ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ನಮ್ಮ ರೈತರನ್ನು ನಾವು ಉಳಿಸಬಹುದೇ?

ರೈತರ ಆರ್ಥಿಕ ಸ್ಥಿತಿಯು ದಿನೇದಿನೇ ಹದಗೆಡುತ್ತಿದ್ದು, ರೈತರ ಆತ್ಮಹತ್ಯೆಯ ಸಂಖ್ಯೆಯೂ ಏರುತ್ತಿದೆ.  ಅದಕ್ಕೆ ಸಂಭವನೀಯ ಪರಿಹಾರಗಳತ್ತ ಒಮ್ಮೆ ನಮ್ಮ ದೃಷ್ಟಿ ಹರಿಸೋಣ:

೨೦೦೯ರಲ್ಲಿ ಮಹಾರಾಷ್ಟ್ರ ಅತ್ಯಂತ ಒಣ ವರ್ಷವನ್ನು ಎದುರಿಸಿತ್ತು.  ನೀರಿನ ತೀವ್ರ ಅಭಾವ ತಲೆದೋರಿತ್ತು.  ಕೃಷಿ ಭೂಮಿಯೆಲ್ಲ ಒಣಗಿತ್ತು.  ತಮ್ಮ ಸಾಲಗಳನ್ನು ತೀರಿಸಲಾಗದೆ ರೈತರ ಚಿಂತಾಕ್ರಾಂತರಾಗಿದ್ದರು.  ಇದನ್ನು ತಡೆದುಕೊಳ್ಳಲಾಗದ ರೈತರಲ್ಲೊಬ್ಬ ಮಹಾರಾಷ್ಟ್ರದ ಯಾವತ್ಮಲ್ ಜಿಲ್ಲೆಯ ಕಿನ್ನಿ ಗ್ರಾಮದ ಲಕ್ಷ್ಮಣ ಅಂಬ್ಲೀಕರ್. ಆತ್ಮಹತ್ಯೆ ಮಾಡಿಕೊಂಡ ಆತ, ತನ್ನ ಸಣ್ಣ ಪ್ರಾಯದ ದುಃಖತಪ್ತ ಹೆಂಡತಿಯನ್ನು ಬಿಟ್ಟು ಹೋದ. ಆತನ ಹೆಂಡತಿ ಜಯಶ್ರೀ ಅಂಬ್ಲಿಕರ್‌ರ ಜೀವನವು ದಿಕ್ಕಾಪಾಲಾಗಿ, ಆಕೆಯ ಆರ್ಥಿಕ ಪರಿಸ್ಥಿತಿಯು ಅಧಃಪತನಕ್ಕೆ ಇಳಿಯಿತೆಂದು ಇಲ್ಲಿ ಪ್ರತ್ಯೇಕವಾಗಿ ಹೇಳಬೇಕಾದ ಅಗತ್ಯವಿಲ್ಲ.  ಸರ್ಕಾರವು ನೀಡಿದ ಅಲ್ಪ ಅರ್ಥಿಕ ನೆರವು ಏನೇನೂ ಸಾಲಲಿಲ್ಲ.  ಹಲವಾರು ವರ್ಷಗಳಿಂದ ಸರ್ಕಾರವು ಪಾಲಿಸುತ್ತಿದ್ದ ದೋಷಪೂರಿತ ಕೃಷಿ ಕಾರ್ಯನೀತಿಗಳ ಇಂತಹ ರೈತರ ಅನೇಕ ವಿಧವೆಯರ ದೀನ ಪರಿಸ್ಥಿತಿಗೆ ಜಯಶ್ರೀ ಒಂದು ಉತ್ತಮ ಉದಾಹರಣೆ.

ರಾಷ್ಟ್ರೀಯ ಅಪರಾಧ ದಾಖಲಾತಿ ಬ್ಯೂರೋದಲ್ಲಿ ಲಭ್ಯವಿರುವ ಮಾಹಿತಿಯ ಅಂದಾಜಿನ ಪ್ರಕಾರ, ಭಾರತದಲ್ಲಿ ಪ್ರತಿ ೪೧ ನಿಮಿಷಗಳಿಗೊಮ್ಮೆ ರೈತನೊಬ್ಬನ್ನು ತನ್ನ ಜೀವನವನ್ನು ಕೊನೆಗಾಣಿಸುತ್ತಾನೆ.  ರೈತರ ಆತ್ಮಹತ್ಯೆಗಳಿಗೆ ಮುಖ್ಯ ಕಾರಣ ಸಾಲ, ಬರ, ಬೆಳೆ ವೈಫಲ್ಯತೆ ಅಥವಾ ಕಳಪೆ ಮಟ್ಟದ ಆದಾಯವೆಂದು ಹೇಳಲಾಗಿದೆ.

