ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕಾಲುವೆ ನೀರು ನಿರ್ವಹಣೆಯಲ್ಲಿ ಸಹಭಾಗಿತ್ವ ಸ್ವಾವಲಂಬಿ ಆಡಳಿತದತ್ತ ಒಂದು ಹೆಜ್ಜೆ

ಬದಲಾಗುತ್ತಿರುವ ಹವಮಾನದಲ್ಲಿ ಮಳೆಯಾಶ್ರಿತ ನೀರಿನ ಆಧಾರವಾಗಿ ಸುಸ್ಥಿರ ಬೆಳೆ ಬೆಳೆಯುವುದು ಕಷ್ಡವಾಗಿದೆ. ಅದರಲ್ಲೂ ಭತ್ತ, ಕಬ್ಬು ಅಡಿಕೆ ಬೆಳೆ ಬೆಳೆಯಲು ಸಾಧ್ಯವಿಲ್ಲ. ಸರ್ಕಾರದಿಂದ ಅವಶ್ಯಕ ನೀರಿನ ಸಂಗ್ರಹಣೆ, ವಿತರಣೆ, ನಿರ್ವಹಣೆಯನ್ನು ಸರ್ಕಾರವೊಂದೆ ಮಾಡಲು ಸಾಧ್ಯವಿಲ್ಲವೆಂಬುದು ಎಲ್ಲರಿಗು ತಿಳಿದಿರುವ ವಿಚಾರ. ಸಮುದಾಯದ/ ಬಳಕೆದಾರರ ಸಹಭಾಗಿತ್ವವು ಬಹಳ ಬಹುಮುಖ್ಯವಾದ ಜವಾಬ್ದಾರಿಯನ್ನು ಸಂಘಟನೆಯ ಮೂಲಕ ನೀರಿನ ಸಂರಕ್ಷu, ವಿತರಣೆ, ನಿರ್ವಹಣೆಯನ್ನು ಹೊಂದಿದರೆ ಮಾತ್ರ ಸುಸ್ಥಿರವಾದ ಬೆಳೆ ಬೆಳೆಯಲು ಸಹಕಾರಿಯಾಗಲಿದೆ

ಸರ್ಕಾರವು ಬಳಕೆದಾರರ/ ಸಮುದಾಯದ ಪಾತ್ರ ಬಹು ಮುಖ್ಯವಾದುದೆಂದು ಮನಗಂಡು ಕರ್ನಾಟಕ ನೀರಾವರಿ ಅಧಿನಿಯಮವು ೧೯೬೫ ಕ್ಕೆ ತಿದ್ದುಪಡಿ ತಂದು [???????????????????????????????ಜೂನ್ ೨೦೦೦] ನೀರು ಬಳಕೆದಾರರ ಸಹಕಾರ ಸಂಘಗಳನ್ನು ಸ್ಥಾಪಿಸುವುದರ ಮೂಲಕ ಅಧಿಕೃತವಾಗಿ ನೀಡಲಾಗಿದೆ. ಇದರ ಆಧಾರದ ಕರ್ನಾಟಕದಲ್ಲಿ ಒಟ್ಟು ೩೦೦೦ ಸಹಕಾರಿ ಸಂಘಗಳನ್ನು ರಚಿಸಲಾಗಿದೆ. ಇಂತಹ ಹಲವಾರು ಸಹಕಾರಿ ಸಂಘಗಳಲ್ಲಿ ಭದ್ರಾ ಕಾಡಾ ಶಿವಮೊಗ್ಗ ಅಡಿಯಲ್ಲಿ ಬರುವ ಗಾಜನೋರು ಹೊಸಹಳಿ, ಸಹಕಾರ ಸಂಘ ಮತ್ತು ಕಾಗೆಕೋಡಮಗ್ಗಿ ಸಹಕಾರ ಸಂಘಗಳು ಮಾದರಿಯಾಗಿದೆ. ಈ ಸಂಘಗಳ ಸಂಘದ ಬಹುಮುಖ್ಯವಾದ ಜವಾಬ್ದಾರಿಯಾದ ನೀರಿನ ಸಂರಕ್ಷಣೆ, ವಿತರಣೆ, ನಿರ್ವಾಹಣೆ ನೀರಿನ ಶುಲ್ಕ ವಸೂಲಿ ಮಾಡುತ್ತಾ ಇಡೀ ರಾಜ್ಯಕ್ಕೆ ಮಾದರಿ ಸಂಘಗಳಾಗಿವೆ.

