ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ನೀರ ಮರು ಬಳಕೆಗೆ ಮತ್ತೊಂದು ತಾಂತ್ರಿಕತೆ.

ಎಲ್ಲರ ಬಾಯಲ್ಲೂ ಒಂದೇ ಮಾತು. ನಿಮ್ಮ ತರಕಾರಿ ನೀವೇ ಬೆಳೆದುಕೊಳ್ಳಿ ತಾರಸಿಯಲ್ಲಿ ಬೀಳುವ ಬಿಸಿಲನ್ನು ಬಳಸಿ ಕೊಳ್ಳಿ. ನಿಮ್ಮ ಊಟಕ್ಕೆ ನಿಮ್ಮದೇ ತೋಟದ ತರಕಾರಿ. ಕೇಳಲು ಕಿವಿಗೆ ಇಂಪಾದ ಮಾತುಗಳು. ಈ ಮಾತುಗಳಿಂದ ಪ್ರಭಾವಿತರಾಗಿ ತೋಟ ಕಟ್ಟಲು ಮೊದಲಿಟ್ಟವರು ಬಹಳಷ್ಟು ಮಂದಿ. ಪುಸ್ತಕದ ಬದನೆಕಾಯಿ ಬೆಳೆಯಲು ಹೋದಾಗ , ಬೆಳೆಯುತ್ತಿರುವ ಗಿಡಕ್ಕೆ ಬೇಕಾದ ನೀರು, ನೀರಿಲ್ಲದಾಗ ಅದರ ನಿರ್ವಹಣೆ, ಆರೈಕೆಗೆ ಬೇಕಾದ ಗೊಬ್ಬರ ,ಶತೃಗಳಿಂದ ಅದರ ರಕ್ಷಣೆ , ಒಂದೇ ಎರಡೇ, ಸಮಸ್ಯೆಗಳ ಸರಮಾಲೆ.

IMG-20170707-WA0001ತೋಟ ಮಾಡುವ ಆಸೆ ಹೊತ್ತ ಎಲ್ಲರೂ ಎದುರಿಸುವ ಸಮಸ್ಯೆಗಳು ಇವು. ಮೊದಲ ಸಮಸ್ಯೆ ನೀರಿನದೇ. ಕಷ್ಟ ಪಟ್ಟು ನೀರು ಹಾಕಿದರೆ, ಹೆಚ್ಚಾದ ನೀರು ಹೊರಗೆ ಬರುತ್ತೆ. ಅ ನೀರನ್ನು ಮರು ಬಳಕೆ ಮಾಡುವದು ಹೇಗೆ? ನೀರಿನ ಮಿತವ್ಯಯ ಮಾಡುವುದು ಹೇಗೆ? ಅವರವರ ಅನುಕೂಲ ವಿದ್ದ ಹಾಗೆ ಉತ್ತರಗಳು. ಕುಂಡದ ಕೆಳಗೆ ತಟ್ಟೆ ಇಟ್ಟು ನೀರು ಸಂಗ್ರಹಿಸಿ. ಮಣ್ಣಿನ ಹದ ನೋಡಿ ನೀರು ಹಾಕಿ. ಗಿಡಗಳ ಸುತ್ತ ಮುಚ್ಚಿಗೆ ಮಾಡಿದರೆ ಬಹಳ ಸಮಯ ತೇವಾಂಶ ಕಾಪಾಡಿಕೊಳ್ಳ ಬಹುದು.ಇಲ್ಲೂ ಒಂದು ತೊಂದರೆ . ಮುಚ್ಚಿಗೆ ಮಾಡಿದ ಸ್ಥಳದಲ್ಲಿ ಇರುವ ತೇವಾಂಶ ಇರುವೆಗಳ ಸಂತಾನಾಭಿವೃದ್ದಿಗೆ ಹೇಳಿ ಮಾಡಿಸಿದ ಜಾಗ. ಸಲಹೆಗಳ ಮಹಾಪೂರ.