ಆತ್ಮಹತ್ಯೆಗಳಿಗೆ ಸೂಕ್ತ ಪ್ರತಿಕ್ರಿಯೆಯ ಕೊರತೆ

ಇಳುವರಿಯನ್ನು ಹೆಚ್ಚಿಸುವ ಅಧಿಕ ಇಳುವರಿ ನೀದುವ ಬೀಜದ ಮಾದರಿಗಳನ್ನು, ಆದರೆ ಹೆಚ್ಚಿನ ಕೀಅನಾಶಕಗಳು ಹಾಗೂ ನೀರನ್ನು ನೀಡಬೇಕಾದ ಬೀಜದ ಮಾದರಿಗಳನ್ನು ಹಸಿರು ಕ್ರಾಂಇಯು ರೈತರಿಗೆ ಪರಿಚಯಿಸಿತು.  ನೀರಿಗೆ ಹೆಚ್ಚಿದ ಬೇಡಿಕೆಯನ್ನು ಪೂರೈಸಲು ರೈತರು ಕೊಳವೆಬಾವಿಗಳಿಗೆ ಮೊರೆಹೋಗಿ, ಇದರ ಪರಿಣಾಮಾಅಗಿ ಅಂತರ್ಜಲವು ಕುಗ್ಗುವಂತೆ ಆಯಿತು  ಅದಕ್ಕಿಂತ ಹೀನ ಸಂಗತಿಯೆಂದರೆ, ಇಳುವರಿಯನ್ನು ಅದೇ ಮಟ್ಟದಲ್ಲಿ ಇಡಲು ಅವರು ಸಾಲಗಳನ್ನು ತೆಗೆದುಕೊಳ್ಳಬೇಕಾಯಿತು.   9501930722_c1b4e041d7_z

