ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಮೀನಿನ ನಾಡಲ್ಲಿ ನೀರಿಗೆ ಬರದ ಮುನ್ಸೂಚನೆ …!!!

ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಶಾಲವಾದ ಫಲವತ್ತಾದ ಭೂಮಿ ಇವೆ ವ್ಯವಸಾಯಕ್ಕಾಗಿ ಬೇಸಿಗೆಯಲ್ಲಿ ನೀರಿಗೆ ಬರ ಪ್ರಾರಂಭವಾಗಿದೆ ಈ ಸಂಬಂಧ ಕೃಷಿ ಚಟುವಟಿಕೆಗಾಗಿ ಮತ್ತು ಕುಡಿಯುವ ನೀರಿನ ಸಾಸ್ವತ ಪರಿಹಾರಕ್ಕಾಗಿ ಜನಪ್ರತಿನಿಧಿಗಳಲ್ಲಿ ಕೇಳಿಕೇಳಿ ಈ ಭಾಗದ ಜನರ ಬಾಯಿಯ ಪಸೆ ಬತ್ತಿಹೋಗಿದೆ. ಶಾಶ್ವತ ನೀರಾವರಿಗಾಗಿ ರಾಜಕಾರಣಿಗಳಿಂದ ರಾಜಕಾರಣಿಗಳಿಗೆ ಮನವಿ ಪತ್ರ ಹಿಡಿದು ಅಲೆದಾಡಿದರೂ ಬೆವರು ಬಸಿದುಹೋಗಿದೆಯೇ ಹೊರತು, ಗರಿಗರಿ ಶುಭ್ರವಸ್ತ್ರಧಾರಿಗಳು ಇತ್ತ ತಿರುಗಿನೋಡುತ್ತಿಲ್ಲ.ಇದು ಉತ್ತರ ಕನ್ನಡ ಜಿಲ್ಲೆಯ ಕೆಲ ಭಾಗದಲ್ಲಿ ಜನರ ದಶಕದ ಅಳಲು. ಅಂತರ್ಜಲ ಬತ್ತಿಹೋಗಿದ್ದರಿಂದ ಸಾವಿರ ಅಡಿ ಭೂಮಿಯನ್ನು ಬಗೆದರೂ ಹಿಡಿನೀರು ಬೊಗಸೆ ತುಂಬುತ್ತಿಲ್ಲ. ಇದರಿಂದಾಗಿ ಕೃಷಿ ಚWork Spot 2ಟುವಟಿಕೆ ನಿಂತುಹೋಗಿದೆ. ಹೀಗೇ ಮುಂದುವರೆದರೆ ಭೀಕರ ಬರ ಪರಿಸ್ಥಿತಿ ತಲೆದೋರಲಿದೆ ಗ್ರಾಮಸ್ಥರು ಹೊಟ್ಟೆಹೊರೆಯಲು ನಗರದ ದಾರಿ ಹಿಡಿಯಬೇಕಾದೀತು .ಉಳ್ಳವರು ಬೋರ್ವೆಲ್ ಕೊರೆಸಿದರೂ ಸಿಕ್ಕ ನೀರಿನಲ್ಲಿ ಉಪ್ಪು ನೀರು ಅತ್ಯಧಿಕ ಪ್ರಮಾಣದಲ್ಲಿ ಇರುವುದರಿಂದ ಕುಡಿಯಲು ಮತ್ತು ಕ್ರಷಿಗೆ ಅಯೋಗ್ಯವಾಗಿದ್ದು ಸಿಕ್ಕ ನೀರು ಕೂಡ ಕೆಲವೇ ದಿನಗಳಲ್ಲಿ ಬರಿದಾಗಿ ಜನರು ತಲೆಮೇಲೆ ಕೈಹೊತ್ತು ಕೂಡುವಂತಾಗಿದೆ. ಸಿಕ್ಕಾಪಟ್ಟೆ ಸಾಲ ಮಾಡಿಕೊಂಡ ರೈತರು ಈಗಲೇ ವಿಧಿಯಿಲ್ಲದೆ ಕ್ರಷಿ ಚಟುವಟಿಕೆ ನಿಲ್ಲಿಸುವಂತಾಗಿದೆ ಅರಬ್ಬಿ ಸಮುದ್ರವನ್ನು ಸೇರುತ್ತಿರುವ ನೀರನ್ನು ಸೂಕ್ತವಾಗಿ ಬಳಸಿಕೊಂಡರೆ ಬಂಜರು ಕೃಷಿ ಭೂಮಿಗೆ ನೀರು ಒದಗಿಸಬಹುದು ಯಾವುದೇ ಅಣೆಕಟ್ಟು ಕಟ್ಟದೆ ಪರಿಸರ ಹಾಳಾಗದಂತೆ ಇದನ್ನು ಮಾಡಬಹುದು ಇದನ್ನು ಮಾಡಿದರೆ ರೈತರು ವರ್ಷದಲ್ಲಿ ನಾಲ್ಕು ಬೆಳೆ ತೆಗೆಯುವುದರ ಒಟ್ಟಿಗೆ ಬಾಗದ ರೈತರಿಗೆ ಸಾಸ್ವತ ಪರಿಹಾರ ಒದಗಿಸಿದಂತಾಗುತ್ತೆ.

