೆ. ಹಾಗಾಗಿ ಆ ಕೆರೆಗಳನ್ನೆಲ್ಲಾ ಶುದ್ದಗೊಳಿಸುವುದು ಖಾಸಗೀ ಕಂಪನಿಗಳ ಒಕ್ಕೊರಲಿನ ಕೂಗು. ಸನ್ಸೆರಾ ಪೌಂಡೇಶನ್ ನ ಸಿಎಸ್ ಆರ್ ಮುಖ್ಯಸ್ಥ ಆನಂದ್ ನೇತೃತ್ವದಲ್ಲಿ ಈ ಕಾರ್ಯ ನಡೆಯುತ್ತಿದ್ದು ಈಗಾಗಲೇ ವಾಬಸಂಧ್ರ ಮತ್ತು ಕ್ಯಾಲಸನಹಳ್ಳಿ ಕೆರೆ ಅಭಿವೃದ್ಧಿ ಹೊಂದಿವೆ. ಇನ್ನು ಆನಂದ್ ಅವರ ಯೋಜನೆಯಲ್ಲಿ ಕೇವಲ ಕೆರೆ ಹೂಳೆತ್ತಿ ಕೈಬಿಡುವುದಲ್ಲ. ಬದಲಾಗಿ ಆ ಕೆರೆ ಸುತ್ತಾ ವಾಕಿಂಗ್ ಟ್ರಾಕ್ ನಿರ್ಮಿಸಿ, ಅಲ್ಲಿ ಗ್ರಾಮಸ್ಥರ ವಾಕಿಂಗ್ ಗೆ ಅನುಕೂಲ ಮಾಡಿಕೊಡುವ ಮತ್ತು ಕೆರೆ ಸುತ್ತಾ ಮಿಯಾವಾಕಿ ಪ್ಲಾಂಟೇಶನ್ ಬೆಳೆಸುವುದಾಗಿದ್ದು ಈಗಾಗಲೇ ಅಭಿವೃದ್ದಿ ಪಡಿಸಿರುವ ಈ ಎರಡೂ ಕೆರೆಗಳಲ್ಲಿ ಅವರು ಇದನ್ನ ಅಂತ್ಯಂತ ಅಚ್ಚುಕಟ್ಟಾಗಿ ಮಾಡಿ ತೋರಿಸಿದ್ದಾರೆ.

ಮಿಯಾವಾಕಿ ಫ್ಲಾಂಟೇಶನ್ ಎಂದರೇನು…?
37603486_2087688561303970_8919577437956734976_nಮಿಯಾವಾಕಿ ಎಂದರೆ ಸುಮಾರು 101 ಜಾತಿಯ ಸಸ್ಯಗಳನ್ನ ಬೆಳೆಸುವ ಯೋಜನೆ ಇದು. ಜಪಾನ್ ನಲ್ಲಿ ಈ ಪ್ಲಾಂಟೇಶನ್ ಗಳು ಜನಜನಿತ. ಕಂಪನಿಯ ಓರ್ವ ಲವಲವಿಕೆಯ ಸಿಎಸ್ ಆರ್ ಮುಖ್ಯಸ್ಥರಾಗಿರುವ ಆನಂದ್ ಕೆರೆ ಅಭಿವೃದ್ದಿ ಗೆ ಏಕಾಏಕಿ ಕೈ ಹಾಕಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಕೆರೆ ಅಭಿವೃದ್ದಿ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿ ಈ ಕಾರ್ಯಕ್ಕೆ ಕೈ ಹಾಕಿದ್ದಾರೆ. ಅದೇ ರೀತಿ ಕೆರೆ ದಂಡೆಯ ಹೂಳು ತೆಗೆದ ಮಣ್ಣಿನಲ್ಲಿ ಬೆಳೆಯಬಹುದಾದಂತ ಗಿಡಗಳ ಆಯ್ಕೆಯ ಬಗ್ಗೆ ಯೋಚಿಸಿದಾಗ ಈ ಮಿಯಾವಾಕಿ ಪ್ಲಾಟೇಶನ್ ಗಳೇ ಬೆಟರ್ ಎನ್ನುವ ನಿರ್ಧಾರಕ್ಕೆ ಬಂದು ಅವುಗಳನ್ನ ತಂದು ನೆಟ್ಟು ಬೆಳೆಸಿ ಪೋಷಿಸುತ್ತಿದ್ದಾರೆ. ಈ ಮಿಯಾವಾಕಿ ಗಿಡಗಳು 101 ಬಗೆಯವಾಗಿದದ್ದು ಹೂವು ಹಣ್ಣುಗಳ ಮತ್ತು ಬಹುತೇಕ ಔಷದಿ ಗಿಡಗಳೇ ಅಧಿಕವಾಗಿವೆ. ಈ ಮೂಲಕ ಪ್ರಾಣಿ ಪಕ್ಷಿಗಳು ಮತ್ತು ಜನಸಮೂಹಕ್ಕೆ ಅನುಕೂಲ ಮಾತ್ರವಲ್ಲದೇ ಮಳೆಗೆ ಕೆರೆ ದಂಡೆ ಮಣ್ಣು ಕೊಚ್ಚಿ ಹೋಗದಿರಲಿ ಎನ್ನುವುದಾಗಿದೆ. ಮಾತ್ರವಲ್ಲದೇ ಗಿಡ ನೆಡುವ ಕಾರ್ಯಕ್ಕೆ ಸಾಕಷ್ಟು ಪರಿಸರ ಪ್ರೇಮಿಗಳು ಕೈ ಜೋಡಿಸಿದ್ದಾರೆ. ಪ್ರತೀ ಭಾನುವಾರ ಈ ಕಾರ್ಯಕ್ಕೆ ಬೆಂಗಳೂರಿನ ವಿವಿಧ ಖಾಸಗೀ ಕಂಪನಿಗಳ ಉದ್ಯೋಗಿಗಳು ಮತ್ತು ಎನ್ ಜಿ ಓ ಗಳು ಕೈಜೋಡಿಸಿದ್ದು ಅವರೇ ಮಿಯಾವಾಕಿ ಪ್ಲಾಂಟೇಶನ್ ಬೆಳೆಸುವ ಕಾರ್ಯಕ್ಕೆ ನೆರವಾಗುತ್ತಿದ್ದಾರೆ. ಅಷ್ಟೇ ಅಲ್ಲದೇ ನಿವೃತ್ತ ಜೀವನ ಕಳೆುತ್ತಿರುವ ಸಾಕಷ್ಟು ಮಂದಿ ಕೂಡ ಈ ಕಾರ್ಯದಲ್ಲಿ ಭಾಗಿಯಾಗಿ ತಮ್ಮ ನಿವೃತ್ತ ಜೀವನವನ್ನ ಕುಷಿಯಾಗಿ ಕಳೆಯುತ್ತಿದ್ದಾರೆ. ಅಲ್ಲದೇ ಸಾರ್ವಜನಿಕರು ಯಾರು ಬೇಕಾದರೂ ಈ ಕೆರೆ ಉಳಿಸಿ-ಪರಿಸರ ರಕ್ಷಣೆ ಮಾಡುವ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ವೈಯಕ್ತಿಕವಾಗಿ ನನಗೆ ಬಹಳ ಕುಷಿ ಕೊಡುವ ಕೆಲಸ ಇದು ಅಂತಾರೆ ಹಿರಿಯ ನಾಗರೀಕ ಕಿಶೋರ್ ಗೋವಿಂದ್.