ಗಾಜನೂರು ಹೊಸಹಳ್ಳಿ ನೀರು ಬಳಕೆದಾರರ ಸಂಘವು ತುಂಗಾ ಅಣೆಕಟ್ಟೆಗೆ ಸೇರಿದ ಸಂಘವಾಗಿ ಶಿವಮೊಗ್ಗದಿಂದ ೮ ಕಿ, ಮೀ ದೂರದಲ್ಲಿದೆ. ಈ ಸಂಘದ ವ್ಯಾಪ್ತಿಯು ನಾಲ್ಕು ಗ್ರಾಮಗಳನ್ನು ಒಳಗೊಂಡಿದ್ದು [ಗಾಜನೂರು, ವೀರಾಪುರ,ಹೊನ್ನಾಪುರ, ಹೊಸಹಳ್ಳಿ] ೬೦೪ ಹೆಕ್ಟೇರ್  ಅಚ್ಚುಕಟ್ಟು ಪ್ರದೇಶವನ್ನು ಹೊಂದಿದೆ ಮತ್ತು ೧೩/೦೨/೨೦೦೧ ರಂದು ಸಹಕಾರಿ ಸಂಘಗಳ ಕಾಯ್ದೆ ಅಡಿ ನೊಂದಣಿ ಆಗಿ ೦೭/೦೧/೨೦೦೨ ಕರ್ನಾಟಕ ನೀರಾವರಿ ನಿಗಮದೊಂದಿಗೆ ಪ್ರತಿ ೨ ವರ್ಷಕ್ಕೊಮ್ಮೆ ಒಪ್ಪಂದ [ಎಂ,ಒ,ಯು]  ಮಾಡಿಕೊಳ್ಳುತ್ತಾ ಬಂದಿದೆ ಈ ಸಂಘದ ವ್ಯಾಪ್ತಿಗೆ ೬೩೬ ಅಚ್ಚುಕಟ್ಟು ರೈತರಿದ್ದಲ್ಲಿ ಅದರಲ್ಲಿ ೫೭ ಮಹಿಳಾ ರೈತರಿದ್ದಾರೆ ಹಾಗೂ ಪ್ರತಿಯೊಬ್ಬ ಅಚ್ಚುಕಟ್ಟುದಾರರು ಈ ಸಂಘಕ್ಕೆ ಸದಸ್ಯರಾಗಿ ೧೦೦% ಸದಸ್ಯತ್ವ ಶುಲ್ಕ ನೀಡಿದ್ದಾರೆ ಹಾಗೂ ಸಮಿತಿಯಲ್ಲಿ ೧೩ ಸದಸ್ಯರಿದ್ದಾರೆ [ಅದರಲ್ಲಿ ೧೨ ಅಚ್ಚುಕಟ್ಟುದರರು ೧ ನೀರಾವರಿ ಇಲಾಖಾಧಿಕಾರಿ]