ಅನುಕೂಲವಿದ್ದವರು ‘ಹನಿ ನೀರಾವರಿ’ ಅಳವಡಿಸಿ ಕೊಳ್ಳ ಬಹುದು.ಇಲ್ಲೂ ಹೆಚ್ಚಾದ ನೀರು ಹೊರ ಬರುತ್ತೆ. ತಾರಸಿಯ ತುಂಬ ಗಿಡಗಳಿದ್ದಾಗ ಈ ನೀರಿನ ಪ್ರಮಾಣವೂ ಹೆಚ್ಚು. ನೀರೆಲ್ಲವೂ ಪಿವಿಸಿ ಪೈಪಿನ ಮೂಲಕ ಒಂದು ಜಾಗದಲ್ಲಿ ಬರುವಂತೆ ಮಾಡಿ ಅದನ್ನು ಸಂಗ್ರಹಿಸಿ ಮರು ಬಳಕೆ ಮಾಡ ಬಹುದು. ಹೊರ ಬರುವ ಈ ನೀರು ಮಣ್ಣು ಹಾಗೂ ಗೊಬ್ಬರ ಮಿಶ್ರಿತ. ನೇರವಾಗಿ ಯಾವ ಕೆಲಸಕ್ಕೂ ಬಳಸುವಂತಿಲ್ಲ. ಇದನ್ನು ಪುನಹ ಪಂಪ್ ಮಾಡುವದೂ ಸಾಧ್ಯವಿಲ್ಲ. ಕೆಳಗೇ ಇರುವ ಗಿಡಗಳಿಗೆ ಬಳಸ ಬಹುದು. ಕುಂಡಗಳ ಕೆಳಗೆ ಪ್ಲಾಸ್ಟಿಕ್ ತಟ್ಟೆ ಅಥವ ಟ್ರೇ ಬಳಸಿ ನೀರು ಪೋಲಾಗುವುದನ್ನು ತಪ್ಪಿಸ ಬಹುದು. ಇದರಿಂದ ನಾಲ್ಕಾರು ದಿನ ಗಿಡಗಳಿಗೆ ನೀರುಣಿಸುವ ಕೆಲಸ ವಿರುವುದಿಲ್ಲ. ಬೆಂಗಳೂರಿನಲ್ಲಿ ಈ ಬಗ್ಗೆ ಕೆಲವು ನಿದರ್ಶನಗಳು ದೊರೆಯುತ್ತವೆ.

ಮೈಸೂರಿನ ಹೊಸ ಬಡಾವಣೆ ವಿಜಯನಗರದ ನಿವಾಸಿಗಳಾದ ‘ದಿಲೀಪ್- ಸಲೀನ’ ಅವರ ಮನಸ್ಸುಗಳೂ ಹೀಗೇ ತುಡಿಯುತ್ತಿತ್ತು. ದಿಲೀಪ್ ಮೊದಲಿಗೆ ಓದಿದ್ದು ‘ಮೆಕ್ಯಾನಿಕಲ್ ಇಂಜಿನಿಯರಿಂಗ್’. ಚಾಮುಂಡೇಶ್ವರಿ ಟೆಕ್ಸ್ ಟೈಲ್ಸ್’ ನಲ್ಲಿ ಇಂಜಿನಿಯರ್ ಆಗಿದ್ದವರು. ತಮ್ಮ ಓದಿನ ತರಹ ಕೆಲಸವೂ ಯಾಂತ್ರಿಕಎನಿಸ ತೊಡಗಿದಾಗ ಅದರಿಂದ ದೂರ ಸರಿದರು.

