ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಪೂರ್ವ ಕೊಲ್ಕತ್ತದ ತರಿಭೂಮಿಗಳನ್ನು ಏಕೆ ರಕ್ಷಿಸಬೇಕು?

ಅನೇಕ ಪರಿಸರ ವ್ಯವಸ್ಥೆಯ ಸೇವೆಗಳನ್ನು ಒದಗಿಸುವ ಪೂರ್ವ ಕೊಲ್ಕತ್ತ ತರಿಭೂಮಿಯನ್ನು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಪೂರೈಸಿ, ಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳನ್ನು ಶಮನ ಮಾಡಲು ಸಂರಕ್ಷಿಸಬೇಕಾಗಿದೆ.

ಶೈಕ್ಷಣಿಕ ಹಾಗೂ ಸಾಮಾಜಿಕ ವಲಯಗಳೆರಡರಲ್ಲೂ, ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (ಎಸ್‌ಡಿಜಿ) ಹೆಚ್ಚುಹೆಚ್ಚು ಉಲ್ಲೇಖಿಸಿ, ಅವುಗಳನ್ನು ಗುರಿಯಾಗಿ ಹೆಚ್ಚುಹೆಚ್ಚು ನಿಗದಿಪಡಿಸಲಾಗುತ್ತಿದೆ. ೨೦೧೫ನೆಯ ಇಸವಿಯನ್ನು ತನ್ನ ಗುರಿಯಾಗಿಸಿದ್ದ ಸಹಸ್ರಮಾನದ ಅಭಿವೃದ್ಧಿ ಗುರಿ ಅಥವಾ ಎಮ್‌ಡಿಜಿಗಳ ಕನಿಷ್ಠ ಯಶಸ್ಸಿಗೆ ಹತ್ತಿರದಲ್ಲೇ, ೨೦೩೦ ಇಸವಿಯ ವೇಳೆಗೆ ಪೂರೈಸಬೇಕಾದ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (ಎಸ್‌ಡಿಜಿ) ನಿಗದಿಪಡಿಸಿತು.

image_1_1ಎಸ್‌ಡಿಜಿಗಳು ಎಮ್‌ಡಿಜಿಗಳಿಗಿಂತ ಭಿನ್ನವಾಗಿದ್ದು, ಅದು ಕೇವಲ ಶ್ರೀಮಂತ ರಾಷ್ಟ್ರಗಳು ಬಡ ರಾಷ್ಟ್ರಗಳಿಗೆ ನೆರವಾಗುವುದಕ್ಕೆ ಮಾತ್ರ ಸೀಮಿತವಾಗಿಲ್ಲ.  ಉತ್ತಮ ಭವಿಷ್ಯತ್ತಿಗಾಗಿ ಎಲ್ಲ ದೇಶಗಳೂ ಶ್ರಮಿಸಬೇಕೆಂದು ಎಸ್‌ಡಿಜಿಗಳು ಅಪೇಕ್ಷಿಸುತ್ತವೆ (ಸಾಕ್ಸ್ ೨೦೧೨).  ಸಾಕ್ಸ್ ೨೦೧೨ರ ಪ್ರಕಾರ, ಮಧ್ಯಮ ಆದಾಯದ ಪ್ರವರ್ಧಮಾನಕ್ಕೆ ಬರುತ್ತಿರುವ ಆರ್ಥಿಕತೆಗಳನ್ನು ಹೊಂದಿದ ಬ್ರೆಜ಼ಿಲ್, ಚೀನಾ, ಭಾರತ ಹಾಗೂ ಇತರ ದೇಶಗಳು, ಬೆಳವಣಿಗೆ ಹಾಗೂ ಪಾರಿಸಾರಿಕ ಸುಸ್ಥಿರತೆಯ ತಮ್ಮ ಆಂತರಿಕ ಸವಾಲುಗಳನ್ನು ನಿಭಾಯಿಸುವುದರೊಂದಿಗೆ, ಎಸ್‌ಡಿಜಿಗಳ ಅನುಷ್ಠಾನದಲ್ಲಿ ಈ ದೇಶಗಳು ನಿರ್ಣಾಯಕ ಮುಂದಾಳತ್ವವನ್ನು ವಹಿಸಿವುದೆಂದು ಅಭಿಪ್ರಾಯ ಪಟ್ಟಿದೆ.

೧೭ ಎಸ್‌ಡಿಜಿಗಳ ಪೈಕಿ, ನನ್ನ ಅಧ್ಯಯನಕ್ಕೆ ಸಂಬಂಧಪಟ್ಟ ವಿಚಾರಗಳೆಂದರೆ:

ಸಂ ೬ (ಶುದ್ಧ ನೀರು ಹಾಗೂ ನೈರ್ಮಲ್ಯ)

ಸಂ. ೧೧ (ಸುಸ್ಥಿರ ನಗರಗಳು ಹಾಗೂ ಸಮುದಾಯಗಳು)

ಸಂ. ೧೩ (ಹವಾಮಾನ ಕ್ರಮ)

ಗುರಿ ೬: ಶುಚಿಯಾದ ನೀರು ಹಾಗೂ ನೈರ್ಮಲ್ಯ ಸೌಲಭ್ಯಗಳು; ತರಿಭೂಮಿ, ನದಿಗಳು, ಜಲಧರಗಳು ಹಾಗೂ ಕೆರೆಗಳೂ ಸೇರಿದಂತೆ ಜಲ-ಸಂಬಂಧಿತ ಪರಿಸರ ವ್ಯವಸ್ಥೆಗಳನ್ನು ರಕ್ಷಿಸುವ ಮೂಲಕ ನೀರಿನ ಕೊಯ್ಲು ಹಾಗೂ ತ್ಯಾಜ್ಯ ನೀರಿನ ಸಂಸ್ಕರಣಾ ಸೌಲಭ್ಯಗಳಿಗಾಗಿ ಅಂತರರಾಷ್ಟ್ರೀಯ ಸಹಕಾರದ ಉತ್ತೇಜನ

image_4_2ಗುರಿ ೧೧: ಮಾನವ ವಸಾಹತುಗಳನ್ನು ಸೇರ್ಪಡಿಕೆಯ, ಸುರಕ್ಷಿತ, ಸದೃಢ ಹಾಗೂ ಸುಸ್ಥಿರವನ್ನಾಗಿಸುವುದು ಹಾಗೂ ಜೀವವೈವಿಧ್ಯತೆ ಮತ್ತು ಪರಿಸರ ವ್ಯವಸ್ಥೆಗಳನ್ನು ಒಳಗೊಂಡ ವಿಶ್ವದ ಸಾಂಸ್ಕೃತಿಕ ಹಾಗೂ ನೈಸರ್ಗಿಕ ಪರಂಪರೆಯನ್ನುರಕ್ಷಣೆ ಮಾಡುವ ಯತ್ನಗಳನ್ನು ಒಳಗೊಂಡಿದೆ.  ಇಂದಿನ ನಗರಗಳು ತಮ್ಮ ಎಲ್ಲೆಗಳನ್ನು ಮೀರಿ ಬೆಳೆದಿದ್ದು, ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳನ್ನು ವೇಗವಾಗಿ ನುಂಗಿ, ಅರೆ-ನಗರ ಪ್ರದೇಶಗಳನ್ನು ಸೃಷ್ಟಿಸಿ, ಅಲ್ಲಿ ಗ್ರಾಮ್ಯ ಹಾಗೂ ನಗರ ಗುಣಲಕ್ಷಣಗಳು ಜೊತೆಜೊತೆಗೆ ಇರುವಂತೆ ಮಾಡಿದೆ.  ಪ್ರವರ್ಧಮಾನಕ್ಕೆ ಬರುತ್ತಿರುವ ಈ ನಗರದ ಗುಣಲಕ್ಷಣವನ್ನು ಈ ಗುರಿಯು ಗಣನೆಗೆ ತೆಗೆದುಕೊಳ್ಳುತ್ತಿದ್ದು, ಉತ್ತಮ ಆಡಳಿತಕ್ಕಾಗಿ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಯೋಜನಾ ಪ್ರಕ್ರಿಯೆಗಳನ್ನು ಬಲಗೊಳಿಸುತ್ತದೆ.  ಈ ಗುರಿಯ ಒಟ್ಟಾರೆ ಲಕ್ಶ್ಯವೆಂದರೆ ಹವಾಮಾನ-ಆಧಾರಿತ ಬದಲಾವಣೆಗಳಿಗೆ ನಗರಗಳು ಒಗ್ಗಿಕೊಂಡು ಸದೃಢವಾಗಿರುವುದನ್ನು ಹೊಂದಿದೆ.