ಸರ್ಕಾದಿಂದ ಕಾಡಾಗೆ [ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರ] ಮೂಲಕ ದೊರೆಯುವ ಪ್ರತಿ ಎಕರೆಗೆ ರೂ ೪೮ ಇದ್ದು ಅಚ್ಚುಕಟ್ಟು ರೈತರಿಂದ ರೂ ೩೧೧೦೦ ರೂ ಗಳನ್ನು ಸಂಗ್ರಹಿಸಿ ಕಾಡಾವತಿಯಿಂದ ೩.೨೯ ಲಕ್ಷಗಳನ್ನು ಪಡೆದು ಬ್ಯಾಂಕಿನಲ್ಲಿ ಠೇವಣಿ ಇಟ್ಟು ಬರುವ ಬಡ್ಡಿಯಲ್ಲಿ ಆಢಲಿತ ವೆಚ್ಚಕ್ಕೆ ಉಪಯೋಗಿಸುತ್ತಾ ಇದ್ದಾರೆ ಹಾಗೂ ಸಂಘದ ಕಟ್ಟಡ ಮತ್ತು ಗೋದಾಮು ನಿರ್ವಹಣೆ ಮಾಡಲು ರೂ ೫.೦೯ ಲಕ್ಷ ಖರ್ಚು ಮಾಡಿ, ಭದ್ರಾ ಕಾಡಾ ವತಿಯಿಂದ ೨.೬೫ ಲಕ್ಷ ಅನುದಾನ ಪಡೆದು ಉಳಿದ ೨.೪೪ ಲಕ್ಷಗಳನ್ನು ಸಂಘದ ಸದಸ್ಯರಿಗೆ ನೀಡಿದ್ದಾರೆ. ಸಂಘದ ನಿರ್ವಹಣೆ ದೃಷ್ಠಿಯಿಂದ ಒಂದು ಮಳಿಗೆಯನ್ನು ಬಾಡಿಗೆ ನೀಡಿ ಪ್ರತೀ ತಿಂಗಳು ರೂ ೫೦೦ ಪಡೆಯುತ್ತಾ ಇದ್ದಾರೆ.

ನೀರಿನ ಶುಲ್ಕ ಸಂಗ್ರಹಣೆಯಲ್ಲಿ ಬಹಳಷ್ಟು ಪ್ರಗತಿ ಸಾಧಿಸಿದ್ದು ಪ್ರತೀ ವರ್ಷವು ತಪ್ಪದೇ ೨೦೦೪ ರಿಂದ ನೀರಿನ ಶುಲ್ಕವನ್ನು ವಸೂಲಿ ಮಾಡುತ್ತಾ ಇದ್ದು ೨೦೧೫ ರ ವರೆಗೆ ರೂ ೧೬,೫೬,೦೦೦/- ಸಂಗ್ರಹಿಸಬೇಕಾದ ಮೊತ್ತದಲ್ಲಿ ರೂ ೧೬,೧೮,೫೦೭/- ರೂ ಗಳನ್ನು ಸಂಗ್ರಹಿಸಿ, ಸರ್ಕಾರಕ್ಕೆ ೬,೦೩,೬೬೬/- ರೂಗಳನ್ನು ಕಟ್ಟಿದ್ದಾರೆ [ಪಟ್ಟಿ ] ಉಳಿದ ೧೦,೧೪,೮೪೧/- ರೂಗಳಲ್ಲಿ ೫,೫೯,೨೧೫ ಕಾಲುವೆಗಳ ಹೂಳು ಗಿಡಗಂಟೆ ತೆಗೆಯುವುದು ಹಾಗೂ ಪೈಪುಗಳ ಅಳವಡಿಕೆ ಮತ್ತು ನಿರ್ವಹಣೆ ಮಾಡುವುದಕ್ಕೆ ಖರ್ಚು ಮಾಡಿದ್ದಾರೆ ಉಳಿದ ೪,೫೫,೬೨೬ ರೂಗಳನ್ನು ಆಢಳಿತ ವೆಚ್ಚಕ್ಕಾಗಿ ಖರ್ಚುಮಾಡಿದ್ದಾರೆ [ಪಟ್ಟಿ]

ಭದ್ರಾ ಕಾಡಾ ವತಿಯಿಂದ ೨೨೦೦೦೦೦ ಹಲವು ಕಾಮಗಾರಿಗಳನ್ನು ಕೈಗೊಳ್ಳಲು ಅನುದಾನ  ಪಡೇದು ಅದನ್ನು ಸಮರ್ಥವಾಗಿ ಬಳಸಿಕೊಂಡಿರುವುದು.