IMG-20170707-WA0007ದಿಲೀಪ್ ತಂದೆ ‘ಮರದ ಗೃಹೋಪಕರಣ ಮಾಡುವುದರಲ್ಲಿ ಸಿದ್ಧ ಹಸ್ತರು. ಚಿಕ್ಕ ವಯಸ್ಸಿನಿಂದಲೂ ನೋಡುತ್ತಲೇ ಬೆಳೆದ ದಿಲೀಪ್ ಗೆ ಅದನ್ನು ರೂಢಿಸಿಕೊಳ್ಳುವುದು ಕಷ್ಟವಾಗಲಿಲ್ಲ. ತಮ್ಮ ಮೂರಂತಸ್ತಿನ ಮನೆಯ ಕೆಳ ಭಾಗವನ್ನು ‘ಫರ್ನಿಚರ್ ‘ ಅಂಗಡಿಗೆ ಬಾಡಿಗೆಗೆ ನೀಡಿ ಮೊದಲ ಮಹಡಿಯಲ್ಲಿ ತಮ್ಮ ಕೆಲಸ ಶುರು ಮಾಡಿದರು. ಎರಡನೇ ಮಹಡಿಯಲ್ಲಿ ಮನೆ. ಮೇಲಿನ ತಾರಸಿಯಲ್ಲಿನ ಧಾರಾಳ ಬಿಸಿಲು, ಮನ ಸೆಳೆಯಲಾರಂಭಿಸಿತು. ಆ ವೇಳೆಗಾಗಲೇ ಮೈಸೂರಿನಲ್ಲಿ ಸಾವಯವ ಕೃಷಿ, ಸಾವಯವ ಉತ್ಪನ್ನಗಳ ಮಾರಾಟ ಜೋರಾಗಿಯೇ ಇತ್ತು. ದ್ವಂದ್ವ ಕಳೆದು ಗುರಿ ಸ್ಪಷ್ಟವಾಯಿತು.

ಹೀಗೆ ಶುರುವಾಯಿತು ಸೆಲೀನಾ- ದಿಲೀಪರ ಕನಸಿನ ತೋಟ. ತಾವು ಕಲಿತ ತಾಂತ್ರಿಕತೆ ಬಳಸಿ ತೋಟ ಶುರು ಮಾಡಿದರು. ತಾರಸಿಯ ಬಿಸಿಲು ಬರುವ ಸ್ಥಳ ದಲ್ಲಿ ನಾಲ್ಕು ಸಾಲು ಆಂಗಲ್ ಐರನ್ ಬಳಸಿ ಸ್ಟಾಂಡ್ ಮಾಡಿದರು. ಅದರ ಮೇಲೆ ಸಮವಾಗಿ ಕತ್ತರಿಸಿದ ಪ್ಲಾಸ್ಟಿಕ್ ಡ್ರಮ್ ಗಳ ನ್ನು ಜೋಡಿಸಿದರು. ಎತ್ತರವಿದ್ದರೂ ಅಗಲ ಸಾಲದೆನ್ನಿಸಿತು. ಮುಂದಿನ ಸಾಲಿನಲ್ಲಿನ ಡ್ರಂ ಗಳ ಮೇಲ್ಭಾಗ ಕತ್ತರಿಸಿ ಅಡ್ಡವಾಗಿ ಇಟ್ಟರು. ಕಾಯರ್ ಪೀಟ್ ಮತ್ತು ಕಾಂಪೋಸ್ಟ್ ತುಂಬಿದ ಮಿಶ್ರಣ IMG-20170707-WA0002ತುಂಬಿಸಿ ಸಿದ್ದ ಪಡಿಸಿದ ಸಸಿಗಳನ್ನು ನೆಟ್ಟರು. ಇಷ್ಟೊಂದು ಗಿಡಗಳಿಗೆ ನೀರು ಹೊಂದಿಸುವುದು ಹೇಗೆ? ಬೇಸಿಗೆಯಾದ್ದರಿಂದ ನೀರಿಗೆ ತೊಂದರೆಯೂ ಇತ್ತು. ಹನಿನೀರಾವರಿ ಅಳವಡಿಸುವ ಯೋಚನೆ ಸರಿ ಎನಿಸಿತ್ತು. ಇದನ್ನು ಮಾಡುವ ಮೊದಲೇ ಸ್ಟಾಂಡಿನ ಮೇಲೆ ಒಂದು ಪೈಪ್ ಜೋಡಿಸಿದರು. ಪ್ರತಿ ಡ್ರಂ ನ ಒಂದು ಪಕ್ಕದಲ್ಲಿ ಕೆಳಭಾಗದಲ್ಲಿ ಒಂದು ಸಣ್ಣ ನಲ್ಲಿಯನ್ನು ಜೋಡಿಸಿದರು. ನಲ್ಲಿಯ ಬಾಯಿ ಕೆಳಗಿನ ಪೈಪಿನ ಒಳಗೆ ಹೋಗುವಂತೆ ಹೊಂದಿಸಿದರು. ಹೆಚ್ಚುವರಿ ನೀರು ಈ ಪೈಪಿನ ಮುಖಾಂತರ ಹರಿದು ಒಂದು ಡ್ರಂನಲ್ಲಿ ತುಂಬುವಂತೆ ಮಾಡಿದರು. ಈ ನೀರು ಕಾಯರ್ ಪೀಟ್ ಮತ್ತು ಕಾಂಪೋಸ್ಟ್ ಮುಖಾಂತರ ಹರಿದು ಬರುವುದರಿಂದ ಒಳ್ಳೆಯದೇ ಆಯಿತು. ಹೆಚ್ಚು ಕಡಿಮೆ ಈ ನೀರು ‘ವರ್ಮಿ ವಾಶ್’ ನಂತೆಯೇ ಕಾರ್ಯ ನಿರ್ವಹಿಸಲುಯೋಗ್ಯವಾಗಿತ್ತು.