ಗುರಿ ೧೩: ವಿವಿಧ ದೇಶಗಳಲ್ಲಿನ ಹವಾಮಾನ-ಪ್ರಚೋದಿತ ಘಟನೆಗಳಿಗೆ ಅಳವಡಿಸಿಕೊಳ್ಳುವ ಶಕ್ತಿಯನ್ನು ಬೆಳೆಸುವ ಗುರಿಯನ್ನು ಇದು ಹೊಂದಿದೆ.  ಇದನ್ನು ಮಾಡುವ ಒಂದು ವಿಧಾನವೆಂದರೆ, ಪ್ರವಾಹಗಳನ್ನು ಹೀರಲು ತರಿಭೂಮಿ ಹಾಗೂ ಮಣ್ಣಿನ ಸವಕಳಿ ತಡೆಗಟ್ಟಲು ಅರಣ್ಯಗಳಂತಹ ನೈಸರ್ಗಿಕ ರಕ್ಷಣೋಪಾಯಗಳನ್ನು ನಿರ್ವಹಿಸುವ ಮೂಲಕ ಇದನ್ನು ಮಾಡುವ ಒಂದು ಮಾರ್ಗವಾಗಿದೆ.  ಇದು, ಗುರಿ ಸಂ. ೧೧ರ ಮೇಲೆ ಹೆಚ್ಚು ಒತ್ತನ್ನು ನೀಡುತ್ತದೆ.

ಈ ಮೂರು ಎಸ್‌ಡಿಜಿಗಳನ್ನು ಸಾಧಿಸಲು ಅತ್ಯವಶ್ಯಕವಾದ ಪರಿಸರ ವ್ಯವಸ್ಥೆಯೆಂದರೆ ತರಿಭೂಮಿಗಳು.  ತರಿಭೂಮಿಗಳೆಂದರೇನು? ದ ಇಂಟರ್‌ನ್ಯಾಷನಲ್ ಯೂನಿಯನ್ ಫ಼ಾರ್ ದ ಕನ್ಸರ್ವೇಷನ್ ಆಫ಼್ ನೇಚರ್ ಆಂಡ್ ನ್ಯಾಚುರಲ್ ರಿಸೋರ್ಸಸ್ [ನಿಸರ್ಗ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಅಂತರರಾಷ್ಟ್ರೀಯ ಸಂಘ] (ಐಯುಸಿಎನ್) ತರಿಭೂಮಿಗಳು ಎಂಬು ಪದದ ಅರ್ಥವನ್ನು ರಾಮ್ಸರ್ ಸಮಾವೇಶದಲ್ಲಿ ಪ್ರಮಾಣೀಕರಿಸಿ, “ಸಮುದ್ರದ ಕಡಿಮೆ ಉಬ್ಬರವಿಳಿತದಲ್ಲಿ (ಲೋ ಟೈಡ್) ಸಮುದ್ರದ ನೀರಿನ ಆಳವು ಆರು ಮೀಟರ್‌ಗಿಂತ ಅಧಿಕವಾಗದ ಪ್ರದೇಶಗಳನ್ನೂ ಒಳಗೊಂಡಂತೆ, ಸ್ಥಾಯಿ ಅಥವಾ ಹರಿವ ನೀರು, ಸಿಹಿ ನೀರು, ಉಪ್ಪುನೀರನ್ನು ಹೊಂದಿದ ನೀರಿರುವ, ನೈಸರ್ಗಿಕ ಅಥವಾ ಕೃತಕ, ಶಾಶ್ವತ ಅಥವಾ ತಾತ್ಕಾಲಿಕವಾದ, ಜೌಗು, ಪ್ರತ್ಯಾಮ್ಲೀಯ/ಸ್ವಲ್ಪವೇ ಆಮ್ಲೀಯವಾದ ಸಸ್ಯಾಂಗಾರದಿಂದ ಕೂಡಿದ ಜೌಗು ಪ್ರದೇಶ, ಸಸ್ಯಾಂಗಾರ ಅಥವಾ ನೀರಿನ ಪ್ರದೇಶಗಳು,” ಎಂದು ವ್ಯಾಖ್ಯಾನಿಸಿದೆ (ಶೈನ್ ಆಂಡ್ ಡಿ ಕ್ಲೆಮ್ಮ್ ೧೯೯೯).

ವಿಶ್ವದಾದ್ಯಂತ ೨೧೫,೨೪೦,೧೧೨ ಹೆಕ್ಟೇರುಗಳನ್ನು ಒಳಗೊಂಡ ಒಟ್ಟಾರೆ ೨,೨೪೨ ರಾಮ್ಸಾರ್ ಸೈಟ್‌ಗಳನ್ನು ರಕ್ಷಣೆಗಾಗಿ ಗುರುತಿಸಲಾಗಿದೆ.  ವಿಪರೀತರ ಘಟನೆಗಳಿಂದ ಉಂಟಾಗುವ ಸಂಭವನೀಯ ಕಳವುಗಳ ವಿರುದ್ಧ ಅನೇಕ ದೇಶಗಳನ್ನು ರಕ್ಷಿಸುವಲ್ಲಿ ಈ ತರಿಭೂಮಿಗಳು ರಕ್ಷಣೆ ಒದಗಿಸುವ ಮುಂದಾಲೋಚನೆಯಿಂದ ಮಾಡಲಾಗಿದೆ.  ಸಮಾವೇಶದಲ್ಲಿ ಬದ್ಧತೆಗಳನ್ನು ಕೈಗೊಂಡಿದ್ದರೂ, ಗಾಬರಿಯಾಗುವ ವೇಗದಲ್ಲಿ ತರಿಭೂಮಿಗಳ ಪ್ರದೇಶ ಕಿರಿದಾಗುತ್ತಿದ್ದು, ನಗರದ ವಿಸ್ತರಣೆಯಲ್ಲಿ ಕಳೆದುಹೋಗಿವೆ.

ಪೂರ್ವ ಕೊಲ್ಕತ್ತ ತರಿಭೂಮಿ ಎಂದರೇನು?

