ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆನೋಟ-74 ಆಗ ಹೀಗಿದ್ದವು… ಜೀವಂತ ಕೆರೆಗಳು! -12

ಲಕ್ಷ್ಮಣರಾವ್ ಅವರು ನೀಡಿದ ವರದಿಯಲ್ಲಿ ಬೆಂಗಳೂರಿನ ಜೀವಂತ ಕೆರೆಗಳು ಹೇಗಿದ್ದವು ಎಂದು ಹೇಳಲಾಗಿದೆ. ಇದೀಗ ಜೀವಂತ ಕೆರೆಗಳ ಪರಿಸ್ಥಿತಿಯ ಹೇಗಿತ್ತು, ಅದನ್ನು ಏನು ಮಾಡಬಹುದು ಎಂಬ ಶಿಫಾರಸುಗಳನ್ನೂ ನೀಡಲಾಗಿದೆ. ಅಂತಹ 81 ಕೆರೆಗಳ ಪಟ್ಟಿಯ ವಿವರಣೆ ಹೀಗೆ ಸಾಗುತ್ತದೆ….

ಮೈಸೂರು ರಸ್ತೆ ಮತ್ತು ತುಮಕೂರು ರಸ್ತೆ ನಡುವಿನ ಕೆರೆಗಳು

  1. ಕುರುಬರಹಳ್ಳಿ ಕೆರೆ, ಕೆಂಗೇರಿ

ಕೆಂಗೇರಿ ನಗರದ ಈಶಾನ್ಯ ಭಾಗದಲ್ಲಿರುವ ಮೈಸೂರು ರಸ್ತೆಗೆ ಹೊಂದಿಕೊಂಡಂತಿರುವ ಕುರುಬರಹಳ್ಳಿ ಕೆರೆ 7.23 ಹೆಕ್ಟೇರ್ ವಿಸ್ತೀರ್ಣದಲ್ಲಿದ್ದು, 675 ಸಂಖ್ಯೆಯಲ್ಲಿ ನೋಂದ0kikkeri3ಣಿಯಾಗಿದೆ. ಈ ಕೆರೆಯಲ್ಲಿರುವ ನೀರು ಸಂಪೂರ್ಣವಾಗಿ ಜಲಕಳೆಯಿಂದ ತುಂಬಿಹೋಗಿದೆ ಇದನ್ನು ತೆರವುಗೊಳಿಸಬೇಕು. ಸಿಡಿಪಿಯಲ್ಲಿ ಈ ಕೆರೆಯನ್ನು ಉದ್ಯಾನವನ ಮತ್ತು ತೆರೆದ ಪ್ರದೇಶ ಎಂದು ನಮೂದಿಸಲಾಗಿದೆ. ಈಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಸಸಿಗಳನ್ನು ನೆಡಬೇಕು. ಜಲಮೂಲವನ್ನು ಸಂರಕ್ಷಿಸಿಕೊಳ್ಳಬೇಕು. ಈ ಕೆರೆಗೆ ಹರಿಯುತ್ತಿರುವ ಒಳಚರಂಡಿ ನೀರನ್ನು ಬಿಡಬ್ಲ್ಯುಎಸ್.ಎಸ್.ಬಿ ತಡೆಯಬೇಕು. ಜಲಕಳೆಯನ್ನು ಆಗಾಗ್ಗೆ ತೆರವುಗೊಳಿಸಬೇಕು ಎಂದು ಸಮಿತಿ ಸಲಹೆ ನೀಡಿದೆ. ಈ ಕೆರೆ ಅರಣ್ಯ ಇಲಾಖೆ ಮತ್ತು ಬಿಡಬ್ಲ್ಯುಎಸ್.ಎಸ್.ಬಿ ಸುರ್ಪದಿಯಲ್ಲಿದೆ.

  1. ಕೆಳಗಿನ ಕೆರೆ, ವಲಗೇರಹಳ್ಳಿ

ಕೆಂಗೇರಿ ಉಪನಗರದ ಒಳಭಾಗದಲ್ಲಿರುವ ವಲಗೇರಹಳ್ಳಿ ಕೆಳಗಿನ ಕೆರೆ 10.81 ಹೆಕ್ಟೇರ್ ಪ್ರದೇಶದಲ್ಲಿದ್ದು, 674 ಸಂಖ್ಯೆಯಲ್ಲಿ ನೋಂದಣಿಯಾಗಿದೆ. ಸಿಡಿಪಿಯಲ್ಲಿ ಈ ಕೆರೆಯನ್ನು ಉದ್ಯಾನವನ ಮತ್ತು ತೆರೆದ ಪ್ರದೇಶ ಎಂದು ನಮೂದಿಸಲಾಗಿದೆ. ಈ ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಸಸಿಗಳನ್ನು ನೆಡೆಬೇಕು. ಜಲಮೂಲವನ್ನು ನಿರ್ವಹಿಸಿಕೊಳ್ಳಬೇಕು. ಈ ಕೆರೆ ಅರಣ್ಯ ಇಲಾಖೆ ಮತ್ತು ಬಿಡಬ್ಲ್ಯುಎಸ್.ಎಸ್.ಬಿ ಸುರ್ಪದಿಯಲ್ಲಿದೆ.

