ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆನೋಟ – ನೋಟ ೫೪: ಕಾಲರಾ ನಿವಾರಣೆಗೆ ಕೆರೆಗಳ ಕೋಡಿ ಒಡೆಯಲಾಯಿತು!

ಬೆಂಗಳೂರು ಕೆರೆಗಳ ಸ್ಥಿತಿ ಹಾಗೂ ಅವುಗಳ ಸಂರಕ್ಷಣೆ ಹೇಗೆ ಮಾಡಬೇಕು ಎಂಬುದನ್ನು ಲಕ್ಷ್ಮಣರಾವ್ ವರದಿಯಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ. ನಗರದಲ್ಲಿ ಅಂದು ಜೀವಂತ ಇದ್ದ ಹಾಗೂ ಒತ್ತುವರಿ ಮಾಡಿಕೊಂಡಿರುವ ಪ್ರತಿಯೊಂದು ಕೆರೆಯ ಮಾಹಿತಿಯೂ ಅದರಲ್ಲಿದೆ. ವರದಿಯಲ್ಲಿರುವ ಕೆರೆಗಳ ಒತ್ತುವರಿ ಹಾಗೂ ದುಃಸ್ಥಿತಿ ಇಂದಿಗೂ ಜೀವಂತ ಇರುವುದು ಮಾತ್ರ ವಿಷಾದನೀಯ.

Hebbalaಲಕ್ಷ್ಮಣರಾವ್ ವರದಿ ನೀಡುವ ಪ್ರಕ್ರಿಯೆಯಲ್ಲಿ ಬೆಂಗಳೂರು ಮೆಟ್ರೊಪಾಲಿಟನ್ ಪ್ರದೇಶವನ್ನು ವಿವರಿಸಿದ್ದರು. ಈ ವ್ಯಾಪ್ತಿಯಲ್ಲಿ ಬೆಂಗಳೂರು ಉತ್ತರ ಮತ್ತು ದಕ್ಷಿಣ ತಾಲ್ಲೂಕುಗಳಿವೆ. ಹೊಸಕೋಟೆ, ನೆಲಮಂಗಲ, ಮಾಗಡಿ, ಆನೇಕಲ್ ಮತ್ತು ದೇವನಹಳ್ಳಿ ತಾಲ್ಲೂಕಿನಲ್ಲೂ ಒತ್ತುವರಿಯಾಗಿದ್ದ ಕೆರೆಗಳನ್ನು ನಮೂದಿಸಿದ್ದಾರೆ. ಮಲೇರಿಯಾ ನಿವಾರಣೆ ಕಾರ್ಯಕ್ರಮದಡಿ ಕೆಲವು ಕೆರೆಗಳ ಕೋಡಿ ಒಡೆಯಲಾಯಿತು. ಈ ಕೆರೆಗಳನ್ನು ನಂತರದ ದಿನಗಳಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ಬಳಸಿಕೊಳ್ಳಲಾಯಿತು.

ಇಂತಹ ಕೆರೆಗಳಲ್ಲಿ ಉದಾಹರಿಸಬಹುದಾದ ಕೆಲವೆಂದರೆ, ಸುಭಾಷ್ ನಗರ ಕೆರೆ, ಮಿಲ್ಲರ್ ಕೆರೆ, ಅಕ್ಕಿತಿಮ್ಮನಹಳ್ಳಿ ಕೆರೆ, ಕುರುಬರಹಳ್ಳಿ ಕೆರೆ, ಕೋಡಿಹಳ್ಳಿ ಕೆರೆ, ನಾಗಶೆಟ್ಟಿಹಳ್ಳಿ ಕೆರೆ, ಸಿನಿವಾಗಿಲು ಕೆರೆ. ನಂತರ, ಬೆಂಗಳೂರಿನಲ್ಲಿದ್ದ ಬಹುತೇಕ ಎಲ್ಲ ಕೆರೆಗಳೂ ಮಾಲಿನ್ಯಗೊಂಡವು. ಅದಕ್ಕೆ ಒಳಚರಂಡಿ ನೀರು ಬಿಟ್ಟು, ಪರಿಸರಕ್ಕೆ ಅತ್ಯಂತ ಹೆಚ್ಚಿನ ಧಕ್ಕೆಯನ್ನು ಉಂಟು ಮಾಡಲಾಯಿತು. ಹಲಸೂರು ಮತ್ತು ಯಡಿಯೂರು ಕೆರೆಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಈ ಹಿಂದೆ ಸಮಿತಿಗಳನ್ನು ರಚಿಸಿತ್ತು. ಈ ಎರಡು ಕೆರೆಗಳು ಇಂದು ನೀರು ಒಳಗೊಂಡಿದ್ದರೂ, ಸುತ್ತಲಿನ ಪ್ರದೇಶವನ್ನು ಬೆಂಗಳರು ನಗರ ಪಾಲಿಕೆ ಅಭಿವೃದ್ಧಿಪಡಿಸಿದೆ.

