ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಐತಿಹಾಸಿಕ ಕಿತ್ತೂರ ತುಂಬುಕೆರೆ

ಕಿತ್ತೂರು, ನಾಡಿನ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಮೊದಲ ಹೋರಾಟದ ಚೆನ್ನಮ್ಮನ ಐತಿಹಾಸಿಕ ಪಟ್ಟಣ. ಆದ್ದರಿಂದ ಚೆನ್ನಮ್ಮನ್ನ ಕಿತ್ತೂರು ಎಂದೇ ಪ್ರಸಿದ್ಧವಾಗಿದೆ. ಮಲೆನಾಡಿನ ಸೆರಗಿನಲ್ಲಿ ಬರುವುದರಿಂದ ಹಸಿರು ಬೆಟ್ಟಗುಡ್ಡಗಳಿಂದ ಕೂಡಿ ಆಕರ್ಷಿಣಿಯವಾಗಿದೆ. ಇಂತಹ ಊರಿನ ನೀರಿನ ಬಳಕೆಯನ್ನು ತಿಳಿಯಲು ಕೋಟೆಯ ಆವರಣದಲ್ಲಿ ಹಾಗೂ ಕೋಟೆಯ ಒಳಗಡೆ
tumbukere 3ಇರುವ ಬಾವಿಗಳು ನೀರಿನ ಪರಿಕಲ್ಪನೆ ಮೂಡಿಸಬಲ್ಲವು. ರಾಜರು ಉಪಯೋಗಿಸುತ್ತಿದ್ದ ಈಜುಕೋಳ ಈಗ ಖಾಲಿಯಾಗಿದೆ. ಯಥೇಚ್ಚವಾಗಿ ಅಂತರ್ಜಲವಿದ್ದ ಸ್ಥಳದಲ್ಲಿ ಈಗ ೨೦೦ ಅಡಿಗೂ ಹೆಚ್ಚಿನ ಆಳಕ್ಕೆ ನೀರು ಇಳಿದಿದೆ. ಇದಕ್ಕೆ ಹಲವು ಕಾರಣಗಳಿವೆ – ಮಿತಿಮೀರಿದ ಜನಸಂಖ್ಯೆ, ವಿಪರೀತ ಕೊಳವೆಬಾವಿ ಕೊರೆಸುವಿಕೆ……..ಹೀಗೆ ಉದ್ದದ ಪಟ್ಟಿಯೇ ಸಿದ್ಧವಾಗುತ್ತದೆ.

ಇಂತಹ  ಪಟ್ಟಣದ ಊರಿನ ಅಕ್ಷಯಪಾತ್ರೆಯಂತಿದ್ದ ತುಂಬುಕೆರೆಯ ನೀರಿನ ಪ್ರಮಾಣ ಹೂಳಿನಿಂದ ದಿನದಿಕ್ಕೆ ಕಡಿಮೆಯಾಗುತ್ತಿದುದನ್ನು ಗಮನಿಸಿ, ಊರಿನ ಹಾಗೂ ಸುತ್ತಲಿನ ಗ್ರಾಮದ ಸಮಾನಮನಸ್ಕ ಗೆಳೆಯರು ಓಡಗೂಡಿ, ಕೆರೆಯ ಹೂಳೆತ್ತಲು ನಿರ್ಧರಿಸಿದರು. “ಸಮಗ್ರವಾಗಿ ಕೆರಗೆ ನೀರು ಬರಬೇಕು ಇದನ್ನು ಜೀವಂತಿಕೆಯ ತಾಣ ಮಾಡಬೇಕು ಹಾಗೂ ಇಲ್ಲಿಯ ಅಂತರ್ಜಲವನ್ನು ಹೆಚ್ಚಿಸುವ ನಿಟ್ಟನಲ್ಲಿ ನಾವು ಏನು ಮಾಡಬೇಕು ಹಾಗೂ ಸಂಪನ್ಮೂಲವನ್ನು ಕ್ರೋಢೀಕರಣ ಹೇಗೆ ಮಾಡಬೇಕು?,” ಎಂಬುದನ್ನು ಚರ್ಚಿಸಲಾಯಿತು. ಇದರ ಪ್ರಕಾರ, ಊರಿನ ಸಮಾನಮನಸ್ಕರು ಸೇರಿ, ದಿನಕ್ಕೆ ೪ ಜನ ೧೦ ತಾಸು ಜೆ.ಸಿ.ಬಿಯಿಂದ ಹೂಳೆತ್ತುವ ಕೆಲಸವನ್ನು ಪ್ರಾರಂಭ ಮಾಡಿದರು. ಮಳೆಗಾಲದ ಮುನ್ನಾದಿನಗಳಾದ ಏಪ್ರಿಲ್ ತಿಂಗಳಲ್ಲಿ ಕೆಲಸ ಪ್ರಾರಂಭವಯಿತು.

