ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಆಕಾಶಕ್ಕೆ ಬೊಗಸೆ ಒಡ್ಡುವ ಕೆರೆ ಬಾವಿಗಳಿಗೆ ಚಿಣ್ಣರ ದರ್ಶನ

ದಿನದಿಂದ ದಿನಕ್ಕೆ ಅಂತರ್ಜಲ ಆಳಕ್ಕೆ ಹೋಗುತ್ತಿದೆ.ಕೆರೆ ಹಳ್ಳ ಕೊಳ್ಳಗಳು ಬತ್ತಿವೆ.ಮಳೆಯಾಗದ ಕಾರಣ ಹುಳು ತುಂಬಿ ಬಾವಿಗಳು ಅವಸಾನದ ಅಂಚಿನಲ್ಲಿವೆ.ಇಂದಿನ ಪೀಳಿಗೆಯ ಚಿಣ್ಣರಲ್ಲಿ ತಮ್ಮ ಊರಿನ ಅಕ್ಷಯ ಪಾತ್ರೆಗಳ ದರ್ಶನಾಗಬೇಕು. ಅವುಗಳ ಬಳಕೆ ಮಹತ್ವ ಅರಿಯಬೇಕಿದೆ.ಆ ನಿಟ್ಟಿನಲ್ಲಿ ಸವದತ್ತಿ ತಾಲೂಕಿನ ಶ್ರೀರಂಗಪೂರ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ತಮ್ಮೂರಿನ ಬಾವಿ,ಕೆರೆಗಳು ಮಹತ್ವವನ್ನು ತಿಳಿಯಲು ಜಲದರ್ಶನ ಜೊತೆಗೆ  ಪ್ರಜಾವಾಣಿಯ ಜಾಗೃತಿಯ ಕಳಕಳಿಗೆ ಕೈ ಜೋಡಿಸಿದರು.

ಈ ಊರು ಐತಿಹಾಸಿಕ ಸ್ಥಳವಾಗಿದ್ದು.ಇಲ್ಲಿ ಅನೇಕ ಬಾವಿಗಳಿದ್ದ ಪುರಾವೆಗಳಿವೆ.ಈಗ ಕೆಲವು ಬೊರವೆಲ್ ಕಾರಣಗಳಿಂದ ಅವಸಾನ ಹೊಂದಿವೆ. ಇದ್ದ ಕೆರೆ ಬಾವಿಗಳ ಅರಿವು ಚಿಣ್ಣರಲ್ಲಿ ಬರಲಿ ಅಂತಾ ಮುಖ್ಯಗುರುಗಳಾದ ಶ್ರೀ ಬಿ.ಡಿ. ಪಾಟೀಲರು ಮಧ್ಯಾಹ್ನದ ಅವಧಿಯನ್ನು ಮಕ್ಕಳಿಗೆ ಜಲಪಾತ್ರೆಗಳ ದರ್ಶನ ಮಾಡಿಸಲು ಮಕ್ಕಳೊಂದಿಗೆ ತೆರಳಿದರು.

 ವಿಶಾಲವಾದ ಮಘಾನಿಕೆರೆ

ಕಿರಿದಾದ ಬೆಟ್ಟಗಳ ನಡುವೆ ನೀರನ್ನು ವಿಶಾಲವಾದ ಜಾಗದಲ್ಲಿ ಹಿಂದಿನ ತೆಲೆಮಾರಿನ ಜನ ನೀರಿನ ಜಲಪಾತ್ರೆ ಮಾಡಿಕೊಂಡಿದ್ದಾರೆ.ಸುd1ತ್ತ ಕೆಲ ಊರಿನ ಕೆರೆಗಳು ಬತ್ತಿವೆ ಆದರೆ ವಿಶಾಲವಾದ ಕೆರೆ ಮಾತ್ರ ನೀರನ್ನು ಹಿಡಿದುಕೊಂಡಿದೆ.ಸುತ್ತಲೂ ಹಸಿರು ಇರುವ ಈ ಜೀವಜಲಕ್ಕೆ ಇಲ್ಲಿಯ ಜನ ಮಘಾನಿ ಎಂದು ಕರೆಯುತ್ತಾರೆ.ಇಲ್ಲಿಯ ಜನರ ಪ್ರಮುಖ ಉದ್ಯೋಗ ಕೃಷಿಯಾಗಿದ್ದು ಇದರ ಜೊತೆ ದೇಸಿ ಹಸುಗಳನ್ನು ಇಲ್ಲಿ ಕಂಡುಬರುತ್ತ. ಇವುಗಳಿಗೆ ಇಲ್ಲಿಯ ನೀರು ಪ್ರಮುಖ ಆಸರೆ.ಇನ್ನುಕೆರೆಯ ಆವರಣದಲ್ಲಿ ಸುಂದರ ಸಿದ್ದೇಶ್ವರ ದೇವಸ್ಥಾನವಿದೆ.ಇನ್ನು ದೇವಸ್ಥಾನದ ಆವರಣದಲ್ಲಿ ಇನ್ನೊಂದು ಪ್ರಮುಖ ದೇವಸ್ಥಾನ ಮಳೆಮಲ್ಲೇಶಪ್ಪನ ದೇವಸ್ಥಾನವಿದೆ. ಈ ದೇವಸ್ಥಾನ ಹಿಂದಿನ ಜನರು ಮಳೆಗೆ ಕೊಟ್ಟ ಪ್ರಾಮುಖ್ಯತೆ ತಿಳಿಯುತ್ತದೆ.