ಲಕ್ಷ್ಮಣರಾವ್ ಅಧ್ಯಕ್ಷತೆಯಲ್ಲಿ ಸರ್ಕಾರ ನಾಲ್ಕು ಜನರನ್ನು ಸದಸ್ಯರನ್ನಾಗಿಸಿತ್ತು. ಈ ಸಮಿತಿಗೆ ಪೂರಕವಾಗಿ ಅಂದರೆ ಸಹಕಾರ ನೀಡಲು ಏಳು ಸದಸ್ಯರನ್ನು ಒಳಗೊಂಡಿರುವ ಸಹಕಾರ ಸಮಿತಿಯನ್ನು ರಚಿಸಲಾಯಿತು. ಇದರಲ್ಲಿ, ಬೆಂಗಳೂರು ನಗರ ಕಲಾ ಆಯೋಗದ ಸದಸ್ಯ ಕಾರ್ಯದರ್ಶಿ ಎಂ.. ಪಾರ್ಥಸಾರಥಿ; ಸಾಮಾಜಿಕ ಅರಣ್ಯ ಇಲಾಖೆಯ ಅರಣ್ಯ ಹೆಚ್ಚುವರಿ ಮುಖ್ಯ ಸಂರಕ್ಷಕ ಪಿ.ಡಿ. ಗಾಂವಕರ್; ಬೆಂಗಳೂರು ವೃತ್ತದ ಅರಣ್ಯ ಸಂರಕ್ಷಕ ಎನ್. ಸಂಪಂಗಿ; ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮುಖ್ಯ ಕಾರ್ಯದರ್ಶಿ ಬಿ.ಎನ್. ತ್ಯಾಗರಾಜನ್; ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧೀಕ್ಷಕ ಎಂಜಿನಿಯರ್ ಎ.ಸಿ. ಅನಂತಮೂರ್ತಿ; ಹಸಿರುವಲಯ ವಿಭಾಗದ ಅರಣ್ಯ ಉಪ ಸಂರಕ್ಷಕ ಎಸ್.ಜಿ. ನೇಗಿಹಾಲ್, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪಿ. ವೇಣುಗೋಪಾಲ್ ಸದಸ್ಯರಾಗಿದ್ದರು. ಇವರಲ್ಲದೆ, ಐಐಎಂನ ಜಾಫರ್ ಫುತೇಹಳ್ಳಿ ಅವರು ಲಕ್ಷ್ಮಣರಾವ್ ಸಮಿತಿಗೆ ಸಾಕಷ್ಟು ಮಾಹಿತಿಗಳನ್ನು ಒದಗಿಸಿದರು.

ಲಕ್ಷ್ಮಣರಾವ್ ಸಮಿತಿಗೆ ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ವರದಿ ತಯಾರಿಸಿ ನೀಡಲು ಸರ್ಕಾರ ವಿಧಿಸಿದ್ದ ಸಮಯ ಎಷ್ಟು ಗೊತ್ತೇ? ಮೂರು ತಿಂಗಳು. ಆದರೆ, ಈ ಅವಧಿಯಲ್ಲಿ ಸಮಗ್ರ ವರದಿ ನೀಡಲು ಸಾಧ್ಯವಿಲ್ಲ ಎಂದು ಸಮಿತಿ ಅಭಿಪ್ರಾಯಪಟ್ಟು, ಈ ಅವಧಿ ಸಾಲುವುದಿಲ್ಲ ಎಂದು ಸರ್ಕಾರಕ್ಕೆ ಮನವಿ ಮಾಡಿತು. ಇದಕ್ಕೆ ಮನ್ನಣೆ ನೀಡಿದ ಸರ್ಕಾರ, ಕಾಲಮಿತಿಯನ್ನು ೧೯೮೬ರ ಏಪ್ರಿಲ್ ೩೧ರವರೆಗೆ ವಿಸ್ತರಿಸಿತು.

ಲಕ್ಷ್ಮಣರಾವ್ ವರದಿಯಲ್ಲಿ ಮೂಲತಃವಾಗಿ ಪ್ರಸ್ತಾಪಿಸಿದ ಅಂಶಗಳನ್ನು ನಾನು ಈವರೆಗೆ ನೀಡಿದ್ದೇನೆ. ಇನ್ನು ಮುಂದೆ ಯಾವ ಕೆರೆಗಳು ಹೇಗಿದ್ದವು, ಅದನ್ನು ಹೇಗೆ ನಿರ್ವಹಿಸಬೇಕು, ಅಭಿವೃದ್ಧಿಪಡಿಸಬೇಕು ಎಂದು ಸಮಿತಿ ನೀಡಿದ ಶಿಫಾರಸುಗಳೊಂದಿಗೆ, ಅಂದಿನ ಕೆರೆಯ ಸ್ಥೂಲ ಚಿತ್ರಣವನ್ನೂ ನಿಮ್ಮ ಮುಂದಿಡಲಿದ್ದೇನೆ.

ಚಿತ್ರ-ಲೇಖನ: ಕೆರೆ ಮಂಜುನಾಥ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*