ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆನೋಟ – ನೋಟ ೫೫: ಸರ್ಕಾರ ಮನಸ್ಸು ಮಾಡಿದ್ದರೆ ಹಲವು ಕೆರೆ ಉಳಿಸಬಹುದಿತ್ತು!

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬೆಂಗಳೂರಿನಲ್ಲಿ ಸುಮಾರು 390 ಕೆರೆಗಳಿವೆ. ಇದರಲ್ಲಿ ನಾಲ್ಕು ಕೆರೆಗಳನ್ನು ಸರ್ಕಾರವೇ ಸಂಸ್ಥೆಗಳಿಗೆ ಮಂಜೂರು ಮಾಡಿದೆ. ನಾಗಶೆಟ್ಟಿಹಳ್ಳಿ ಕೆರೆ, ಕಾಡುಗೊಂಡನಹಳ್ಳಿ ಕೆರೆ, ಕೋಡಿಹಳ್ಳಿ ಕೆರೆ, ಚಲ್ಲಘಟ್ಟ ಕೆರೆ ಮೂರು ದಶಕಗಳ ಹಿಂದೆಯೇ ಈ ಕಾರಣಕ್ಕಾಗಿ ಮುಚ್ಚಲಾಯಿತು.

ByrasandraHaraju-12ಲಕ್ಷ್ಮಣರಾವ್ ವರದಿ ಪ್ರಾರಂಭವಾಗುವುದೇ ಇಂತಹ ಮಾಹಿತಿಯಿಂದ. ಅಂತರಿಕ್ಷ ಇಲಾಖೆ ಮತ್ತು ಇತರರಿಗೆ ನಾಗಶೆಟ್ಟಿಹಳ್ಳಿ ಕೆರೆಯನ್ನು ಮಂಜೂರು ಮಾಡಲಾಯಿತು. ಅಂಬೇಡ್ಕರ್ ವೈದ್ಯಕೀಯ ಕಾಲೇಜಿಗೆ ಕಾಡುಗೊಂಡನಹಳ್ಳಿ ಕೆರೆಯನ್ನು ನೀಡಲಾಯಿತು.  ಮತ್ತೆ ಅಂತರಿಕ್ಷ ಇಲಾಖೆಗೆ ಭೂಮಿ ನೀಡಲು ಕೋಡಹಳ್ಳಿ ಕೆರೆಯನ್ನು ಗುರಿಯಾಗಿಸಲಾಯಿತು. ಇನ್ನು ಗಾಲ್ಫ್ ಕೋರ್ಸ್ ಸ್ಥಾಪಿಸಲು ಕೆ.ಎಸ್.ಟಿ.ಡಿ.ಸಿಗೆ ಚಲ್ಲಘಟ್ಟ ಕೆರೆಯನ್ನು ನೀಡಲಾಯಿತು. ಇನ್ನು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಾಗರಿಕ ಸೌಲಭ್ಯಗಳನ್ನು ಒದಗಿಸಲು ಅಥವಾ ಬಡಾವಣೆಯನ್ನು ನಿರ್ಮಿಸಲು ಗೆದ್ದಲಹಳ್ಳಿ ಕೆರೆ, ಕರಿಸಂದ್ರ ಕೆರೆ, ಕದಿರೇನಹಳ್ಳಿ ಕೆರೆಗಳನ್ನು ಮಂಜೂರು ಮಾಡಲಾಗಿದೆ.

ಲಕ್ಷ್ಮಣರಾವ್ ಅವರು ವರದಿ ಕೊಡುವ ಸಂದರ್ಭದಲ್ಲಿ ಸಿನಿವಾಗಿಲು ಕೆರೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸುಪರ್ದಿಗೆ ಆಗ ತಾನೆ ನೀಡಲಾಗಿತ್ತು. ಬಿಡಿಎ ರಸ್ತೆ ಹಾಗೂ ನಿವೇಶನ ಮಾಡಲು ಜಾಗ ಗುರುತಿಸಿತ್ತು. ಆದರೆ ಕಾಮಗಾರಿ ಇನ್ನೂ ಆರಂಭವಾಗಿರಲಿಲ್ಲ. ಅಷ್ಟೇ ಅಲ್ಲ, ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ ಯಾವುದೇ ರೀತಿಯ ವೆಚ್ಚವನ್ನೂ ಮಾಡಿರಲಿಲ್ಲ. ಹೀಗಾಗಿ ತುರ್ತಾಗಿ ಕ್ರಮ ಕೈಗೊಂಡರೆ ಈ ಕೆರೆಯನ್ನು ಉಳಿಸಬಹುದು ಎಂದು ವರದಿಯಲ್ಲಿ  ಸ್ಪಷ್ಟವಾಗಿ ನಮೂದಿಸಲಾಗಿತ್ತು. ಈ ಕೆರೆ ವಸತಿ ಬಡಾವಣೆ ಆಗುವುದನ್ನು ತಪ್ಪಿಸಿ, ಇದನ್ನು ಅತ್ಯಂತ ಅವಶ್ಯವಾಗಿರುವ ವೃಕ್ಷವನವನ್ನಾಗಿ ಬಡಾವಣೆಯ ಮಧ್ಯೆ ನಿರ್ಮಿಸಬೇಕು ಎಂದು ಶಿಫಾರಸು ಮಾಡಲಾಗಿತ್ತು. ಆದರೆ, ವದಿಯನ್ನು ಒಪ್ಪಿಕೊಂಡ ಈ ಕೆರೆಯನ್ನು ಬಿಡಿಎಯಿಂದ ವಾಪಸ್ ತೆಗೆದುಕೊಳ್ಳಲು ಮನಸ್ಸು ಮಾಡಲೇ ಇಲ್ಲ. ಹೀಗಾಗಿ ಸಂರಕ್ಷಿಸಲು ಸಾಧ್ಯವಿದ್ದ ಕೆರೆಯೂ ನೆಲಸಮವಾಗಿ ಬಡಾವಣೆಯಾಯಿತು.

