ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆನೋಟ – ನೋಟ ೫೩: – ನಗರ ವಿಸ್ತರಣೆಯ ಮೂಲಗುರಿ ಜಲಮೂಲಗಳು!

ಬೆಂಗಳೂರು ನಗರವನ್ನು ವಿಸ್ತರಿಸುವ ಆತುರದಲ್ಲಿ ಸರ್ಕಾರಿ ಸಂಸ್ಥೆಗಳು ಸೇರಿದಂತೆ ಬಡಾವಣೆ ನಿರ್ಮಿಸುವ ಪ್ರಾಧಿಕಾರಗಳ ಕಣ್ಣು ಬಿದ್ದದ್ದು ಜಲಮೂಲಗಳ ಮೇಲೆ. ಒಣಗಿರುವ ಈ ಕೆರೆ-ಕುಂಟೆಗಳಿಂದ ಏನು ಪ್ರಯೋಜನ ಎಂದು ಅವುಗಳಿಗೆ ಮಣ್ಣು ಸುರಿದು ನಿವೇಶನ ಮಾಡಿದವು. ಅದರ ಪ್ರತಿಫಲವೇ ಇಂದಿನ ನೀರಿನ ಹಾಹಾಕಾರ  ಹಾಗೂ ಹವಾನಿಯಂತ್ರಿತ ನಗರಿ ಎಂಬ ಹೆಗ್ಗಳಿಕೆ ಮರೆಯಾಗಲು ಕಾರಣ.

ಇದನ್ನೇ ಎನ್. ಲಕ್ಷ್ಮಣರಾವ್ ನೇತೃತ್ವದ ತಜ್ಞರ ಸಮಿತಿ ಹೇಳಿದ್ದು. ಆದರೆ ಇದೆಲ್ಲವನ್ನೂ ಅಂದೇ ಸರ್ಕಾರ ಪಾಲಿಸಿದ್ದರೆ, ಇಂದು ಕೆರೆ ಒತ್ತುವರಿ ಎಂಬ ಪದವೇ ಇರುತ್ತಿರಲಿಲ್ಲ. ದೂರದೃಷ್ಟಿಯ ಕೊರತೆಯಿಂದ ಜಲಮೂಲಗಳನ್ನು ಆಪೋಷಣ ತೆಗೆದುಕೊಳ್ಳಲು ಬಡಾವಣೆ ನಿರ್ಮಿಸುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಂತಹ ಸಂಸ್ಥೆಗಳಿಗೆ ಸರ್ಕಾರವೇ ಬೆನ್ನೆಲುಬಾಗಿ ನಿಂತದ್ದು ದುರ್ದೈವ.

ಬೆಂಗಳೂರು ಮೆಟ್ರೊಪಾಲಿಟನ್ ವ್ಯಾಪ್ತಿಯ ಕೆರೆಗಳನ್ನು ಸಂರಕ್ಷಿಸಿ, ಪುನರುಜ್ಜೀವನಗೊಳಿಸಲೆಂದು 1985ರ ಜುಲೈನಲ್ಲಿ ಸರ್ಕಾರ ಆದೇಶ ಹೊರಡಿಸಿ ರಚಿಸಿದ್ದ ತಜ್ಞರ ಸಮಿತಿಗೆ ನಿವೃತ್ತ ಐಎಎಸ್ ಅಧಿಕಾರಿ ಎನ್. ಲಕ್ಷ್ಮಣರಾವ್ ಅಧ್ಯಕ್ಷರಾಗಿದ್ದರು. ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಎಸ್. ಹನುಮಂತರಾವ್, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸದಸ್ಯ-ಎಂಜಿನಿಯರ್ ಕೆ. ಅನಂತ್, ಗಣಿ ಮತ್ತು ಭೂವಿಜ್ಞಾನದ ಅಂತರ್ಜಲ ಸಮೀಕ್ಷೆಯ ಹೆಚ್ಚುವರಿ ನಿರ್ದೇಶಕ ಬಿ.ಜಿ. ಚನ್ನಪ್ಪ ಸದಸ್ಯರಾಗಿದ್ದರ. ನಗರ ಯೋಜನೆ ಇಲಾಖೆಯ ನಿರ್ದೇಶಕ ಡಾ. ಮಳವಯ್ಯ ಸದಸ್ಯ-ಕಾರ್ಯದರ್ಶಿಯಾಗಿದ್ದರು. ಈ ಸಮಿತಿ ನೀಡಿದ ವರದಿಯಲ್ಲಿ, “ಈ ಸಮಿತಿ ನೀಡಿರುವ ಶಿಫಾರಸುಗಳನ್ನು ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಒಂದು ಪ್ರಾಧಿಕಾರವನ್ನು ಸ್ಥಾಪಿಸಿ ಅದಕ್ಕೆ ಈ ಸಮಿತಿಯಲ್ಲಿನ ಸದಸ್ಯರೂ ಇರುವಂತೆ ನೋಡಿಕೊಳ್ಳಬೇಕು” ಎಂದು ಹೇಳಿತ್ತು.

