ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕರ್ನಾಟಕದ ಉತ್ತರ ಕನ್ನಡದ ಕರಾವಳಿ ಪ್ರದೇಶಗಳಲ್ಲಿ ಮಣ್ಣು ಗಣಿಗಾರಿಕೆಯನ್ನು ನಿರ್ಮೂಲನ ಮಾಡುವ/ತಡೆಯುವುದಕ್ಕೆ ಕುರಿತಾದ ಕಾನೂನಾತ್ಮಕ ಕ್ರಮಗಳನ್ನು ತಿಳಿದುಕೊಳ್ಳುವುದು

ನದಿ ಪಾತ್ರಗಳು, ದಡಗಳು, ಮೀನು ಹಾಗೂ ನದಿಯ ಸುತ್ತಮುತ್ತಲೂ ಇರುವ ಇತರ ಎಲ್ಲ ಜೀವಿಗಳೂ ಅಲ್ಲಿ ವಾಸಿಸುವ ಸಾಂಪ್ರದಾಯಿಕ ಸಮುದಾಯಗಳ ಜೀವನೋಪಾಯಗಳ ಪ್ರಮುಖ ಮೂಲವಾಗಿದೆ.  ಈ ನದಿ ಪಾತ್ರಗಳಲ್ಲಿರುವ ಮರಳನ್ನು ಗೃಹ ಹಾಗೂ ವಾಣಿಜ್ಯ ಬಳಕೆಗಳೆರಡಕ್ಕೂ ಹೊರತೆಗೆಯಲಾಗುತ್ತದೆ.  ಆದರೆ, ಅತೀ ಹೆಚ್ಚು ಪ್ರಮಾಣದಲ್ಲಿ ನದಿಗಳು, ತೊರೆಗಳು, ನದೀಮುಖಜ ಭೂಮಿ, ಹಾಗೂ ಸಮುದ್ರ ದಡಗಳಿಂದ ಮರಳು, ಬಂಡೆಗಳು ಹಾಗೂ ಕಲ್ಲುಗಳನ್ನು ತೆಗೆದಾಗ, ನದಿಪಾತ್ರಗಳನ್ನು ನಾಶಮಾಡಿ, ಆ ಪ್ರದೇಶದಲ್ಲಿ ಹಿಡಿಯುವ ಮೀನು ಹಾಗೂ ಮೃದ್ವಂಗಿ ಸಂಗ್ರಹದ ಮೇಲೂ ಪ್ರಭಾವ ಬೀರುತ್ತದೆ.  ನದಿ ಪಾತ್ರದ ಸವಕಳಿ, ಹರಿವಿನ ರೂಪರೇಷೆಯಲ್ಲಿ ಬದಲಾವಣೆಗಳು, ಅಕ್ಕಪಕ್ಕದ ನೀರಿನ ಆಗರಗಳಿಗೆ ಉಪ್ಪು ನೀರಿನ ನುಗ್ಗುವಿಕೆಯನ್ನು ಇದು ಉಂಟು ಮಾಡಬಹುದು.  ಅಲ್ಲದೆ, ಕರಾವಳಿ ಪ್ರದೇಶಗಳಲ್ಲಿ, ಇದರಿಂದ ಪೂರ್ಣ ಉಬ್ಬರದ ಸಮಯದಲ್ಲಿ ಭೂಸವಕಳಿ ಹಾಗೂ ಸಮುದ್ರದ ನೀರು ಒಳನುಗ್ಗುವ ಸಾಧ್ಯತೆಗಳಿರುತ್ತವೆ.