ನೀರಿನ ಶುಲ್ಕ ಸಂಗ್ರಹದ ವಿದಾನವು ವಿಶೇಷವಾಗಿದ್ದು ಮೂರು ಹಂತದಲ್ಲಿ ಮೂರು ಬಣ್ಣದ ರಶೀದಿಗಳನ್ನು ಅಚ್ಚುಕಟ್ಟು ರೈತರಿಗೆ ನೀಡುವ ಮೂಲಕ ಸಂಗ್ರಹಿಸಲಾಗುತ್ತಿದೆ. ಮೊದಲ ಹಂತದಲ್ಲಿ ಹಸಿರು ಬಣ್ಣದ ರಶೀದಿ ನೀಡಿ ೧೫ ದನದ ಸಮಯಾವಕಾಶ ನೀಡಲಾಗುತ್ತದೆ,  ಎರಡನೇ ಹಂತದಲ್ಲಿ ಹಳದಿ ಬಣ್ಣದ ರಶೀದಿ ನೀಡಲಾಗುತ್ತz,  ಮೂರನೇ ಹಂತದಲ್ಲಿ ಕೊನೆಯ ೧೫ ದಿನ ಸಮಯಾವಕಾಶ ನೀಡಿ ಕೆಂಪು ಬಣ್ಣದ ರಶೀದಿ ನೀಡುತ್ತಾರೆ ಕೊನೆಯ ನೀರಿನ ಶುಲ್ಕ ಕಟ್ಟದೇ ಇದ್ದರೆ ಎಲ್ಲಾ ಸಮಿತಿಯ ಸದಸ್ಯರು ಮನೆಯ ಹತ್ತಿರ ಹೋಗಿ ಸೂಚನೆ ನೀಡುತ್ತಾರೆ, ಕಟ್ಟದೇ ಇದ್ದ ಪಕ್ಷದಲ್ಲಿ ಕಾನೂನು ಕ್ರಮ ಕೈಗೊಳ್ಳುತ್ತಾರೆ.Gajanuru

ಸಂಭಂಧಪಟ್ಟ ರೈತರು ಕಟ್ಟುವ ನೀರಿನ ಕಂದಾಯಕ್ಕೆ ಪಾಸ್‌ಪುಸ್ತಕ ನೀಡಿ ಹಣ ಕಟ್ಟಿದ ದಿನಾಂಕ, ರಶೀದಿ ಸಂಖ್ಯೆ ಮೊತ್ತವನ್ನು ಬರೆದು ಸಂಘದ ಸದ್ಯರು ಮತ್ತು ಅಚ್ಚುಕಟ್ಟುದಾರರು ಇಬ್ಬರು ಸಹಿ ಮಾಡುತ್ತಾರೆ .

ಸಂಘದ ಆಢಳಿತವನ್ನು ನೋಡಿಕೊಳ್ಳಲು ನೀರಿನ ಕರ ವಸೂಲಿ ಮಾಡಲು ಕಾರ್ಯದರ್ಶಿ ಮತ್ತು ಹಣ ಸಂಗ್ರಹಣಾಕಾರರನ್ನು ನೇಮಕ ಮಾಡಿಕೊಳ್ಳಲಾಗಿದೆ . ಇಬ್ಬರಿಗೂ ಪ್ರತೀ ತಿಂಗಳು ೭,೦೦೦ ಮತ್ತು ೩,೫೦೦ ರೂ ಸಂಬಳವನ್ನು ನೀಡಿ ಪಿ, ಎಫ್‌ನ್ನು ಸಹ ಕಟ್ಟಲಾಗುತ್ತಿದೆ.

ಸಂಘವು ಪ್ರತೀ ತಿಂಗಳು ಸಭೆಯನ್ನು ನಡೆಸಿ ಸಭೆಗೆ ಬರುವುದಕ್ಕೆ ಮೊದಲೇ ಸೂಚನಾ ಪುಸ್ತಕದಲ್ಲಿ ಸಹಿಪಡೆದು ಆಯಾ ತಿಂಗಳು ಖರ್ಚು ವೆಚ್ಚದ ಬಗ್ಗೆ ಮಾಹಿತಿ ನೀಡುತ್ತಾರೆ ಹಾಗೂ ಪ್ರತಿ ವರ್ಷವೂ ಸಂಘದ ಲೆಕ್ಕ ಪರಿಶೋಧನೆ ಮಾಡಿಸಲಾಗಿತ್ತಿದೆ.