ತರಿಭೂಮಿಗಳನ್ನು ಕುರಿತಾದ ಸಹಸ್ರಮಾನ ಮಾಪನಾ ವರದಿಯಲ್ಲಿ ನಿಯೋಜಿತವಾದಂತೆ ಬಹುತೇಕ ಪರಿಸರ ವ್ಯವಸ್ಥೆಗಳ ಸೇವೆಗಳನ್ನು ಒದಗಿಸುವ ತರಿಭೂಮಿಗಳಲ್ಲಿ ಒಂದು ಪೂರ್ವ ಕೊಲ್ಕತ್ತ ತರಿಭೂಮಿ ಅಥವಾ ಇಕೆಡಬ್ಲ್ಯು.   ಪ್ರತಿದಿನವೂ ೬೦೦ ದಶಲಕ್ಷ ಲೀಟರ್‌ಗಳಷ್ಟು ಚರಂಡಿ ಹಾಗೂ ತ್ಯಾಜ್ಯ ನೀರನ್ನು ಸಂಸ್ಕರಿಸಲು ನೆರವಾಗುವ ಇಕೆಡಬ್ಲ್ಯು, ವಿಶ್ವದ ಅತಿ ದೊಡ್ಡ ಸಂಪನ್ಮೂಲ ಪುನರ್ಬಳಕೆ ಪರಿಸರ ವ್ಯವಸ್ಥೆ ಆಗಿದೆ.  ಈ ಚರಂಡಿ ತ್ಯಾಜ್ಯ ಹಾಗೂ ತ್ಯಾಜ್ಯ ನೀರು ಮುಖ್ಯವಾಗಿ ಕೊಲ್ಕತ್ತ ನಗರವು ಉತ್ಪತ್ತಿ ಮಾಡುತ್ತದೆ (ಮುಖರ್ಜಿ ೨೦೧೬).  ವಸಾಹತುಷಾಹಿ ಕಾಲದಲ್ಲಿ ನಿರ್ಮಿತವಾದ ನೈಸರ್ಗಿಕ ಹಾಗೂ ಮಾನವ-ನಿರ್ಮಿತ ನಾಲಾಗಳು ಹಾಗೂ ಕೊಲ್ಲಿಗಳ ಮೂಲಕ, ಚರಂಡಿ ತ್ಯಾಜ್ಯವು ತರಿಭೂಮಿಯ ಮೂಲಕ ಹರಿದು ಹೋಗುವಂತೆ ಮಾಡಲಾಗಿದೆ.

ಪಶ್ಚಿಮದಲ್ಲಿ ಗಂಗಾನದಿಯ ಉಪನದಿಯಾದ ಹೂಗ್ಲಿ ನದಿ ಹಾಗೂ ತನ್ನ ಪೂರ್ವ ಭಾimage_2_1ಗದಲ್ಲಿರುವ ಅನೇಕ ತರಿಭೂಮಿಗಳ ನಡುವೆ ಕೊಲ್ಕತ್ತ ನಗರವು ಇರುವುದರಿಂದ, ಒಳಚರಂಡಿಯನ್ನು ಸಂಸ್ಕರಿಸುವ ಇಂತಹ ವ್ಯವಸ್ಥೆಯು ಅಭಿವೃದ್ಧಿಯಾಯಿತು.  ಈ ತರಿಭೂಮಿಗಳು ಹೂಗ್ಲಿ ನದಿ ಹಾಗೂ ಗಂಗಾ ಮತ್ತು ಈಗಿನ ಬ್ರಹ್ಮಪುತ್ರ ನದೀಮುಖಜ ಭೂಮಿಯ (ಚ್ಯಾಟರ್ಜಿ ೧೯೯೩) ನಡುವೆ ಇದ್ದ ಇದೀಗ ನಿರ್ಜೀವವಾಗಿರುವ ಬಿದ್ಯಾಧಾರಿ ನದಿಯ (೧೯೨೦ರಲ್ಲಿ ಇದನ್ನು ನಿರ್ಜೀವ ನದಿಯೆಂದು ಘೋಷಣೆ ಮಾಡಲಾಯಿತು) ನಡುವೆ ಇರುವ ಅಂತರ-ಉಪನದಿಯ ಜೌಗುಗಳಾಗಿವೆ. ಈ ನೀರಿನ ಆಗರಗಳು ಅಳಿವೆ ನದಿ ಬಿದ್ಯಾಧರಿಯ ಸ್ಪಿಲ್ (ಚೆಲ್ಲು) ಪಾತ್ರವಾದ ಈ ನೀರಿನ ಆಗರಗಳು, ಕ್ಷಾರೀಯ ಸ್ವರೂಪ ಹೊಂದಿದ್ದು, ಇದರಿಂದ ಅವುಗಳಿಗೆ ಸಾಲ್ಟ್ ಲೇಕ್ಸ್ (ಕ್ಷಾರೀಯ ಕೆರೆಗಳು) ಎಂಬ ಹೆಸರಿದೆ.  ೧೯೪೦ರ ದಶಕದಿಂದ, ಒಳಚರಂಡಿ ತ್ಯಾಜ್ಯವನ್ನು ನಗರದ ಮತ್ತಷ್ಟು ಪೂರ್ವಕ್ಕೆ ಇರುವ ಕುಲ್ಟಿ ನದಿಯ ಮೂಲಕ ಸಮುದ್ರಕ್ಕೆ ಬಸಿಯುವ ಮುನ್ನ, ಈ ದ್ರವರೂಪದ ಚರಂಡಿ ತ್ಯಾಜ್ಯವನ್ನು ಸಂಸ್ಕರಣೆಗಾಗಿ ತರಿಭೂಮಿಯ ಮೂಲಕ ಹಾಯಿಸಲು ನಿರ್ಧರಿಸಲಾಯಿತು.  ಇದಕ್ಕೆ ಮುನ್ನ, ೧೯ನೆಯ ಶತಮನಾದ ಅಂತಿಮ ದಶಕಗಳಿಂದ ಸ್ಥಳೀಯ ಈ ಕ್ಷಾರೀಯ ಕೆರೆಗಳಿಗೆ ಏರಿಗಳನ್ನು ನಿರ್ಮಿಸಿ, ಅಲ್ಲಿ ಕ್ಷಾರೀಯ ನೀರಿನ ಮೀನುಗಾರಿಕೆಯನ್ನು ಪ್ರಾರಂಭಿಸಿದರು.  ಆದರೆ ಸಂಸ್ಕರಿಸಿದ ಒಳಚರಂಡಿ ನೀರು ಸಿಹಿಯಾಗಿ ಇದ್ದದ್ದರಿಂದ, ಕ್ಷಾರೀಯ ನೀರಿನ ಮೀನುಗಳಿಂದ ಸಿಹಿ ನೀರಿನ ಮೀನುಗಾರಿಕೆಯನ್ನು ಪ್ರಾರಂಭ ಮಾಡಿದರು.  ಈ ಸಂಸ್ಕರಿಸಿದ ನೀರನ್ನು ಭತ್ತ ಹಾಗೂ ತರಕಾರಿ ಬೆಳೆಯಲು ಬಳಸಲಾಗುತ್ತದೆ.  ಕಾಲಾಂತರದಲ್ಲಿ, ಈ ತರಿಭೂಮಿಗಳು, ನಗರದ ಒಳಚರಂಡಿ ತ್ಯಾಜ್ಯವನ್ನು ಸಂಸ್ಕರಿಸುವುದಲ್ಲದೆ, ಅನೇಕ ಪರಿಸರ ವ್ಯವಸ್ಥೆಯನ್ನು ಸೇವೆಗಳನ್ನೂ ಒದಗಿಸಿದ ಕಾರಣ, ಅದು ಸ್ಥಳೀಯರ ಮನಸ್ಸಿಗೆ ಮೆಚ್ಚುಗೆಯಾಗಿ, ತರಿಭೂಮಿಗಳ ಬಳಕೆಗೆ ಒಗ್ಗಿಕೊಂಡರು.