೮೦ರ ದಶಕದ ಮಧ್ಯಭಾಗದಲ್ಲಿ ಎರಡನೆಯ ತಲೆಮಾರಿನ ಪಾರಿಸಾರಿಕ ಪ್ರಭಾವಗಳು ಅಥವಾ ರಾಸಾಯನಿಕ ಗೊಬ್ಬರಗಳು ಹಾಗೂ ಕೀಟನಾಶಕಗಳು ಮತ್ತು ಅಂತರ್ಜಲವನ್ನು ಬಳಸುವ ತೀವ್ರರೀತಿಯ ಕೃಷಿ ವ್ಯವಸ್ಥೆಗಳ ಪಾರಿಸಾರಕ ಪ್ರಭಾವಗಳು ಕಾಣತೊಡಗಿದವು.  “ತೀವ್ರರೀತಿಯ ಕೃಷಿಯ ನಕಾರಾತ್ಮಕ ಪ್ರಭಾವವನ್ನು ತಪ್ಪಿಸಲು ಸುಸ್ಥಿರ ಆಚರಣೆಗಳನ್ನು ಅಳವಡಿಸಿಕೊಳ್ಳುವಲ್ಲಿ ರೈತರಿಗೆಉತ್ತೇಜನ ನೀಡುವ ಬದಲು, ಮತ್ತಷ್ಟು ಹಸಿರು ಕ್ರಾಂತಿಯನ್ನು ಉತ್ತೇಜಿಸುವ ಮೂಲಕ ಇದನ್ನು ಉದ್ದೇಶಿಸುವ ಪ್ರಯತ್ನವನ್ನು ಕೃಷಿ ವಿಜ್ಞಾನಿಗಳು ಮಾಡಿದರು; ಅರ್ಥಾತ್, ಮತ್ತಷ್ಟು ರಾಸಾಯನಿಕಗಳನ್ನು ಬಳಸುವಂತೆ ಅವರು ರೈತರಿಗೆ ಹೇಳಿದರು.  ಮೂಲ ನೈಸರ್ಗಿಕ ಸಂಪನ್ಮೂಲವನ್ನು ಇದು ಮತ್ತಷ್ಟು ಹದಗೆಡಿಸಿತು.  ಅದೇ ಸಮಯಕ್ಕೆ, ಕೃಷಿಗೆ ದೊರೆಯುವ ಕಾರ್ಯನೀತಿ ನೆರವೂ ಇಳಿಮುಖವಾಯಿತು.  ಕೃಷಿಯಲ್ಲಿ ಸಾರ್ವಜನಿಕ ವಲಯದ ಹೂಡಿಕೆಯಲ್ಲಿ ಇಳಿಕೆ, ಸುಸ್ಥಿರ ಕೃಷಿ ಆಚರಣೆಗಳನ್ನು ಉತ್ತೇಜಿಸುವಲ್ಲಿ ವಿಫಲತೆ, ಹಾಗೂ, ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರೆಯದಿರುವುದು, ಇತ್ಯಾದಿ ಅಂಶಗಳು ಕೃಷಿಯನ್ನು ನಷ್ಟದ ಉದ್ದಿಮೆಯಾಗಿ ಮಾಡುವಲ್ಲಿನ ಕೆಲವು ಅಂಶಗಳಾಗಿದ್ದವು.  ಇದು ಹತ್ತಿಯಂತಹ ನಗದು ಬೆಲೆಗಳಲ್ಲಿ ಹೆಚ್ಚಾಗಿ ಕಾಣಿಸತೊಡಗಿತು.  ಸುಮಾರು ೧೯೮೭ರ ವೇಳೆಗೆ ಮಂದಗೈತ್ಯಲ್ಲಿ ಪ್ರಾರಂಭವಾದ ರೈತರ ಆತ್ಮಹತ್ಯೆಗಳು, ಕಳೆದ ೧೭ ವರ್ಷಗಳಲ್ಲಿ ಸುಮಾರು ಮೂರ ಲಕ್ಷ ರೈತರನ್ನು ಬಲಿ ತೆಗೆದುಕೊಂಡಿದೆ,” ಎಂದು, ಕೃಷಿ ಕಾರ್ಯನೀತಿ ತಜ್ಞ ಹಾಗೂ ಹಿರಿಯ ಸಂಶೋಧಕರಾದ ದೇವೀಂದರ್ ಶರ್ಮ ತಮ್ಮ ಬ್ಲಾಗ್‌ನಲ್ಲಿ ಬರೆಯುತ್ತಾರೆ.

ಈ ಮೊದಲು ಶ್ರೀಮಂತರೆಂದು ಪರಿಗಣಿಸಲ್ಪಡುತ್ತಿದ್ದ ಪಂಜಾಬಿನ ಕೃಷಿಕರು, ಹಸಿರು ಕ್ರಾಂತಿಯೊಂದಿಗೆ ಪರಿಸ್ಥಿತಿಯು ಹದಗೆಟ್ಟು, ತಮ್ಮ ಸಂಪತ್ತಿನಲ್ಲಿ ಇಳಿಕೆಯನ್ನು ಕಂಡರು.  ಗೊಬ್ಬರಗಳು, ಡೀಸಲ್, ಬೀಜಗಳು, ಕೀಟನಾಶಕಗಳ ಏರುತ್ತಿರುವ ಬೆಲೆಗಳು ಕೃಷಿ ವಲಯದಲ್ಲಿನ ಹೂಡಿಕೆಯ ವೆಚ್ಚದ ಹೆಚ್ಚಳದಿಂದ, ರೈತರ ಆರ್ಥಿಕ ಗಳಿಕೆಯು ಇಳಿಮುಖವಾಯಿತು. “ಈ ಆತ್ಮಹತ್ಯೆಗಳು ಹಾಗೂ ಪರಿಹಾರದ ಪ್ಯಾಕೇಜ್‌ಗಳಿಗೆ ಸರ್ಕಾರದ ಪ್ರತಿಕ್ರಿಯೆಯು ಸಾಮಾನ್ಯವಾಗಿ ಪರಿಣಾಮಕಾರಿಯಲ್ಲದ, ದುರ್ನ್ದೇಶಿತ ಹಾಗೂ ದೋಷಪೂರಿತವಾಗಿವೆ.  ಆದಾಯ, ಉತ್ಪನ್ನ ಹಾಗೂ ರೈತರ ಏಳಿಗೆಯಲ್ಲಿ ಗಮನ ಹರಿಸುವುದಕ್ಕಿಂತ, ಅವರು ಸಾಲ-ಸೋಲದ ಮೇಲೆ ಹರಿಸಿದ್ದಾರೆ.  ಅಸಲು ಹಾಗೂ ಬಡ್ದಿಯನ್ನು ತೀರಿಸುವಲ್ಲಿ ನೀಡುವ ನೆರವು ಲೇವಾದೇವಿದಾರರಿಗೆ ನೆರವಾಗುವುದೇ ಹೊರತು, ರೈತನಿಗೆ ಆದಾಯದ ವಿಶ್ವಾಸಾರ್ಹ ಹಾಗೂ ಆದಾಯದ ಉತ್ತಮ ಮೂಲವಾಗುವುದರಲ್ಲಿ ವಿಫಲವಾಗಿದೆ. ಚಾಲಾಕಿ ಲೇವಾದೇವಿದಾರರು ೪೦ರಿಂದ ೫೦ ಪ್ರತಿಶತ ಬಡ್ದಿ ದರಗಳಲ್ಲಿ ಸಾಲಗಳನ್ನು ನೀಡುವುದನ್ನು ಮುಂದುವರೆಸಿದರೆ, ರೈತರ ಹೊಲಗಳ ಆದಾಯೋತ್ಪನ್ನ ಸಾಮರ್ಥ್ಯವು ಕಡಿಮೆಯೇ ಇದ್ದು, ಅದು ಹವಾಮಾನ ಪರಿಸ್ಥಿತಿಗಳಿಗೆ ಅನುಗಣವಾಗಿ ಬದಲಾಗುತ್ತದೆ,” ಎನ್ನುತಾರೆ ಬೆಂಗಳೂರು ವಿಶ್ವವಿದ್ಯಾನಿಲಯದ  ಸಹಾಯಕ ಪ್ರೊಫ಼ೆಸರ್ ಹಾಗೂ ಆರ್ಥಿಕ ಇಲಾಖೆಯ ಸಂಚಾಲಕರಾದ ಡಾ.ಜಿ.ಎಲ್. ಪಾರ್ವತಮ್ಮ.