ಮರಳು ಗಣಿಗಾರಿಕೆಯು (ನದಿ ಪಾತ್ರಗಳು ಹಾಗೂ ಕಡಲತೀರಗಳಿಂದ ಮರಳು, ಬಂಡೆಗಳು ಹಾಗೂ ಕಲ್ಲುಗಳನ್ನು ತೆಗೆಯುವುದು) ವಿವಿಧ ರಾಷ್ಟ್ರೀಯ ಹಾಗೂ ರಾಜ್ಯ ಕಾನೂನುಗಳ ಮೂಲಕ ನಿಯಂತ್ರಣಕ್ಕೆ ಒಳಪಡುವ ಚಟುವಟಿಕೆಯಾಗಿದೆ.  ಕಾನೂನಾತ್ಮಕವಾಗಿ, ಅನುಮತಿಗಳನ್ನು ಪಡೆದು ಹಾಗೂ ಕಡ್ಡಾಯಾವಾದ ರಕ್ಷಣೆಗಳೊಂದಿಗೆ ಮಾತ್ರ ಇದನ್ನು ಕೈಗೊಳ್ಳಬಹುದು.  ನಿಮಗೆ ಅಥವಾ ನಿಮಗೆ ತಿಳಿದವರು ಯಾರಾದರೂ ಈ ಚಟುವಟಿಕೆಯ ಪ್ರಭಾವಕ್ಕೆ ಒಳಗಾಗಿದ್ದಲ್ಲಿ, ಕೆಳಕಂಡ ಮಾಹಿತಿಯು ನದಿ ಪಾತ್ರ ಹಾಗೂ ಕರಾವಳಿ ಮರಳು ಗಣಿಗಾರಿಕೆಯನ್ನು ನಿಯಂತ್ರಿಸುವ ಕಾನೂನುಗಳನ್ನು ತಿಳಿದುಕೊಳ್ಳಲು ಹಾಗೂ ಅದಕ್ಕಾಗಿ ಸಂಪರ್ಕಿಸಬೇಕಾದ ಸರ್ಕಾರಿ ಸಂಸ್ಥೆಗಳು ಯಾವುದೆಂಬುದರ ಸ್ಪಷ್ಟನೆಯನ್ನು ನೀಡುತ್ತದೆ.

 ಸಂಬಂಧಪಟ್ಟ ಅಧಿಕಾರಿಗಳಿಂದ ನಿಯಂತ್ರಕ ಪ್ರತಿಕ್ರಿಯೆಯನ್ನು ಪಡೆಯುವ ಅಥವಾ ಯಾವುದೇ ಪರಿಹಾರವನ್ನು ಅನುಸರಿಸುವ ಮುನ್ನ ಮರಳು ಗಣಿಗಾರಿಕೆಯ ಕಾನೂನಾತ್ಮಕ ಸ್ಥಾನಮಾನವನ್ನು ತಿಳಿದುಕೊಳ್ಳಲು ಅನೇಕ ಹಂತಗಳ ಅಗತ್ಯ ಒದಗಬಹುದು.  ಇವುಗಳನ್ನು ಮೂರು ವಿಭಾಗಗಳಲ್ಲಿ ವಿವರಿಸಲಾಗಿದೆ:

 

ವಿಭಾಗ ೧: ಸ್ಥಾನ ಹಾಗೂ ಗುತ್ತಿಗೆ ಪ್ರದೇಶವನ್ನು ಗುರುತಿಸುವಿಕೆಯನ್ನು ಒಳಗೊಂಡ ಆದರೆ ಸೀಮಿತವಾಗದ ಹಿನ್ನಲೆ ಮಾಹಿತಿಯ ಸಂಗ್ರಹಣೆ ಹಾಗೂ, ಗಣಿಗಾರಿಕೆ ಕಾಮಗಾರಿಗಳಿಗಾಗಿ ಪರವಾನಗಿ ಪತ್ರಗಳನ್ನು ಪಡೆದುಕೊಳ್ಳುವುದು.  ವಿಭಾಗ ೨: ದೂರಿಗೆ ಆಧಾರವಾಗಬಲ್ಲ ಕಾನೂನಿನ ಕೊಕ್ಕೆಗಳನ್ನು/ಒಳಸುಳಿವುಗಳನ್ನು ತಿಳಿದುಕೊಳ್ಳುವುದು ವಿಭಾಗ ೩: ದೂರನ್ನು ಸಲ್ಲಿಸಬೇಕಾದ ಸೂಕ್ತ ಸರ್ಕಾರಿ ಅಧಿಕಾರಿಯ ಗುರುತಿಸುವಿಕೆ.