ನಗರದ ವಿಸ್ತರಣೆ ಹಾಗೂ ಬದಲಾವಣೆಗಳು

ಕೊಲ್ಕತ್ತ ನಗರದ ವಿಸ್ತರಣೆಯು ನಗರದ ಪೂರ್ವ ದಿಕ್ಕಿನೆಡೆಗೆ ಇರುವ ತರಿಭೂಮಿಗಳತ್ತ ಸಾಗಿದ್ದು, ಇದರಿಂದ ಕಾಲಾಂತರದಲ್ಲಿ ಬಹುತೇಕ ತರಿಭೂಮಿಯ ನೆಲವನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಪರಿಣಮಿಸಿದೆ.  ವಸಾಹತುಶಾಹಿ ಕಾಲದಿಂದ ಇಂದಿನವರೆಗೆ, ತರಿಭೂಮಿಯ ಪ್ರದೇಶವು ಗಣನೀಯವಾಗಿ ಕಡಿಮೆ ಆಗಿದೆ.  ತರಿಭೂಮಿಯು ಒದಗಿಸುತ್ತಿದ್ದ ಅಮೂಲ್ಯ ಸೇವೆಗಳ ಕಳವು ಹಾಗೂ ನಾಶವನ್ನು ಗುರುತಿಸಿ, ೨೦೦೨ರಲ್ಲಿ ರಾಮ್ಸಾರ್ ಸಮಾವೇಶದ ರಕ್ಷಣೆಯ ಅಡಿಗೆ ೧೨,೫೦೦ ಎಕರೆ ತರಿಭೂಮಿ ಪ್ರದೇಶವನ್ನು ತರಲಾಯಿತು.  ಅಂದಿನಿಂದಲೂ, ತರಿಭೂಮಿಗಳ ಭೂಬಳಕೆಯಲ್ಲಿ ಉಂmಟಾಗತ್ತಿರುವ ಬದಲಾವಣೆಯ ವೇಗವು ಕಡಿಮೆ ಆಗಿದ್ದರೂ, ಪ್ರಮುಖ ಮುಖ್ಯ ರಸ್ತೆ, ಮೆಟ್ರೋ ರೈಲು ಅಥವಾ ಮೇಲ್ದರ್ಜೆಯ ವಸತಿ ಸಮುಚ್ಛಯಗಳಿಗಾಗಿ ತರಿಭೂಮಿಗಳ ಸ್ವಾಧೀನಪಡಿಸಿಕೊಳ್ಳುವಿಕೆಯು ಮುಂದುವರೆದಿದೆ.

೧೭ನೆಯ ಶತಮಾನದಿಂದಲೂ ತರಿಭೂಮಿಯನ್ನು ಒಳಪಡಿಸಿಕೊಳ್ಳುತ್ತ, ಕೊಲ್ಕತ್ತ ನಗರವು ಸ್ಥಿರ ಬೆಳವಣಿಗೆಯನ್ನು ಕಂಡಿರುವುದನ್ನು ಮೇಲಿನ ನಕ್ಷೆಯು ತೋರಿಸುತ್ತದೆ. ನಗರವು ಬೆಳೆಯುತ್ತಿದ್ದಂತೆ, ಪಶ್ಚಿಮದಲ್ಲಿ ನದಿ ಇದ್ದದ್ದರಿಂದ, (ಲಂಬವಾಗಿ ಬೆಳೆಯುವುದನ್ನು ಹೊರತುಪಡಿಸಿ) ಅದಕ್ಕೆ ಬೆಳೆಯಲು ಒಂದೇ ದಿಕ್ಕು ಎಂದರೆ ಜೌಗು ತರಿಭೂಮಿಗಳತ್ತಲೇ.

ಕೊಲ್ಕತ್ತಾದ ಮಹಾನಗರ ಪ್ರದೇಶಗಳೊಂದಿಗೆ, ಇಕೆಡಬ್ಲ್ಯು ಹಾಗೂ ಸಾಲ್ಟ್ ಲೇಕ್ ಟೌನ್‌ಶಿಪ್‌ನ  ನಿಯೋಜಿತ ಗಡಿಯನ್ನು ಪ್ರತಿಬಿಂಬಿಸುವ ಇಂದಿನ ನಕ್ಷೆಯನ್ನು ಇಲ್ಲಿ ನೀಡಲಾಗಿದೆ.  ನಗರದಿಂದ ಒಳಚರಂಡಿ ತ್ಯಾಜ್ಯವನ್ನು ಒಯ್ಯುವ ವಿವಿಧ ನಾಲೆಗಳನ್ನು ನೀವು ಇಲ್ಲಿ ಕಾಣಬಹುದು.  ೧೯೬೦ರ ದಶಕದಲ್ಲಿ, ಸ್ವಾತಂತ್ರ್ಯಾನಂತರ ಬಾಂಗ್ಲಾದೇಶದಿಂದ ಲಕ್ಷಾಂತರ ಸಂಖ್ಯೆಯಲ್ಲಿ ಬಂದ ನಿರಾಶ್ರಿತರಿಗೆ ಆಶ್ರಯ ಕಲ್ಪಿಸಲು ತರಿಭೂಮಿ ಪ್ರದೇಶದಿಂದ ೧೬೫೦ ಎಕರೆ ಭೂಮಿಯನ್ನು ಮರುಪಡೆಯಲಾಯಿತು.  ವ್ಯವಸ್ಥಿತ, ಬೃಹತ್ ಪ್ರಮಾಣದಲ್ಲಿ ತರಿಭೂಮಿಯ ಮರುಪಡೆಯುವಿಕೆಗೆ ಇದು ನಾಂದಿ ಹಾಡಿತು.  ಅಂದಿನಿಂದ, ರಿಯಲ್ ಎಸ್ಟೇಟ್ ಹಾಗೂ ವಾಣಿಜ್ಯ ಅಭಿವೃದ್ಧಿಯ ಸರಣಿ ಪ್ರಕರಣಗಳು ತರಿಭೂಮಿ ಪ್ರದೇಶವನ್ನು ಒತ್ತುವರಿ ಮಾಡಿಕೊಳ್ಳುವುದು ಮುಂದುವರೆದಿದೆ.

ಸಾಮಾನ್ಯವಾಗಿ, ಪರಿಸರ ವ್ಯವಸ್ಥೆಯ ಸೇವೆಗಳು ತರಿಭೂಮಿಗಳನ್ನು ನೈಸರ್ಗಿಕವಾಗಿ ನಡೆಯುತ್ತವೆ ಆದರೆ ಇಕೆಡಬ್ಲ್ಯುವಿನಲ್ಲಿ, ಮಾನವ ಮಧ್ಯಸ್ಥಿಕೆಗಳು ಹಾಗೂ ನಿಸರ್ಗದ ಸಕಾರಾತ್ಮಕ ಬೆಸೆತ ಸದಾ ಇದೆ (ಘೋಷ್ ೨೦೦೫, ೬೦).  ಇದಕ್ಕೆ ಕಾರಣ, ಬಿದ್ಯಾಧಾರಿ ನದಿಯು ಒಣಗಿ ಹೋದಾಗ, ಈ ನೀರಿನ ಆಗರಗಳ ನೈಸರ್ಗಿಕ ನೀರಿನ ಮೂಲವು ಒಣಗಿಹೋಗಿದ್ದು.  ಈಗ, ಒಳಚರಂಡಿಯ ನೀರೇ ಇವುಗಳಿಗೆ ನೀರಿನ ಮೂಲವಾಗಿದೆ.  ಇಕೆಡಬ್ಲ್ಯುವಿನ ಸರಬರಾಜು ಹಾಗೂ ನಿಯಂತ್ರಕ ಪಾತ್ರಗಳು ಅತ್ಯುತ್ತಮ ರೀತಿಯಲ್ಲಿ ಮಿಳಿತವಾಗಿದ್ದು, ಅವುಗಳ ಸರಿಯಾದ ಬಳಕೆ ಆಗುತ್ತಿದೆ.