ತಡ ಮಾಡದೇ ಇದಕ್ಕೊಂದು ಪಂಪ್ ಅಳವಡಿಸಿದರು. ಜೊತೆಗೊಂದು ಶೋಧಕ. ಇದರ ಮುಖಾಂತರ ಹರಿಯುವ ನೀರಿನಲ್ಲಿರ ಬಹುದಾದ ಕಲ್ಮಶ ಗಳನ್ನು ತಡೆಯ ಬಹುದು. ಸಣ್ಣ ಶೋಧಕವಾದ್ದರಿಂದ ಕೈಯಿಂದಲೇ ಸ್ವಚ್ಛ ಗೊಳಿಸ ಬಹುದು. ಡ್ರಂ ನಲ್ಲಿ ಸಂಗ್ರಹಿಸಿದ ನೀರಿಗೆ ಬೇರೆ ನೀರು ಸೇರಿಸಿ ಹನಿ ನೀರಾವರಿ ಪೈಪಿನ ಮುಖಾಂತರ ಗಿಡಗಳಿಗೆ ಪುನಹ ಉಣಿಸ ಬಹುದು. ಪಟ್ಟ ಶ್ರಮಕ್ಕೆ ಸೊಂಪಾಗಿ ಬೆಳೆದ ಬಳ್ಳಿಗಳು ಉತ್ತರ ನೀಡಿದವು. ಕಾಯಿ ತುಂಬಿಕೊಂಡು ತೊನೆದಾಡಿದಾಗ ಇವರ ಸಂತೋಷಕ್ಕೆ ಪಾರವೇ ಇರಲಿಲ್ಲ. ತಾಜಾ ಟೊಮೆಟೊಗಳು, ಮೆಣಸಿನ ಕಾಯಿ, ಘಮಘಮಿಸುವ ಸೊಪ್ಪುಗಳು ಗೊಬ್ಬರದ ನೀರುಂಡು ರುಚಿ ಹೆಚ್ಚಿಸಿಕೊಂಡಿದ್ದವು.

ನೀರಿನ ಬಗೆಗಿನ ಇವರ ಕಾಳಜಿ, ನಿರ್ವಹಣೆಯ ರೀತಿ, ಹನಿ ನೀರು ಪೋಲಾಗದಂತೆ ನೋಡಿಕೊಳ್ಳುವ ಕೌಶಲ ಬಹು ಬೇಗ ಮನೆ ಮಾತಾಗಿದೆ. ಇವರ ತೋಟ ನೋಡಲು ಬರುವವರಿಗೆ ವಿಸ್ತಾರವಾಗಿ ವಿಷಯ ತಿಳಿಸುವ ಪರಿ ಎಂತಹವರನ್ನಾದರೂ ತೋಟ ಕಟ್ಟಲು ಪ್ರೇರೇಪಿಸೀತು. ನೀರಿನ ಮಿತ ಹಾಗೂ ಮರು ಬಳಕೆ ಒಂದು ಮಾದರಿ.

ಲೇಖನ: ಅನುಸೂಯ ಶರ್ಮ.
ಚಿತ್ರಗಳು: ದಿಲೀಪ್ ಸೆಲೀನ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*