ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ತನ್ನ ಜನರ ಮೂಲಕ ಚೊರಾಒ ಉಳಿಸುವುದು

ಸಂರಕ್ಷಣಾ ಯತ್ನಗಳಲ್ಲಿ ಚೊರಾಒ ದ್ವೀಪದ ನಿವಾಸಿಗಳನ್ನು ಸೇರ್ಪಡೆ ಮಾಡಿಕೊಳ್ಳುವ ಮೂಲಕ ಪಾರಿಸಾರಿಕ ವೈವಿಧ್ಯತೆಯನ್ನು ಹೊಂದಿದ ಚೊರಾಒವನ್ನು ವಿನೂತನ ಯೋಜನೆಯು ಕಾಪಾಡಲು ಹೊರಟಿದೆ

ಮಾಂಡೋವಿ ನದಿಯ ದಡದಲ್ಲಿರುವ ಚೊರಾಒ ದ್ವೆಪವು ಗೋವಾದ ರಾಜಧಾನಿ ಪಣchorao_islandಜಿಯಿಂದ ಕೇವಲ ೫ ಕಿಲೋಮೀಟರ್ ದೂರದಲ್ಲಿದ್ದು, ರಾಜ್ಯದ ಅತ್ಯಂತ ದೊಡ್ಡ ದ್ವೀಪಗಳಲ್ಲಿ ಒಂದಾಗಿದೆ.  ರಾಜ್ಯದಲ್ಲಿನ ಇತರ ಸಾಂಕ್ಚುಯರಿಗಿಂತ ಈ ದ್ವೀಪದ ಪರಿಸರ ವ್ಯವಸ್ಥೆಯು ವಿಭಿನ್ನವಾಗಿದೆ.  ಮಾಂಡೊವಿಯಲ್ಲಿಉರ್ವ ಚೊರಾಒ ದ್ವೀಪೌ ಅತ್ಯುತ್ತಮ ಮಾನ್‌ಗ್ರೋವ್ ಹೊಂದಿದ್ದು, ಗೋವಾದಲ್ಲಿರುವ ಬಹುತೇಕ ಮ್ಯಾನ್‌ಗ್ರ್ರೋವ್ ತಳಿಗಳನ್ನು ಹೊಂದಿದೆ.

ದ್ವೀಪದಲ್ಲಿ ಸುಪ್ರಸಿದ್ಧ ಡಾ.ಸಲೀಂ ಅಲಿ ಪಕ್ಷಿಧಾಮವಿದ್ದು, ದಟ್ಟವಾದ ಮ್ಯಾನ್‌ಗ್ರೋವ್ ಸಸ್ಯಸಂಕುಲವನ್ನು ಹೊಂದಿದ್ದು, ಹೆರಾನ್, ಕಿಂಗ್‌ಫ಼ಿಷರ್, ಬಿಳಿ ಹೊಟ್ಟೆಯ ಸಾಗರ ಈಗಲ್‌ನಂತಹ ಕೆಲವು ೧೪೦ ತಳಿಯ ಪಕ್ಷಿಗಳನ್ನು ಹೊಂದಿದೆ.  ಮಾರ್ಷ್ ಮೊಸಳೆಗಳು, ನರಿಗಳು, ಜಾಕಾಲ್ಸ್, ಆಟ್ಟರ್‌ಗಳು, ಬಲ್ಬಸ್-ಹೆಡೆಡ್ ಮಡ್‌ಸ್ಕಿಪ್ಪರ್ಸ್‌ನಂತಹ ಇತರ ಪ್ರಾಣಿಗಳು ಈ ಪ್ರದೇಶದಲ್ಲಿ ಕಂಡಿವೆ.  ಭತ್ತ ಹಾಗೂ ಮೀನು ಸಂಸ್ಕೃತಿಯ ವ್ಯವಸ್ಥೆಯಂತಹ ಖಜ಼ಾನ್ ಭೂಮಿಗಳೆಂದು ಕರೆಯಲ್ಪಡುವ ಸಾಂಪ್ರದಾಯಿಕ ಪರಿಸರ-ಸ್ನೇಹಿ ಉತ್ಪಾದನಾ ವ್ಯವಸ್ಥೆಗಳಿಗಾಗಿ ಚೊರಾಒ ದ್ವೀಪವು ಚಿರಪರಿತಿಚವಾಗಿದ್ದು, ಸ್ಥಳೀಯ ಸಮುದಾಯಕ್ಕೆ ಕಾಳುಗಳು ಹಾಗೂ ಪ್ರೋಟೀನುಗಳ ಆರೋಗ್ಯಕರ ಆಹಾರವನ್ನು ಒದಗಿಸುತ್ತದೆ.