 

ವರದಿಯ ಪ್ರಕಾರ :

 ಜಿಲ್ಲೆಯಲ್ಲಿ ಕೃಷಿ ವೃತ್ತಿ ಮುಖ್ಯ. ಒಟ್ಟು 1,18,996 ಹೆಕ್ಟೇರಿನಷ್ಟು ನಿವ್ವಳ ಬಿತ್ತನೆ ಪ್ರದೇಶವಿದೆ. ಇದರಲ್ಲಿ 22,421 ಹಕ್ಟೇರಿಗೆ ನೀರಾವರಿ ಸೌಲಭ್ಯವಿದೆ ಬೆಟ್ಟದ ತಪ್ಪಲಿನಿಂದ ಹರಿದು ಸಮುದ್ರ ಸೇರುವ ಕಾಳಿ, ಗಂಗಾವಳಿ, ಅಘನಾಶಿನಿ, ಶರಾವತಿನದಿಗಳು ಅರಬ್ಬಿ ಸಮುದ್ರವನ್ನು ಸೇರುತ್ತಿರುವ ನೀರಿನ ಶೇ.40 ರಷ್ಟು ನೀರನ್ನು ಸೂಕ್ತವಾಗಿ ಬಳಸಿಕೊಂಡರೆ ಬತ್ತ, ತೆಂಗು, ಕಬ್ಬು, ಅಡಕೆ, ಮೆಣಸು, ಏಲಕ್ಕಿ, ಬಾಳೆ ಮುಖ್ಯವಾದ ಬೆಳೆ ಬೆಳೆಯಬಹುದು. ಇವಲ್ಲದೆ ಜಿಲ್ಲೆಯಲ್ಲಿ ಗೋಡಂಬಿ, ಮಾವು, ಹುಣಸೆ, ನಿಂಬೆ, ಅನಾನಸು, ಹಲಸು, ಪಪ್ಪಾಯಿ, ಬಟಾಟೆ, ಬದನೆ, ಕಲ್ಲಂಗಡಿ, ಹೈಬ್ರಿಡ್ಜೋಳ, ರಾಗಿ, ಶೇಂಗಾ ಇತ್ಯಾದಿಗಳನ್ನು ಬೆಳೆಯಬಹುದು. ಬತ್ತ 82,197 ಹೆ, ಜೋಳ 290 ಹೆ, ಕಬ್ಬು 872 ಹೆ,ಅಡಕೆ 11160 ಹೆ, ತೆಂಗು 5907 ಹೆ, ಗೋಡಂಬಿ 1827 ಹೆ, ಮೆಣಸು 135 ಹೆ, ಮಾವು 1140 ಹೆ, ಬಾಳೆ 7245 ಹೆ, ಏಲಕ್ಕಿ 369ಹೆ, ಅನಾನಸ್ 315 ಹೆ, ಹಲಸು 206 ಹೆ, ಪರಂಗಿ 114.9 ಹೆ, ಹತ್ತಿ 7245 ಹೆನಲ್ಲಿ ಬೆಳೆಸುತ್ತಾರೆ. ಅಡಕೆಯ ತೋಟದಲ್ಲಿ ಏಲಕ್ಕಿ, ಕಾಳುಮೆಣಸು, ಬಾಳೆ ಬೆಳೆಸುತ್ತಾರೆ. ಗದ್ದೆಯಲ್ಲಿ ರಾಗಿ, ಕಡಲೆ, ತೊಗರಿ Work Spot 1ಮೊದಲಾದ ಧಾನ್ಯಗಳನ್ನೂ ಬೆಳೆಯುತ್ತಾರೆ. ಪಶುಪಾಲನೆಯೂ ರೂಢಿಯಲ್ಲಿದೆ. ಜಿಲ್ಲೆಯ ಒಟ್ಟು ಜನಸಂಖ್ಯೆ 13,53,644 ಇದರಲ್ಲಿ 9,65,731 ಜನ ಹಳ್ಳಿಯಲ್ಲಿ ವಾಸಿಸುತ್ತಾರೆ. ಇವರಲ್ಲಿ 4,89,908 ಗಂಡಸರು, 4,75,823 ಹೆಂಗಸರು. ಜನಸಾಂದ್ರತೆ ಪ್ರತಿ ಚ.ಕಿಮೀ.ಗೆ 132 ಜನಸಂಖ್ಯೆ ಹೊಂದಿದ ಜಿಲ್ಲೆ ಉತ್ತರ ಕನ್ನಡ. ಆತಂಕದ ನುಡಿ.: ಪ್ರಮುಖ ನದಿಯ ನೀರೆಲ್ಲಾ ಸಮುದ್ರಕ್ಕೆ ಸೇರಿ ಸಿಹಿ ನೀರೆಲ್ಲಾ ಉಪ್ಪು ಮಿಶ್ರಿತ ನೀರಾಗಿರುವುದರಿಂದ ಕುಡಿಯಲು ಮತ್ತು ಕ್ರಷಿಗೆ ಅಯೋಗ್ಯವಾಗಿರುತ್ತೆ ಕೆರೆ, ಬಾವಿಗಳ ಸಹಾಯದಿಂದ ಇಷ್ಟು ವರ್ಷಗಳ ಕಾಲ ಹೇಗೋ ಜೀವನ ಸಾಗುತ್ತಿತ್ತು. ಆದರೆ ಈಗ, ಕೆರೆ ಕುಂಟೆ, ಬಾವಿಗಳೆಲ್ಲ ಬೇಸಿಗೆಯಲ್ಲಿ ಬತ್ತಿಹೋಗಿವೆ, ಅಂತರ್ಜಲ ಕುಸಿದಿದೆ, ಮಳೆಯಂತೂ ತುಂಬಾ ಕಡಿಮೆ ಆಗಿದೆ. ಇದು ಹೀಗೇ ಮುಂದುವರಿದರೆ, ಮುಂದೊಂದು ಕಾಲದಲ್ಲಿ ಇಲ್ಲಿಯ ಫಲವತ್ತಾದ ಭೂಮಿ ಬಂಜರು ಭೂಮಿ ಆಗುವ ಸಾದ್ಯತೆಗಳಿವೆ ಎಂಬುದು ಇಲ್ಲಿಯ ಜನರ ಆತಂಕದ ನುಡಿ.

