ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆನೋಟ-75 ಆಗ ಹೀಗಿದ್ದವು… ಜೀವಂತ ಕೆರೆಗಳು! -13

ಲಕ್ಷ್ಮಣರಾವ್ ಅವರು ನೀಡಿದ ವರದಿಯಲ್ಲಿ ಬೆಂಗಳೂರಿನ ಜೀವಂತ ಕೆರೆಗಳು ಹೇಗಿದ್ದವು ಎಂದು ಹೇಳಲಾಗಿದೆ. ಇದೀಗ ಜೀವಂತ ಕೆರೆಗಳ ಪರಿಸ್ಥಿತಿಯ ಹೇಗಿತ್ತು, ಅದನ್ನು ಏನು ಮಾಡಬಹುದು ಎಂಬ ಶಿಫಾರಸುಗಳನ್ನೂ ನೀಡಲಾಗಿದೆ. ಅಂತಹ 81 ಕೆರೆಗಳ ಪಟ್ಟಿಯ ವಿವರಣೆ ಹೀಗೆ ಸಾಗುತ್ತದೆ….

ಮೈಸೂರು ರಸ್ತೆ ಮತ್ತು ತುಮಕೂರು ರಸ್ತೆ ನಡುವಿನ ಕೆರೆಗಳು

  1. ನಾಯಂಡಹಳ್ಳಿ ವಾಯವ್ಯ ದಿಕ್ಕಿನಲ್ಲಿರುವ ಕೆರೆ

ಮೈಸೂರು ರಸ್ತೆಯ ಪಂDSC_0061ತರಪಾಳ್ಯಕ್ಕೆ ಹೊಂದಿಕೊಂಡಂತಿರುವ ಮತ್ತು ನಾಯಂಡಹಳ್ಳಿ ವಾಯವ್ಯ ದಿಕ್ಕಿನಲ್ಲಿರುವ ಈ ಕೆರೆ 4.52 ಹೆಕ್ಟೇರ್ ಪ್ರದೇಶದಲ್ಲಿದೆ. ಈ ಕೆರೆ 683(ಎ) ಸಂಖ್ಯೆಯಲ್ಲಿ ನೋಂದಣಿಯಾಗಿದೆ. ಈ ಕೆರೆ ಪ್ರದೇಶವನ್ನು ಸಿಡಿಪಿ ಉದ್ಯಾನವನ ಮತ್ತು ತೆರೆದ ಪ್ರದೇಶ ಎಂದು ನಮೂದಿಸಿದೆ. ಈ ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಸಸಿಗಳನ್ನು ನೆಡಬೇಕು ಮತ್ತು ಕೆರೆಯನ್ನು ಅಭಿವೃದ್ಧಿಪಡಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಈ ಕೆರೆ ಅರಣ್ಯ ಇಲಾಖೆ ವಶದಲ್ಲಿದೆ.