ಅನುಮತಿ ಪಡೆಯಲಾಗಿದೆಯೇ ಅಥವಾ ಇಲ್ಲವೇ ಎಂದು ಖಾತರಿಪಡಿಸಿಕೊಳ್ಳಲು, ಗ್ರಾಮ ನಕ್ಷೆಯ ಆಧಾರದ ಮೇಲೆ ನಿರ್ದಿಷ್ಟ ತಾಣವನ್ನು ಉಲ್ಲೇಖಿಸುವುದರೊಂದಿಗೆ, ಈ ವಿಭಾಗದಲ್ಲಿ ತಿಳಿಸಲಾದ ದಾಖಲೆಗಳನ್ನು ಪಡೆದು, ಪರಿಶೀಲಿಸಬೇಕಾಗಿದೆ

  • ಇಸಿಯಲ್ಲಿ ಸ್ಥಳ, ಪರವಾನಗಿಯ ವಾಯಿದೆ/ಸಿಂಧುತ್ವ, ಮರಳು ಇರುವ ಪ್ರದೇಶದ ಅಗಲ ಹಾಗೂ ಉದ್ದದ ವಿವರಗಳನ್ನು ನೀಡುವ ಗ್ಲೋಬಲ್ ಪೊಸಿಶನಿಂಗ್ ಸಿಸ್ಟಮ್ / ಜಾಗತಿಕ ಸ್ಥಾನೀಕರಣ ವ್ಯವಸ್ಥೆ (ಜಿಪಿಎಸ್) (ಹೆಕ್ಟೇರುಗಳಲ್ಲಿ) ಅನುಮೋದಿತವಾದ ಪ್ರದೇಶವು ಲಭ್ಯವಿರುತ್ತದೆ. ಈ ಮಾಹಿತಿಯಿಂದ ಉಲ್ಲಂಘನೆಗಳು ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ನೆರವಾಗುತ್ತದೆ
  • ಮರಳು ಗಣಿಗಾರಿಕೆ ನಡೆಯುತ್ತಿರುವ ಸ್ಥಳದ ಚಿತ್ರಗಳು ಹಾಗೂ ವಿಡಿಯೋಗಳು, ಹಾಗೂ ಪತ್ರಿಕಾ ವರದಿಗಳು ಮುಖ್ಯವಾಗುತ್ತದೆ – ಏಕೆಂದರೆ ಅವುಗಳನ್ನು ಸಾಕ್ಷಿಯಾಗಿ ಬಳಸಬಹುದಾಗಿದೆ.

ಯಾವೆಲ್ಲ ಮಾಹಿತಿಯ ಅಗತ್ಯವಿದೆ?

Table 1-1 Table 1-2 Table 1-3

  • ಅನುಮತಿ ಪಡೆಯಲಾಗಿದೆಯೇ ಅಥವಾ ಇಲ್ಲವೇ ಎಂದು ಖಾತರಿಪಡಿಸಿಕೊಳ್ಳಲು, ಗ್ರಾಮ ನಕ್ಷೆಯ ಆಧಾರದ ಮೇಲೆ ನಿರ್ದಿಷ್ಟ ತಾಣವನ್ನು ಉಲ್ಲೇಖಿಸುವುದರೊಂದಿಗೆ, ಈ ವಿಭಾಗದಲ್ಲಿ ತಿಳಿಸಲಾದ ದಾಖಲೆಗಳನ್ನು ಪಡೆದು, ಪರಿಶೀಲಿಸಬೇಕಾಗಿದೆ
  • ಇಸಿಯಲ್ಲಿ ಸ್ಥಳ, ಪರವಾನಗಿಯ ವಾಯಿದೆ/ಸಿಂಧುತ್ವ, ಮರಳು ಇರುವ ಪ್ರದೇಶದ ಅಗಲ ಹಾಗೂ ಉದ್ದದ ವಿವರಗಳನ್ನು ನೀಡುವ ಗ್ಲೋಬಲ್ ಪೊಸಿಶನಿಂಗ್ ಸಿಸ್ಟಮ್ / ಜಾಗತಿಕ ಸ್ಥಾನೀಕರಣ ವ್ಯವಸ್ಥೆ (ಜಿಪಿಎಸ್) (ಹೆಕ್ಟೇರುಗಳಲ್ಲಿ) ಅನುಮೋದಿತವಾದ ಪ್ರದೇಶವು ಲಭ್ಯವಿರುತ್ತದೆ. ಈ ಮಾಹಿತಿಯಿಂದ ಉಲ್ಲಂಘನೆಗಳು ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ನೆರವಾಗುತ್ತದೆ
  • ಮರಳು ಗಣಿಗಾರಿಕೆ ನಡೆಯುತ್ತಿರುವ ಸ್ಥಳದ ಚಿತ್ರಗಳು ಹಾಗೂ ವಿಡಿಯೋಗಳು, ಹಾಗೂ ಪತ್ರಿಕಾ ವರದಿಗಳು ಮುಖ್ಯವಾಗುತ್ತದೆ – ಏಕೆಂದರೆ ಅವುಗಳನ್ನು ಸಾಕ್ಷಿಯಾಗಿ ಬಳಸಬಹುದಾಗಿದೆ.