ಅಚ್ಚುಕಟ್ಟು ಪ್ರದೇಶದ ಸಮಸ್ಯೆ ಬಗೆಹರಿಸಲು ತಮ್ಮದೇ ವಿಧಾನ ಅಳವಡಿಸಿಕೊಂಡಿದ್ದು ಸಮಸ್ಯೆ ಇದ್ದವರು ಪತ್ರಮುಖೇನ ಸಂಘಕ್ಕೆ ದೂರು ನೀಡಬಹುದು ಸಂಬಂದಪಟ್ಟ ಸಮಿತಿ ಸದಸ್ಯ ಪರಿಹಾರ ಮಾಡಬೇಕು ಸಮಸ್ಯೆ ಬಗೆಹರಿಯದಿದ್ದಲ್ಲಿ ಸಮಿತಿ ಸದಸ್ಯರು ಬಗೆಹರಿಸುತ್ತಾರೆ .

ಈ ಮಾದರಿ ಸಂಘವನ್ನು ನೋಡಿ ಇತರೆ ಸಂಘದವರು ಅಳವಡಿಸಿಕೊಳ್ಳಲು ಮಹಾರಾಷ್ಟ್ರ, ಮೈಸೂರು, ಬೆಳಗಾವಿ, ಮುಂತಾದ ೪೦೦ ರೈತರು ಬಂದುಹೋಗಿದ್ದಾg. ನೀರು ನಿರ್ವಹಣೆ ಜೊತೆಗೆ ಸಂಘದ ಸದಸ್ಯರಿಗೆ ಆರೋಗ್ಯಕ್ಕೆ ಸಂಭಂಧಿಸಿದ ಯಶಸ್ವಿನಿ ಕಾರ್ಡ್ ಮತ್ತು ಸಂಭಂಧಪಟ್ಟ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಾ ಬಂದಿದ್ದು ಗ್ರಂಥಾಲಯವನ್ನು ಸಹ ಸ್ಥಾಪಿಸಿಕೊಟ್ಟಿದ್ದಾರೆ.

ಮತ್ತೊಂದು ಯಶಸ್ವಿ ಕಾಗೆಕೋಡುಮಗ್ಗಿ ನೀರುಬಳಕೆದಾರರ ಸಹಕಾರಿ ಸಂಘವು ಗೋಂಧಿ ಅಣೇಕಟ್ಟಿನ ಅಚ್ಚುಕಟ್ಟು ಪ್ರದೇಶದಲ್ಲಿ ಬರುತ್ತದೆ. ಈ ಸಂಘವು ಭದ್ರಾವತಿಯಿಂದ ೧೦ ಕಿ,ಮೀ ದೂರದಲ್ಲಿz, ಈಸಂಘದ ಒಟ್ಟು ಪ್ರದೇಶವು ೩೨೩.೮೩ ಹೆಕ್ಟೇರ್ ಇದ್ದು ೪೩೯ ಅಚ್ಚುಕಟ್ಟುದಾರರನ್ನು ೩ ಗ್ರಾಮಗಳನ್ನು ಹೊಂದಿದೆ. ಈ ಸಂಘದ ಸದಸ್ಯರು ೩೬೫ ಆಗಿದು, ಅದರಲ್ಲಿ ೯೫ ಮಹಿಳಾ ರೈತರಿದ್ದಾg. ಅದರಲ್ಲಿ ೧೧ ಜನರ ಸಮಿತಿಯಿದ್ದು [೧೦ ಅಚ್ಚುಕಟ್ಟು ಪ್ರದೇಶದ ರೈತರು ಮತ್ತು ೧ ನೀರಾವರಿ ಇಲಾಖಾಧಿಕಾರಿ ] ಇದ್ದಾರೆ ಈ ಸಂಘವು ಸಹ ೨೭/೧೧/೨೦೦೦ ರಂದು ನೊಂದಣಿ ಆಗಿ ಕರ್ನಾಟಕ ನೀರಾವರಿ ನಿಗನಮದೊಂದಿಗೆ ೨೦/೦೭/೨೦೦೨ ರಂದು ಒಪ್ಪಂದ ಮಾಡಿಕೊಂಡು ನೀರಿನ ಸಂರಕ್ಷಣೆ, ವಿತರಣೆ ಮತ್ತು ನಿರ್ವಾಹಣೆ ಜವಾಬ್ದಾರಿಯನ್ನು ಮಾಡಿಕೊಂಡು ಬರುತ್ತಾ ಇದೆ.