ಆಡಳಿತಾತ್ಮಕವಾಗಿ ಇಕೆಡಬ್ಲ್ಯುವನ್ನು ವಿವಿಧ ಘಟಕಗಳಾಗಿ ವಿಂಗಡಿಸಲಾಗಿದ್ದು, ಅವುಗಳನ್ನು ಸ್ಥಳೀಯವಾಗಿ ಮೌಜ಼ಾಗಳೆಂದು ಕರೆಯುತ್ತಾರೆ.  ಅವುಗಳ ಪೈಕಿ, ಖರ್ಕಿ, ಧಾಪಾ ಮಾನ್ಪುರ್ ಹಾಗೂ ಧಾಪಾಗಳಿಂದ ನಾನು ಮಾಹಿತಿ ಸಂಗ್ರಹಿಸಿದ್ದೇನೆ – ಈ ಮೂರರ ಪೈಕಿ ಕೊಲ್ಕತ್ತ ನಗರಪಾಲಿಕೆಯ ಆಡಳಿತಕ್ಕೆ ಒಳಪಟ್ಟರೆ, ಮೂರನೆಯನ್ನು ಆ ಗ್ರಾಮ ಪಂಚಾಯತಿಯು ನಡೆಸುತ್ತದೆ.  ಖರ್ಕಿಯಲ್ಲಿ ಜೀವನೋಪಾಯದ ಪ್ರಮುಖ ಮೂಲವೆಂದರೆ ಮೀನುಗಾರಿಕೆ ಹಾಗೂ ಭತ್ತದ ಬೇಸಾಯ; ಧಾಪಾ ಮಾನ್ಪುರ್‌ನಲ್ಲಿ ಮೀನುಗಾರಿಕೆ ಹಾಗೂ ಧಾಪಾದಲ್ಲಿ ತರಕಾರಿ ತೋಟಗಳಿವೆ.  ಆದರೆ, ಈ ಮೂರು ಮೌಜ಼ಾಗಳಿಂದಲೂ, ಹೆಚ್ಚುವರಿ ಆದಾಯದ ಮೂಲಕ್ಕಾಗಿ ಮಹಿಳೆಯರು ಹಾಗೂ ಪುರುಷರಿಬ್ಬರೂ ನಗರಕ್ಕೆ ಅನಿವಾರ್ಯವಾಗಿ ಹೋಗಲೇಬೇಕಾದ ಸಂದರ್ಭವಿದೆ.

ಇಕೆಡಬ್ಲ್ಯುವಿನ ಪರಿಸರ ವ್ಯವಸ್ಥೆ ಸೇವೆಗಳು

ಬಹುಶಃ ನೀರಿನ ಅಭಾವವು ಪ್ರಸ್ತುತ ಹಾಗೂ ಭವಿಷ್ಯದ ತಲೆಮಾರುಗಳ ಅತ್ಯಂತ ದೊಡ್ಡ ಚಿಂತೆಯಾಗಿದೆ.  ಮೀನುಗಾರಿಕೆ ಹಾಗೂ ಬೆಳೆ ಬೆಳವಣಿಗೆಗೆ ತ್ಯಾಜ್ಯ ನೀರು ನೀರಿನ ಬದಲಿ ಮೂಲವಾಗಬಹುದು.  ಈ ಅಪರೂಪದ ವ್ಯವಸ್ಥೆಯನ್ನು ಇಕೆಡಬ್ಲ್ಯು ಸುಮಾರು ಒಂದು ಶತಮಾನದಿಂದಲೂ ಬಳಸುತ್ತ ಬಂದಿದೆ.  ಉತ್ಕರ್ಷಣ/ಆಕ್ಸಿಡೀಕರಣ, ವಿಕಿರಣ ಹಾಗೂ ಸಾವಯವ ತ್ಯಾಜ್ಯದ ಜೈವಿಕ ಶಿಥಿಲೀಕರಣದ ಮೂಲಕ ನೀರನ್ನು ಶುದ್ಧೀಕರಿಸಲಾಗುತ್ತದೆ (ಮುಖರ್ಜಿ ೨೦೦೬) ಹಾಗೂ ಇದೆಲ್ಲವನ್ನೂ  ದ್ಯುತಿಸಂಶ್ಲೇಷಣದ ನೆರವಿನಿಂದ ಮಾಡಲಾಗುತ್ತದೆ. ಸೂರ್ಯನ ಕಿರಣಗಳು ಅವುಗಳ ಮೂಲಕ ಹಾದುಹೋಗಲು ನೆರವಾಗುವಂತೆ ಮೀನು ಸಾಕಣೆಯ ತೊಟ್ಟಿಗಳು ಕಡಿಮೆ ಆಳವನ್ನು ಹೊಂದಿರುತ್ತದೆ.  ಒಮ್ಮೆ ದ್ರವತ್ಯಾಜ್ಯಗಳು ಕೆಳಕ್ಕೆ ಇಳಿದ ಮೇಲೆ, ಮೀನುಗಳನ್ನು ಬೆಳೆಸುವ ಪಕ್ವತೆಯ ಕೊಳಗಳು/ಮೆಚ್ಯುರೇಷನ್ ಪಾಂಡ್ಸ್‌ಗಳಿಗೆ ಬಿಡಲಾಗುತ್ತದೆ.  ಪೌಷ್ಟಿಕಾಂಶಗಳ ಪುನರುಜ್ಜೀವನಕ್ಕೂ ಪಕ್ವತೆಯ ಕೊಳಗಳು ನೆರವಾಗುತ್ತವೆ (ಚಕ್ರಬೊರ್ತಿ ೨೦೧೩).

image_3_2ಕೆರೆ/ಕೊಳಗಳ ಸಂಸ್ಕರಿಸಿದ ತ್ಯಾಜ್ಯ ನೀರನ್ನು, ಕೊನೆಗೆ ಕುಲ್ಟಿ ನದಿಗೆ ಬಿಡುವ ಮುನ್ನ, ಸುತ್ತಲಿರುವ ಭತ್ತದ ಹೊಲಗಳು ಹಾಗೂ ತರಕಾರಿ ತೋಟಗಳಿಗೆ ಹಾಯಿಸಿ, ನಂತರ ಬಿಡುತ್ತಾರೆ.  ಅಂದಾಜೊಂದರ ಪ್ರಕಾರ, ೮,೧೦೦ ಹೆಕ್ಟೇರುಗಳಷ್ಟು ತರಿಭೂಮಿ ಪ್ರದೇಶವಿದ್ದು, ಅದರ ಪೈಕಿ ೩,೯೦೦ ಹೆಕ್ಟೇರುಗಳು ಮೀನುಗಾರಿಕೆ ಅಡಿಯಲ್ಲಿ ಬರುತ್ತವೆ.  ವರ್ಷಂಪ್ರತಿ ೩.೪೪ ಹೆಕ್ಟೇರುಗಳ ಸರಾಸರಿ ಉತ್ಪಾದನೆ ಇದ್ದು, ವರ್ಷವೊಂದರಲ್ಲಿ ಒಟ್ಟಾರೆ ಉತ್ಪಾದನೆಯು ೧೩,೦೦೦ ಟನ್‌ಗಳೆಂದು ಅಂದಾಜು ಮಾಡಲಾಗಿದೆ (ಮುಖರ್ಜಿ ೨೦೦೬).  ಒಳಚರಂಡಿ ನೀರಿನಿಂದ ಬೆಳೆದ ಮೀನುಗಳು, ಭತ್ತ ಹಾಗೂ ತರಕಾರಿಗಳನ್ನು ಸರಿಯಾಗಿ ಬೇಯಿಸಿದಾಗ, ಅವು ಮಾನವ ಸೇವನೆಗೆ ಸುರಕ್ಷಿತವಾಗಿರುತ್ತದೆ.  ಇಕೆಡಬ್ಲ್ಯುನಲ್ಲಿ ಬೆಳೆದ ತರಕಾರಿಗಳು ಹಾಗೂ ಮೀನುಗಳನ್ನು ಹತ್ತಿರದ ಸಗಟು ಮಾರುಕಟ್ಟೆಗಳಿಗೆ ಮಾರಲಾಗುತ್ತದೆ.  ಆದರೆ, ಭತ್ತವನ್ನು ಪ್ರತಿಯೊಂದು ಮೌಜ಼ದಲ್ಲೂ ಬೆಳೆಯುವುದಿಲ್ಲ ಹಾಗೂ ಅವುಗಳನ್ನು ಬೆಳೆಯುವ ಕಡೆ, ಅದು ಸಾಮಾನ್ಯವಾಗಿ ಸ್ವಂತ ಬಳಕೆಗೆ ಇರುತ್ತದೆ.