ಲಭ್ಯವಿರುವ ಕಾನೂನು ಕ್ರಮಗಳು ಯಾವುದು?

ಮೇಲ್ಕಂಡ ವಿಭಾಗದಲ್ಲಿ ವಿವರಿಸಲಾದ ದಾಖಲೆಗಳು ಹಾಗೂ ಸಾಕ್ಷಿಗಳ ಸಂಗ್ರಹಣೆಯನ್ನು ಮಾಡಿದ ನಂತರ, ಎರಡು ಸಾಧ್ಯತೆಗಳಿವೆ.  ದೂರುಗಳಿಗೆ ಆಧಾರವಾಗುವ ಕಾನೂನು ಕ್ರಮಗಳನ್ನು ಪ್ರತಿಯೊಂದು ಸಂದರ್ಭಕ್ಕೂ ವಿವರಿಸಲಾಗಿದೆ:

ಸಂದರ್ಭ ಎ.  ಅನುಮತಿ ಅಥವಾ ಅನುಮೋದನೆ ತೆಗೆದುಕೊಳ್ಳದೆ ಇರುವ ಸಂದರ್ಭದಲ್ಲಿ

  1. ರಾಜ್ಯ ಪರಿಸರ ಪ್ರಭಾವ ಮಾಪನಾ ಪ್ರಾಧಿಕಾರ (ಎಸ್‌ಇಐಎಎ) ಅಥವಾ ಜಿಲ್ಲಾ ಮಟ್ಟದ ಪ್ರಭಾವ ಮಾಪನಾ ಪ್ರಾಧಿಕಾರದಿಂದ (ಡಿಇಐಎಎ), ಪರಿಸರ ಪ್ರಭಾವ ಮಾಪನಾ (ಇಐಎ) ಅಧಿಸೂಚನೆ, ೨೦೦೬ ಅಡಿಯಲ್ಲಿ ಅನುಮೋದನೆಯನ್ನು ಪಡೆಯದಿದ್ದಲ್ಲಿ,
  • ಇಐಎ ಅಧಿಸೂಚನೆ ೨೦೦೬ರ ವಿಭಾಗ ೨ರ ಅಡಿಯಲ್ಲಿ, ಈ ಶೆಡ್ಯೂಲ್‌ನಲ್ಲಿ ಪಟ್ಟಿ ಮಾಡಲಾದ ಯೋಜನೆಗಳು ಅಥವಾ ಚಟುವಟಿಕೆಗಳಿಗೆ ಮೊದಲೇ ಪಾರಿಸಾರಿಕ ಪರವಾನಗಿಯನ್ನು ಪಡೆದುಕೊಳ್ಳುವುದು ಕಡ್ಡಾಯವಾಗಿದೆ
  • ಶೆಡ್ಯೂಲ್‌ನ ವರ್ಗ ‘ಎ’ದಲ್ಲಿ ಬರುವ ವಿಷಯಗಳಿಗೆ, ಸಂಬಂಧಪಟ್ಟ ನಿಯಂತ್ರಣಾಧಿಕಾರಿಯು ಪರಿಸರ ಹಾಗೂ ಅರಣ್ಯಗಳು ಹಾಗೂ ಹವಾಮಾನ ಬದಲಾವಣೆಯ ಮಂತ್ರಾಲಯವಾಗಿದೆ (ಎಮ್‌ಒಇಎಫ಼್‌ಸಿಸಿ)
  • ಶೆಡ್ಯೂಲ್‌ನ ವರ್ಗ ‘ಬಿ೧’ರ ಅಡಿಯಲ್ಲಿ ಬರುವ ವಿಷಯಗಳಿಗೆ, ಶೆಡ್ಯೂಲ್‌ನ ೨(ಬಿ)ನಲ್ಲಿನ ಗಣಿಗಾರಿಕೆಗೆ ಸಂಬಂಧಿಸಿದಂತೆ ಎಸ್‌ಇಐಎಎದಿಂದ ‘ಬಿ’ದ ಅಡಿಯಲ್ಲಿ ವರ್ಷಕ್ಕೆ <೦.೧ ದಶಲಕ್ಷ ಟನ್‌ಗಿಂತ ಕಡಿಮೆ ಇರುವ ಖನಿಜ ಸಂಸ್ಕರಣವನ್ನು ವರ್ಗೀಕರಿಸಲಾಗಿದೆ
  • ೨೦೧೬ರಿಂದ, ವರ್ಗ ‘ಬಿ೨’ ಎಂಬ ಮೂರನೆಯ ವರ್ಗದ ವಿಭಾಗದ ಯೋಜನೆಗಳನ್ನು ನಿಯೋಜಿಸಲಾಗಿದೆ. ಕಿರು ಗಣಿಗಾರಿಕಾ ಯೋಜನೆಗಳಿಗೆ ಪಾರಿಸಾರಿಕ ಪರವಾನಗಿಗಳನ್ನು ನೀಡಲು ಡಿಇಐಎಎಅನ್ನು  ಸ್ಥಾಪಿಸಲಾಗಿದೆ.