೨೦೧೪ರಲ್ಲಿ, ಸುಸ್ಥಿರ ಪರಿಹಾರಗಳು ಹಾಗೂ ಸೇವೆಗಳ ವಿಷಯವಾಗಿ ಸೇವೆ ಸಲ್ಲಿಸುತ್ತಿರುವ ಜರ್ಮನ್ ಸಂಸ್ಥೆಯಾದ ಡಾಶ್ ಗೆಸ್ಸೆಲ್‌ಷಾಫ಼್ಟ್ ಫ಼ರ್ ಇಂಟರ್‌ನ್ಯಾಷನೇಲ್ ಜ಼ುಸಮ್ಮೆನ್‌ಆರ್‌ಬೀಟ್ (ಜಿಐಜ಼ೆಡ್), ಹಾಗೂ ಗೋವಾ ಅರಣ್ಯ ಇಲಾಖೆಯು ಕರಾವಳಿ ಹಾಗೂ ಸಮುದ್ರ ಸಂರಕ್ಷಿತ ಪ್ರದೇಶ (ಸಿಎಮ್‌ಪಿಎ) ಎಂಬ ಯೋಜನೆಯನ್ನು ಜಂಟಿಯಾಗಿ ಪ್ರಾರಂಭಿಸಿತು.  ಚರಾಓ ಈ ಯೋಜನೆಯನ್ನು ಪ್ರಾರಂಭಿಸುವ ಮೂಲ ಉದ್ದೇಶವೆಂದರೆ ದ್ವೀಪದ ಸಿರಿವಂತ ಜೀವವೈವಿಧ್ಯತೆಯನ್ನು ಮಾಪನ ಮಾಡುವುದಾಗಿದೆ.

ದ್ವೀಪ ಸಮುದಾಯವನ್ನು ತೊಡಗಿಸಿಕೊಳ್ಳುವ ಮೂಲಕ, ಈ ಪರಿಸರ ವ್ಯವಸ್ಥೆ ಹಾಗೂ ಅದರ ಜನರಿಗಾಗಿ ಪಾರಿಸಾರಿಕ ಹಾಗೂ ಆರ್ಥಿಕ ಸಮತೋಲನವನ್ನು ಸೃಷ್ಟಿಸಲು ಈ ಯೋಜನೆಯು ಹೊರಟಿದೆ.  ಭಾರತದ ಕರಾವಳಿಯ ಉದ್ದಕ್ಕೂ ಆಯ್ದ ಕೆಲವು ಪ್ರದೇಶಗಳಲ್ಲಿ ಜೀವವೈವಿಧ್ಯತೆಯ ಸಂರಕ್ಷಣೆ ಹಾಗೂ ಸುಸ್ಥಿರ ಬಳಕೆಗೆ ಕೊಡುಗೆ ನೀಡಿ, ತನ್ಮೂಲಕ ಆರೋಗ್ಯಕರ ಸಮುದ್ರ ಹಾಗೂ ಕರಾವಳಿ ಪರಿಸರ ವ್ಯವಸ್ಥೆಗಳ ಮೇಲೆ ಅವಲಂಬಿತವಾದ ಸ್ಥಳೀಯ ಸಮುದಾಯಕ್ಕೆ ಪ್ರಯೋಜನಕಾರಿಯಾಗಲು ಯೋಜನೆಯು ಯತ್ನಿಸುತ್ತದೆ.

ಈ ಫಲಿತಾಂಶಗಳನ್ನು ಸಾಧಿಸಲು, ಯೋಜನೆಯು ಮೂರು ಪ್ರಮುಖ ವಿಧಾನಗಳನ್ನು ಅನುಸರಿಸಿದೆ:

೧.ಭಾರತದ ಕರಾವಳಿಯ ಉದ್ದಕೂ ಪೂರ್ವನಿಯೋಜಿತ ಪ್ರದೇಶಗಳಲ್ಲಿನ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಹಾಗೂ ನಿರ್ವಹಣೆಗಾಗಿ ಪಾಲ್ಗೊಳ್ಳುವಿಕೆಯ ಪ್ರಕ್ರಿಯೆಗಳ ಅಭಿವೃದ್ಧಿ ಹಾಗೂ ಅನುಷ್ಠಾನ

೨.ಕರಾವಳಿ ಹಾಗೂ ಸಮುದ್ರ ಜೀವವೈವಿಧ್ಯತೆ ಹಾಗೂ ಸಂರಕ್ಷಿತ ಪ್ರದೇಶಗಳ ನಿರ್ವಹಣೆಗಾಗಿ ಪ್ರಮುಖ ವಲಯಗಳು ಹಾಗೂ ಭಾಗೀದಾರರ ಸಾಮರ್ಥ್ಯ ಬೆಳವಣಿಗೆಯ ಸುಗಮಗಾರಿಕೆ.  ಅವುಗಳ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು, ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟಗಳಲ್ಲಿ ಸಹಭಾಗೀದಾರರೊಂದಿಗೆ ಈ ಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತದೆ

೩.ಕರಾವಳಿ ಹಾಗೂ ಸಮುದ್ರ ಜೀವವೈವಿಧ್ಯತೆ ಮತ್ತು ಪರಿಸರ ವ್ಯವಸ್ಥೆಗಳ ಸೇವೆಗಳ ಸಂರಕ್ಷಣೆಗಾಗಿ ಪ್ರಮುಖ ಭಾಗೀದಾರರನ್ನು ಸಂವೇದನಾಶೀಲರನ್ನಾಗಿಸಲು ಸಮರ್ಪಿತ ಮಾಹಿತಿ, ಶಿಕ್ಷಣ ಹಾಗೂ ಸಂವಹನ ಕಾರ್ಯಕ್ರಮವನ್ನು ಸುಗಮಗೊಳಿಸುವುದು

ಚೊರಾಓ ಕೇವಲ ಅಪರೂಪದ ಕರಾವಳಿಗೆ ವಾಸಸ್ಥಾನ ಮಾತ್ರವಲ್ಲದೆ, ಮ್ಯಾನ್‌ಗ್ರೋವ್‌ಗಳ ಅಪರೂಪದ ಜೀವವೈವಿಧ್ಯತೆ ಹಾಗೂ ಅವುಗಳು ನೀಡುವ ಸೇವೆಗೆ ಕನ್ನಡಿ ಹಿಡಿದಂತಿದೆ.  “ಚೊರಾಒ ದ್ವೀಪದ ಅಪರೂಪದ ಸಮಾಜಿಕ-ಆರ್ಥಿಕ ಇತಿಹಾಸದ ಜೊತೆಗೆ, ಅದರ ಸಿರಿವಂತ ಜೀವವೈವಿಧ್ಯತೆ ಹಾಗೂ ಚೊರಾಒ ರೈತರ ಸಂಘದಂತಹ ಅನೇಕ ಜನ-ನಾಯಕತ್ವದ ಸುಸ್ಥಿರ ಯತ್ನಗಳಿಂದಾಗಿ, ಯೋಜನಾ ಅನುಷ್ಠಾನ ಮಾಡಲು ಈ ದ್ವೀಪವನ್ನು ಆಯ್ಕೆ ಮಾಡಿಕೊಳ್ಳಲಾಯಿತು,” ಎನ್ನುತ್ತಾರೆ ಸುಪ್ರಸಿದ್ಧ ಸಮುದ್ರ ಪರಿಸರವಾದಿ ಹಾಗೂ ಜಿಐಜ಼ೆಡ್‌ನ ತಾಂತ್ರಿಕ ಸಲಹಾಗಾರರಾದ ಆರಾನ್ ಲೋಬೊ.

ಸಿಎಮ್‌ಪಿಎ ಯೋಜನೆಯನ್ನು ಜರ್ಮನಿಯ ಫ಼ೆಡರಲ್ ಮಿನಿಸ್ಟ್ರಿ ಫ಼ಾರ್ ಎನ್‌ವೈರನ್‌ಮೆಂಟ್ (ಪರಿಸರ ಮಂತ್ರಾಲಯ), ಅಂತರರಾಷ್ಟ್ರೀಯ ಹವಾಮಾನ ಇನಿಷಿಯೇಟಿವ್‌ನ (ಐಕೆಐ) ಅಡಿಯಲ್ಲಿನ ಪ್ರಕೃತಿ ಸಂರಕ್ಷಣೆ, ಕಟ್ಟಡ ಮತ್ತು ಪರಮಾಣು ಸುರಕ್ಷತೆ (ಬಿಎಮ್‌ಯುಬಿ)ಗಾಗಿ ನಿಯೋಜಿಸಲಾಗಿದೆ.  ಇದರ ಅನುಷ್ಠಾನವನ್ನು ಭಾರತ ಸರ್ಕಾರದ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಮಂತ್ರಾಲಯವು (ಎಮ್‌ಓಇಎಫ಼್‌ಸಿಸಿ), ಹಾಗೂ ಜಿಐಜ಼ೆಡ್ ಜಿಎಮ್‌ಬಿಎಚ್, ಬಿಎಮ್‌ಯುಬಿಯ ಪರವಾಗಿ ಅನುಷ್ಠಾನ ಮಾಡುತ್ತಿದೆ.  ಈ ಚಲನಚಿತ್ರದನಿರ್ಮಾಣವನ್ನು ಚಿಂತನ್ ಗೋಹಿಲ್-ದ ಸೋರ್ಸ್ ಪ್ರಾಜೆಕ್ಟ್ ಮಾಡಿದೆ.