 ನೀರಿನ ಪ್ರಮಾಣ ಕುಗ್ಗಲು ಕಾರಣ :

ಚೆನ್ನಾಗಿರುವ ಫಲವತ್ತಾದ ಘಜನಿ ಭೂಮಿಯನ್ನು ಸೀಗಡಿ ಕ್ರಷಿಗಾಗಿ ಮೀನಿನ ಕ್ರಷಿಗಾಗಿ ಅಂತ ಆಮಿಷೆಯೋಡ್ಡಿ ರೈತರಿಂದ ಸಾವಿರಾರು ಎಕರೆ ದಲ್ಲಾಳಿಗಳು ಕಿತ್ತು ಯಾಂತ್ರಿಕ ಮೀನು ಉತ್ಪಾದನೆಗಾಗಿ ಭೂಮಿ ಅಗೆದು ಆ ಸಾವಿರಾರು ಎಕರೆ ಭೂಮಿಗೂ ಪ್ಲಾಸ್ಟಿಕ್ ಹಾಸಿ ಅದರಲ್ಲಿ ನೀರು ತುಂಬಿಸಿ ಮೀನನ್ನು ಬೆಳೆಯುವುದರಿಂದ ಪ್ಲಾಸ್ಟಿಕ್ ನಿಂದ ಒಂದು ಹನಿ ನೀರೂ ಕೆಳಗೆ ಹೋಗದಂತೆ ನೋಡುವುದರಿಂದ ಯಾವತ್ತೂ ನೀರು ಇಂಗುವ ಸಾವಿರಾರು ಎಕರೆ ಕ್ರಷಿ ಭೂಮಿ ಮರಳುಗಾಡಿನಲ್ಲಿ ಇದ್ದ ಮರಳಿನಂತಾಗಿದೆ ಹೀಗಾಗಿ ಭಾವಿಯಲ್ಲಿಯ ಸಿಹಿ ನೀರಿನ ಕೋರತೆ ಪ್ರಾರಂಭವಾಗಿದೆ ಸಿ ಆರ್ ಝಡ್ ಕಾನೂನಿನ ಪ್ರಕಾರ ನದಿ ಅಂಚಿನಲ್ಲಿ ಈ ರೀತಿಯ ಯಾಂತ್ರಿಕ ಮೀನುಗಾರಿಕೆ ಮಾಡುವಂತಿಲ್ಲ ಆದರೂ ಮಾಡುತ್ತಿದ್ದಾರೆ ಇದಕ್ಕೆ ಸಂಬಂಧಿಸಿದವರು ಕ್ರಮ ತೆಗೆದುಕೋಳ್ಳದಿದ್ದರೆ ಮುಂದೊಂದುದಿನ ಹನಿ ನೀರಿಗಾಗಿ ಅಲೆದಾಡುವ ಪರಿಸ್ಥಿತಿ ತಲೆ ದೋರುವುದರಲ್ಲಿ ಸಂದೇಹವಿಲ್ಲ.