ಈ ಸಂಘವು ಸಹ ಸ್ವಾವಲಂಬಿ ಕಛೇರಿ ಹಾಗೂ ಗೋದಾಮು ಹೊಂದಿದ್ದು ಭದ್ರಾ ಕಾಡಾ ವತಿಯಿಂದ ೩,೩೫,೦೯೦ ರೂಗಳನ್ನು ಗ್ರಾಮ ಪಂಚಾಯ್ತಿಯಿಂದ ೩೦,೦೦೦/- ಮತ್ತು ಧರ್ಮಸ್ಥಳ ಸಂಘದಿಂದ ೨೫,೦೦೦/- ಹಾಗೂ ಸದಸ್ಯರಿಂದ ೩,೩೩,೫೮೫ ರೂಗಳನ್ನು ಪಡೆದಿದ್ದಾರೆ.

ನೀರಾವರಿ ಶುಲ್ಕ ವಸೂಲಿ ೮೭,೦೦೦ ವಸೂಲಿ ೫೫,೮೦೦ ಸರ್ಕಾರಕ್ಕೆ ೨೯,೦೦೦ ಕಾಮಗಾರಿ ನಿರ್ವಹಣೆಗೆ ೪,೦೦೦ ಉಳಿತಾಯ ಮಾಡಿದ್ದಾರೆ. ಗ್ರಾಮ ಪಂಚಾಯ್ತಿಯಿಂz೧೫೦೦೦೦/- ನಿರ್ವಾಹಣೆ ಜವಾಬ್ದಾರಿಯನ್ನು ಮಾಡಿಕೊಂಡು ಬರುತ್ತಾ ಇದೆ.

ಪ್ರತೀ ತಿಂಗಳು ತಪ್ಪದೆ ಸಮಿತಿ ಸಭೆ ಕರೆಯುವುದು ದೂರು ಬಂದಾಗೆ ಬಗಹರಿಸುವುದು ಮುಖ್ಯ ಕಾರ್ಯವಗಿದೆ . ಪ್ರತೀ ವರ್ಷವು ವಾರ್ಷಿಕ ಮಹಾಸಭೆ ಮತ್ತು ಲೆಕ್ಕಪರಿಶೋಧನೆಯನ್ನು ಮಾಡುತ್ತಾ ಇದ್ದಾರೆ. ಕರ್ನಾಟಕ ಸರ್ಕಾರದ ಗೋಂಧಿ ಅಧುನೀಕರಣದ ಯೋಜನೆಯನ್ನು ಪಡೆದುಕೊಂಡು ರೂ ೧.೬೩ ಕೋಟಿ ಹಣದಲ್ಲಿ ಹೊಲಗಾಲುವೆಯನ್ನು ಮಢೂತ ಇದ್ದಾರೆ. ಓಡಿeg

ಈ ಮಾದರಿ ಸಂಘವನ್ನು ನೋಡಿ ಇತರೆ ಸಂಘದವರು ಅಳವಡಿಸಿಕೊಳ್ಳಲು ತುಮಕುರು, ೬೦ ರೈತರು ಬಂದುಹೋಗಿದ್ದಾರೆ.