ಕತೆ ಹೇಳಿದ ಜಲಮೂಲಗಳು

ಊರಿನಲ್ಲಿ ಇರುವ ಬಾವಿಗಳು ಹಾಗೂ ಕೆರೆಯ ಹಿಂದೆ ನೂರು ಕತೆಗಳಿವೆ. ಅಲ್ಲಿಯ ಅತಿವೃಷ್ಟಿ , ಅನಾವೃಷ್ಟಿಗಳಾದ ಜಲಮೂಲಗಳ ಬd8ಳಕೆ ಹಾಗೂ ಅವುಗಳು ಹುಟ್ಟಿಕೊಂಡ ಬಗೆಯನ್ನು ವಿದ್ಯಾರ್ಥಿಗಳು ತಿಳಿದರು. ಇಂದು ಜಲಮೂಲಗಳು ಆ ಕಣ್ಮರೆಯಾಗುತ್ತಿವೆ ಅದಕ್ಕೆ ಕಾರಣಗಳನ್ನು ತಿಳಿದರು. ನೀರು ಅಮೂಲ್ಯವಾದ ವಸ್ತು.ಅದಕ್ಕಾಗಿ ಮುಂದಿನ ದಿನಗಳಲ್ಲಿ ಬೆಲೆಕಟ್ಟಲಾಗದ ದಿನ ಬರುಬಹುದು.ಈ ನಿಟ್ಟಿನಲ್ಲಿ ನೀರಿನ ಸಧ್ಬಳಕೆ ಹಾಗೂ ಮಿತವ್ಯಯ ಮಾಡುವ ವಿಧಗಳನ್ನು ತಿಳಿದರು.ಕೊರನಾರು ಎಂಬ ವಿಶಿಷ್ಟಬಾವಿ ಗೋಚರಿಸುತ್ತದೆ.ಇದು ಕೂಡಾ ತನ್ನದೇ ಕತೆಯನ್ನು ಹೇಳುತ್ತದೆ. ಬೆಟ್ಟದ ವನಸ್ಪತಿಗಳ ಬೇರುಗಳು ಇರುವದರಿಂದ ಇವುಗಳಿಂದ ಈ ಬಾವಿಗೆ ಔಷಧಿ ಗುಣವಿರುವ ನೀರು ಬರುವದರಿಂದ ಇಲ್ಲಿ ಪ್ರತಿ ಅಮವಾಸ್ಯೆಯ ದಿನ ಊರ ಜನ ಬಂದು ಪವಿತ್ರ ಸ್ನಾನ ಮಾಡುತ್ತಾರೆ.ಇದರಿಂದ ರೋಗವಾಸಿಯಾಗುವ ಪ್ರತಿತಿಯಿದೆ.ಇನ್ನು ಮಘಾನಿಯ ಅಕ್ಕಪಕ್ಕ ಎರಡು ಬಾವಿಗಳು ಇವೆ ಒಂದು ಹಾಲಬಾವಿ ಇದರ ನೀರು ಹಾಲಿನ ಹಾಗೆ ಕಂಡು ಬರುವುದು.ಇನ್ನು ರೆಡ್ಡೇರ ಬಾವಿ ಹೂಳು ತುಂಬಿ ಮುಚ್ಚಿಹೋಗಿದೆ. ಇಲ್ಲಿಯ  ಪರಿಸರ ಅನೇಕ ಜೀವಿಗಳಿಗೆ ಆಶ್ರಯ ನೀಡಿದೆ. ಗ್ರೇ ಹಾರ್ನಬಿಲ್,ನೀರು ಕಾಗೆ ,ಗುಬ್ಬಿಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡು ಸಾಕಿದೆ. . .ಶಾಲೆಯ ಮುಖ್ಯೋಪಾಧ್ಯಯರಾದ ಶ್ರೀ ಬಿ.ಡಿ.ಪಾಟೀಲ ಶಿಕ್ಷಕರಾದ ಶ್ರೀಮತಿ ಜಿ.ಎನ್ ಮಲಕನ್ನವರ , ಎಸ್.ಏಚ್.ಪಚ್ಚಿನವರ ,ವಿ.ಪಿ.ಸುನೋನೆ , ಬಿ.ಜಿ.ದೇವಡಿ ಹಾಗೂ ವಿ.ಆರ್.ಪಾಟೀಲ ಪಾಲ್ಗೊಂಡು ಈ ಜಲಪಾತ್ರೆಗಳ ಮಹತ್ವ ನೀರಿನ ಬಳಕೆ ಬಗ್ಗೆ ಮಾತನಾಡಿದರು.

ಶಿಕ್ಷಕರಾದ ಶ್ರೀ ಎಸ್.ಎಚ್ ಪಚ್ಚಿನವರ  : “ಈ ರೀತಿಯ ಪರಿಸರದಲ್ಲಿ ಮಕ್ಕಳಿಗೆ ನಿಜವಾದ ಕಲಿಕೆಯಾಗುವ ನಿಟ್ಟಿನಲ್ಲಿ ಶಾಲೆ ಸಮಸ್ತಶಿಕ್ಷಕರು ಸೇರಿ ಈ ಜಲದಿನದ ಅಂಗವಾಗಿ ಜಾಗೃತಿಯ ಕೆಲಸ ಮಕ್ಕಳಿಗೆ ಖುಷಿಕೊಟ್ಟಿತು.”

                                                                     ಚಿತ್ರ-ಲೇಖನ: ವಿನೋದ ರಾ ಪಾಟೀಲ, ಚಿಕ್ಕಬಾಗೇವಾಡಿ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*