ಕ್ಷೇತ್ರಕಾರ್ಯದ ಸಮಯದಲ್ಲಿ, ಇಕೆಡಬ್ಲ್ಯುದ ನಿವಾಸಿಗಳು ತಮ್ಮ ಇಂಧನದ ಅಗತ್ಯಗಳಿಗಾಗಿ ತರಿಭೂಮಿಗಳ ಮೇಲೆ ಅವಲಂಬಿತವಾಗಿರುವುದನ್ನು ನಾನು ಗಮನಿಸಿದೆ.  ಖರ್ಜಿ ಮೌಜ಼ದಲ್ಲಿ ಬೆರಣಿಯನ್ನು ಒಣಗಿ ಹಾಕಿರುವುದನ್ನು ನೋಡಬಹುದಿತ್ತು.  ಅಡುಗೆ ಇಂಧನಕ್ಕಾಗಿ ಖರ್ಜಿ ಹಾಗೂ ಧಾಪಾದ ನಿವಾಸಿಗಳು ಕಟ್ಟಿಗೆಯನ್ನು ಸಂಗ್ರಹಿಸುತ್ತಾರೆ.  ಖರ್ಕಿಯ ನಿವಾಸಿಗಳು ತಮ್ಮ ಸುತ್ತಲಿನ ಪ್ರದೇಶದಿಂದ ಚಾವಣಿಗಾಗಿ ಸಾಮಗ್ರಿಗಳನ್ನೂ ಸಂಗ್ರಹಿಸುತ್ತಾರೆ.  ಈ ರೀತಿಯ  ಸರಬರಾಜು ಸೇವೆಗಳು ಇಕೆಡಬ್ಲ್ಯುವಿನಲ್ಲಿ ಲಭ್ಯವಿವೆ.

ಚಾಟರ್ಜಿಯ (೧೯೯೯) ಪ್ರಕಾರ, ಅಕ್ಷಾಂಶ, ತಾಪಮಾನ ಶ್ರೇಣಿ, ಸರಾಸರಿ ವಾರ್ಷಿಕ ಮಳೆಯನ್ನು ಗಮನದಲ್ಲಿ ಇರಿಸಿ, ವರ್ಷಂಪ್ರತಿ ಇಕೆಡಬ್ಲ್ಯು (ತೇವಯುಕ್ತ ಮೇಲ್ಮೈ ಹೊಂದಿದ ೩,೦೦೦ ಹೆಕ್ಟೇರುಗಳಲ್ಲಿ ೩೬೫ ದಿನಗಳಿಗೆ ಎಣಿಕೆ ಮಾಡಲಾಗಿದೆ) ೨,೪೮,೨೯೧.೨೫ ಟನ್‌ಗಳನ್ನು ಉತ್ಪಾದಿಸುತ್ತದೆ.  ಆದರೆ, ಇದು ಹಳೆಯ ಮಾಹಿತಿಯಾಗಿದ್ದು, ಇಂತಹ ಆಯಾಮಗಳ ಬಗೆಗೆ ಹೊಸ ಸಂಶೋಧನೆಯು ಹೆಚ್ಚು ನಿಖರವಾದ ಮಾಹಿತಿಯನ್ನು ನೀಡುತ್ತದೆ.

ಇದಲ್ಲದೆ, ಸಾಮಾನ್ಯವಾಗಿ ಇಕೆಡಬ್ಲ್ಯು ಧಾರಣಾ ಭೋಗುಣಿಯಾಗಿ ಕಾರ್ಯ ನಿರ್ವಹಿಸುತ್ತದೆ.  ಭೂಮಿಯು ಪೂರ್ವಕ್ಕೆ ವಾಲಿರುವುದರಿಂದ, ಗುರುತ್ವಾಕರ್ಷಣದಿಂದ ತರಿಭೂಮಿಗಳತ್ತ ಅನಿವಾರ್ಯವಾಗಿ ಹರಿಯುತ್ತದೆ.  ಆದರೆ ನಗರದ ಬೆಳವಣಿಗೆಯೊಂದಿಗೆ, ಪೂರ್ವದಲ್ಲಿನ ತರಿಭೂಮಿಗಳನ್ನು ಹಿಂಪಡೆದಿದ್ದು, ಅವುಗಳಲ್ಲಿ ಅನೇಕ ಬತ್ತಿಹೋಗಿದ್ದು ಅಥವಾ ನಿವಾಸಿ ಪ್ರದೇಶಗಳಾಗಿ ಪರಿವರ್ತನೆಗೊಂಡಿವೆ.  ಭಾರಿ ಮಳೆಯ ನಂತರ ನಗರದಲ್ಲಿ ಇದು ಪ್ರವಾಹವನ್ನು ಉಂಟುಮಾಡುತ್ತದೆ.  ಇಎಮ್ ಬೈಪಾಸ್ ಈ ಹಿಂದಿನ ಉಪ್ಪು ನೀರಿನ ಕೆರೆಗಳ ಜೌಗುಗಳಲ್ಲಿ ನೈಸರ್ಗಿಕ ಚೆಲ್ಲು ಬೋಗುಣಿಯ ವಾಸ್ತವ ಕಂದಕವಾಗಿ ಕಾರ್ಯನಿರ್ವಹಿಸಿ, ತರಿಭೂಮಿಗಳೊಳಗೆ ಮಳೆ ನೀರಿನ ಸುಗಮ ಹರಿವನ್ನು ನಿಲ್ಲಿಸುತ್ತದೆ (ಘೋಷ್ ೧೯೯೩).

ನಗರದ ತರಿಭೂಮಿಗಳು ಜನನಿಬಿಡ ನಗರ ವಸಾಹತುಗಳಿಗೆ ಗೃಹ ಬಳಕೆಯ ಏಕೈಕ ನೀರಿನ ಮೂಲವಾಗಿವೆ.  ಕೊಲ್ಕತ್ತದಲ್ಲಿ ಸ್ಥಳೀಯ ಕೆರೆಗಳಲ್ಲಿ ಸ್ನಾನ ಮಾಡುವುದು ಹಾಗೂ ಬಟ್ಟೆಗಳನ್ನು ಒಗೆಯುವುದು ಸರ್ವೇಸಾಮಾನ್ಯ.  ಅಂತಹ ನೀರಿನ ಮೂಲಗಳು ಬೆಂಕಿ ಅವಘಡಗಳಿಂದ (ಘೋಷ್ ೧೯೯೩) ರಕ್ಷಣೆ ಒದಗಿಸುತ್ತದೆ.

ಬದಲಾಗುತ್ತಿರುವ ತರಿಭೂಮಿಗಳ ಸ್ವರೂಪ

ಇತ್ತೀಚಿನ ದಿನಗಳಲ್ಲಿ, ತರಿಭೂಮಿಗಳಲ್ಲಿರುವ ಅನೇಕ ಮೀನುಗಾರರು ತಮ್ಮ ಮೀನು ತೋಟಗಳನ್ನು ಮನರಂಜನಾ ಉದ್ಯಾನಗಳು, ಜಲ ಕ್ರೀಡಾ ಉದ್ಯಾನಗಳು, ದೋಣಿ ವಿಹಾರ ಹಾಗೂ ವಿಹಾರದ ತಾಣಗಳಾಗಿ ಪರಿವರ್ತನೆ ಮಾಡಿದ್ದಾರೆ.  ಅಲ್ಲಿಗೆ ಭೇಟಿ ನೀಡುವವರು ಒಳ್ಳೆಯ ಸಮಯವನ್ನು ಕಳೆದರೆ, ಮೀನುಗಾರರು ಹೆಚ್ಚುವರಿ ಲಾಭಗಳನ್ನು ಮಾಡುತ್ತಾರೆ.  ಸಾಮಾನ್ಯವಾಗಿ, ಚಳಿಗಾಳದ ತಿಂಗಳುಗಳಲ್ಲಿ ಇಂತಹ ತಾಣಗಳು ಚಟುವಟಿಕೆಯಿಂದ ಕೂಡಿರುತ್ತದೆ.

