ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

“ಮಿತವಾಗಿರಲಿ ನೀರಿನ ಬಳಕೆ”

ನಮ್ಮೂರ ಬೀದಿಯಲ್ಲೆಲ್ಲಾ
ದಿನವು ನೀರಿನ ಹಾವಳಿ
ಎಗ್ಗಿಲ್ಲದೇ ಪೂಲಾಗುತ್ತಿದೆ !

ಬಳಕೆಗೆ ಎಷ್ಟು ನೀರು ಬೇಕೋ
ಅದಕ್ಕಿಂತ ಹೆಚ್ಚಿಗೆ ಹರಿಯುತ್ತಿದೆ
ನಿಲ್ಲಿಸುವವರಾರಿಲ್ಲ ನಮ್ಮೂರಲ್ಲಿ !

ಎಲ್ಲೆಲ್ಲೂ ಬರೀ ರಾಜಕೀಯ
ಆ ಓಣಿ ಈ ಓಣಿ ಎಲ್ಲ ಕಡೆ
ನೀರು ಪೂಲಾಗುತ್ತಲೇ ಇದೆ !

ನೋಡುವ ಕಣ್ಣುಗಳು ಮಾತ್ರ
ಕಣ್ಮುಚ್ಚಿ ನಿದ್ರೆಗೆ ಹೋದ್ದಂತಿವೆ
ಭಾಷಣಗಳಿಗಷ್ಟೇ ಸೀಮಿತವಾಗಿದೆ
ನೀರಿನ ಸದ್ಬಳಕೆಯ ಗುಣಗಾನ !

ನೀರನ್ನು ಮಿತವಾಗಿ ಬಳಸಿ
ನೀರಿನ ಕೊರೆತೆಯನ್ನು ತಡೆಯಿರಿ
ಮತ್ತೊಮ್ಮೆ ಹೇಳುವೆ ಕೇಳಿ
ದಯಮಾಡಿ ನೀರನ್ನು ಮಿತವಾಗಿ ಬಳಸಿ !

- ಶಿವು ನಾಗಲಿಂಗಯ್ಯನಮಠ, ಗದಗ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*