ಕೆರೆಯ ಮಹತ್ವtumbukere 1

ಊರಿನ ಪಕ್ಕವೇ ಇರುವ ತಂಬುಕೆರೆ ನೋಡಲು ಮನೋಹರವಾಗಿದೆ – ಕಾರಣ, ಇದರ ಸೂತ್ತಲೂ ಆವರಿಸಿರುವ ಗುಡ್ಡಗಳು! ಈ ಕೆರೆಗೆ ಗುಡ್ಡದ ನೀರೇ ಆಧಾರ. ಇತ್ತೀಚಿನ ದಿನಗಳಲ್ಲಿ ಜನದಟ್ಟಣೆಯ  ಕಾರಣದಿಂದ, ನಿತ್ಯ ಪ್ರಹಾರವನ್ನು  ಅನುಭವಿಸುತ್ತಿತ್ತು. ಪಟ್ಟಣದ ಗಲೀಜು ಈ ಕೆರೆ ಸೇರುವುದು ಸಾಮಾನ್ಯವಾಗಿತ್ತು. ಈ ಕೆರೆಗೆ ಬರುವ ನೀರಿನ ದಾರಿಗಳು ಹೂಳು ತಂಬಿ ಬಂದ್ ಆಗಿದ್ದವು.  ಅಲ್ಲದೆ, ಮಳೆಗಾಲ ಕೊರತೆಯಿಂದ ಸಮರ್ಪಕವಾಗಿ ತುಂಬುತ್ತಿರಲಿಲ್ಲ. ಇತ್ತೀಚಿಗೆ ತಂತಿಬೇಲೆ ನೆಟ್ಟದ್ದರಿಂದ ಕಸ ಬೀಳುವುದು  ನಿಂತಿತ್ತು. ಆದರೆ ಹೂಳು ಮಾತ್ರ ಹಾಗೆಯೇ ಇತ್ತು.  ೧೭ ಎಕರೆ ಪ್ರದೇಶದಲ್ಲಿ ಹರಡಿರುವ ಈ ಕೆರೆಗೆ ನೀರಿನ ಹರಿವಿನ ದಾರಿಗಳನ್ನು ಹಾಗೂ ಹೂಳನ್ನು ತರೆವು ಮಾಡುವ ಕಾರ್ಯ ಅನಿವಾರ‍್ಯವಾಗಿತ್ತು. ಜಲಕಾರ್ಯಕರ್ತರು ಸರ್ಕಾರದ ನೆರವಿಗೆ ಕಾಯದೆ, ಕೆರಗೆ ಕಾಯಕಲ್ಪ ನೀಡಲು ಮುಂದಾದರು.

ಶ್ರಮದಾನ

ಊರಿನ ಪ್ರಮುಖರು ಹಾಗೂ ಸುತ್ತಲಿನ ಜಲ ಕಾರ್ಯಕರ್ತರು ಮತ್ತು ಕಿತ್ತೂರಿನ ಕನ್ನಡ ಸಾಹಿತ್ಯ ಬಳಗ ಕೂಡಿ, ತುಂಬುಕೆರೆಯ ಹೂಳೆತ್ತಲು ಹಾಗೂ ಕೆರೆಯ ಪರಿಸರವನ್ನು ಸ್ವಚ್ಛಗೊಳಿಸಲು ಅಣಿಯಾದರು. ಕೆರೆ ತಂಬಿದರೆ
ಊರಿಗೆ ಅನೂಕೂಲವಾಗುವುದರ ಜೊತೆಗೆ, ಈ ಐತಿಹಾಸಿಕ ಪಟ್ಟಣದ ಪ್ರವಾಸೋದ್ಯಮಕ್ಕೂ ಕಾಯಕಲ್ಪ ದೊರಕುವುದು ಎಂದ, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಶ್ರಮದಾನ ಮಾಡಿದರು.

ಹೂಳೆತ್ತಿದ ಮಣ್ಣಿನ ಮಹತ್ವ

ಕೆರೆಯ ಹೂಳು ಮಣ್ಣು ತುಂಬಾ ಊಪಯುಕ್ತವಾದ್ದರಿಂದ, ರೈತರ ಹೊಲಗಳಿಗೆ ನೀಡಲಾಯಿತು ಈ ಮಣ್ಣು ೨೦ರಿಂದ ೩೦ರಷ್ಟು ಮರಳು ಹೊಂದಿ, ಸಸ್ಯಗಳ ಬೇರುಗಳಿಗೆ ಸೂಕ್ತವಾದ ನೀರು ಹಾಗೂ ಬೇರು ಬೆಳವಣಿಗೆಗೆ ಸಹಾಯವಾಗುದು. ಇತರ ಐತಿಹಾಸಿಕ ಕೆರೆಗಳನ್ನೂ ಇದೇ ರೀತಿ ಪ್ರಜ್ಞಾವಂತ ನಾಗರಿಕರು ಜಾಗರೂಕರಾಗಿ ಕೆಲಸ ಮಾಡಿದ್ದೇ ಆದರೆ, ನಮ್ಮ ನಾಡಿನ ಜಲಮೂಲಗಳು ಅಭಿವೃಧಿ ಹೊಂದುವದರಲ್ಲಿ ಸಂಶಯವಿಲ್ಲ. ಅಲ್ಲದೆ, ನೀರು ಊರಿನ ಅಕ್ಷಯ ಪಾತ್ರೆಯಾಗಬಲ್ಲದು!

ಚಿತ್ರ-ಲೇಖನ: ವಿನೋದ ರಾ ಪಾಟೀಲ

                                                                                                                                                                        

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*