೨೦೦೨ರಲ್ಲಿ ರಾಮ್ಸಾರ್ ಸಮಾವೇಶವು ಇಕೆಡಬ್ಲ್ಯು ಅಡಿಯಲ್ಲಿ ತರಲಾಯಿತು.  ಇಕೆಡಬ್ಲ್ಯು ಸಂದರ್ಭದಲ್ಲಿ ರಾಮ್ಸಾರ್‌ನಲ್ಲಿ ವ್ಯಾಖ್ಯಾನಿಸಿದಂತೆ, ತರಿಭೂಮಿಗಳ ಸಮಂಜಸ ಬಳಕೆಯು ಬಹಳಷ್ಟಿವೆ.  ಮೀನಿನ ಕೊಳಗಳನ್ನು ನಿರ್ವಹಿಸುವ, ಮೀನುಗಳನ್ನು ಹಿಡಿಯುವ, ಭತ್ತ ಹಾಗೂ ತರಕಾರಿಗಳನ್ನು ಬೆಳೆಯುವ ೭೦,೭೫೦ ಪುರುಷರು ಹಾಗೂ ಮಹಿಳೆಯರಿಗೆ ನೇರ ಉದ್ಯೋಗವನ್ನು ಒದಗಿಸುತ್ತದೆ (ಮುಖರ್ಜಿ ೨೦೦೬, ೧೦೬).  ಮೀನಿನ ಬೇಸಾಯದಲ್ಲಿ ಕೆಲಸ ಮಾಡುವ ರೈತರು ಹಾಗೂ ಕಾರ್ಮಿಕರು ಕೈಗೊಳ್ಳುವ ಕೆಲಸಕ್ಕೆ ವಸ್ತು ರೂಪದಲ್ಲಿ ಪಡೆಯುವ ಹಲವಾರು ಭಾಗೀದಾರ ಗುಂಪುಗಳು ಭತ್ತದ ಋತುವಿನಲ್ಲಿ ಭತ್ತ ಬೆಳೆಯುವ ಹೊಲಗಳಲ್ಲಿ ಉದ್ಯೋಗವನ್ನು ಪಡೆಯಬಹುದು.  ಬಡ ಸಮುದಾಯಗಳಿಗೆ ಸೇವೆ ಸಲ್ಲಿಸುವ ಮಾರುಕಟ್ಟೆಗಳಿಗೆ ಈ ತರಿಭೂಮಿಗಳು ಕೈಗೆಟಕುವ ಬೆಲೆಯಲ್ಲಿ ತಾಜಾ ಮೀನು ಹಾಗೂ ತರಕಾರಿಗಳನ್ನೂ ಈ ತರಿಭೂಮಿಗಳು ಸರಬರಾಜು ಮಾಡುತ್ತವೆ.  ಈ ಜಲ ಸಂಪನ್ಮೂಲಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿದಲ್ಲಿ, ಪಾರಿಸಾರಿಕ ಶಿಥಿಲೀಕರಣವನ್ನು ನಿವಾರಿಸಿ, ಸಾರ್ವಜನಿಕ ಆರೋಗ್ಯದ ಅಪಾಯಗಳನ್ನು ಕಡಿಮೆ ಮಾಡುತ್ತದೆ (ಬಂಟಿಂಗ್ ಎಟ್ ಆಲ್. ೨೦೧೦).

ಹಾಗಾಗಿ, ಕೊಲ್ಕತ್ತ ನಗರಕ್ಕೆ ಮೇಲೆ ಹೇಳಿದ ಸೇವೆಗಳನ್ನು ಸಲ್ಲಿಸುವ ಇಕೆಡಬ್ಲ್ಯು, ಪಾರಿಸಾರಿಕವಾಗಿ ಹಾಗೂ ಅರ್ಥಿಕವಾಗಿಯೂ ಬಹಳ ಮುಖ್ಯವಾಗಿದೆ.  ಆದರೆ, ಈ ತರಿಭೂಮಿಗಳನ್ನು ನಗರದ ನಿವಾಸಿಗಳು ಕೊಳಕು ಪ್ರದೇಶವೆಂದೂ, ಸೊಳ್ಳೆಗಳು ಉತ್ಪತ್ತಿ ಆಗುವ ಸ್ಥಳವೆಂದೂ ಪರಿಗಣಿಸಿ, ಅದಕ್ಕೆ ಯಾವುದೇ ರೀತಿಯ ಸೌಂದರ್ಯದ ಮೌಲ್ಯ ಇದೆಯೆಂದೂ ಪರಿಗಣಿಸುತ್ತಿರಲಿಲ್ಲ.  ಎಸ್‌ಡಿಜಿಗಳನ್ನು ಹಾಗೂ ಜಾಗತಿಕ ತಾಪಮಾನವನ್ನು ಗಣನೆಗೆ ತೆಗೆದುಕೊಂಡು, ಈ ತರಿಭೂಮಿಗಳ ಮಹತ್ವವನ್ನು ಅಂಗೀಕರಿಸಿ, ಗೌರವಿಸಿ, ಜೊತೆಗೆ ಅವುಗಳ ಸಂರಕ್ಷಣೆಗಾಗಿ ಕಾರ್ಯಪ್ರವೃತ್ತರಾಗುವ ಅಗತ್ಯವಿದೆ.

ಉಲ್ಲೇಖನಗಳು

ಚಾಟರ್ಜಿ, ನಂದಿನಿ. “ಮಾರ್ಷಸ್ ಟು ಅ ಟೌನ್‌ಶಿಪ್: ಅ ಕೇಸ್ ಸ್ಟಡಿ ಆಫ಼್ ಸಾಲ್ಟ್ ಲೇಕ್ ಸಿಟಿ, ಈಸ್ಟ್ ಕೊಲ್ಕತ್ತ”. ಇನ್ ಕೊಲ್ಕತ್ತ: ಲ್ಯಾಂಡ್ ಆಂಡ್ ಪೀಪಲ್. ಕೊಲ್ಕತ್ತ: ಭೂಗೋಳಶಾಸ್ತ್ರ ಇಲಾಖೆ, ಭಾರತೀಯ ಭೌಗೋಳಿಕ ಸೊಸೈಟಿ, ೧೯೯೩.

ಚಟ್ಟೋಪಾಧ್ಯಾಯ್, ಹರಿಪ್ರಸಾದ್. ಫ಼್ರಮ್ ಮಾರ್ಷ್ ಟು ಟೌನ್‌ಶಿಪ್ ಈಸ್ಟ್ ಆಫ಼್ ಕೊಲ್ಕತ್ತ: ಅ ಟೇಲ್ ಆಫ಼್ ಸಾಲ್ಟ್ ವಾಟರ್ ಲೇಕ್ ಆಂಡ್ ಸಾಲ್ಟ್ ಲೇಕ್.  ಕೊಲ್ಕತ್ತ: ಕೆ.ಪಿ. ಬಾಗ್ಚಿ.  ೧೯೯೦.