“ಛತ್ತೀಸಘಡದಲ್ಲಿ, ಯುವಕರಿಗೆ ಕೃಷಿ ಮಾಡಲು ಆಸಕ್ತಿ ಇಲ್ಲ, ಏಕೆಂದರೆ ಯಾವುದೇ ಲಾಭದ ನಿರೀಕ್ಷೆಯಿಲ್ಲದೆ ಎಲ್ಲ ರೀತಿಯ ಅಪಾಯಗಳನ್ನೂ ತೆಗೆದುಕೊಳ್ಳಲು ಸಿದ್ಧರಿರಬೇಕು.  ಮಾರುಕಟ್ಟೆಯ ಮೇಲೆ ಅವರಿಗೆ ಯಾವುದೇ ರೀತಿಯ ನಿಯಂತ್ರಣವಿರುವುದಿಲ್ಲ.  ಉತ್ತಮ ಇಳುವರಿ ಇದ್ದಾಗ, ಮಾರುಕಟ್ಟೆಯ ಒತ್ತಡದಿಂದಾಗಿ, ಉತ್ಪನ್ನಕ್ಕೆ ನೀಡಲಾಗುವ ಬೆಲೆಯನ್ನು ಕಡಿಮೆ ಮಾಡಲಾಗುತ್ತದೆ, ಆಗ ಮತ್ತೆ ರೈತನೇ ಆ ನಷ್ಟವನ್ನು ಭರಿಸಿಕೊಳ್ಳಬೇಕು.  ಸರ್ಕಾರಕ್ಕೆ ಔದ್ಯಮಿಕ ಬೆಳವಣಿಗೆ ಬೇಕು, ಹಾಗಾಗಿ ಕೋಟ್ಯಂತರ ರೂಪಾಯಿಗಳ ಸಾಲವನ್ನು ಅವರು ಮನ್ನಾ ಮಾಡಿದ್ದಾರೆ.  ಈ ವಂಚನೆಗಳನ್ನು ಮಾಡಿದ ವ್ಯಕ್ತಿಗಳು ದೇಶ ಬಿಟ್ಟು ಹೋಗಲು ಸರ್ಕಾರವೇ ಅವರಿಗೆ ನೆರವಾಗಿದೆ, ಆದರೆ ಕೃಷಿ ವ್ಯವಸ್ಥೆಗಳ ಪುನರುಜ್ಜೀವನ ಮಾಡಲು ಅವರು ಸಿದ್ಧರಿಲ್ಲ,” ಎನ್ನುತ್ತಾರೆ ಛತ್ತೀಸ್‌ಘಡದ ಪಠಾರಿ ಗ್ರಾಮದ ರೈತರಾದ ರೂಪೇಶ್ ಬಾಗೇಲ್.