  1. ನಾಗರಬಾವಿ ಪಶ್ಚಿಮ ಭಾಗದ ಕೆರೆ

ಬೆಂಗಳೂರು ವಿಶ್ವವಿದ್ಯಾಲಯದ ಸಮೀಪ ಇರುವ ನಾಗರಬಾವಿ ಪಶ್ಚಿಮ ಭಾಗದ ಕೆರೆ 673 ಸಂಖ್ಯೆಯಲ್ಲಿ ನೋಂದಣಿಯಾಗಿದ್ದು, 3.55 ಹೆಕ್ಟೇರ್ ಪ್ರದೇಶದಲ್ಲಿದೆ. ಈ ಕೆರೆಯಲ್ಲಿರುವ ಜಲಮೂಲವನ್ನು ಅಭಿವೃದ್ಧಿಗೆ ಮತ್ತು ಪ್ರವಾಸಿ ತಾಣವನ್ನಾಗಿಸಲು ಕೆ.ಎಸ್.ಟಿ.ಡಿ.ಸಿ. ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಈ ಕೆರೆ ಅರಣ್ಯ ಇಲಾಖೆ ಮತ್ತು ಕೆ.ಎಸ್.ಟಿ.ಡಿ.ಸಿ. ಸುರ್ಪದಿಯಲ್ಲಿದೆ.

  1. ಬೋವಿ ಬಸಪ್ಪನಕೆರೆ, ಮಲ್ಲತಹಳ್ಳಿ

ಬೆಂಗಳೂರು ವಿಶ್ವವಿದ್ಯಾಲಯ ಆವರಣದ ಪಶ್ಚಿಮ ಭಾಗದಲ್ಲಿರುವ ಮತ್ತು ಮಲ್ಲತ್ತಹಳ್ಳಿ ಸಮೀಪವಿರುವ ಬೋವಿ ಬಸಪ್ಪನಕೆರೆ 27.10 ಹೆಕ್ಟೇರ್ ಪ್ರದೇಶದಲ್ಲಿದ್ದು, 673 ಸಂಖ್ಯೆಯಲ್ಲೇ ನೋಂದಣಿಯಾಗಿದೆ. ಉದ್ಯಾನವನ ಮತ್ತು ತೆರೆದ ಪ್ರದೇಶಎಂದು ಸಿಡಿಪಿಯಲ್ಲಿ ನಮೂದಿಸಲಾಗಿದ್ದು, ಜಲಮೂಲವನನ್ನು ಉಳಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ. ಈ ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಸಸಿಗಳನ್ನು ನೆಡಬೇಕು. ಜಲಮೂಲವನ್ನು ಉಳಿಸಿಕೊಳ್ಳಬೇಕು. ಕೆ.ಎಸ್.ಟಿ.ಡಿ.ಸಿ.ಯಿಂದ ಪ್ರವಾಸೊದ್ಯಮ ಸೌಲಭ್ಯ ಕಲ್ಪಿಸಬೇಕು ಎಂದು ಸಮಿತಿ ಸಲಹೆ ನೀಡಿದೆ. ಈ ಕೆರೆ ಅರಣ್ಯ ಇಲಾಖೆ ಮತ್ತು ಕೆ.ಎಸ್.ಟಿ.ಡಿ.ಸಿ. ಸುರ್ಪದಿಯಲ್ಲಿದೆ.

  1. ಶ್ರೀಗಂಧಕಾವಲ್ ಕೆರೆ

ಮಾಗಡಿ ರಸ್ತೆಯ ದಕ್ಷಿಣ ಭಾಗದಲ್ಲಿರುವ ಶ್ರೀಗಂಧಕಾವಲ್ ಕೆರೆ ಒಂದು ಹೆಕ್ಟೇರ್ ಗೂ ಕಡಿಮೆ ಪ್ರದೇಶದಲ್ಲಿದ್ದು, 672(ಎ)ಸಂಖ್ಯೆಯಲ್ಲಿ ನೋಂದಣಿಯಾಗಿದೆ. ಈ ಕೆರೆ ಪ್ರದೇಶವನ್ನು ಸಿಡಿಪಿ ಉದ್ಯಾನವನ ಮತ್ತು ತೆರೆದ ಪ್ರದೇಶ ಎಂದು ನಮೂದಿಸಿದೆ. ಈ ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಸಸಿಗಳನ್ನು ನೆಡಬೇಕು. ಈ ಕೆರೆ ಅರಣ್ಯ ಇಲಾಖೆ ವಶದಲ್ಲಿದೆ.

ಲಕ್ಷ್ಮಣರಾವ್ ವರದಿಯಲ್ಲಿನ ಜೀವಂತ ಕೆರೆಗಳಲ್ಲಿ ಬಳ್ಳಾರಿ ರಸ್ತೆ ಮತ್ತು ಹಳೇಮದ್ರಾಸ್ ರಸ್ತೆ ಭಾಗ ಹಾಗೂ ಹಳೇ ಮದ್ರಾಸ್ ರಸ್ತೆ ಮತ್ತು ಹೊಸೂರು ರಸ್ತೆ ಮಧ್ಯಭಾಗದಲ್ಲಿರುವ ಹಾಗೂ ಅರಣ್ಯ ಇಲಾಖೆ ವ್ಯಾಪ್ತಿಯ ಕೆರೆಗಳ ಮಾಹಿತಿ, ಹೊಸೂರು ರಸ್ತೆ ಮತ್ತು ಮೈಸೂರು ರಸ್ತೆ ನಡುವಿನ ಕೆರೆಗಳ ವಿವರವನ್ನು ನೀಡಲಾಯಿತು. ಈಗ ಮೈಸೂರು ರಸ್ತೆ ಮತ್ತು ತುಮಕೂರು ರಸ್ತೆ ನಡುವಿನ ಕೆರೆಗಳ ವಿವರ ನೀಡಲಾಗುತ್ತಿದೆ. ಮುಂದಿನ ನೋಟದಲ್ಲಿ ಇನ್ನಷ್ಟು ಕೆರೆಗಳ ಮಾಹಿತಿ ನೀಡಲಾಗುತ್ತದೆ.

(ಮುಂದುವರಿಯಲಿದೆ)

ಚಿತ್ರ-ಲೇಖನ: ಕೆರೆ ಮಂಜುನಾಥ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*