ಚಕ್ರಬರ್ತಿ, ಚಿನ್ಮೊಯ್. ಆ ಸೋರ್ಸ್ ಬುಕ್ ಆನ್ ಎನ್‌ವೈರನ್‌ಮೆಂಟ್ ಆಫ಼್ ಕೊಲ್ಕತ್ತ.  ಕೊಲ್ಕತ್ತ: ಕೊಲ್ಕತ್ತ ಮುನಿಸಿಪಾಲ್ ಕೊರ್ಪೊರೇಷನ್. ೨೦೧೩.

ಘೋಷ್, ಧ್ರುಬೊಜ್ಯೋತಿ. ಇಕೊಲಾಜಿಕಲ್ ಆಂಡ್ ಟ್ರೆಡಿಷನಲ್ ವೆಟ್‌ಲ್ಯಾಂಡ್ ಪ್ರಾಕ್ಟೀಸಸ್. ಕೊಲ್ಕತ್ತ: ವರ್ಲ್ಡ್‌ವ್ಯೂ. ೨೦೦೫

ಮಿಶ್ಚ್ ವಿಲಿಯಂ ಜೆ. ಆಂಡ್ ಜೇಮ್ಸ್ ಜಿ. ಗೊಸ್ಸೆಲಿಂಕ್.  ವೆಟ್‌ಲ್ಯಾಂಡ್ಸ್. ೫ನೆಯ ಆವೃತಿ.  ಹೊಬೊಕೆನ್, ಎನ್‌ಜೆ: ಜಾನ್ ವೈಲಿ ಆಂಡ್ ಸನ್ಸ್, ಇಂಕ್. ೨೦೧೫

ಮುಖರ್ಜಿ, ಮಧುಮಿತ. “ವೇಸ್ಟ್ ವಾಟರ್ ಫ಼ಿಷರೀಸ್ ಇನ್ ಪರಿ ಅರ್ಬನ್ ಕೊಲ್ಕತ್ತ”.  ಇನ್ ದ ಪೆರಿ ಅರ್ಬನ್ ಇಂಟರ್‌ಫ಼ೇಸ್: ಅಪ್ರೋಚಸ್ ಟು ಸಸ್ಟೇನಬಲ್ ನ್ಯಾಚ್ಯುರಲ್ ಆಂಡ್ ಹ್ಯುಉಮನ್ ರಿಸೋಸರ್ಸ್, ಎಡಿಟೆಡ್ ಬೈ ಡನ್‌ಕನ್ ಮ್ಯಾಕ್‌ಗ್ರೆಗರ್.

ಡೇವಿಡ್ ಸೈಮನ್ ಆಂಡ್ ಡೊನಾಲ್ಡ್ ಥಾಮ್ಸನ್, ೧೦೪-೧೧೫. ಯುಕೆ ಆಂಡ್ ಯುಎಸ್‌ಎ: ಅರ್ಥ್‌ಸ್ಕ್ಯಾನ್.  ೨೦೦೬.

ಮುಖರ್ಜಿ, ಜೆನಿಯಾ.  “ಸಸ್ಟೇನಬಲ್ ಫ಼್ಲೋಸ್ ಬಿಟ್ವೀನ್ ಕೊಲ್ಕತ್ತ ಆಂಡ್ ಇಟ್ಸ್ ಪೆರಿ-ಅರ್ಬನ್ ಇಂಟರ್‌ಫ಼ೇಸ್: ಚ್ಯಾಲೆಂಜಸ್ ಆಂಡ್ ಅಪೊರ್ಚುನಿಟೀಸ್” ಇನ್ ಅನ್‌ಟೇಮ್ಡ್ ಅರ್ಬನಿಸಮ್, ಎಡಿಟೆಡ್ ಬೈ ಎಡ್ರಿಯಾನ್ನ ಅಲೆನ್, ಆಂಡ್ರಿಯಾ ಲ್ಯಾಂಪಿಸ್ ಆಂಡ್ ಮಾರ್ಕ್ ಸ್ವಿಲ್ಲಿಂಗ್, ೩೩-೪೯. ಲಂಡನ್ ಆಂಡ್ ನ್ಯೂಯಾರ್ಕ್: ರೂಟ್ಲೆಡ್ಜ್. ೨೦೧೬.

ಶೈನ್, ಕ್ಲೇರ್ ಆಂಡ್ ಸಿರಿಲ್ಲ್ ಡಿ ಕ್ಲೆಮ್ಮ್. ವೆಟ್‌ಲ್ಯಾಂಡ್ಸ್, ವಾಟರ್ ಆಂಡ್ ದ ಲಾ ಯೂಸಿಂಗ್ ಲಾ ಟು ಅಡ್ವಾನ್ಸ್ ವೆಟ್‌ಲ್ಯಾಂಡ್ ಕನ್ಸರ್ವೇಷನ್ ಆಂಡ್ ವೈಸ್ ಯೂಸ್.  ಗ್ಲಾಂಡ್, ಕೇಂಬ್ರಿಜ್ ಆಂಡ್ ಬಾನ್ನ್: ಐಯುಸಿಎನ್. ೧೯೯೯

ಬಂಟಿಂಗ್, ಸ್ಟುಯಾರ್ಟ್ ಡಬ್ಲ್ಯು, ಜೂಲ್ಸ್ ಪ್ರೆಟಿ ಆಂಡ್ ಪೀಟರ್ ಎಡ್ವರ್ಡ್ಸ್.  “ವೇಸ್ಟ್‌ವಾಟರ್-ಫ಼ೆಡ್ ಅಕ್ವಾಕಲ್ಚರ್ ಇನ್ ದ ಈಸ್ಟ್ ಕೊಲ್ಕತ್ತ ವೆಟ್‌ಲ್ಯಾಂಡ್ಸ್, ಇಂಡಿಯಾ: ಅನಾಕ್ರೊನಿಸಮ್ ಆರ್ ಆರ್ಕಿಟೈಪ್ ಫ಼ಾರ್ ರೆಸಿಲಿಯೆಂಟ್ ಇಕೋಕಲ್ಚರ್ಸ್?”.  ರೆವ್ಯೂಸ್ ಇನ್ ಅಕ್ವಾಕಲ್ಚರ್ ೨ (೨೦೦೮): ೧೩೮-೧೫೩.

ಮಿಲ್ಲೆನಿಯಂ ಇಕೋಸಿಸ್ಟಮ್ ಅಸೆಸ್‌ಮೆಂಟ್.  ೨೦೦೫.  ಇಕೋಸಿಸ್ಟಮ್ಸ್ ಆಂಡ್ ಹ್ಯೂಮನ್ ವೆಲ್-ಬೀಯಿಂಗ್: ವೆಟ್‌ಲ್ಯಾಂಡ್ಸ್ ಆಂಡ್ ವಾಟರ್ ಸಿಂಥಸಿಸ್.  ವಾಷಿಂಗ್ಟನ್ ಡಿಸಿ: ವರ್ಲ್ಡ್ ರಿಸೋರ್ಸಸ್ ಇನ್ಸ್‌ಟಿಟ್ಯೂಟ್.  ಅಕ್ಸೆಸ್ಡ್ ಮಾರ್ಚ್ ೬, ೨೦೧೬.

 http://www.ramsar.org/sites/default/files/documents/pdf/document.358.aspx.pdf

ಮೂಲ ಲೇಖನ: ಹೈಮಂತಿ ಪಕ್ರಾಶಿ

ಅನುವಾದ: ಕನ್ನಡ ಇಂಡಿಯಾ ವಾಟರ್ ಪೋರ್ಟಲ್ ತಂಡ

 ಮೂಲ ಆಂಗ್ಲ ಲೇಖನವನ್ನು ಓದಲು ಇಲ್ಲಿ ಕ್ಲಿಕ್ಕಿಸಿ:

http://www.indiawaterportal.org/articles/why-east-kolkata-wetlands-needs-be-protected

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*