ಗೋಂದಿ ಅಣೆಕಟ್ಟು ಆಧುನೀಕರಣ ಯೋಜನೆ ಅಡಿ ಸಕಾರವು ೧೧ ನೀರು ಬಳಕೆದಾರರ ಸಹಕಾರಿ ಸಂಘಗಳ ತಮ್ಮ ಅಚ್ಚುಕಟ್ಟು ಪ್ರದೇಶಕ್ಕೆ ಹೊಲಗಲುವೆಗಳಿಗೆ ಯೋಜನೆ ತಯಾರಿಸುವುದು, ಕಾಮಗಾರಿ ಅನುಷ್ಟಾನ ಮಾಡುವುದು, ಗುಣಮಟ್ಟ ನಿಯಂತ್ರಣ ಹಣಕಾಸು ನಿರ್ವಹಣೆ ಮಾಡುತ್ತಾ ಇದ್ದು ನೀರಿನ ಶುಲ್ಕ ವಸೂಲು ಮಾಡಲು ಮತ್ತು ನಿರ್ವಹಣೆ ಜವಾಬ್ದಾರಿ ಹೊತ್ತುಕೊಳ್ಳಲು ಅತೀ ಆಸಕ್ತಿಯನ್ನು ಹೊಂದಿದೆ.

ನೀರು ಬಳಕೆದಾರರ ಸಹಕಾರಿ ಸಂಘಗಳು ಹೆಚ್ಚು ಉತ್ಸಾಹದಿಂದ ಮುಂದೆ ಬಂದು ಸಹಭಾಗಿತ್ವ ನೀರಾವರಿ ನಿರ್ವಹಣೆಗೆ ಪಾಲ್ಗೊಳ್ಳಲು ಒಂದು ಹೆಜ್ಜೆ ಇಡುತ್ತಾ ಇದ್ದಾರೆ.

ಸರ್ಕಾರವು ಸಹ ಹೆಚ್ಚು ಗಮನಹರಿಸಬೇಕಾಗಿದೆ ಕಾಗದದ ಮೇಲೆ ಸಂಘಕ್ಕೆ ಜವಾಬ್ದಾರಿ ನೀಡಿದ್ದರೂ ವಾಸ್ತವವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ತುಂಗಾ ಮತ್ತು ಭದ್ರಾ ಅಣೆಕಟ್ಟುಗಳ ಕಾಮಗಾರಿ ಯೋಜನೆಯ ಅಡಿಯಲ್ಲಿ ಸಂಘಗಳಿಗೆ ಹೆಚ್ಚು ಜವಬ್ದರಿ ನೀಡಲಿಲ್ಲ. ಸಂಘಗಳು ಕಾಮಗಾರಿ ಕಳಪೆ ಬಗ್ಗೆ ದೂರು ಕೊಡುವುದಕ್ಕೆ ಮಾತ್ರ ಸೀಮಿತವಾದವು ನಿಜವಾದ ಅರ್ಥದಲ್ಲಿ ಯೋಜನೆಯಲ್ಲಿ ಪಾಲ್ಗೋಂಡಿದ್ದಾರೆ, ಹೆಚ್ಚು ಗುಣಮಟ್ಟದ ಕಾಮಗಾರಿ, ನಿರ್ವಹಣಾ ಜವಾಬ್ದಾರಿಯನ್ನು, ನೀರಿನ ಶುಲ್ಕ ಸಂಗ್ರಹಿಸಲು ಹೆಚ್ಚು ಆಸಕ್ತಿ ತೋರುತ್ತಿದ್ದರು. ಇನ್ನು ಮುಂದಾದರು ಸರ್ಕಾರವು ಈ ಎರಡು ಸಂಘಗಳ ಬಗ್ಗೆ ಮಹತ್ವ ತಿಳಿದು ರಾಜ್ಯದಲ್ಲಿರುವ ಎಲ್ಲಾ ಸಂಘಗಳಿಗೂ ನಿಜವಾದ ಅರ್ಥದಲ್ಲಿ ಸಹಭಾಗಿತ್ವ ಮಾಡಿಕೊಂಡರೆ ಯಶಸ್ಸು ಸಾಧ್ಯವೆಂಬುದು ತಿಳಿಯುತ್ತದೆ.

 ಚಿತ್ರ-ಲೇಖನ: ವೀರೇಶ್ ಅಣೆಗೆರೆ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*