ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಬರಕ್ಕೆ ಬುತ್ತಿ

ಮಳೆ ನೀರ ತಡೆದೇನ ಬರಗಾಲ ಅಳಿಸೇನ |

ಬರಡು ಭೂಮ್ಯಾಗ ಬರಕ್ಕೆ ಬುತ್ತಿ ಕಟ್ಟೇನ    ||ಪ||

ಇಳುಕಲು ಹೊಲ ಇರಲಿ|

ಕೊರಕಲು ಹೊಲ ಇರಲಿ|

ಭರವಸೆಯ ಬದು ಕಟ್ಟೇನ|P_20160430_101321

ಕಡೆತನಕ ತೇವಾಂಶ ಉಳಿಸೇನ ||೧||

ಹಳ್ಳದ ಹೊಲ ಇರಲಿ|

ಕೊಳ್ಳದ ಹೊಲ ಇರಲಿ|

ಹಳ್ಳ ಕೊಳ್ಳಕ ಕಲ್ಲೊಡು ಕಟ್ಟೇನ|

ಕಾರಮಳೆಯ ನೀರ ಕೆರೆ ಹಾಂಗ ತಡೆದೇನ ||೨||

ಮರಡಿಯ ಹೊಲಕ ಮಳಲುಸುಕ ಹಾಕೇನ|

ಗರಸಿನ ಹೊಲಕ ಕೆರೆಗೋಡ ಹೇರೇನ|

ಕರಲಿನ ಹೊಲಕ ಬೆನಕಲ್ಲು ಹರಡೇನ|

ಮುಂಗಾರ ಮಳೀಗೆ ಮುಂದಾಗಿ ಬಿತ್ತೇನ ||೩||

ಬೇಸಿಗೆಯ ಮಳೆ ನೀರು ಮಾಗಿ ಉಳುಮೇಲಿ ತಡದೇನ|

ಮುಂಗಾರಿನ ತೇವಾಂಶ ಹಿಂಗಾರಿಗೆ ಉಳಿಸೇನ|

ಹಿಂಗಾರಿನ ಹಸಿ ಮಾಗಿ ಉಳುಮೆಗೆ ಬಳಸೇನ|

ವರುಷದಲಿ ಎರಡು ಬೆಳೆ ಹರುಷದಿ ತೆಗೆದೇನ||೪||

ಸಾವಯವ ಕೃಷಿ ಒಟ್ಟಾಗಿ ಮಾಡೇನ|

ಸ್ವಾವಲಂಬಿ ಕೃಷಿ ಸರ್ವರಿಗೆ ತಿಳಿಸೇನ|

ಬದು ಚೆನ್ನಾಗಿದ್ದರೆ ಬದುಕು ಚೆನ್ನೆಂದು|

ಭೂತಾಯಿ ಸೇವೆ ಮಾಡಿ ಬರಕ್ಕೆ ಬುತ್ತಿ ಕಟ್ಟೇನ||೫||

 ತಮ್ಮಣ್ಣ ಯ. ಬೆಣ್ಣೂರ , ಪ್ರಗತಿಪರ ರೈತರು, ಬೆನಕಟ್ಟಿ, ಬಾಗಲಕೋಟ 

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*