 ಕರಾವಳಿ ನಿಯಂತ್ರಣಾ ವಲಯ ಅಧಿಸೂಚನೆ (ಸಿಆರ್‌ಜ಼ೆಡ್), ೨೦೧೧ರ ಪ್ರಕಾರ ಅನುಮತಿಯನ್ನು ತೆಗೆದುಕೊಳ್ಳದೆ ಇದ್ದಲ್ಲಿ,

ಕರಾವಳಿ ಪ್ರದೇಶಗಳ ಒಳಗೆ ಚಟುವಟಿಕೆಗಳನ್ನು ನಿಯಂತ್ರಿಸಲು ಸಿಆರ್‌ಜ಼ೆಡ್ ಅಧಿಸೂಚನೆಯನ್ನು ಜಾರಿಗೆ ತರಲಾಗಿದೆ.  ಕಡಲ ತೀರದಿಂದ ೫೦೦ ಮೀಟರ್‌ಗಳವರೆಗಿನ ಪ್ರದೇಶಗಳನ್ನು ೪ ವಿವಿಧ ವಲಯಗಳಾಗಿ ಗುರುತು ಮಾಡಲಾಗಿದೆ.  ಅಧಿಸೂಚನೆಯ ಪ್ಯಾರ ೩ರ ಪ್ರಕಾರ ಅದರ ಅಡಿಯಲ್ಲಿ ಬರುವ ಕೆಲವು ಚಟುವಟಿಕೆಗಳನ್ನು ಸಿಆರ್‌ಜ಼ೆಡ್‌ನ ಒಳಗೆ ನಿಷೇಧಿಸಲಾಗಿದೆ.  ಅಧಿಸೂಚನೆಯಲ್ಲಿ ಮರಳು ಗಣಿಗಾರಿಕೆಯನ್ನು ಕೆಳಕಂಡ ರೀತಿಯಲ್ಲಿ ನಿಷೇಧಿಸಲಾಗಿದೆ:

  • ಪ್ಯಾರಾ.೩ (X) ರಲ್ಲಿ ಮರಳು, ಬಂಡೆ ಹಾಗೂ ಇತರ ಕೆಳಪದರಗಳ ಗಣಿಗಾರಿಕೆಯನ್ನು ನಿಷೇಧಿಸಲಾಗಿದೆ
  • ಪ್ಯಾರಾ ೩(XIII)ರಲ್ಲಿ, ಸೌಂದರ್ಯೀಕರಣ, ಮನರಂಜನೆ ಹಾಗೂ ಇತರ ಉದ್ದೇಶಗಳಿಗಾಗಿ ಮರಳು ದಿಬ್ಬಗಳು, ಬೆಟ್ಟಗಳು, ಭೂದೃಶ್ಯವೂ ಸೇರಿದಂತೆ ಕೆಲವು ನೈಸರ್ಗಿಕ ಗುಣಲಕ್ಷಣಗಳನ್ನು ಬದಲಾಯಿಸುವುದನ್ನು ನಿಷೇಧಿಸಲಾಗಿದೆ.