ಇಷ್ಟೇ ಅಲ್ಲ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಹಲವು ಜೀವಂತ ಹಾಗೂ ಬಳಕೆ ಮಾಡದ ಕೆರೆಗಳು ಸಾಕಷ್ಟಿವೆ. ಇವುಗಳು ನಗರೀಕರಣಕ್ಕೆ ತುತ್ತಾಗುವ ಸಾಧ್ಯತೆ ಇದ್ದು, ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಇವುಗಳಲ್ಲಿ ಬಡಾವಣೆ ನಿರ್ಮಿಸಲು ಅನುವು ಮಾಡಿಕೊಡದ ಹಾಗೆ ಕ್ರಮ ಕೈಗೊಂಡು, ಈ ಬಗ್ಗೆ ಖಾತರಿ ಮಾಡಿಕೊಳ್ಳಬೇಕು ಎಂದು ವರದಿಯಲ್ಲಿ ತಿಳಿಸಲಾಗಿತ್ತು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವೇ ೧೯೮೩ರಲ್ಲಿ ನಡೆಸಿದ ಭೂಬಳಕೆ ಸಮೀಕ್ಷೆ ಪ್ರಕಾರ, ಬೆಂಗಳೂರಿನಲ್ಲಿ ಉದ್ಯಾನ ಮತ್ತು ತೆರೆದ ಪ್ರದೇಶ ಇದ್ದದ್ದು ೨೦೫೦ ಹೆಕ್ಟೇರ್. ಅಂದರೆ, ನಿರ್ಮಿತ ಪ್ರದೇಶದ ಶೇ.೧೦.೧೧ರಷ್ಟು. ಯೋಜನೆಯ ನಿಯಮದ ಪ್ರಕಾರ, ನಗರ ಪ್ರದೇಶದಲ್ಲಿ ಶೇ.10ರಷ್ಟು ಪ್ರದೇಶದಲ್ಲಿ ಉದ್ಯಾನಗಳು ಮತ್ತು ತೆರೆದ ಪ್ರದೇಶವಿರಬೇಕು. ರಾಜ್ಯ ಸರ್ಕಾರ ೧೨.೧೦.೧೯೮೪ರಲ್ಲಿ ಸಮ್ಮತಿ ನೀಡಿದ ಸಮಗ್ರ ಅಭಿವೃದ್ಧಿ ನಕ್ಷೆ (ಸಿ.ಡಿ.ಪಿ) ಪ್ರಕಾರ, ಈ ಉದ್ಯಾನ ಮತ್ತು ತೆರೆದ ಪ್ರದೇಶದ ವ್ಯಾಪ್ತಿ ೫೯೬೦ ಹೆಕ್ಟೇರ್ ಇರಬೇಕು. ಅಂದರೆ, ಶೇ.೧೩.೫೭ರಷ್ಟು ಪ್ರದೇಶದಲ್ಲಿ ಪ್ರಸ್ತಾವಿತ ನಗರೀಕರಣ ಪ್ರದೇಶದಲ್ಲಿ ಉದ್ಯಾನಗಳು ಮತ್ತು ತೆರೆದ ಪ್ರದೇಶವಿರಬೇಕು. ಇದಕ್ಕೆ ಹೆಚ್ಚುವರಿಯಾಗಿ, ೮೩,೯೭೨ ಹೆಕ್ಟೇರ್ ಪ್ರದೇಶ ಹಸಿರುವಲಯವಾಗಿರಬೇಕು. ಅಂದರೆ, ಮೆಟ್ರೊಪಾಲಿಟನ್ ಪ್ರದೇಶದ ಮೂರನೇ ಎರಡು ಭಾಗದಷ್ಟು ಪ್ರದೇಶ ಹಸಿರು ವಲಯವಾಗಿ ಮೀಸಲಿಡಬೇಕು.

ಸಿ.ಡಿ.ಪಿಯಂತೆಯೇ ನಗರವನ್ನು ಅಭಿವೃದ್ಧಿಪಡಸಬೇಕಾದ ಅಗತ್ಯ ಇದೆ. ಉದ್ಯಾನಗಳು ಮತ್ತು ವೃಕ್ಷವನಗಳನ್ನು ಅಭಿವೃದ್ಧಿಪಡಿಸಬೇಕು. ಜಲಮೂಲಗಳನ್ನು ಹಲಸೂರು ಕೆರೆ ಮತ್ತು ಯಡಿಯೂರು ಕೆರೆಗಳನ್ನು ಉಳಿಸಿಕೊಂಡಿರುವಂತೆಯೇ ಉಳಿಸಿಕೊಳ್ಳಬೇಕು ಎಂದು ಲಕ್ಷ್ಮಣರಾವ್ ವರದಿಯಲ್ಲಿ ಸಷ್ಟವಾಗಿ ನಮೂದಿಸಿ ಅದನ್ನು ಮಾಡುವಂತೆ ಶಿಫಾರಸು ಮಾಡಲಾಗಿದೆ. ಆದರೆ, ಅದನ್ನು ಸರ್ಕಾರ ಕಾರ್ಯಗತಗೊಳಿಸಲೇ ಇಲ್ಲ. ಬದಲಿಗೆ ಇನ್ನಷ್ಟು ಕೆರೆಗಳನ್ನು ಬಡಾವಣೆಗೆ ನೀಡಿದ್ದು ಈ ಸರ್ಕಾರಗಳ ಸಾಧನೆ.

ಚಿತ್ರ-ಲೇಖನ: ಕೆರೆ ಮಂಜುನಾಥ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*