ಅಲ್ಲದೆ, “ಸರ್ಕಾರ ಕೆರೆಗಳನ್ನು ಸಂರಕ್ಷಿಸುವ ಮತ್ತು ಪುನರುಜ್ಜೀವನಗೊಳಿಸುವ ಕೆಲಸವನ್ನು ತುರ್ತಾಗಿ ತೆಗೆದುಕೊಳ್ಳಬೇಕು. ಏಕೆಂದರೆ, ಬೆಂಗಳೂರಿನಲ್ಲಿ ಹೆಚ್ಚಾಗುತ್ತಿರುವ ಜನಸಮಖ್ಯೆ ಪ್ರಮಾಣ ಕೆರೆಗಳನ್ನು ಹಾಳುಮಾಡುತ್ತಿದೆ. ಇದು ಎಚ್ಚರಿಕೆಯ ಗಂಟೆಯಾಗಿದ್ದು, ಕೂಡಲೇ ಕಾರ್ಯಪ್ರವೃತ್ತರಾಗಬೇಕು” ಎಂದು ಸಲಹೆ ಮಾಡಿತ್ತು.

ಬೆಂಗಳೂರಿನಲ್ಲಿ ಜನಸಂಖ್ಯೆ ಅತ್ಯಂHD halli lakeತ ಗಣನೀಯವಾಗಿ ಹೆಚ್ಚಾಗುತ್ತಿದ್ದು, ಇಂದಿನ (1986) ಜನಸಂಖ್ಯೆ ಸುಮಾರು 34 ಲಕ್ಷ. ಭಾರತದಲ್ಲಿ ಅತಿ ಕ್ಷಿಪ್ರವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಬೆಂಗಳೂರು ಐದನೇ ಸ್ಥಾನದಲ್ಲಿದೆ. ಇಂತಹ ಕ್ಷಿಪ್ರ ಬೆಳವಣಿಗೆಯಲ್ಲಿ ಪ್ರಾಕೃತಿಕ ಹಾಗೂ ಮನರಂಜನಾ ಸೌಲಭ್ಯಗಳಾದ ಉದ್ಯಾನಗಳನ್ನು ಹಾಳಮಾಡಲಾಗಿದೆ. ಬೆಂಗಳೂರಿನಲ್ಲಿ ಜಲಮೂಲಗಳು ಹಾಳಾಗಳು ಪ್ರಮುಖ ಕಾರಣವೆಂದರೆ ಬೆಂಗಳೂರಿನ ವಿಸ್ತರಣೆ. ಒಂದು ಕಾಲದಲ್ಲಿ ಬೆಂಗಳೂರಿನ ಜನತೆಗೆ ಕುಡಿಯುವ ನೀರನ್ನು ನೀಡುತ್ತಿದ್ದ ಕೆರೆಗಳನ್ನು ಇಂದು ಹಾಳಮಾಡಲಾಗಿದೆ. ಇದರಿಂದ ಅಂತರ್ಜಲದ ಮಟ್ಟಿ ಗಮನೀಯವಾಗಿ ಕಡಿಮೆಯಾಗಿದೆ.

ಬೆಂಗಳೂರಿನಲ್ಲಿದ್ದ ಕೆರೆಗಳನ್ನು ಹಾಳು ಮಾಡಿದ್ದರಿಂದ ಅಂತರ್ಜಲ ಕಡಿಮೆಯಾಗುವ ಜತೆಗೆ ನಗರದ ಸೌಂದರ್ಯಕ್ಕೂ ಧಕ್ಕೆ ಬಂದಿದೆ. ಪರಿಸರ ಹಾಳಾಗುವ ಜತೆಗೆ ಇಲ್ಲಿನ ವಾತಾವರಣವು ಹದಗೆಟ್ಟಿದೆ. ಇದನ್ನು ನಿಲ್ಲಿಸಲು ತುರ್ತಾಗಿ ಬೆಂಗಳೂರಿನಲ್ಲಿ ಕೆರೆಗಳನ್ನು ಸಂರಕ್ಷಿಸಿ ಅವುಗಳನ್ನು ಪುನರುಜ್ಜೀವನಗೊಳಿಸುವ ಕಾರ್ಯ ಆಗಬೇಕು ಎಂದು ಲಕ್ಷ್ಮಣರಾವ್ ವರದಿಯಲ್ಲಿ ತಿಳಿಸಲಾಗಿತ್ತು. ಆದರೆ, ಮೂವತ್ತು ವರ್ಷ ಆಗುತ್ತಾ ಬಂದರೂ “ಲಕ್ಷ್ಮಣರಾವ್ ವರದಿ ಜಾರಿ ಮಾಡುತ್ತೇವೆ” ಎಂದು ಹೇಳಲಾಗುತ್ತಿದೆಯೇ ವಿನಃ ಪಾಲನೆ ಆಗಿಲ್ಲ.

ಬೆಂಗಳೂರಿನ ಯಾವ ಕೆರೆಗಳು ಯಾವ ಪರಿಸ್ಥಿತಿಯಲ್ಲಿ ಅಂದಿದ್ದವು. ಅವುಗಳನ್ನು ಹೇಗೆ ರಕ್ಷಿಸಬೇಕು ಎಂದು ಲಕ್ಷ್ಮಣರಾವ್ ವರದಿಯಲ್ಲಿ ಹೇಳಲಾಗಿತ್ತು ಎಂಬ ವಿವರವನ್ನು ಪೂರ್ಣವಾಗಿ ಮುಂದಿನ ನೋಟದಲ್ಲಿ ನೀಡುತ್ತೇನೆ.

ಚಿತ್ರ-ಲೇಖನ: ಕೆರೆ ಮಂಜುನಾಥ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*