III. (ವಿಶೇಷವಾಗಿ ಕರ್ನಾಟಕಕ್ಕೆ ಸಂಬಂಧಿಸಿದಂತೆ) ಕರ್ನಾಟಕ ಮರಳು ನಿಯಮಗಳು, ೨೦೧೧ರ ಪ್ರಕಾರ ಅನುಮೋದನೆ/ಅನುಮತಿಯನ್ನು ತೆಗೆದುಕೊಳ್ಳದೆ ಇದ್ದಲ್ಲಿ: ಮರಳು ಗಣಿಗಾರಿಕಾ ಕಾರ್ಯಾಚರಣೆ, ಶೇಖರಣೆ ಹಾಗೂ ರವಾನೆಗಾಗಿ ಜಿಲ್ಲಾಧಿಕಾರಿಯಿಂದ ವಿಮೋಚನೆಯನ್ನು ಪಡೆದುಕೊಳ್ಳಬೇಕಾದುದರ ಬಗೆಗೆ ಈ ನಿಯಮವು ತಿಳಿಸುತ್ತದೆ

  • ಗಣಿಗಾರಿಕೆ ಖಾಸಗಿ ಭೂಮಿಯಲ್ಲಿ ನಡೆಯುತ್ತಿದ್ದರೆ (ನಿಯಮ ೭): ಖಾಸಗಿ ಭೂಮಿ ಹಾಗೂ ಕರಾವಳಿ ಪ್ರದೇಶಗಳಲ್ಲಿ ಮರಳು ಗಣಿಗಾರಿಕೆಯನ್ನು ನಿಷೇಧಿಸಲಾಗಿದ್ದು, ಮರಳನ್ನು ಬೇರೆಬೇರೆ ಕಡೆಗಳಿಗೆ ರವಾನಿಸುವ ಮುನ್ನ ಈ ಪ್ರದೇಶಗಳನ್ನು ಶೇಖರಣೆ ಮಾಡಬಹುದು
  • ಅಳಿವೆ ಪಾತ್ರಗಳಲ್ಲಿ ಗಣಿಗಾರಿಕೆ ಮಾಡುತ್ತಿದ್ದರೆ (ನಿಯಮ ೧೨): ಕರಾವಳಿ ಪ್ರದೇಶಗಳಲ್ಲಿ ಮರಳುಗಣಿಗಾರಿಕೆಯ ತಾಣಗಳನ್ನು ಗುರುತಿಸುವ ಮುನ್ನ ಸಿಆರ್‌ಜ಼ೆಡ್‌ನ ಅನುಮತಿಯನ್ನು ಪಡೆದುಕೊಳ್ಳಲಾಗುತ್ತಿದ್ದು, ಅದರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ
  • ಕಿರು ಖನಿಜಗಳಿಗಾಗಿ (ಸಿಲಿಕಾ ಮರಳು): ಗಣಿಗಾರಿಕೆ ಹಾಗೂ ಭೂವಿಜ್ಞಾನ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಂದ, ಸಿಲಿಕಾ ಮರಳು, ಕ್ಯಾಲ್ಸಿಯಂ ಚಿಪ್ಪುಗಳ (ಚಿಪ್ಪು ಗಣಿಗಾರಿಕೆ) ಗಣಿಗಾರಿಕೆಗಾಗಿ ಕರ್ನಾಟಕ ಕಿರು ಖನಿಜಗಳ ರಿಯಾಯತಿ ನಿಯಮ ೧೯೯೪ರ ಅಡಿಯಲ್ಲಿ ಅನುಮತಿಯನ್ನು ಪಡೆಯಬೇಕು.