  1. ಹಳೇಕೆರೆ, ನಾಯಂಡಹಳ್ಳಿ

ನಾಯಂಡಹಳ್ಳಿ ರೈಲು ನಿಲ್ದಾಣದ ಮತ್ತು ಪಂತರಪಾಳ್ಯದ ಸಮೀಪವಿರುವ ಹಳೇಕೆರೆ 683 ಸಂಖ್ಯೆಯಲ್ಲಿ ನೋಂದಣಿಯಾಗಿದ್ದು, 5.80 ಹೆಕ್ಟೇರ್ ಪ್ರದೇಶದಲ್ಲಿದೆ. ಈ ಕೆರೆ ಪ್ರದೇಶವನ್ನು ಉದ್ಯಾನವನ ಮತ್ತು ತೆರೆದ ಪ್ರದೇಶ ಎಂದು ಸಿಡಿಪಿಯಲ್ಲಿ ನಮೂದಿಸಲಾಗಿದೆ. ಜಲಮೂಲವನ್ನು ಉಳಿಸಿಕೊಳ್ಳಬೇಕು ಎಂದು ತಿಳಿಸಿದೆ. ಈ ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಸಸಿಗಳನ್ನು ನೆಡಬೇಕು ಮತ್ತು ಕೆರೆಯನ್ನು ಅಭಿವೃದ್ಧಿಪಡಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಈ ಕೆರೆ ಅರಣ್ಯ ಇಲಾಖೆ ವಶದಲ್ಲಿದೆ. ಈ ಕೆರೆ ಪ್ರದೇಶವನ್ನು ಉದ್ಯಾನವನ ಮತ್ತು ತೆರೆದ ಪ್ರದೇಶ ಎಂದು ಸಿಡಿಪಿಯಲ್ಲಿ ನಮೂದಿಸಲಾಗಿದೆ. ಈ ಕೆರೆ ಪ್ರದೇಶದಲ್ಲಿ ವೃಕ್ಷವನವನ್ನು ಅಭಿವೃದ್ಧಿಪಡಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಈ ಕೆರೆ ಅರಣ್ಯ ಇಲಾಖೆ ವಶದಲ್ಲಿದೆ.

  1. ನರಸಪ್ಪನ ಕೆರೆ, ಕರಿಓಬನಹಳ್ಳಿ

ತುಮಕೂರು ರಸ್ತೆಯ ದಕ್ಷಿಣ ಭಾಗದ ಒಳಭಾಗ ಮತ್ತು ನಲ್ಲಕದ್ರೇನಹಲ್ಳಿ ಸಮೀಪವಿರುವ ಕರಿಓಬನಹಳ್ಳಿ ನರಸಪ್ಪನ ಕೆರೆ ಇದ್ದು, 521 ಸಂಖ್ಯೆಯಲ್ಲಿ ನೋಂದಣಿಯಾಗಿದೆ. ಈ ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಸಸಿಗಳನ್ನು ನೆಡಬೇಕು ಮತ್ತು ಕೆರೆಯನ್ನು ಅಭಿವೃದ್ಧಿಪಡಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಈ ಕೆರೆ ಅರಣ್ಯ ಇಲಾಖೆ ವಶದಲ್ಲಿದೆ.

  1. ಹೊಸಕೆರೆ, ನಲ್ಲಕದ್ರೇನಹಲ್ಳಿ

ನಲ್ಲಕದ್ರೇನಹಳ್ಳಿ ಸಮೀಪ ಮತ್ತು ತುಮಕೂರು ರಸ್ತೆಯ ದಕ್ಷಿಣ ದಿಕ್ಕಿನ ಒಳಭಾಗದಲ್ಲಿರುವ ಹೊಸ ಕೆರೆ 520 ಸಂಖ್ಯೆಯಲ್ಲಿ ನೋಂದಣಿಯಾಗಿದ್ದು, 9.34 ಹೆಕ್ಟೇರ್ ಪ್ರದೇಶದಲ್ಲಿದೆ. ಈ ಕೆರೆ ಪ್ರದೇಶ ವಸತಿ ಬಡಾವಣೆಯ ಭಾಗವಾಗಿದೆ ಎಂದು ಸಿಡಿಪಿಯಲ್ಲಿ ನಮೂದಿಸಲಾಗಿದೆ.