ಸರ್ಕಾರವು ಇಲ್ಲಿಯವರೆಗೆ ತೆಗೆದುಕೊಂಡ ಕ್ರಮಗಳು

ಮಾರ್ಚ್ ೨೦೧೭ರಂದು ಭಾರತದ ಪರಮೋಚ್ಛ ನ್ಯಾಯಾಲಯದಲ್ಲಿ ನಡೆದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ವಿಚಾರಣೆಯ ಸಂದರ್ಭದಲ್ಲಿ, ರೈತರ ಆತ್ಮಹತ್ಯೆಗಳ ಬಗ್ಗೆ ತೀವ್ರವಾದ ಕಳಕಳಿಯನ್ನು ವ್ಯಕ್ತಪಡಿಸಿ, ಸಾಲಗಳು ಹಾಗೂ ಸಾಲದ ಹೊರೆಯಿಂದಾಗಿ ಇದು ನಡೆಯುತ್ತಿದೆಯೆಂಬ ನಿರ್ಣಯಕ್ಕೆ ಬರಲಾಯಿತು.  ಸರ್ಕಾರಕ್ಕೆ ಪರಮೋಚ್ಛ ನ್ಯಾಯಾಲಯವು ನೀಡಿದ ನಿರ್ದೇಶನದಲ್ಲಿ, ರೈತರ ಸಮಸ್ಯೆಗಳನ್ನು ಉದ್ದೇಶಿಸಲು ವಿವಿಧ ಕಾರ್ಯನೀತಿ ಕ್ರಮಗಳನ್ನು ಕೈಗೊಳ್ಳಬೇಕೆಂದು ತಿಳಿಸಿತು.

ಹಾಗಂದ ಮಾತ್ರಕ್ಕೆ ರೈತರ ಬೇಡಿಕೆಗೆ ಸರ್ಕಾರವು ಸಂಪೂರ್ಣವಾಗಿ ಕಿವುಡಾಗಿದೆ ಎಂದಲ್ಲ; ಅದರ ಪ್ರತಿಕ್ರಿಯೆಯ ಮಟ್ಟ ಸಾಲದಷ್ಟೇ.  ಕೇಂದ್ರ ಸರ್ಕಾರವು ಕೃಷಿ ಸಾಲ ಮನ್ನಾ ಹಾಗೂ ಸಾಲ ಪರಿಹಾರ ಯೋಜನೆಯನ್ನು ೨೦೦೮ರಲ್ಲಿ ಅನುಷ್ಠಾನ ಮಾಡಿತು ಹಾಗೂ ರೈತರ ಆತ್ಮಹತ್ಯೆಗಳನ್ನು ನಿಯಂತ್ರಣ ಮಾಡಲು ಅನೇಕ ರಾಜ್ಯ ಸರ್ಕಾರಗಳು ತಮ್ಮದೇ ಆದ ಯತ್ನಗಳನ್ನು ಪ್ರಾರಂಭಿಸಿವೆ.  ಉದಾಹರಣೆಗೆ, ಅತ್ಯಂತ ಆಘಾತಕಾರಿ ಮಟ್ಟದಲ್ಲಿ ರೈತರ ಆತ್ಮಹತ್ಯೆಗಳನ್ನು ಕಂಡ ಮಹಾರಾಷ್ಟ್ರದಲ್ಲಿ, ಲೇವಾದೇವಿ (ನಿಯಂತ್ರಣ) ಕಾಯಿದೆ, ೨೦೦೮ನ್ನು ಜಾರಿಗೆ ತಂದು, ಎಲ್ಲ ಖಾಸಗಿ ಲೇವಾದೇವಿದಾರರು ರೈತರಿಗೆ ಸಾಲ ನೀಡುವುದನ್ನು ನಿಯಂತ್ರಿಸಲಾಯಿತು.

ಆದರೆ ರೈತರ ಆತ್ಮಹತ್ಯೆಗಳನ್ನು ತಡೆಯುವಲ್ಲಿ ಈ ಯೋಜನೆಗಳು ಪರಿಣಾಮಕಾರಿಯಾಗಿ ಇರಲಿಲ್ಲ.

ರೈತರ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲು, ಪ್ರೊಫ಼ೆಸರ್ ಎಮ್.ಎಸ್.ಸ್ವಾಮಿನಾಥನ್‌ರವರ ಅಧ್ಯಕ್ಷತೆಯಲ್ಲಿ, ನವೆಂಬರ್ ೧೮,,೨೦೦೪ರಂದು ರೈತರ ರಾಷ್ಟ್ರೀಯ ಆಯೋಗದ (ಎನ್‌ಸಿಎಫ಼್) ಸ್ಥಾಪನೆಯನ್ನು ಮಾಡಿತು.  ಡಿಸೆಂಬರ್ ೨೦೦೪, ಆಗಸ್ಟ್ ೨೦೦೫, ಹಾಗೂ ಏಪ್ರಿಲ್ ೨೦೦೫ರಲ್ಲಿ ಎನ್‌ಸಿ ಎಫ಼್ ನಾಲ್ಕು ವರದಿಗಳನ್ನು ಸಲ್ಲಿಸಿತು. ಅಂತಿಮ ವರದಿಯನ್ನು ಅಕ್ಟೋಬರ್ ೪, ೨೦೦೬ರಂದು ಸಲ್ಲಿಸಲಾಯಿತು.  ಸ್ವಾಮಿನಾಥನ್ ಪ್ಯಾನಲ್ ವರದಿಯಲ್ಲಿ, ರೈತರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು, ತಮ್ಮ ಇಳುವರಿಗೆ ನೀಡುವ ಕನಿಷ್ಟ ಬೆಂಬಲ ಬೆಲೆಯಾಗಿ (ಎಮ್‌ಎಸ್‌ಪಿ) ಇಳುವರಿಗೆ ತಗುಲಿದ ವೆಚ್ಚಕ್ಕಿಂತ ೫೦ ಪ್ರತಿಶತದಷ್ಟು ಅಧಿಕ ಬೆಲೆಯನ್ನು ರೈತರಿಗೆ ನೀಡಬೇಕೆಂದು ಸ್ವಾಮಿನಾಥನ್ ವರದಿಯು ಶಿಫ಼ಾರಸ್ಸು ಮಾಡಿದೆ.

ಆದರೆ ಮಾಧ್ಯಮ ವರದಿಯೊಂದರ ಪ್ರಕಾರ, ಸಮಲ್ಖಾದ ಆರ್ಕಿಟೆಕ್ಟ್-ಕಮ್-ಕ್ರಿಯಾವಾದಿಯಾದ ಪಿ.ಪಿ. ಕಪೂರ್ ಹೂಡಿದ ಮಾಹಿತಿ ಹಕ್ಕು ಅರ್ಜಿಯ ಪ್ರಕಾರ, ಕೃಷಿ ಮಾರುಕಟ್ಟೆಗಳಲ್ಲಿ ಈ ವರದಿಯ ಅನುಷ್ಠಾನವು ಅವ್ಯವಸ್ಥಿತ ಬೆಲೆಗಳಲ್ಲಿ ಪರಿಣಮಿಸುವುದೆಂದು ನರೇಂದ್ರ ಮೋದಿ ಸರ್ಕಾರವು ಈಗಾಗಲೇ ಅದನ್ನು ತಳ್ಳಿಹಾಕಿದೆ ಎಂದು ಸೂಚಿಸಿದೆ.

ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಸ್ಥೆ (ಎನ್‌ಎಸ್‌ಎಸ್‌ಒ) ೨೦೧೩ರ ವರದಿಯ ಪ್ರಕಾರ, ಕೃಷಿ ಕುಟುಂಬಗಳ ಸರಾಸರಿ ಮಾಸಿಕ ಆದಾಯವು ರೂ.೬,೪೨೬ರೆಂದೂ, ಹಾಗೂ ಅವರ ಮಾಸಿಕ ಖರ್ಚು ಅದೇ ಅವಧಿಯಲ್ಲಿ ರೂ.೬,೨೨೩ ಎಂದು ತಿಳಿಸಿದೆ.  “ತಮ್ಮ ಮೂಲಭೂತ ಅಗತ್ಯಗಳನ್ನು ನೋಡಿಕೊಳ್ಳುವುದಕ್ಕೇ ಅವರಿಗೆ ಸಾಕಷ್ಟು ಉತ್ಪನ್ನ ದೊರೆಯದೆ ಇರುವಾಗಿ, ರೈತರುಹೇಗೆ ತಾನೇ ತಮ್ಮ ಸಾಲಗಳನ್ನು ಹಿಂದಿರುಗಿಸಲು ಸಾಧ್ಯ,” ಎಂದು ಛತ್ತೀಸ್‌ಘಡದಲ್ಲಿನ ಸಿಲೋಡದ ರೈತರಾದ ಪ್ರಮೋದ ಪವಾರ್ ಹೇಳುತ್ತಾರೆ.