ದೃಶ್ಯಾವಳಿ ಬಿ: ಅನುಮೋದನೆ ಅಥವಾ ಅನುಮತಿ ತೆಗೆದುಕೊಂಡಿರುವ ಸಂದರ್ಭಗಳಲ್ಲಿ

  • ಅನುಮತಿಗಳು ಅಥವಾ ಅನುಮೋದನೆಗಳನ್ನು ತೆಗೆದುಕೊಂಡಿರುವ ಪಕ್ಷದಲ್ಲಿ, ವಿಭಾಗ Iರ ಅಡಿಯಲ್ಲಿ ನೀಡಿರುವ ವಿವರಣೆಗಳ ಪ್ರಕಾರ ಸಂಗ್ರಹಿಸಲಾದ ಎಲ್ಲ ದಾಖಲೆಗಳನ್ನು ಓದಿ
  • ಅನುಸರಣಾ ಷರತ್ತುಗಳಲ್ಲಿ ತಿಳಿಸಿರುವಂತೆ ಗಣಿಗಾರಿಕಾ ಕಾರ್ಯಾಚರಣೆಗಳು ನಡೆಯುತ್ತಿವೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು ಈ ದಾಖಲೆಗಳು ನೆರವಾಗುತ್ತವೆ
  • ಉದಾಹರಣೆಗೆ, ೨ ಹೆಕ್ಟೇರು ಪ್ರದೇಶಕ್ಕೆ ವಿಮೋಚನೆಯನ್ನು ಪಡೆದಿದ್ದರೂ, ವಾಸ್ತವದಲ್ಲಿ ಅನುಮತಿ ನೀಡಲಾದ ಪ್ರದೇಶಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಗಣಿಗಾರಿಕಾ ಚಟುವಟಿಕೆ ನಡೆಯುತ್ತಿರಬಹುದು
  • ಈ ದಾಖಲೆಗಳಲ್ಲಿ ಎರಡು ಗುಂಪಿನ ಷರತ್ತುಗಳು ಇರುತ್ತವೆ. ಮೊದಲನೆಯದು, ಸಾಮಾನ್ಯ ಷರತ್ತುಗಳಾದರೆ, ಇನ್ನೊಂದು ನಿರ್ದಿಷ್ಟವಾದ ಷರತ್ತುಗಳಾಗಿರುತ್ತದೆ.  ಇದರ ಬಗೆಗೆ ಹೆಚ್ಚಿನ ತಿಳುವಳಿಕೆ/ಅರಿವು ಪಡೆದುಕೊಳ್ಳಲು ಎರಡನ್ನೂ ಓದುವುದು ಮುಖ್ಯವಾಗುತ್ತದೆ
  • ಪರವಾನಗಿಯನ್ನು ನೀಡಿದ ಪ್ರಾಧಿಕಾರಕ್ಕೆ ಅನನುಪಾಲನೆಯನ್ನು ವರದಿ ಮಾಡಬಹುದು. ದೂರಿನಲ್ಲಿ ಉಲ್ಲಂಘನೆ ಮಾಡಿದ ಷರತ್ತನ್ನು ಸ್ಪಷ್ಟವಾಗಿ ತಿಳಿಸಿ, ಅನನುಪಾಲನೆಯ ಸಾಕ್ಷಿಗಳನ್ನೂ ಅದರೊಂದಿಗೆ ನೀಡಬೇಕು.

Table 31 copyTable 3-2

 

 

 

ದೂರನ್ನು ಸಲ್ಲಿಸಬೇಕಾದುದು ಎಲ್ಲಿ?

ಮರಳು ಗಣಿಗಾರಿಕೆಗೆ ಸಂಬಂಧಿಸಿದ ವಿಷಯಗಳನ್ನು ಕುರಿತಾಗಿ ಹೆಚ್ಚಿನ ಮಾಹಿತಿ ಪಡೆಯಲು, ದಯವಿಟ್ಟು ಕೆಳಕಂಡ ಯಾವುದೇ ವ್ಯಕ್ತಿಗಳನ್ನು ಸಂಪರ್ಕಿಸಿ:

ವಿನೋದ್ ಪಟಗಾರ್ (ಕುಮಟ ಹಾಗೂ ಅಂಕೋಲ): ೯೫೩೮೫೮೦೧೯೫

ಮಾರುತಿ ಗೌಡ (ಕಾರವಾರ): ೯೭೪೨೪೫೦೧೯೨

ಮಹಾಬಲೇಶ್ವರ ಹೆಗಡೆ (ಭಟ್ಕಳ ಹಾಗೂ ಹೊನ್ನಾವರ): ೯೪೮೧೫೧೦೬೫೩

ಕೃಪೆ: http://www.indiawaterportal.org/

ಅನುವಾದ: ಕನ್ನಡ ಇಂಡಿಯಾ ವಾಟರ್ ಪೋರ್ಟಲ್ ತಂಡ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*