ರೈತರ ಅಭಿಪ್ರಾಯ :

Work Spot 4ಮೊದಲಿನಿಂದಲೂ ಯಾವುದೇ ಅಡೆತಡೆ ಇಲ್ಲದೇ ವರ್ಷಪೂರ್ತಿ ನೀರು ತುಂಬಿರುವ ಸಾವಿರಾರು ಎಕರೆ ಗಜನಿಗೆ ಈಗ ಪ್ಲಾಸ್ಟಿಕ್ ಅಡಿಯಲ್ಲಿ ಹಾಸಿ ಮಾಡುವ ಕ್ರತಕ ಮೀನಿಗಾರಿಕೆಯನ್ನು ಕೂಡಲೇ ನಿಲ್ಲಿಸುವುದರಿಂದ  ಭೂಮಿಯ ಅಂತರ್ಜಲವು ವ್ರದ್ದಿಸುತ್ತೆ ಹಾಗೇ ಭಾಗದ ಸದ್ಯದ ಕುಡಿಯುವ ನೀರಿನ ಅಭಾವವನ್ನು ನೀಗಿಸಬಹುದು ಇದರ ಸಂಬಂದ ಸಿ ಆರ್ ಝಡ್ ಅಧಿಕಾರಿಗಳು ಹಾಗೂ ಇದಕ್ಕೆ ಸಂಬಂದಿಸಿದ ಎಲ್ಲಾ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಂಡರೆ ಭಾಗದ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಆಗುವುದರಲ್ಲಿ ಸಂದೇಹವಿಲ್ಲ.

ಅರಬ್ಬಿ ಸಮುದ್ರವನ್ನು ಸೇರುತ್ತಿರುವ ನೀರಿನ ಶೇ.40ರಷ್ಟು ನೀರನ್ನು ಸೂಕ್ತವಾಗಿ ಬಳಸಿಕೊಂಡರೆ 1.00.000

ಹೆಕ್ಟೇರಿನಷ್ಟು ಬಂಜರು ಕೃಷಿ ಭೂಮಿಗೆ ನೀರು ಒದಗಿಸಬಹುದು. ಯಾವುದೇ ಅಣೆಕಟ್ಟು ಕಟ್ಟದೆ ಪರಿಸರ ಹಾಳಾಗದಂತೆ ಇದನ್ನು ಮಾಡಬಹುದು. ಇದರಿಂದ 8-10 ಉಪನದಿಗಳನ್ನು, ಸುಮಾರು 5000 ಸಾವಿರ ಕೆರೆಗಳನ್ನು, ಸುಮಾರು 5 ಲಕ್ಷ ಬಾವಿ ಪುನರುಜ್ಜೀವನಗೊಳಿಸಬಹುದಾಗಿದೆ. ಇದು ರಾಜ್ಯಕ್ಕೆ ಸಾವಿರ ಕೋಟಿ ಆದಾಯವನ್ನು ಕೂಡ ತಂದುಕೊಡುತ್ತದೆ. ತರಕಾರಿಗಳನ್ನು ಕೂಡ ಈ ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಆದರೆ, ನೀರೇ ಇಲ್ಲದಿದ್ದರೆ ಇವನ್ನು ಉತ್ಪಾದಿಸುವುದಾದರೂ ಹೇಗೆ ಎನ್ನುವ ಪ್ರಶ್ನೆ ರೈತರಲ್ಲಿ ಮೂಡಿದೆ ನೀರನ್ನು ಒದಗಿಸಿದರೆ ಈ ಪ್ರದೇಶ ಮತ್ತಷ್ಟು ಸುಭಿಕ್ಷ, ಸಂಪದ್ಭರಿತವಾಗುತ್ತದೆ ಎಂಬುದು ಸ್ಥಳೀಯರ ಅಭಿಪ್ರಾಯ.

ಚಿತ್ರ-ಲೇಖನ ವಸಂತ ನಾಯ್ಕ

 

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*