ಗ್ರಾಮದ ಜನತೆಯಿಂದಲೂ ಸಂಪೂರ್ಣ ಸಹಕಾರ
37768562_2087676384638521_7200409253226479616_nಇನ್ನ ಈ ಕೆರೆ ಅಭಿವೃದ್ಧಿಯಲ್ಲಿ ಗ್ರಾಮಸ್ಥರ ಪಾತ್ರ ಬಹಳ ಮುಖ್ಯವಾಗಿದೆ. ಯಾಕೆಂದ್ರೆ ಕೆರೆ ಪಕ್ಕದಲ್ಲೇ ಸಾಕಷ್ಟು ಜಾಗ ಒತ್ತುವರಿಯಾಗಿದ್ದರಿಂದ ಅದನ್ನೆಲ್ಲ ಬಿಟ್ಟು ಕೆರೆ ಜಾಗ ಕೆರೆಗೇ ಇರಲಿ ಎನ್ನುವ ನಿಟ್ಟಿನಲ್ಲಿ ವಾಬಸಂಧ್ರ ಮತ್ತು ಕ್ಯಾಲಸನಹಳ್ಳಿ ಗ್ರಾಮದ ಜನತೆ ಆನಂದ್ ಅವರ ಬೆನ್ನೆಲುಬಾಗಿ ನಿಂತು ಕೆರೆ ಅಭಿವೃದ್ದಿ ಪಡಿಸಿದ್ದಾರೆ. ಇನ್ನು ತಮ್ಮ ಪಕ್ಕದ್ದೇ ಊರಾದ ಕ್ಯಾಲಸನಹಳ್ಳಿ ಕೆರೆಯಲ್ಲಿ ಭರಪೂರ ನೀರು ತುಂಬಿದ್ದರಿಂದ ವಾಬಸಂಧ್ರ ಗ್ರಾಮಸ್ತರು ಕೂಡ ಅದನ್ನ ನೋಡಿ ಹರ್ಷಗೊಂಡು ತಮ್ಮ ಊರಿನ ಕೆರೆ ಕೂಡ ಅದೇ ರೀತಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಆನಂದ್ ಅವರಿಗೆ ನೆರವಾಗಿದ್ದಾರೆ. ಒತ್ತುವರಿಯಾಗಿದ್ದ ಕೆಲ ಎಕರೆ ಜಾಗವನ್ನ ಸ್ವತಃ ಗ್ರಾಮಸ್ಥರು ತಾವಾಗಿಯೇ ಬಿಟ್ಟುಕೊಟ್ಟಿದ್ದೇವೆ ಅಂತಾರೆ ವಾಬಸಂಧ್ರದ ಜನತೆ. ಇನ್ನು ವಾಬಸಂಧ್ರ ಗ್ರಾಮದಲ್ಲಿ ಕೂಡ ಎಲ್ಲಾ ಹಳ್ಳಿಗಳಂತೆ ಸಾಕಷ್ಟು ವೈಮನಸ್ಸು ಇತ್ತು. ಕೆರೆ ಪಕ್ಕದಲ್ಲಿಯೇ ಸ್ಮಶಾನ ಕೂಡ ಇದ್ದಿದ್ದರಿಂದ ಗ್ರಾಮದ ಕೆಲ ರೈತರ ಜಾಗದ ಮಧ್ಯೆಯೇ ಹಾದು ಹೋಗಬೇಕಾಗಿತ್ತು. ಸ್ಮಶಾನಕ್ಕೆ ರಸ್ತೆ ಬಿಡಲು ಯಾರೂ ಕೂಡ ತಯಾರಿರಲಿಲ್ಲ. ಆದ್ರೆ ಯಾವಾಗ ಕೆರೆ ಅಭಿವೃದ್ದಿಗೆ ಅಂತಾ ಆನಂದ್ ಊರಿಗೆ ಬಂದ್ರೋ ಕೆರೆ ಅಭಿವೃದದ್ಧಿ ಜೊತೆಗೆ ಊರಿನ ಸ್ಮಶಾನಕ್ಕೆ ಕೂಡ ದಾರಿ ಆಯ್ತು ಅಂತಾರೆ ಮಾಜಿ ಗ್ರಾಮ ಪಂಚಾಯತ್ ಸದಸ್ಯ ಮಂಜುನಾಥ್.

ಕೆರೆ ಅಭಿವೃದ್ಧಿಯಿಂದ ಒತ್ತುವರಿದಾರರಿಗೆ ಕಡಿವಾಣ
37784893_2087676324638527_3422255775681085440_nಬೆಂಗಳೂರು ಹೊರವಲಯದಲ್ಲಿ ರಿಯಲ್ ಎಸ್ಟೇಟ್ ತಾಂಡವವಾಡುತ್ತಿದೆ. ಎಲ್ಲೆಂದರಲ್ಲಿ ಬುಮಹಡಿ ಕಟ್ಟಡಗಳು, ವಸತಿ ಸಮುಚ್ಚಯಗಳು ದಿನಬೆಳಗಾಗುವುದರಲ್ಲಿ ತಾಂಡವವಾಡುತ್ತಿವೆ. ಆನೇಕಲ್ ತಾಲೂಕಿನ ಶೇಕಡಾ 60 ಭಾಗದಷ್ಟು ಕೆರೆಗಳು ಒತ್ತುವರಿಯಾಗಿವೆ ಎನ್ನುವ ಮಾಹಿತಿ ಇದೆ. ಹಾಗಾಗಿ ಅಳಿದುಳಿದದ ಭಾಗವನ್ನಾದ್ರೂ ಉಳಿಸಿಕೊಳ್ಳಬೇಕೆಂಬುದು ಆನಂದ್ ಅವರ ಹಂಬಲ. ಹಾಗಾಗಿ ಕೆರೆ ಅಭಿವೃದ್ದಿ ಪಡಿಸುವುದರಿಂದ ಒತ್ತುವರಿದಾದರಿಗೆ ಮೂಗುದಾರ ಹಾಕಿದಂತಾಗುತ್ತದೆ ಎನ್ನುವುದು ಆನಂದ್ ಅವರ ಮಾತು. ಇನ್ನು ಕೆರೆಯ ಜಿಯೋಗ್ರಾಫಿಕಲ್ ಸ್ಟ್ರಕ್ಚರ್ ಗೆ ಅನುಗುಣವಾಗಿ ಕೆರೆ ಅಭಿವೃದ್ಧಿ ಪಡಿಸುವುದು ಆನಂದ್ ಅವರ ಪರಿಲ್ಪನೆ. ಕೆರೆ ನೀರು ಹರಿಯುವ ದಿಕ್ಕು ಮತ್ತು ಅಂತಿಮವಾಗಿ ಎಲ್ಲಾ ಕೆರೆಗಳ ನೀರು ಸೇರುವ ಪಾಯಿಂಟ್ ಅನ್ನು ಗುರಿತು ಮಾಡಿಕೊಂಡು ಒಂದದೊಂದೇ ಕೆರೆ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿ ಸ್ಟ್ರಚ್ ಆಫ್ ದಿ ಲೇಕ್ ಕಾನ್ಸೆಪ್ಟ್ ಅಡಿಯಲ್ಲಿ ಅಭಿವೃದ್ಧಿಪಡಿಸಲು ನಿರ್ಧರಿಸಿದ್ದಾರೆ. ತಾಲೂಕಿಲ್ಲಿ ಕ್ಯಾಲಸನಹಳ್ಳಿ ವಾಬಸಂಧ್ರ, ನಂಜಾಪುರ, ಹುಲಿಮಂಗಲ, ಹೆಣ್ಣಾಗರ, ಚಂದಾಪುರ, ರಾಮಸಾಗರ, ಮುತ್ಯಾನಲ್ಲೂರು, ಬಿದರಗುಪ್ಪೆ, ಹೀಗೆ ಯೋಜನೆ ರೂಪಿಸಿದ್ದು 2020 ರ ವೇಳೆಗೆ ಎಲ್ಲಾ 40 ಕೆರೆಗಳನ್ನ ಅಭಿವೃದ್ಧಿಪಡಿಸುವ ಯೋಜನೆ ಸಿದ್ದವಾಗಿದೆ ಅಂತಾರೆ ಆನಂದ್.

32 ಅಡಿ ಹೂಳು ತೆಗೆದಿರು37900351_2096891113717048_1081379873580122112_nವ ಬೆಂಗಳೂರು ದಕ್ಷಿಣ ವಿಭಾಗದ ಮೊದಲ ಕೆರೆ ಇದು
ಸಾಧಾರಣವಾಗಿ ಸರ್ಕಾರದ ಮಟ್ಟದಲ್ಲಿ ಕೆರೆ ಹೂಳೆತ್ತುವ ಕಾರ್ಯ ಎಂದರೆ 4 ರಿಂದ 6 ಅಡಿ ಹೂಳು ತೆಗೆಯಲಾಗುತ್ತದೆ. ಆದ್ರೆ ವಾಬಸಂಧ್ರ ಕೆರೆಯಲ್ಲಿ ಬರೋಬ್ಬರಿ 32 ಅಡಿ ಹೂಳು ತೆಗೆಯಲಾಗಿದೆ ಮತ್ತು ಬೆಂಗಳೂರು ದಕ್ಷಿಣ ವಿಭಾಗದಲ್ಲಿ ಅತೀ ಹೆಚ್ಚು ಆಳವಿರುವ ಕೆರೆ ಕೂಡ ಇದಾಗಿದೆ ಅಂತಾರೆ ಗ್ರಾಮಸ್ಥರು. ಇನ್ನು ಕೆರ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆರೆ ಅಭಿವೃದ್ಧಿಗಾಗಿಯೇ ವಿಷೇಷವಾಗಿ ಸಾಮಾಜಿಕ ಜಾಲತಾಣಗಳನ್ನ ಕೂಡ ಆನಂದ್ ಬಳಕೆ ಮಾಡಿಕೊಂಡಿದ್ದಾರೆ. ತಮ್ಮ ಕಂಪನಿಯ ಸಾಕಷ್ಟು ಮಂದಿ ಕೆರೆ ಅಭಿವೃದ್ಧಿಪಡಿಸಿದ್ದ ಫೋಟೋ ವೀಡಿಯೋ ಗಳನ್ನ ಶೇರ್ ಮಾಡುತ್ತಾರೆ ಹಾಗಾಗಿ ಎಷ್ಟೋ ಮಂದಿ ವಿದೇಶಗಳಲ್ಲಿರುವ ಭಾರತೀಯರೂ ಕೂಡ ಅದನ್ನ ನೋಡಿ ಹಣಕಾಸಿನ ನೆರವು ನೀಡಲು ಮುಂದೆ ಬಂದಿದ್ದಾರೆ ಅಂತಾರೆ ಆನಂದ್.