ಮುಂದಿನ ಹೆಜ್ಜೆ

ಪರಿಸ್ಥಿತಿಯನ್ನು ಬದಲಾಯಿಸಲು ಏನು ಮಾಡಬಹುದು? ಭಾರತದಲ್ಲಿ ರೈತರ ಪರಿಸ್ಥಿತಿಯನ್ನು ಸುಧಾರಿಸಲು, ರೈತ ಮುಖಂಡರು, ಕ್ರಿಯಾವಾದಿಗಳು ಹಾಗೂ ಕಾರ್ಯನೀತಿ ನಿರೂಪಕರು ಹಲವಾರು ಪರಿಹಾರಗಳನ್ನು ಸೂಚಿಸಿದ್ದಾರೆ.  ಕೆಲವು ಮುಖ್ಯ ಪರಿಹಾರಗಳನ್ನು ಇಲ್ಲಿ ನೀಡಲಾಗಿದೆ.  ರೈತನೊಬ್ಬನ ಇಳುವರಿಯ ಉತ್ಪಾದಕತೆ ಹಾಗೂ ಆತನ ಹೊಲ ಇರುವ ಭೌಗೋಳಿಕ ಸ್ಥಾನದ ಆಧಾರದ ಮೇಲೆ, ಕೃಷಿ ಕುಟುಂಬವೊಂದಕ್ಕೆ ಕನಿಷ್ಠ ಖಚಿತ ಮಾಸಿಕ ಆದಾಯದ ಪ್ಯಾಕೇಜ್ ರೂಪಿಸಲು ರಾಷ್ಟ್ರೀಯ ರೈತ ಆಯೋಗದ ಸ್ಥಾಪನೆಯನ್ನು ಮಾಡುವುದನ್ನು ದೇವೀಂದರ್ ಶರ್ಮಾ ಸೂಚಿಸುತ್ತಾರೆ.  ಕೃಷಿಯಲ್ಲಿ ಏರುತ್ತಿರುವ ಖರ್ಚುಗಳನ್ನು ನಿಭಾಯಿಸಲು ಸಾವಯವ ಕೃಷಿಯು ಉತ್ತಮ ಪರಿಹಾರವೆಂದು ಸೂಚಿಸಲಾಗುತ್ತಿದೆ.  “ಕೀಟನಾಶಕಗಳು ಹಾಗೂ ಗೊಬ್ಬರಗಳಿಂದ ಹೆಚ್ಚುತ್ತಿರುವ ಕೃಷಿ ಕ್ಷೇತ್ರದಲ್ಲಿನ ವೆಚ್ಚವು ಇದರಿಂದ ಗಣನೀಯವಾಗಿ ಕಡಿಮೆಯಾಗಿ. ಸಾವಯವ ಕೃಷಿಯಿಂದ ಲಾಭದ ಪ್ರಮಾಣವು ಹೆಚ್ಚುತ್ತದೆ.  ಸಾವಯವ ಕೃಷಿಯನ್ನು ಅಳವಡಿಸಿಕೊಂಡ ರೈತರ ಪರಿಸ್ಥಿತಿಯು ಅದನ್ನು ಅಳವಡಿಸದ ರೈತರಿಗಿಂತ ಹೆಚ್ಚು ಉತ್ತಮವಾಗಿದೆ,” ಎನ್ನುತ್ತಾರೆ ಮೌಂಟ್ ಅಬುವಿನಲ್ಲಿರುವ ರೈತ ಮುಖಂಡ ಹಾಗೂ ರೈತ ಉತ್ತೇಜಕರಾದ ಮುಖೇಶ್ ಜಾಟ್.  ಕನಿಷ್ಠ ಬೆಂಬಲ ಬೆಲೆಯ ಮೇಲೆ ಪ್ರಭಾವ ಬೀರದಂತೆ, ಕೃಷಿಯ ಕರ್ಪೊರೇಟೀಕರಣವನ್ನು ಉತ್ತೇಜಿಸಬಾರದೆಂದು ಹಿರಿಯ ರೈತ ಮುಖಂದರು ಹಾಗೂ ಛತ್ತೀಸ್‌ಘಡ ಕೃಷಕ್ ಬಿರಾದರಿಯ ಸಂಚಾಲಕರಾದ ಆನಂದ್ ಮಿಶ್ರ ಸೂಚಿಸುತ್ತಾರೆ.  “ಕೃಷಿಯ ಕೊರ್ಪೊರೇಟೀಕರಣವು ರೈತರ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ ಎಂದು ಅಧ್ಯಯನಗಳಿಂದ ಕಂಡುಕೊಳ್ಳಲಾಗಿದೆ,” ಎನ್ನುತ್ತಾರೆ ಅವರು.