  1. ಹಳೇಕೆರೆ, ನಲ್ಲಕದ್ರೇನಹಳ್ಳಿ

DSC_0034ತುಮಕೂರು ರಸ್ತೆಯ ದಕ್ಷಿಣ ದಿಕ್ಕಿನ ಒಳಭಾಗದಲ್ಲಿರುವ ಮತ್ತು ನಲ್ಲಕದ್ರೇನಹಳ್ಳಿ ಸಮೀಪವಿರುವ ಹಳೇಕೆರೆ 519 ಸಂಖ್ಯೆಯಲ್ಲಿ ನೋಂದಣಿಯಾಗಿದ್ದು, 3.07 ಹೆಕ್ಟೇರ್ ಪ್ರದೇಶದಲ್ಲಿದೆ. ಈ ಕೆರೆ ಪ್ರದೇಶ ವಸತಿ ಬಡಾವಣೆಯ ಭಾಗವಾಗಿದೆ ಎಂದು ಸಿಡಿಪಿಯಲ್ಲಿ ನಮೂದಿಸಲಾಗಿದೆ. ಈ ಕೆರೆ ಅರಣ್ಯ ಇಲಾಖೆ ಮತ್ತು ಬಿ.ಡಿ.ಎ. ವಶದಲ್ಲಿದೆ.

  1. ಚೊಕ್ಕಸಂದ್ರ ಕೆರೆ

ದಾಸರಹಳ್ಳಿ ದಕ್ಷಿಣ ದಿಕ್ಕಿನಲ್ಲಿರುವ ಚೊಕ್ಕಸಂದ್ರ ಕೆರೆ 10.65 ಹೆಕ್ಟೇರ್ ಪ್ರದೇಶದಲ್ಲಿದ್ದು, 514 ಸಂಖ್ಯೆಯಲ್ಲಿ ನೋಂದಣಿಯಾಗಿದೆ. ಈ ಕೆರೆ ಪ್ರದೇಶವನ್ನು ಉದ್ಯಾನವನ ಮತ್ತು ತೆರೆದ ಪ್ರದೇಶ ಎಂದು ಸಿಡಿಪಿಯಲ್ಲಿ ನಮೂದಿಸಲಾಗಿದೆ. ಈ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಸಸಿಗಳನ್ನು ನೆಡಬೇಕು ಮತ್ತು ಜಲಮೂಲವನ್ನು ಉಳಿಸಿಕೊಳ್ಳಬೇಕು ಎಂದು ಸಮಿತಿ ಸಲಹೆ ನೀಡಿದೆ. ಅರಣ್ಯ ಇಲಾಖೆ ಈ ಕೆರೆಯ ಸುಪರ್ದಿ ಹೊಂದಿದೆ.

ಲಕ್ಷ್ಮಣರಾವ್ ವರದಿಯಲ್ಲಿನ ಜೀವಂತ ಕೆರೆಗಳಲ್ಲಿ ಬಳ್ಳಾರಿ ರಸ್ತೆ ಮತ್ತು ಹಳೇ ಮದ್ರಾಸ್ ರಸ್ತೆ ಭಾಗ ಹಾಗೂ ಹಳೇ ಮದ್ರಾಸ್ ರಸ್ತೆ ಮತ್ತು ಹೊಸೂರು ರಸ್ತೆ ಮಧ್ಯಭಾಗದಲ್ಲಿರುವ ಹಾಗೂ ಅರಣ್ಯ ಇಲಾಖೆ ವ್ಯಾಪ್ತಿಯ ಕೆರೆಗಳ ಮಾಹಿತಿ, ಹೊಸೂರು ರಸ್ತೆ ಮತ್ತು ಮೈಸೂರು ರಸ್ತೆ ನಡುವಿನ ಕೆರೆಗಳ ವಿವರ, ಹಾಗೂ ಮೈಸೂರು ರಸ್ತೆ ಮತ್ತು ತುಮಕೂರು ರಸ್ತೆ ನಡುವಿನ ಕೆರೆಗಳ ವಿವರ ನೀಡಲಾಯಿತು. ಮುಂದಿನ ನೋಟದಲ್ಲಿ ತುಮಕೂರು ರಸ್ತೆ ಮತ್ತು ಬಳ್ಳಾರಿ ರಸ್ತೆ ನಡುವಿನ ಕೆರೆಗಳ ಚಿತ್ರಣ ಆರಂಭವಾಗಲಿದೆ.

(ಮುಂದುವರಿಯಲಿದೆ)

ಚಿತ್ರ-ಲೇಖನ: ಕೆರೆ ಮಂಜುನಾಥ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*