ಅರಣ್ಯ-ಕಂದಾಯ ಇಲಾಖೆಗಳಿಂದಲೂ ಪ್ರಶಂಸೆ, ನೆರವು
ಇನ್ನು ಆನಂದ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಸಾಮಾಜಿಕ ಕಳಕಳಿಯ ಕೆಲಸಕ್ಕೆ ಕಂದಾಯ ಮತ್ತು ಅರಣ್ಯ ಇಲಾಖೆಗಳೂ ಕೂಡ ಬೆನ್ನೆಲುಬಾಗಿ ನಿಂತಿವೆ. ಕಂದಾಯ ಇಲಾಖೆ ಕೆರೆ ಒತ್ತುವರಿ ಬಗ್ಗೆ ಅದನ್ನ ಜನರಿಂದ ಮರುವಶಕಪಡಿಸಿಕೊಳ್ಳುವಲ್ಲಿ ನೆರವಾದ್ರೆ ಅರಣ್ಯ ಇಲಾಖೆ ಕೆರೆ ಡಂಡೆಗಳ ಮೇಲೆ ಬೆಳೆಯಬಹುದಾದ ಗಿಡಗಳ ಆಯ್ಕೆ ಮತ್ತು ಮಾಹಿತಿ ಬೀಜ ವಿತರಣೆ ಎಲ್ಲವಕ್ಕೂ ನೆರವಾಗುತ್ತಿದೆ. ಇನ್ನು ಆನಂದ್ ಅವರು ಈ ಮಿಯಾವಾಕಿ ಪ್ಲಾಂಟೇಶನ್ ಗಳನ್ನ ಶಾಲಾ ಮಟ್ಟದ ವರೆಗೂ ತೆಗೆದುಕೊಂಡು ಹೋಗುವ ಇಂಗಿತ ವ್ಯಕ್ತಪಡಿಸಿದ್ದು ಅದಕ್ಕೆ ಖಂಡಿತವಾಗಿಯೂ ನಮ್ಮ ಇಲಾಖೆ ಕೈಲಾದ ಮಟ್ಟಿಗೆ ಸಹಾಯ ಮಾಡ್ತೀವಿ ಮತ್ತು ಕೆಲವೆಡೆ ಅರಣ್ಯ ಇಲಾಖೆಯೇ ಪ್ಲಾಂಟೇಷನ್ ಗಳನ್ನ ಬೆಳೆಸಲು ಮುಂದಾದ್ರು ಕೂಡ ಸಾಕಷ್ಟು ತೊಂದರೆಗಳು ಎದುರಾಗುತ್ತಿವೆ. ಅದು ಇಲಾಖೆಗೆ ಸಂಬಂಧಿಸಿದ ಕೆಲಸ ಅಂತಾ ಜನ ಸಹಕಾರ ನೀಡುವುದಿಲ್ಲ. ಅಂತದ್ದರಲ್ಲಿ ಸನ್ಸೆರಾ ಕಂಪನಿಯ ಆನಂದ್ ಅವರು ಈ ಮಟ್ಟದಲ್ಲಿ ಪರಿಸರ ಕಾಳಜಿ ಮೆರುಯುತ್ತಿದ್ದಿದ್ದು ನಮ್ಮ ಹೆಮ್ಮೆ ಅಂತಾರೆ ಆನೇಕಲ್ ವಲಯದ ಆರ್ ಎಫ್ ಓ ಧನ್ಯಶ್ರೀ.

ಚಿತ್ರ-ಲೇಖನ:ಜಗದೀಶ್ ಹೊನಗೋಡು.

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*