ಯೋಜನಾ ಆಯೋಗದ ಕಾರ್ಯಕಾರಿ ಗುಂಪು ಹೇಳುವ ಪ್ರಕಾರ, ಕೃಷಿ ಮಾರುಕಟ್ಟೆ/ವ್ಯಾಪಾರದಲ್ಲಿ ರೈತರ ಸಾಮರ್ಥ್ಯವನ್ನು ಸುಧಾರಿಸುವ ಅಗತ್ಯವಿದ್ದು, ಸಂವಿಧಾನದ ಸಹಗಾಮಿ ಪಟ್ಟಿಯಲ್ಲಿ ಕೃಷಿ ಮಾರುಕಟ್ಟೆಯನ್ನು ಸೇರ್ಪಡೆ ಮಾಡಬೇಕೆಂದು ಸೂಚಿಸುತ್ತದೆ.  “ಬೆಳೆಗಳಿಗಾಗಿನ ಸರ್ಕಾರಿ ಸಂಗ್ರಹಣಾ ವ್ಯವಸ್ಥೆಯಲ್ಲಿ ಸಂಶೋಧನೆ ಹಾಗೂ ಸುಧಾರಣೆಯ ಅಗತ್ಯವಿದೆ.  ವ್ಯವಸ್ಥಿತವಾದ ಕಾರ್ಯನೀತಿ ಚೌಕಟ್ಟು ಇಲ್ಲದೆ, ರೈತರ ಒಟ್ಟಾರೆ ಪರಿಸ್ಥಿತಿಯಲ್ಲಿ ಸುಧಾರಣೆ ತರುವುದು ಬಹಳ ಕಷ್ಟದ ಮಾತು,” ಎಂದು ಒಡಿಶಾದ ಹಿರಿಯ ರೈತ ಮುಖಂದರಾದ ಅಶೋಕ್ ಪ್ರಧಾನ್ ಹೇಳುತ್ತಾರೆ.  ಜಲ ನಿರ್ವಹಣೆಗೆ ಸಂಬಂಧಿಸಿದಂತೆ, ಜಲ ವಲಯದ ತಜ್ಞರಾದ ಡಾ.ಕೆ.ಜಿ. ವ್ಯಾಸ್, ಕೃಷಿಯಲ್ಲಿನ ಆರ್ಥಿಕ ಹಾಗೂ ಪಾರಿಸಾರಿಕ ಅಪಾಯಗಳನ್ನು ಕಡಿಮೆ ಮಾಡಲು ನೀರಿನ ಪರಿಣಾಮಕಾರಿ ಬಳಕೆ ಹಾಗೂ ಸಂರಕ್ಷಣೆಯ ಬಗೆಗೆ, ರೈತರಿಗೆ ತರಬೇತಿ ನೀಡುವ ಅಗತ್ಯವಿದೆ ಎಂದು ಸೂಚಿಸಿದರು.

 

ಮೂಲ ಲೇಖನ: ಮಕರಂದ್ ಪುರೋಹಿತ್

ಅನುವಾದ: ಕನ್ನಡ ಇಂಡಿಯಾ ವಾಟರ್ ಪೋರ್ಟಲ್ ತಂಡ

 ಮೂಲ ಆಂಗ್ಲ ಲೇಖನವನ್ನು ಓದಲು ಇಲ್ಲಿ ಕ್ಲಿಕ್ಕಿಸಿ:  http://www.indiawaterportal.org/articles/can-we-save-our-farmers

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*