“ಚೊರಾಒ ದ್ವೀಪ: ಅ ಪ್ಲೇಸ್, ಇಟ್ಸ್ ಪೀಪಲ್ ಆಂಡ್ ಅ ಪ್ರಾಜೆಕ್ಟ್” ಎಂಬ ಈ ಚಲನಚಿತ್ರವನ್ನು, ಭಾರತ-ಜರ್ಮನಿ ಜೀವವೈವಿಧ್ಯತಾ ಕಾರ್ಯಕ್ರಮದ ‘ಕನ್ಸರ್ವೇಷನ್ ಆಂಡ್ ಸಸ್ಟೇನಬಲ್ ಮ್ಯಾನೇಜ್‌ಮೆಂಟ್ ಆಫ಼್ ಕೋಸ್ಟಲ್ ಆಂಡ್ ಮರೀನ್ ಪ್ರೊಟೆಕ್ಟೆಡ್ ಏರಿಯಾಸ್ (ಸಿಎಮ್‌ಪಿಎ) (ಕರಾವಳಿ ಹಾಗೂ ಸಮುದ್ರ ಸಂರಕ್ಷಿತ ಪ್ರದೇಶಗಳ ಸಂರಕ್ಷಣೆ ಹಾಗೂ ಸುಸ್ಥಿರ ನಿರ್ವಹಣೆ)’ ಎಂಬ ಶಿರೋನಾಮೆಯ ಯೋಜನೆಯ ಅಡಿಯಲ್ಲಿ ಮಾಡಲಾಯಿತು.

ಜಿಐಜ಼ೆಡ್ ಹಕ್ಕು ನಿರಾಕರಣೆ: ಈ ವಿಡಿಯೋದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಅಧ್ಯಯನದ ಭಾಗವಾಗಿದ್ದ ವ್ಯಕ್ತಿಗಳದಾಗಿದ್ದು, ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಮಂತ್ರಾಲಯ ಅಥವಾ ಜಿಐಜ಼ೆಡ್‌ನ ಅಧಿಕೃತ ನಿಲುವೆಂದು ಯಾವುದೇ ಸಂದರ್ಭದಲ್ಲೂ ಪರಿಗಣಿಸುವಂತಿಲ್ಲ.  ಈ ವಿಡಿಯೋಗಳಲ್ಲಿನ ಭೌಗೋಳಿಕ ಘಟಕಗಳ ಅಂಕಿತ ಹಾಗೂ ವಸ್ತುವಿಷಯದ ಪ್ರಸ್ತುತಿಯು, ಯಾವುದೇ ದೇಶ,  ಸ್ಥಳ ಅಥವಾ ಪ್ರದೇಶ, ಅಥವಾ ಅದರ ಅಧಿಕಾರಿವರ್ಗದ ಕಾನೂನಾತ್ಮಕ ಸ್ಥಾನಮಾನವನ್ನಾಗಲಿ, ಅಥವಾ ಅದರ ಸರಹದ್ದುಗಳು ಹಾಗೂ ಗಡಿಗಳ ನಿರ್ಧಾರದ ಅಭಿವ್ಯಕ್ತತೆಯನ್ನಾಗಲಿ ಎಮ್‌ಒಇಎಫ಼್‌ಸಿಸಿ ಅಥವಾ ಜಿಐಜ಼ೆಡ್‌ನ ಪರವಾಗಿ ಸೂಚಿಸುವುದಿಲ್ಲ.

ಹಕ್ಕು ನಿರಾಕರಣೆ: ಈ ವಿಡಿಯೋಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಹಾಗೂ ಅನಿಸಿಕೆಗಳು ಇದನ್ನು ಸಿದ್ಧಪಡಿಸಿದ ಜನರು/ಸಂಸ್ಥೆ(ಗಳು)ಗಳದಾಗಿದ್ದು, ಇಂಡಿಯಾ ವಾಟರ್ ಪೋರ್ಟಲ್‌ನ ಕಾರ್ಯನೀತಿ ಅಥವಾ ನಿಲುವನ್ನು ಅಭಿವ್ಯಕ್ತಪಡಿಸಬೇಕೆಂದೇನಿಲ್ಲ.

 

ಮೂಲ ಲೇಖನ: ಮಕರಂದ್ ಪುರೋಹಿತ್

ಅನುವಾದ: ಕನ್ನಡ ಇಂಡಿಯಾ ವಾಟರ್ ಪೋರ್ಟಲ್ ತಂಡ

 ಮೂಲ ಆಂಗ್ಲ ಲೇಖನವನ್ನು ಓದಲು ಇಲ್ಲಿ ಕ್ಲಿಕ್ಕಿಸಿ:  http://www.indiawaterportal.org/articles/saving-chorao-through-its-people

 

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*